ಊಟ ಮಾಡುವಾಗ, ಮಾಡಿದ ನಂತರದ ಈ ಕೆಲವು ತಪ್ಪುಗಳು ಗಂಭೀರ ಸಮಸ್ಯೆಯನ್ನು ಉಂಟುಮಾಡಬಹುದು
ಮುನುಷ್ಯನ ದೇಹಕ್ಕೆ ಬೆಳಗಿನ ಉಪಾಹಾರ ಎಷ್ಟು ಮುಖ್ಯವೋ, ರಾತ್ರಿ ಸೇವಿಸುವ ಆಹಾರವೂ ಅಷ್ಟೇ ಮುಖ್ಯವಾಗಿರುತ್ತದೆ. ರಾತ್ರಿ ಊಟ ಮಾಡುವಾಗ ಮತ್ತು ಮಾಡಿದ ನಂತರ ಮಾಡುವ ತಪ್ಪುಗಳೇ ಆರೋಗ್ಯಕ್ಕೆ ಹಾನಿಕಾರಕ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಹಾಗಾದರೆ ಆ ತಪ್ಪುಗಳು ಯಾವವು, ಇದರಿಂದ ದೇಹಕ್ಕಾಗುವ ತೊಂದರೆಗಳು ಯಾವವು, ಆರೋಗ್ಯ ಕಾಪಾಡಿಕೊಳ್ಳಲು ಯಾವ ರೀತಿ ಬದಲಾವಣೆ ಮಾಡಿಕೊಳ್ಳಬಹುದು ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಬೆಳಗಿನ ಉಪಾಹಾರ ಎಷ್ಟು ಮುಖ್ಯವೋ, ರಾತ್ರಿ ಸೇವನೆ ಮಾಡುವಂತಹ ಆಹಾರವೂ ಕೂಡ ಅಷ್ಟೇ ಮುಖ್ಯವಾಗುತ್ತದೆ. ಹೌದು, ರಾತ್ರಿ ಊಟ (Dinner) ಮಾಡುವಾಗ ಮತ್ತು ಮಾಡಿದ ನಂತರ ಮಾಡುವ ತಪ್ಪುಗಳಿಂದಲೇ ಸಕ್ಕರೆ ಮಟ್ಟ, ಬಿಪಿ, ಕೊಲೆಸ್ಟ್ರಾಲ್, ರಕ್ತದೊತ್ತಡ ಮತ್ತು ಹೃದಯ ಸಂಬಂಧಿ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ಆರೋಗ್ಯ ತಜ್ಞರು ಎಚ್ಚರಿಸುತ್ತಾರೆ. ಹಾಗಾದರೆ ಆ ತಪ್ಪುಗಳು ಯಾವವು, ಇದರಿಂದ ದೇಹಕ್ಕಾಗುವ ತೊಂದರೆಗಳು ಯಾವವು, ಆರೋಗ್ಯ ಕಾಪಾಡಿಕೊಳ್ಳಲು ಯಾವ ರೀತಿ ಬದಲಾವಣೆ ಮಾಡಿಕೊಳ್ಳಬಹುದು ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.
ಕೆಲವು ಅಧ್ಯಯನಗಳು ಹೇಳುವ ಪ್ರಕಾರ ಜನರು 90% ಆಹಾರವನ್ನು ರಾತ್ರಿ ಸಮಯದಲ್ಲಿಯೇ ಸೇವನೆ ಮಾಡುತ್ತಾರೆ. ಏಕೆಂದರೆ ದಿನವಿಡೀ ಕಾರ್ಯನಿರತರಾಗಿರುವುದರಿಂದ, ರಾತ್ರಿ ಸಮಯದಲ್ಲಿ ಶಾಂತವಾಗಿ ಕುಳಿತು ತಿನ್ನಲು ಇಷ್ಟಪಡುತ್ತಾರೆ. ಅದರಲ್ಲಿಯೂ ಹೆಚ್ಚಿನವರು ಮಸಾಲೆಯುಕ್ತ ಆಹಾರಗಳಾದ ಬಿರಿಯಾನಿ, ಚಪಾತಿ ಈ ರೀತಿಯ ಆಹಾರವನ್ನು ಸೇವನೆ ಮಾಡುತ್ತಾರೆ. ಅಷ್ಟು ಮಾತ್ರವಲ್ಲ, ರಾತ್ರಿ ತಡವಾಗಿ ಊಟ ಮಾಡುತ್ತಾರೆ. ಜೊತೆಗೆ ಊಟ ಮಾಡಿದ ನಂತರ ಸೆಲ್‌ಫೋನ್‌ನಲ್ಲಿ ಸಮಯ ಕಳೆಯುತ್ತಾ ನೇರವಾಗಿ ಮಲಗುತ್ತಾರೆ. ಇವೆಲ್ಲವೂ ಆರೋಗ್ಯಕ್ಕೆ ಹಾನಿಕಾರವಾದಂತಹ ಅಭ್ಯಾಸ. ಸಾಮಾನ್ಯವಾಗಿ ಊಟ ಮತ್ತು ನಿದ್ರೆಯ ನಡುವೆ ಕನಿಷ್ಠ ಮೂರು ಗಂಟೆಗಳ ಅಂತರವಿರಬೇಕಾಗುತ್ತದೆ. ಹಾಗಾಗಿ ಈ ರೀತಿಯ ತಪ್ಪುಗಳನ್ನು ಮಾಡಬೇಡಿ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.
