Dementia: ಈ ವರ್ತನೆ ಬುದ್ಧಿಮಾಂದ್ಯದ ಆರಂಭಿಕ ಲಕ್ಷಣವಾಗಿರಬಹುದು

| Updated By: ಅಕ್ಷತಾ ವರ್ಕಾಡಿ

Updated on: Jan 28, 2023 | 10:52 AM

ಬುದ್ಧಿಮಾಂದ್ಯತೆಯು ಹೆಚ್ಚಾಗುತ್ತಾ ಹೋದಂತೆ ರೋಗಿಯೂ ತಾನು ಏನು ಮಾಡುತ್ತಿದ್ದೇನೆ? ಎಂಬುದನ್ನೇ ಮರೆತು ಬಿಡುತ್ತಾನೆ. ರೋಗಿಗಳು ಸ್ನಾನ, ಬಟ್ಟೆಬರೆ, ತನ್ನ ಪ್ರತಿದಿನದ ದಿನಚರಿಗಳಲ್ಲಿ ತೊಂದರೆ ಅನುಭವಿಸಬಹುದು ಎಂದು ಕಲ್ಯಾಣ್‌ನ ಫೋರ್ಟಿಸ್ ಆಸ್ಪತ್ರೆಯ ನರವಿಜ್ಞಾನ ತಜ್ಞರಾದ ಡಾ. ರಾಕೇಶ್ ಲಲ್ಲಾ ಹೇಳಿದ್ದಾರೆ.

Dementia: ಈ ವರ್ತನೆ ಬುದ್ಧಿಮಾಂದ್ಯದ ಆರಂಭಿಕ ಲಕ್ಷಣವಾಗಿರಬಹುದು
ಸಾಂದರ್ಭಿಕ ಚಿತ್ರ
Follow us on

ಬುದ್ಧಿಮಾಂದ್ಯತೆಯು ಹೆಚ್ಚಾಗುತ್ತಾ ಹೋದಂತೆ ರೋಗಿಯೂ ತಾನು ಏನು ಮಾಡುತ್ತಿದ್ದೇನೆ? ಎಂಬುದನ್ನೇ ಮರೆತು ಬಿಡುತ್ತಾನೆ. ರೋಗಿಗಳು ಸ್ನಾನ, ಬಟ್ಟೆಬರೆ, ತನ್ನ ಪ್ರತಿದಿನದ ದಿನಚರಿಗಳಲ್ಲಿ ತೊಂದರೆ ಅನುಭವಿಸಬಹುದು ಎಂದು ಕಲ್ಯಾಣ್‌ನ ಫೋರ್ಟಿಸ್ ಆಸ್ಪತ್ರೆಯ ನರವಿಜ್ಞಾನ ತಜ್ಞರಾದ ಡಾ. ರಾಕೇಶ್ ಲಲ್ಲಾ ಹೇಳಿದ್ದಾರೆ. ಮರೆವು ಕಾಯಿಲೆ ಆಲ್ಝೈಮರ್ನ ಕಾಯಿಲೆ ಮತ್ತು ಬುದ್ಧಿಮಾಂದ್ಯತೆಯ ಇತರ ರೂಪಗಳ ಆರಂಭಿಕ ಚಿಹ್ನೆಗಳಲ್ಲಿ ಒಂದಾಗಿದೆ. ಬುದ್ಧಿಮಾಂದ್ಯತೆಯಿಂದ ಬಳಲುತ್ತಿರುವ ರೋಗಿಗಳು, ವಿಶೇಷವಾಗಿ ಆಲ್ಝೈಮರ್ನ ಕಾಯಿಲೆಯ ರೋಗಿಗಳು ತಮ್ಮ ಬಟ್ಟೆಯ ಕೊಳಕು, ವಾಸನೆಗಳನ್ನು ಗುರುತಿಸುವುದಿಲ್ಲ ಎಂದು 2018 ರಲ್ಲಿ ನಡೆದ ಅಧ್ಯಯನವೊಂದು ತಿಳಿಸುತ್ತದೆ. ಅವರ ಮೆದುಳಿಗೆ ಸಂದೇಶವನ್ನು ಕಳುಹಿಸುವಲ್ಲಿ ದೇಹದ ಅಂಗಾಂಗ ಸರಿಯಾಗಿ ಕಾರ್ಯ ನಿರ್ವಹಿಸದೇ ಇದ್ದಾಗ ಈ ರೀತಿಯ ಸಮಸ್ಯೆ ಉಂಟಾಗುತ್ತದೆ ಎಂದು ತಜ್ಞರು ಹೇಳುತ್ತಾರೆ.

