AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೊಪ್ಪು ಬೆಳೆದು ಲಕ್ಷಗಟ್ಟಲೆ ಆದಾಯ ಗಳಿಸಿದ ದಾವಣಗೆರೆಯ ರೈತ ಕುಟುಂಬ; ಅನ್ನದಾತನ ಯಶಸ್ಸಿನ ಹಿಂದಿದೆ ಪರಿಶ್ರಮದ ಬೆಳಕು

ವಾರದ ಏಳು ದಿನವೂ ಪ್ರತಿ ಹತ್ತು ಮಡಿಗೆ ಒಂದು ಅಂಕಣ ಮಾಡಿ, ಅದರಲ್ಲಿ 28 ದಿನಗಳ ಅಂತರದಲ್ಲಿ ಸೊಪ್ಪಿನ ಬೀಜ ನಾಟಿ ಮಾಡಿದ್ದಾರೆ. ಎಕರೆಗೆ 15 ಸಾವಿರದಿಂದ 20 ಸಾವಿರ ಖರ್ಚು ಮಾಡಿ ಪ್ರತಿ ದಿನವೂ 5 ಸಾವಿರ ಸಿವುಡಿನಷ್ಟು ಸೊಪ್ಪು ಕತ್ತರಿಸಿ ಮಾರುತ್ತಾರೆ.

ಸೊಪ್ಪು ಬೆಳೆದು ಲಕ್ಷಗಟ್ಟಲೆ ಆದಾಯ ಗಳಿಸಿದ ದಾವಣಗೆರೆಯ ರೈತ ಕುಟುಂಬ; ಅನ್ನದಾತನ ಯಶಸ್ಸಿನ ಹಿಂದಿದೆ ಪರಿಶ್ರಮದ ಬೆಳಕು
ಸೊಪ್ಪು ಬೆಳೆ
TV9 Web
| Edited By: |

Updated on: Jun 19, 2021 | 8:34 AM

Share

ದಾವಣಗೆರೆ: ಕೃಷಿ ಬದುಕನ್ನೇ ನಂಬಿದ ಹಲವರು ಇಂದು ಮಳೆ, ಲಾಕ್​ಡೌನ್​ ಎಂದು ಸಂಕಷ್ಟದಲ್ಲಿ ಸಿಲುಕಿದ್ದಾರೆ. ಸರ್ಕಾರ ಈ ಬಗ್ಗೆ ಗಮನ ಹರಿಸಿ ಸಹಾಯಧನ ನೀಡಿದರೂ ಅದು ರೈತರಿಗೆ ಸರಿಯಾದ ರೀತಿಯಲ್ಲಿ ಸಿಗುತ್ತಿಲ್ಲ. ಹೀಗಾಗಿ ರೈತರು ಸಾಲ ಮಾಡಿಕೊಂಡು ನೋವಿನಲ್ಲಿ ಜೀವನ ಸಾಗಿಸುವಂತ್ತಾಗಿದೆ. ಆದರೆ ದಾವಣಗೆರೆ ಜಿಲ್ಲೆಯ ಹರಪನಹಳ್ಳಿ ತಾಲ್ಲೂಕಿನ ತಿಪ್ಪನಾಯಕನಹಳ್ಳಿ ಗ್ರಾಮದ ಎಸ್. ಪರಶುರಾಮಪ್ಪ, ಕೆಂಚಮ್ಮ ದಂಪತಿ ಮತ್ತು ಪುತ್ರ ಸುಣಗಾರ ಕೆಂಚಣ್ಣ, ಆರು ವರ್ಷಗಳಿಂದ ಪಾಲಕ್, ರಾಜಗಿರಿ, ಸಬ್ಬಾಸಕಿ, ಉಳಿಸೊಪ್ಪು, ಮೂಲಂಗಿ ಬೆಳೆದು ಲಕ್ಷ ಲಕ್ಷ ಸಂಪಾದಿಸುತ್ತಿದ್ದಾರೆ.

