Listeria Infection: ಅಮೆರಿಕದಲ್ಲಿ ಲಿಸ್ಟೇರಿಯಾ ಎಂಬ ಸೋಂಕು ಪತ್ತೆ, ಇದು ಮಾರಣಾಂತಿಕವೇ? ಯಾರಿಗೆ ಹೆಚ್ಚು ಅಪಾಯ?
ಅಮೆರಿಕದಲ್ಲಿ ಕೊರೊನಾವೈರಸ್, ಮಂಕಿಪಾಕ್ಸ್ನಂತಹ ಸಾಂಕ್ರಾಮಿಕ ರೋಗಗಳ ಬಿಸಿ ಇನ್ನೂ ತಣ್ಣಗಾಗಿಲ್ಲ. ಇದೀಗ ಹೊಸ ಸೋಂಕು ಕಾಣಿಸಿಕೊಂಡಿದ್ದು, ಜನರನ್ನು ಆತಂಕಕ್ಕೆ ತಳ್ಳಿದೆ.
ಅಮೆರಿಕದಲ್ಲಿ ಕೊರೊನಾವೈರಸ್, ಮಂಕಿಪಾಕ್ಸ್ನಂತಹ ಸಾಂಕ್ರಾಮಿಕ ರೋಗಗಳ ಬಿಸಿ ಇನ್ನೂ ತಣ್ಣಗಾಗಿಲ್ಲ. ಇದೀಗ ಹೊಸ ಸೋಂಕು ಕಾಣಿಸಿಕೊಂಡಿದ್ದು, ಜನರನ್ನು ಆತಂಕಕ್ಕೆ ತಳ್ಳಿದೆ. ಲಿಸ್ಟೇರಿಯಾ ಎನ್ನುವ ಹೊಸ ಸೋಂಕು ಅಮೆರಿಕದಲ್ಲಿ ಹಲವು ರಾಜ್ಯಗಳಲ್ಲಿ ವೇಗವಾಗಿ ಹರಡುತ್ತಿದೆ. ಕಲುಷಿತಗೊಂಡಿರುವ ಮಾಂಸದಲ್ಲಿ ಈ ಸೋಂಕು ಕಾಣಿಸಿಕೊಂಡಿದೆ ಎಂದು ಹೇಳಲಾಗುತ್ತಿದೆ.
ಆಹಾರದಲ್ಲಿ ಕಂಡುಬರುವ ಬ್ಯಾಕ್ಟೀರಿಯಾ, ಇದರಿಂದಾಗಿ ಈ ಸೋಂಕು ಹರಡುತ್ತದೆ. ಜ್ವರ, ಅತಿಸಾರ, ಸ್ನಾಯು ಸೆಳೆತ ಉಂಟಾಗುತ್ತದೆ. 65ವಷ್ಕ್ಕಿಂತ ಮೇಲ್ಪಟ್ಟವರು ಮತ್ತು ಗರ್ಭಿಣಿಯರು ಈ ಸೋಂಕಿನ ಅಪಾಯವನ್ನು ಹೆಚ್ಚಿನ ಪ್ರಮಾಣದಲ್ಲಿ ಹೊಂದಿರುತ್ತಾರೆ. ಇದಲ್ಲದೆ, ರೋಗ ನಿರೋಧಕ ಶಕ್ತಿ ದುರ್ಬಲವಾಗಿರುವವರಿಗೆ ಕೂಡ ಸೋಂಕಿನ ಅಪಾಯ ಹೆಚ್ಚಿರುತ್ತದೆ.
ಅಮೆರಿಕದಲ್ಲಿ ಒಟ್ಟು 16 ಪ್ರಕರಣಗಳು ವರದಿಯಾಗಿವೆ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಆಂಡ್ ಪ್ರಿವೆನ್ಷನ್ ಪ್ರಕಾರ, ನ್ಯೂಯಾರ್ಕ್, ಮೇರಿಲ್ಯಾಂಡ್, ನ್ಯೂಜೆರ್ಸಿ, ಇಲಿನಾಯ್ಸ್, ಕ್ಯಾಲಿಫೋರ್ನಿಯಾ ಮತ್ತು ಮ್ಯಾಸಚೂಸೆಟ್ಸ್ಗಳಲ್ಲಿ ನವೆಂಬರ್ 9ರ ಹೊತ್ತಿಗೆ 16 ಪ್ರಕರಣಗಳು ವರದಿಯಾಗಿದ್ದವು.
ಗರ್ಭಿಣಿಯರು ಸೇರಿದಂತೆ ಮಹಿಳೆಗೆ ಸೋಂಕು ತಗುಲಿದ ಬಳಿಕ ಆಕೆಯ ಮಗು ಸಾವನ್ನಪ್ಪಿದೆ. ಅದೇ ಸಮಯದಲ್ಲಿ ಈ ಸೋಂಕಿನಿಂದ ಇನ್ನೊಬ್ಬ ರೋಗಿಯೂ ಸಾವನ್ನಪ್ಪಿದ್ದಾರೆ. ಒಟ್ಟು 13 ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂದರ್ಭದಲ್ಲಿ ಸೋಂಕಿತ ರೋಗಿಗಳ ಸಂಖ್ಯೆ ಮತ್ತಷ್ಟು ಹೆಚ್ಚಾಗಬಹುದು ಎಂದು ಅಂದಾಜಿಸಲಾಗಿದೆ.
ಮಾಂಸ ಮತ್ತು ಚೀಸ್ ತಿನ್ನಬೇಡಿ ಹೆಚ್ಚಿನ ರೋಗಿಗಳು ಚೀಸ್ ಅಥವಾ ಮಾಂಸವನ್ನು ಹೆಚ್ಚಾಗಿ ಸೇವಿಸಿದ್ದಾರೆ. ನ್ಯೂಯಾರ್ಕ್ನಲ್ಲಿ 7 ರೋಗಿಗಳಲ್ಲಿ 5 ಮಂದಿ ಅಂತಾರಾಷ್ಟ್ರೀಯ ಆಹಾರವನ್ನು ಮಾರಾಟ ಮಾಡುವ ಸ್ಥಳಗಳಿಂದ ಆಹಾರವನ್ನು ಖರೀದಿಸಿದ್ದಾರೆ. ಹಾಗಾಗಿ ಮಾಂಸ ಹಾಗೂ ಚೀಸ್ ಅನ್ನು ಯಾರೂ ಕೂಡ ತಿನ್ನಬೇಡಿ ಎಂದು ಸಲಹೆ ನೀಡಲಾಗಿದೆ.
ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