ರಾತ್ರಿ ಮಲಗುವ ಮುನ್ನ ಏನು ಸೇವಿಸಿದರೆ ರಕ್ತದ ಸಕ್ಕರೆ ಅಂಶವನ್ನು ನಿಯಂತ್ರಿಸಬಹುದು?

|

Updated on: Sep 15, 2023 | 8:27 PM

ಮಲಗುವ ಮುನ್ನ ಲಘು ಉಪಹಾರವು ಉತ್ತಮ ಆಯ್ಕೆಯಾಗಿದೆ. ಜೀರ್ಣಕಾರಿ ಕಾರಣಗಳಿಗಾಗಿ ಮಲಗುವುದಕ್ಕೂ ಸುಮಾರು 30 ನಿಮಿಷಗಳ ಮೊದಲು ನಿಮ್ಮ ಆಹಾರ ಸೇವಿಸಿ. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸದ ತಿಂಡಿಗಳನ್ನು ಆಯ್ಕೆ ಮಾಡುವುದು ಬಹಳ ಅಗತ್ಯ.

ರಾತ್ರಿ ಮಲಗುವ ಮುನ್ನ ಏನು ಸೇವಿಸಿದರೆ ರಕ್ತದ ಸಕ್ಕರೆ ಅಂಶವನ್ನು ನಿಯಂತ್ರಿಸಬಹುದು?
ಡಯಾಬಿಟಿಸ್
Image Credit source: pexels.com
Follow us on

ಪ್ರತಿಯೊಬ್ಬರ ರಕ್ತದಲ್ಲಿನ ಸಕ್ಕರೆ ಮಟ್ಟವು ರಾತ್ರಿಯಿಡೀ ಏರುಪೇರಾಗುತ್ತಿರುತ್ತದೆ. ಈ ವ್ಯತ್ಯಾಸಗಳು ಬೆಳಿಗ್ಗೆ ಡಯಾಬಿಟಿಸ್​ ಟೈಪ್ 1 ಅಥವಾ ಟೈಪ್ 2 ಅನ್ನು ಹೆಚ್ಚಿಸಬಹುದು. ಹೀಗಾಗಿ, ಮಲಗುವ ಮುನ್ನ ತಡರಾತ್ರಿ ಲಘು ಉಪಹಾರ ಮಾಡುವುದರಿಂದ ಈ ಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯವಾಗುತ್ತದೆ. ಮಲಗುವ ಮುನ್ನ ಉತ್ತಮ ಆಹಾರ ಮತ್ತು ತಿಂಡಿಗಳನ್ನು ಸೇವಿಸುವುದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ. ಆದರೆ, ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸದ ತಿಂಡಿಗಳನ್ನು ಆಯ್ಕೆ ಮಾಡುವುದು ಬಹಳ ಅಗತ್ಯ.

ಮಧುಮೇಹಿಗಳು ರಾತ್ರಿಯಲ್ಲಿ ಆರೋಗ್ಯಕರವಾದ ತಿಂಡಿಯನ್ನು ಹೇಗೆ ಸೇವಿಸಬೇಕು?:

– ಮಲಗುವ ಮುನ್ನ ಲಘು ಉಪಹಾರವು ಉತ್ತಮ ಆಯ್ಕೆಯಾಗಿದೆ. ಜೀರ್ಣಕಾರಿ ಕಾರಣಗಳಿಗಾಗಿ ಮಲಗುವುದಕ್ಕೂ ಸುಮಾರು 30 ನಿಮಿಷಗಳ ಮೊದಲು ನಿಮ್ಮ ಆಹಾರ ಸೇವಿಸಿ. ನಿಮ್ಮ ಸಂಜೆಯ ಊಟವನ್ನು 2 ಸಣ್ಣ ಭಾಗಗಳಾಗಿ ವಿಂಗಡಿಸುವುದು ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: Rambutan Benefits: ಫೈಬರ್​ಭರಿತವಾಗಿರುವ ರಾಂಬುಟಾನ್ ಹಣ್ಣಿನ ಅಚ್ಚರಿಯ ಪ್ರಯೋಜನಗಳಿವು

– ದೇಹಕ್ಕೆ ಅಗತ್ಯವಾದ ನೀರನ್ನು ಹೀರಿಕೊಳ್ಳುವ ಮತ್ತು ಜೆಲ್ ಅನ್ನು ಉತ್ಪಾದಿಸುವ ಮೂಲಕ, ಫೈಬರ್ ಜೀರ್ಣಕ್ರಿಯೆಯನ್ನು ನಿಧಾನಗೊಳಿಸಲು ಮತ್ತು ಗ್ಲೂಕೋಸ್ ಹೀರಿಕೊಳ್ಳುವಿಕೆಯನ್ನು ಮುಂದೂಡಲು ಸಹಾಯ ಮಾಡುತ್ತದೆ.