ಅಮೇರಿಕಾದ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆನ್ ಏಜಿಂಗ್ (NIA) ಸ್ನಾನ ಮಾಡಲು ತೊಂದರೆ ಮತ್ತು ಕೊಳಕು ಬಟ್ಟೆಗಳನ್ನು ಧರಿಸುವುದು ಸೌಮ್ಯವಾದ ಆಲ್ಝೈಮರ್ನ ಕಾಯಿಲೆಯ ಲಕ್ಷಣ ಎಂದು ತಿಳಿಸಿದೆ. ಜೊತೆಗೆ ಇದರ ಇತರ ಲಕ್ಷಣಗಳನ್ನು ಪಟ್ಟಿ ಮಾಡಿದೆ.

  • ಎಲ್ಲ ವಿಷಯದಲ್ಲೂ ಅಸಮಾಧಾನ, ಚಿಂತೆ ಮತ್ತು ಬೇಗ ಕೋಪಗೊಳ್ಳುವುದು.
  • ಯಾವುದೇ ವಿಷಯಗಳಲ್ಲಿ ಆಸಕ್ತಿ ಇಲ್ಲದಿರುವುದು.
  • ವಿಷಯಗಳನ್ನು ಮರೆಮಾಚುವುದು ಅಥವಾ ಇತರ ಜನರು ವಿಷಯಗಳನ್ನು ಮರೆಮಾಚುತ್ತಿದ್ದಾರೆಂದು ನಂಬುವುದು.
    ಇಲ್ಲದ ಸಂಗತಿಗಳನ್ನು ಕಲ್ಪಿಸಿಕೊಳ್ಳುವುದು.
  • ಮನೆಯಿಂದ ದೂರ ಅಲೆದಾಡುವುದು.

ಇದನ್ನೂ ಓದಿ: ಮಹಿಳೆಯರಲ್ಲಿ ಗರ್ಭಕಂಠದ ಕ್ಯಾನ್ಸರ್ ಹೆಚ್ಚಳ, ಆರಂಭಿಕ ಚಿಹ್ನೆಗಳು, ಪರೀಕ್ಷೆ, ಚಿಕಿತ್ಸೆಗಳ ಬಗ್ಗೆ ಇಲ್ಲಿದೆ ಮಾಹಿತಿ

ಕಾಳಜಿ ವಹಿಸುವುದು ಅಗತ್ಯ:

ಬುದ್ಧಿಮಾಂದ್ಯತೆಯ ಆರಂಭಿಕ ಲಕ್ಷಣಗಳು ಕಂಡುಬಂದಲ್ಲಿ ಆರೈಕೆದಾರರು ಹೆಚ್ಚಿನ ಕಾಳಜಿ ವಹಿಸುವುದು ಅಗತ್ಯ ಎಂದು ಹೇಳುತ್ತಾರೆ. 2018-ಅಧ್ಯಯನವು ಹೇಳುವುದೆನೆಂದರೆ, ಬುದ್ಧಿಮಾಂದ್ಯತೆಯ ಆರಂಭಿಕ ಲಕ್ಷಣಗಳು ಕಂಡುಬಂದಲ್ಲಿ ರೋಗಿಯ ನೆಚ್ಚಿನ ಬಟ್ಟೆಗಳನ್ನು ಧರಿಸಲು ನೀಡಬೇಕು. ಅವರ ಕೋಣೆಯನ್ನು ಆದಷ್ಟು ಸ್ವಚ್ಚವಾಗಿ ಇಟ್ಟುಕೊಳ್ಳಬೇಕು. ಜೊತೆಗೆ ಕೊಳಕು ಬಟ್ಟೆ ಕಾಣಿಸಿಕೊಂಡರೆ ತಕ್ಷಣ ತೆಗೆದುಹಾಕಿ ಮತ್ತು ಸ್ವಚ್ಚ ಬಟ್ಟೆಯನ್ನು ನೀಡಿ ಎಂದು ಅಧ್ಯಯನವು ತಿಳಿಸಿದೆ.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: 

Published On - 10:52 am, Sat, 28 January 23