Diabetes Diet: ಮಧುಮೇಹಕ್ಕೆ ರಾಮಬಾಣ ಈ 5 ಮಸಾಲ ಪದಾರ್ಥಗಳು

ಮಧುಮೇಹವು ಜಗತ್ತಿನ ಹೆಚ್ಚಿನ ಜನರನ್ನು ಕಾಡುವ ಸಾಮಾನ್ಯ ಕಾಯಿಲೆ ಆದರೆ ಗಂಭೀರ ಸಮಸ್ಯೆಯಾಗಿದೆ. ಇದನ್ನು ಗುಣಪಡಿಸಲು ಕಷ್ಟಕರವಾಗಿದ್ದರೂ, ಈ ಸ್ಥಿತಿಯನ್ನು ನಿಯಂತ್ರಣದಲ್ಲಿಡುವುದು ತುಂಬಾ ಸುಲಭ.

Diabetes Diet: ಮಧುಮೇಹಕ್ಕೆ ರಾಮಬಾಣ ಈ 5 ಮಸಾಲ ಪದಾರ್ಥಗಳು
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on: Feb 22, 2023 | 6:42 PM

ನಾವು ಸಾಮಾನ್ಯವಾಗಿ ಕಡೆಗಣಿಸುವ ಕೆಲವೊಂದು ಸಣ್ಣ ಸಣ್ಣ ಮಸಾಲೆಗಳು ಮಧುಮೇಹ ಕಾಯಿಲೆಯಿಂದ ಬಳಲುತ್ತಿರುವ ಜನರಿಗೆ ನಿಜವಾಗಿಯೂ ವರದಾನವಾಗಿದೆ. ಹಾಗಾದರೆ ಆ ಮಸಾಲೆಗಳು ಯಾವುದೆಂಬುದುನ್ನು ನೋಡೋಣಾ, ಮಧುಮೇಹವು ಜಗತ್ತಿನ ಹೆಚ್ಚಿನ ಜನರನ್ನು ಕಾಡುವ ಸಾಮಾನ್ಯ ಕಾಯಿಲೆ ಆದರೆ ಗಂಭೀರ ಸಮಸ್ಯೆಯಾಗಿದೆ. ಇದನ್ನು ಗುಣಪಡಿಸಲು ಕಷ್ಟಕರವಾಗಿದ್ದರೂ, ಈ ಸ್ಥಿತಿಯನ್ನು ನಿಯಂತ್ರಣದಲ್ಲಿಡುವುದು ತುಂಬಾ ಸುಲಭ. ಉತ್ತಮ ಆಹಾರದೊಂದಿಗೆ ಆರೋಗ್ಯಕರ ಜೀವನ ಶೈಲಿಯನ್ನು ನಡೆಸುವ ಮೂಲಕ ಮಧುಮೇಹ ಕಾಯಿಲೆಯನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬಹುದು. ಹಾಗೂ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಕೆಲವೊಂದು ಆಹಾರಗಳಿವೆ. ಮತ್ತು ಇವುಗಳು ನಾವು ದೈನಂದಿನ ಅಡುಗೆಗಳಲ್ಲಿ ಬಳಸುವ ಸಾಮಾನ್ಯ ಮಸಾಲೆಗಳಾಗಿವೆ. ಇಂತಹ ನಾವು ಕಡೆಗಣಿಸುವ ಮಸಾಲೆಗಳು ಮಧುಮೇಹದಿಂದ ಬಳಲುತ್ತಿರುವ ಜನರಿಗೆ ಅವರ ಕಾಯಿಲೆಗೆ ರಾಮಬಾಣವಾಗಿ ಕಾರ್ಯನಿರ್ವಹಿಸುತ್ತದೆ.