– ಆವಕಾಡೊ, ಆಲಿವ್ ಎಣ್ಣೆ, ನಟ್ಸ್​ಗಳಲ್ಲಿ ಕಂಡುಬರುವ ಆರೋಗ್ಯಕರ ಕೊಬ್ಬುಗಳನ್ನು ನಿಮ್ಮ ಊಟ ಮತ್ತು ತಿಂಡಿಗಳಲ್ಲಿ ಸೇರಿಸುವುದು ಬಹಳ ಮುಖ್ಯ. ಕೊಬ್ಬಿನಿಂದಾಗಿ ನಿಮಗೆ ದೀರ್ಘಕಾಲದವರೆಗೆ ಹೊಟ್ಟೆ ತುಂಬಿದಂತಿರುತ್ತದೆ. ಕೊಬ್ಬು, ಪ್ರೋಟೀನ್ ಮತ್ತು ಫೈಬರ್ ಜೊತೆಗೆ ರಕ್ತ ಪರಿಚಲನೆಗೆ ಸಕ್ಕರೆಯ ಅಂಶದ ಬಿಡುಗಡೆಯನ್ನು ನಿಧಾನಗೊಳಿಸಲು ಸಹಾಯ ಮಾಡುತ್ತದೆ. ರಕ್ತದಲ್ಲಿನ ಸಕ್ಕರೆ ಮಟ್ಟದಲ್ಲಿ ತೀವ್ರ ಏರಿಕೆ ಮತ್ತು ತೀವ್ರ ಕುಸಿತವನ್ನು ತಡೆಯುತ್ತದೆ.

– ಅಧಿಕ ರಕ್ತದೊತ್ತಡವು ಹೃದ್ರೋಗಕ್ಕೆ ಅಪಾಯಕಾರಿ ಅಂಶಗಳಲ್ಲಿ ಒಂದಾಗಿದೆ. ಕಡಿಮೆ ಸೋಡಿಯಂ ಇರುವ ಲಘು ಆಹಾರವನ್ನು ಆಯ್ಕೆ ಮಾಡುವುದು ಆರೋಗ್ಯಕರ ರಕ್ತದೊತ್ತಡದ ಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: ಆಫೀಸ್ ಕೆಲಸದ ವೇಳೆ ನಿಮ್ಮ ಡಯೆಟ್ ಹೇಗಿರಬೇಕು?

– ಪ್ರತಿ ಬಾರಿ 15 ಗ್ರಾಂಗಿಂತ ಹೆಚ್ಚು ಕಾರ್ಬೋಹೈಡ್ರೇಟ್‌ಗಳನ್ನು ಹೊಂದಿರದ ಲಘು ಆಹಾರವನ್ನು ನೀವು ಆರಿಸಿದರೆ ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಉತ್ತಮವಾಗಿ ನಿಯಂತ್ರಿಸಬಹುದು.

– ಫೈಬರ್ ಮತ್ತು ಕೊಬ್ಬಿನಂತೆ ಗ್ಲೂಕೋಸ್ ಕೂಡ ರಕ್ತ ಪರಿಚಲನೆಗೆ ಪ್ರವೇಶಿಸುವ ಪ್ರಮಾಣವನ್ನು ಕಡಿಮೆ ಮಾಡುವ ಮೂಲಕ ಹಸಿವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಆರೋಗ್ಯಕರ ಆಹಾರ ಪದ್ಧತಿಯ ಜೊತೆಗೆ ವ್ಯಾಯಾಮದ ದಿನಚರಿಗಳನ್ನು ಅಳವಡಿಸಿಕೊಳ್ಳುವುದು ಪ್ರಯೋಜನಕಾರಿಯಾಗಿದೆ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