ಸಬ್ಬಸಿಗೆ ಸೊಪ್ಪು: ಮಲಬದ್ಧತೆ ಸಮಸ್ಯೆಯ ನಿವಾರಣೆಯ ಜತೆಗೆ ಎಷ್ಟೆಲ್ಲಾ ಆರೋಗ್ಯ ಪ್ರಯೋಜನಗಳಿವೆ ತಿಳಿಯಿರಿ

| Updated By: shruti hegde

Updated on: Jul 21, 2021 | 8:00 AM

Dill Leaves: ಸಬ್ಬಸಿಗೆ ಸೊಪ್ಪಿನಲ್ಲಿ ವಿಟಮಿನ್​ ಸಿ, ಎ, ಕ್ಯಾಲ್ಸಿಯಮ್​ ಮತ್ತು ಮ್ಯಾಂಗನೀಸ್​ ಸಮೃದ್ಧವಾಗಿರುತ್ತದೆ. ಇದು ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಇದು ಸಹಾಯ ಮಾಡುತ್ತದೆ.

ಸಬ್ಬಸಿಗೆ ಸೊಪ್ಪು: ಮಲಬದ್ಧತೆ ಸಮಸ್ಯೆಯ ನಿವಾರಣೆಯ ಜತೆಗೆ ಎಷ್ಟೆಲ್ಲಾ ಆರೋಗ್ಯ ಪ್ರಯೋಜನಗಳಿವೆ ತಿಳಿಯಿರಿ
ಸಬ್ಬಸಿಗೆ ಸೊಪ್ಪು
Follow us on

ಸಾಮಾನ್ಯವಾಗಿ ಸಬ್ಬಸಿಗೆ ಸೊಪ್ಪು ಆರೋಗ್ಯಕ್ಕೆ ಪ್ರಯೋಜನ ಎಂಬುದು ಗೊತ್ತಿರಬಹುದು. ಆದರೆ ಇವುಗಳಲ್ಲಿ ಎಷ್ಟೆಲ್ಲಾ ಪೌಷ್ಟಿಕ ಗುಣಗಳಿವೆ ಮತ್ತು ಆರೋಗ್ಯವನ್ನು ಸುಧಾರಿಸಿಕೊಳ್ಳಲು(Health Benefits) ಯಾವ ರೀತಿ ಸಹಾಯ ಮಾಡುತ್ತದೆ ಎಂಬುದನ್ನು ತಿಳಿದುಕೊಳ್ಳಲೇಬೇಕು. ಸಬ್ಬಸಿಗೆ ಸೊಪ್ಪಿನಿಂದ(Dill Leaves) ತಯಾರಿಸಿದ ಸಾಂಬಾರು​ ಅಥವಾ ಪಲ್ಯ ನಿಮ್ಮ ಆಹಾರ ಕ್ರಮದಲ್ಲಿರಲಿ. ಜತೆಗೆ ವಾರಕ್ಕೊಮ್ಮೆಯಾದರೂ ಈ ಸೊಪ್ಪನ್ನು ಸೇವಿಸುವ ಅಭ್ಯಾಸ ಮಾಡಿಕೊಳ್ಳಿ.

ಸಬ್ಬಸಿಗೆ ಸೊಪ್ಪಿನಲ್ಲಿ ವಿಟಮಿನ್​ ಸಿ, ಎ, ಕ್ಯಾಲ್ಸಿಯಮ್​ ಮತ್ತು ಮ್ಯಾಂಗನೀಸ್​ ಸಮೃದ್ಧವಾಗಿರುತ್ತದೆ. ಇದು ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಇದು ಸಹಾಯ ಮಾಡುತ್ತದೆ. ಮೂಳೆಗಳನ್ನು ಬಲಪಡಿಸಲು ಕ್ಯಾಲ್ಸಿಯಮ್​ ಅಂಶವಿದೆ. ಜತೆಗೆ ಮ್ಯಾಂಗನೀಸ್​ ಇರುವುದರಿಂದ ಮೆದುಳಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಆಹಾರದಲ್ಲಿ ನಾವು ಕಡಿಮೆ ಪ್ರಮಾಣದಲ್ಲಿ ಸಬ್ಬಸಿಗೆ ಸೊಪ್ಪು ಬಳಸುತ್ತಿದ್ದರೂ ಸಹ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ.

ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುತ್ತದೆ
ಸಬ್ಬಸಿಗೆ ಎಲೆಗಳು ಜೀರ್ಣಾಂಗ ವ್ಯವಸ್ಥೆಗೆ ಸಹಾಯ ಮಾಡುತ್ತದೆ. ಫೈಬರ್​ ಅಂಶಗಳಿಂದ ಸಮೃದ್ಧವಾಗಿದೆ. ಇದು ಮಲಬದ್ಧತೆ ಸಮಸ್ಯೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ. ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುವ ಮೂಲಕ ವಾಯು ಸಮಸ್ಯೆ ತೊಡೆದು ಹಾಕುತ್ತದೆ.

ನಿದ್ರಾಹೀನತೆ
ನಿದ್ರಾಹೀನತೆಯಿಂದ ಆರೋಗ್ಯ ತುಂಬಾ ಕೆಡುತ್ತದೆ. ಮಾನಸಿಕ ಅಸ್ವಸ್ಥತೆಗೆ ಕಾರಣವಾಗುತ್ತದೆ. ಜೀವನ ಶೈಲಿಯ ಕೆಲವು ಬದಲಾವಣೆಗಳಿಂದಾಗಿ ಅನೇಕರಿಗೆ ನಿದ್ರೆಯ ಸಮಸ್ಯೆ ಕಾಡುತ್ತಿದೆ. ನಿದ್ರೆ ಕೊರತೆಯಿಂದಾಗಿ ಸೋಮಾರಿತನ ಕಾಡುತ್ತದೆ. ಸಬ್ಬಸಿಗೆ ಸೊಪ್ಪಿನಲ್ಲಿ ವಿಟಮಿನ್​ ಬಿ ಅಂಶವಿದ್ದು ಇದು ನಿದ್ರಾಹೀನತೆ ಸಮಸ್ಯೆಯಿಂದ ಪರಿಹಾರ ಕಂಡುಕೊಳ್ಳಲು ಸಹಾಯ ಮಾಡುತ್ತದೆ.

ತೂಕ ನಷ್ಟಕ್ಕೆ ಸಹಾಯಕಾರಿ
ಸಬ್ಬಸಿಗೆ ಎಲೆಗಳಲ್ಲಿ ಆಂಟಿ ಆಕ್ಸಿಡೆಂಟ್​ಗಳು ಸಮೃದ್ಧವಾಗಿರುತ್ತವೆ. ಇವುಗಳಲ್ಲಿ ಕ್ಲಾಲೋರಿ ಪ್ರಮಾಣವೂ ತುಂಬಾ ಕಡಿಮೆ. ಬೆಳಿಗ್ಗೆ ಗ್ರೀನ್​ ಟೀ ಸೇವಿಸುವವರಿದ್ದರೆ ಸಬ್ಬಸಿಗೆ ಎಲೆಗಳನ್ನು ಸೇರಿಸಿ ಚಹಾ ಸವಿಯುವುದರ ಮೂಲಕ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದಾಗಿದೆ. ಇದು ನಿಮ್ಮ ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ. ಜತೆಗೆ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.

ಇದನ್ನೂ ಓದಿ:

ಸೊಪ್ಪು ಬೆಳೆದು ಲಕ್ಷಗಟ್ಟಲೆ ಆದಾಯ ಗಳಿಸಿದ ದಾವಣಗೆರೆಯ ರೈತ ಕುಟುಂಬ; ಅನ್ನದಾತನ ಯಶಸ್ಸಿನ ಹಿಂದಿದೆ ಪರಿಶ್ರಮದ ಬೆಳಕು

ಸಾವಯವ ಕೃಷಿ ಮೂಲಕ ಸೊಪ್ಪು ಬೆಳೆದು ಸ್ವಾವಲಂಬಿ ಬದುಕು ಕಟ್ಟಿಕೊಂಡ ದಾವಣಗೆರೆ ರೈತ; ಸುಡು ಬಿಸಿಲಿನಲ್ಲಿ ಸೊಪ್ಪಿನ ಸಂತೆ