ಡಯೆಟಿಷಿಯನ್ ಕನುಪ್ರೀತ್ ಅರೋರಾ ನಾರಂಗ್ ಅವರು ತಮ್ಮ ಇನ್ಟಾಗ್ರಾಮ್ ಪೇಜ್‌ನಲ್ಲಿ ಈ ಕೆಲವು ಮಸಾಲೆಗಳು ಮಧುಮೇಹ ಆಹಾರಕ್ರಮಕ್ಕೆ ಉತ್ತಮ ಸೇರ್ಪಡೆಯಾಗಿದೆ ಎನ್ನುವ ಮೂಲಕ ಮಧುಮೇಹದ ಆಹಾರಕ್ಕೆ ಸೂಕ್ತವಾದ ಮಸಾಲೆಗಳ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

ಮಧುಮೇಹದ ಆಹಾರಕ್ಕೆ ಸೂಕ್ತ ಈ ಸಾಮಾನ್ಯ ಮಸಾಲೆಗಳು:

ಮೆಂತ್ಯೆ ಕಾಳು: ಈ ಮಸಾಲೆ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಕಡಿಮೆ ಮಾಡುತ್ತದೆ ಎಂದು ತಿಳಿದು ಬಂದಿದೆ. ಮೆಂತ್ಯೆಬೀಜಗಳು ಫೈಬರ್‌ನಿಂದ ಸಮೃದ್ಧವಾಗಿದೆ. ಇದು ಜೀರ್ಣಕ್ರಿಯೆಯನ್ನು ಸರಾಗವಾಗಿಸುತ್ತದೆ. ಇದು ಪ್ರತಿನಿತ್ಯದ ಅಡುಗೆಗಳಲ್ಲಿ ಸೇರಿಸಲು ಉತ್ತಮ ಆಯ್ಕೆಯಾಗಿದೆ. ಇದು ಮಾತ್ರವಲ್ಲದೆ ಮೆಂತ್ಯೆ ಕಾಳಿನ ನೀರನ್ನು ಕೂಡ ಸೇವನೆ ಮಾಡಬಹುದು.

ಇಂಟರ್‌ನ್ಯಾಷನಲ್ ಜರ್ನಲ್ ಫಾರ್ ವಿಟಮಿನ್ ಆಂಡ್ ನ್ಯೂಟ್ರಿಷನ್ ರಿಸರ್ಚ್ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ 10 ಗ್ರಾಂ ಮೆಂತ್ಯೆ ಬೀಜಗಳನ್ನು ಬಿಸಿ ನೀರಿನಲ್ಲಿ ನೆನೆಸಿಟ್ಟು ಕುಡಿದರೆ ಟೈಪ್-2 ಮಧುಮೇಹವನ್ನು ನಿಯಂತ್ರಿಸಲು ಅದು ಸಹಾಯ ಮಾಡುತ್ತದೆ.

ದಾಲ್ಚಿನ್ನಿ: ದಾಲ್ಚಿನ್ನಿ ಇನ್ಸುಲಿನ್ ಸೂಕ್ಷ್ಮತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಮತ್ತು ಇದು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಿಸುತ್ತದೆ. ದಾಲ್ಚಿನ್ನಿ ಸಿನ್ನಮಾಲ್ಡಿಹೈಡ್ ಅಂಶವನ್ನು ಹೊಂದಿರುತ್ತದೆ. ಇದು ಮಸಾಲೆಗೆ ಎಲ್ಲಾ ಆರೋಗ್ಯ ಪ್ರಯೋಜನಕಾರಿ ಮತ್ತು ಅದಕ್ಕೆ ಪರಿಮಳವನ್ನು ನೀಡುತ್ತದೆ. ಅಧ್ಯಯನಗಳ ಪ್ರಕಾರ 40 ದಿನಗಳವರೆಗೆ ಪ್ರತಿದಿನ 6 ಗ್ರಾಂ ದಾಲ್ಚಿನ್ನಿ ಸೇವನೆಯು ರಕ್ತದಲ್ಲಿನ ಸಕ್ಕರೆ ಮಟ್ಟದ ಏರಿಕೆಯನ್ನು ನಿಗ್ರಹಿಸಲು ಸಹಾಯಕವಾಗಿದೆ ಎಂದು ಹೇಳಿದೆ.