ತಮ್ಮ ಒಂದು ಎಕರೆ ಜಮೀನು ಹಾಗೂ ಸಹೋದರನ ಮೂರು ಎಕರೆಯಲ್ಲಿ ಪ್ರತಿ ದಿನ 4 ಸಾವಿರದಿಂದ 5 ಸಾವಿರ ಸಿವುಡು ಸೊಪ್ಪು ಕಠಾವು ಮಾಡುವಂತೆ ಬೆಳೆದಿದ್ದಾರೆ. ನಿತ್ಯ ಹತ್ತಿರದ ಕೊಟ್ಟೂರು, ಹಡಗಲಿ, ಹರಪನಹಳ್ಳಿ, ಇಟ್ಟಿಗಿ ಸೇರಿ ವಿವಿಧ ಗ್ರಾಮದ ಸಂತೆಗಳಿಗೆ ಬೈಕ್‌ನಲ್ಲಿಯೇ ಸೊಪ್ಪು ತೆಗೆದುಕೊಂಡು ಹೋಗಿ ನೇರವಾಗಿ ವ್ಯಾಪಾರಸ್ಥರಿಗೆ ಮಾರಾಟ ಮಾಡುತ್ತಾರೆ.

ಪ್ರತಿ ಗಂಟಿಗೆ 150 ಸಿವುಡುಗಳಿರುತ್ತವೆ. ಒಂದು ಸಿವುಡಿಗೆ ಪಾಲಕ್ 1, ಉಳಿಸೊಪ್ಪು 1.50, ಮೆಂತೆ 2, ಸಬ್ಬಸಕಿ 2, ಮೂಲಂಗಿ 5 ಹೋಲ್‌ಸೇಲ್‌ ದರದಲ್ಲಿ ಮಾರಾಟ ಮಾಡುತ್ತಾರೆ. ವ್ಯಾಪಾರಿಗಳು ಮಾರುಕಟ್ಟೆಗೆ ಕೆಂಚಣ್ಣ ಬರುವುದನ್ನೇ ಕಾದಿರುತ್ತಾರೆ. ಒಂದು ದಿವಸ ಇವರ ಸೊಪ್ಪು ಸಂತೆಗೆ ಬಂದಿಲ್ಲ ಅಂದರೆ, ಅಂದು ಮಾರ್ಕೆಟ್‌ನಲ್ಲಿ ಪಾಲಕ್ ಸೊಪ್ಪು ಕೊರತೆ ಆಗುವಷ್ಟರ ಮಟ್ಟಿಗೆ ಇವರ ತಾಜಾ ಸೊಪ್ಪಿಗೆ ಬೇಡಿಕೆಯಿದೆ.

ವಾರದ ಏಳು ದಿನವೂ ಪ್ರತಿ ಹತ್ತು ಮಡಿಗೆ ಒಂದು ಅಂಕಣ ಮಾಡಿ, ಅದರಲ್ಲಿ 28 ದಿನಗಳ ಅಂತರದಲ್ಲಿ ಸೊಪ್ಪಿನ ಬೀಜ ನಾಟಿ ಮಾಡಿದ್ದಾರೆ. ಎಕರೆಗೆ 15 ಸಾವಿರದಿಂದ 20 ಸಾವಿರ ಖರ್ಚು ಮಾಡಿ ಪ್ರತಿ ದಿನವೂ 5 ಸಾವಿರ ಸಿವುಡಿನಷ್ಟು ಸೊಪ್ಪು ಕತ್ತರಿಸಿ ಮಾರುತ್ತಾರೆ. ಇದರ ಜೊತೆಗೆ ಮೂಲಂಗಿ ಸಹ ಬೆಳೆದಿದ್ದಾರೆ. ಅಲ್ಲದೆ ಮನೆಯಲ್ಲಿ ಸಾಕಿರುವ ಟಗರು ಮರಿಗಳಿಗೆ ಮೇವು ಕೂಡ ಬೆಳೆದಿದ್ದಾರೆ.

ಯಾವುದೇ ಬೆಳೆ ಬಿತ್ತಿ ಕೈಯಲ್ಲಿ ಕಾಸು ಉಳಿಸಿಕೊಳ್ಳಲು ಕುಟುಂಬಸ್ಥರ ಸಹಕಾರ ಅತ್ಯಗತ್ಯ. ನಮ್ಮ ಕುಟುಂಬದಲ್ಲಿ ತಂದೆ ಇಳಿವಯಸ್ಸಿನಲ್ಲೂ ಬೆಳಿಗ್ಗೆಯಿಂದ ಸಂಜೆವರೆಗೂ ಕೆಲಸ ಮಾಡುತ್ತಾರೆ. ಎಲ್ಲರೂ ಬದುಕಬೇಕು ಎನ್ನುವ ಇರಾದೆಯಿಂದ 8 ಜನಕ್ಕೆ ಕೆಲಸ ಕೊಟ್ಟಿದ್ದೇನೆ. ಅವರೂ ವರ್ಷದ 365 ದಿನವೂ ನಮ್ಮ ಹೊಲದಲ್ಲಿ ಸೊಪ್ಪು ಬೆಳೆಯಲ್ಲಿ ಕೆಲಸ ಮಾಡುತ್ತಾರೆ. ಜೊತೆಗೆ ಹೆಂಡತಿ, ಮಗ, ಸಹೋದರ ನನಗೆ ಸಹಕರಿಸುತ್ತಾರೆ ಎಂದು ಕುಟುಂಬದ ಸಹಕಾರವನ್ನು ರೈತ ಕೆಂಚಪ್ಪ ಸ್ಮರಿಸಿದ್ದಾರೆ.