ಇದನ್ನೂ ಓದಿ: Diabetes: ಮಧುಮೇಹಿಗಳು ಸಿಹಿ ತಿಂಡಿಗಳನ್ನು ತಿನ್ನಬಹುದೇ? ಈ ವಿಷಯಗಳು ಗಮನದಲ್ಲಿರಲಿ

ಡಯೆಟಿಷಿಯನ್ ಕನುಪ್ರೀತ್‌ಯವರು ದಾಲ್ಚಿನ್ನಿ ಪುಡಿಯನ್ನು ಸ್ಮೂಥಿ, ಓಟ್‌ಮೀಲ್‌ಗಳಲ್ಲಿ ಸಿಂಪಡಿಸಿ ತಿನ್ನಲು ಸಲಹೆ ನೀಡುತ್ತಾರೆ. ದಾಲ್ಚಿನ್ನಿ ತುಂಡುಗಳನ್ನು ಬಿರಿಯಾನಿ ಮತ್ತು ಗ್ರೇವಿಗಳಂತಹ ಭಾರತೀಯ ಭಕ್ಷ್ಯಗಳಿಗೆ ಸೇರಿಸಬಹುದು.

ಅರಶಿನ: ಅರಶಿನವು ಉತ್ಕರ್ಷಣ ನಿರೋಧಕ ಅಂಶಗಳಿಂದ ಅಧಿಕವಾಗಿದೆ ಮತ್ತು ರೋಗಗಳು ಮತ್ತು ಸೋಂಕುಗಳ ವಿರುದ್ಧ ಹೋರಾಡುತ್ತದೆ. ನೀವು ದೈನಂದಿನ ಈ ಅರಸಿನವನ್ನು ದೈನಂದಿನ ಆಹಾರದಲ್ಲಿ ಸೇರಿಸಬಹುದು. 2013ರಲ್ಲಿ ಪ್ರಕಟವಾದ ಅಧ್ಯಯನವೊಂದು ಅರಶಿನದಲ್ಲಿರುವ ಕರ್ಕ್ಯುಮಿನ್ ಅಂಶವು ರಕ್ತದಲ್ಲಿನ ಗ್ಲೂಕೋಸ್‌ನ್ನು ಕಡಿಮೆ ಮಾಡುತ್ತದೆ ಮತ್ತು ಮಧುಮೇಹದ ಇತರ ಲಕ್ಷಣಗಳನ್ನು ನಿಯಂತ್ರಣದಲ್ಲಿರಿಸುತ್ತದೆ ಎಂದು ಸೂಚಿಸಿದೆ. ಹಾಲಿನೊಂದಿಗೆ ಅರಶಿನವನ್ನು ಸೇರಿಸಿ ಕುಡಿಯುವುದು ಕೂಡಾ ಉತ್ತಮ.

ಲವಂಗ: ಈ ಮಸಾಲೆಯು ಇನ್ಸುಲಿನ್ ಉತ್ಪಾದನೆಯನ್ನು ಉತ್ತೇಜಿಸುತ್ತದೆ. ಈ ಕಟುವಾದ ಮಸಾಲೆಯನ್ನು ದೈನಂದಿನ ಪಾಕಪದ್ಧತಿಗಳಲ್ಲಿ ಸೇರಿಸಬಹುದು. ಇದು ನಂಜುನಿರೋಧಕ, ಉರಿಯೂತ ವಿರೋಧಿ ಲಕ್ಷಣಗಳನ್ನು ಹೊಂದಿದೆ. ಹಾಗೂ ಮಧುಮೇಹಿಗಳಿಗೆ ಇದು ತುಂಬಾ ಪ್ರಯೋಜನಕಾರಿಯಾಗಿದೆ.

ಶುಂಠಿ: ಶುಂಠಿಯು ಹಲವು ರೀತಿಯ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಮಧುಮೇಹದ ಆಹಾರಕ್ಕೆ ಇದು ಉತ್ತಮವಾಗಿದೆ. ಜರ್ನಲ್ ಆಫ್ ಎಥ್ನಿಕ್ ಫುಡ್‌ನಲ್ಲಿ ಪ್ರಕಟವಾದ ಅಧ್ಯಯನವು ಟೈಮ್- 2 ಮಧುಮೇಹವನ್ನು ಹೊಂದಿರುವ ಜನರಲ್ಲಿ ಸಕ್ಕರೆಯ ಮಟ್ಟವನ್ನು ಕಡಿಮೆ ಮಾಡುತ್ತದೆ ಎಂದು ಹೇಳುತ್ತದೆ.

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