ಇನ್ನು ಈ ಸಂದರ್ಭದಲ್ಲಿ ನಾಲ್ಕು ವರ್ಷಗಳಿಂದ ಇವರ ಹೊಲದಲ್ಲಿ ಬೆಳೆದ ಸೊಪ್ಪು ಖರೀದಿಸಿ ಊಟ ಮಾಡುತ್ತಿದ್ದೇವೆ ಎಂದು ಸೊಪ್ಪಿನ ರುಚಿಯ ಬಗ್ಗೆ ವಕೀಲರಾದ ಸಿ.ಎಂ. ಕೊಟ್ರಯ್ಯ, ಲಿಂಗಾನಂದ ಹಾಗೂ ವಾರ್ಡನ್ ಎನ್.ಜಿ. ಬಸವರಾಜ್ ಮೆಚ್ಚುಗೆ ವ್ಯಕ್ತಪಡಿಸಿದರು. 8 ಕುಟುಂಬಗಳಿಗೂ ಕೆಲಸ ಕೊಟ್ಟು ಆರು ವರ್ಷಗಳಿಂದ ಸೊಪ್ಪು ಬೆಳೆಯಲ್ಲಿಯೇ ಯಶಸ್ಸು ಕಂಡಿರುವ ಕೆಂಚಪ್ಪ, ಹೊಸ ತಳಿಯ ಬಗ್ಗೆ ಆಸಕ್ತಿ ಹೊಂದಿದ್ದಾರೆ. ದುಶ್ಚಟಗಳಿಗೆ ದಾಸರಾದರೆ ಯಾವ ಸಾಧನೆ ಮಾಡಲು ಆಗುವುದಿಲ್ಲ. ಯಾವ ಬೆಳೆಯಲ್ಲೂ ಯಶ ಸಿಗುವುದಿಲ್ಲ ಎನ್ನವುದು ರೈತ ಕೆಂಚಣ್ಣನವರ ಆಶಯ.

ಸೊಪ್ಪು ಬೆಳೆಯ ಬಗ್ಗೆ ಹೆಚ್ಚಿನ ಮಾಹಿತಿಗೆ ಆಸಕ್ತರು ಈ ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು: 99016-16962

ಇದನ್ನೂ ಓದಿ:

80 ಕಿ.ಮೀ ಪ್ರಯಾಣ ಬೆಳೆಸಿ ಮಾಡಿದ ಕೃಷಿಯಿಂದ ಲಕ್ಷಗಟ್ಟಲೆ ಆದಾಯಗಳಿಸಿದ ನಿವೃತ್ತ ಅಧಿಕಾರಿ

ಸಾವಯವ ಕೃಷಿ ಮೂಲಕ ಮಾವು ಬೆಳೆಯಲ್ಲಿ ಯಶಸ್ಸು ಕಂಡ ಹಾವೇರಿ ರೈತ

ಗ್ರಾಮಸ್ಥರ ಮೇಲೆ ಏಕಾಏಕಿ ದಾಳಿ ಮಾಡಿದ ಹೆಜ್ಜೇನು
ಗ್ರಾಮಸ್ಥರ ಮೇಲೆ ಏಕಾಏಕಿ ದಾಳಿ ಮಾಡಿದ ಹೆಜ್ಜೇನು
60 ಲಕ್ಷ ರೂ ಮೌಲ್ಯದ ಮೆಕ್ಕೆಜೋಳಕ್ಕೆ ಬೆಂಕಿಯಿಟ್ಟ ದುಷ್ಕರ್ಮಿಗಳು
60 ಲಕ್ಷ ರೂ ಮೌಲ್ಯದ ಮೆಕ್ಕೆಜೋಳಕ್ಕೆ ಬೆಂಕಿಯಿಟ್ಟ ದುಷ್ಕರ್ಮಿಗಳು
ಕಾಶ್ಮೀರದ ಹೈವೇಯಲ್ಲಿ ಪರ್ವತ ಕುಸಿತ; ಶ್ರೀನಗರ-ಬಾರಾಮುಲ್ಲಾ ಮಾರ್ಗ ಬಂದ್
ಕಾಶ್ಮೀರದ ಹೈವೇಯಲ್ಲಿ ಪರ್ವತ ಕುಸಿತ; ಶ್ರೀನಗರ-ಬಾರಾಮುಲ್ಲಾ ಮಾರ್ಗ ಬಂದ್
ಜನಾರ್ದನ ರೆಡ್ಡಿ ಮನೆಯತ್ತಲೇ ಫೈರ್ ಮಾಡಿದ್ದ ಖಾಸಗಿ ಗನ್​ಮ್ಯಾನ್
ಜನಾರ್ದನ ರೆಡ್ಡಿ ಮನೆಯತ್ತಲೇ ಫೈರ್ ಮಾಡಿದ್ದ ಖಾಸಗಿ ಗನ್​ಮ್ಯಾನ್
ಸಚಿವ ಜಮೀರ್ 2ನೇ ಟಿಪ್ಪು ಸುಲ್ತಾನ್ ಎಂದ ಪ್ರಮೋದ್ ಮುತಾಲಿಕ್
ಸಚಿವ ಜಮೀರ್ 2ನೇ ಟಿಪ್ಪು ಸುಲ್ತಾನ್ ಎಂದ ಪ್ರಮೋದ್ ಮುತಾಲಿಕ್
ಬ್ಯಾನರ್​​​ ಕಿತ್ತಾಟದಲ್ಲಿ ಅಮಾಯಕ ಕಾರ್ಯಕರ್ತ ಬಲಿ, ಹೆಗಲು ಕೊಟ್ಟ ಶಾಸಕರು
ಬ್ಯಾನರ್​​​ ಕಿತ್ತಾಟದಲ್ಲಿ ಅಮಾಯಕ ಕಾರ್ಯಕರ್ತ ಬಲಿ, ಹೆಗಲು ಕೊಟ್ಟ ಶಾಸಕರು
ಬ್ಯಾನರ್​​ ಗಲಾಟೆ ವೇಳೆ ಫೈರಿಂಗ್​: ಸ್ಫೋಟಕ ಸಾಕ್ಷಿಕೊಟ್ಟ ಶ್ರೀರಾಮುಲು
ಬ್ಯಾನರ್​​ ಗಲಾಟೆ ವೇಳೆ ಫೈರಿಂಗ್​: ಸ್ಫೋಟಕ ಸಾಕ್ಷಿಕೊಟ್ಟ ಶ್ರೀರಾಮುಲು
ಗುಂಡೇಟಿಗೆ ಕಾಂಗ್ರೆಸ್ ಕಾರ್ಯಕರ್ತ ಸಾವು: ಸಿಎಂ ಫಸ್ಟ್ ರಿಯಾಕ್ಷನ್
ಗುಂಡೇಟಿಗೆ ಕಾಂಗ್ರೆಸ್ ಕಾರ್ಯಕರ್ತ ಸಾವು: ಸಿಎಂ ಫಸ್ಟ್ ರಿಯಾಕ್ಷನ್
ಬೈಕ್‌ನಲ್ಲಿ ಬಂದು ಕ್ಷಣಾರ್ಧದಲ್ಲಿ ಮೊಬೈಲ್ ಕಿತ್ತು ಪರಾರಿ!
ಬೈಕ್‌ನಲ್ಲಿ ಬಂದು ಕ್ಷಣಾರ್ಧದಲ್ಲಿ ಮೊಬೈಲ್ ಕಿತ್ತು ಪರಾರಿ!
ಗಣಿದಣಿಗೆ ಭರತ್​​ ರೆಡ್ಡಿ ಓಪನ್​ ಚಾಲೆಂಜ್​​: 'ಕೈ​​' ಶಾಸಕ ಹೇಳಿದ್ದೇನು?
ಗಣಿದಣಿಗೆ ಭರತ್​​ ರೆಡ್ಡಿ ಓಪನ್​ ಚಾಲೆಂಜ್​​: 'ಕೈ​​' ಶಾಸಕ ಹೇಳಿದ್ದೇನು?