ಕೆಟ್ಟ ಕೊಲೆಸ್ಟ್ರಾಲ್ ಸಮಸ್ಯೆ:
ರಾತ್ರಿ ಬಿರಿಯಾನಿ, ಕಬಾಬ್‌ಗಳು ಮತ್ತು ಚಿಕನ್ 65 ನಂತಹ ಕರಿದ, ಡೀಪ್- ಫ್ರೈಡ್ ಆಹಾರಗಳನ್ನು ಸೇವನೆ ಮಾಡುವುದರಿಂದ. ಕೊಬ್ಬು ಶೇಖರಣೆ ಹೆಚ್ಚಾಗುತ್ತದೆ, ಅದರಲ್ಲಿಯೂ ಸ್ಯಾಚುರೇಟೆಡ್ ಕೊಬ್ಬು ಮತ್ತು ಕೆಟ್ಟ ಕೊಲೆಸ್ಟ್ರಾಲ್ ಎಂದು ಕರೆಯಲ್ಪಡುವ ಟ್ರಾನ್ಸ್ ಕೊಬ್ಬುಗಳು LDL ಕೊಲೆಸ್ಟ್ರಾಲ್ ಮಟ್ಟ ಹೆಚ್ಚಾಗುತ್ತದೆ.
ಕರುಳಿನ ಚಲನೆಯ ಸಮಸ್ಯೆಗಳು:
ಸಿರ್ಕಾಡಿಯನ್ ಲಯದ ಪ್ರಕಾರ, ಸೂರ್ಯಾಸ್ತದ ನಂತರ, ದೇಹದ ಅಂಗಗಳು ವಿಶ್ರಾಂತಿ ಪಡೆಯಲು ಪ್ರಾರಂಭಿಸುತ್ತವೆ. ಆ ಸಮಯದಲ್ಲಿ, ರಾತ್ರಿ ಊಟವನ್ನು ತಡವಾಗಿ ಅಥವಾ ಹೆಚ್ಚೆಚ್ಚು ಆಹಾರಗಳ ಸೇವನೆ ಮಾಡುತ್ತಾರೆ. ಇದು ಜೀರ್ಣವಾಗದೆ ಹೊಟ್ಟೆಯಲ್ಲಿ ಉಳಿಯುತ್ತದೆ. ಬಳಿಕ ಜೀರ್ಣಾಂಗ ವ್ಯವಸ್ಥೆಯು ಮರುದಿನ ಬೆಳಿಗ್ಗೆ ಮತ್ತೆ ಕಾರ್ಯನಿರ್ವಹಿಸಲು ಪ್ರಾರಂಭಿಸುತ್ತದೆ. ರಾತ್ರಿ ಊಟ ಜೀರ್ಣವಾಗುವ ಮೊದಲು, ನಾವು ಉಪಾಹಾರ ಸೇವನೆ ಮಾಡುತ್ತೇವೆ. ಈ ರೀತಿಯಾದಾಗ ಇದು ಅನಿಲ, ಉಬ್ಬುವುದು ಮತ್ತು ಎದೆಯುರಿಯನ್ನು ಉಂಟುಮಾಡುತ್ತದೆ. ಇದು ದೀರ್ಘಕಾಲದವರೆಗೆ ಮುಂದುವರಿದರೆ, ಅದು ಕೊಲೊನ್ ಕ್ಯಾನ್ಸರ್‌ಗೆ ಕಾರಣವಾಗಬಹುದು.
ಮಧುಮೇಹದ ಅಪಾಯ:
ಕಳಪೆ ಆಹಾರ ಪದ್ಧತಿ ಮಧುಮೇಹಕ್ಕೆ ಕಾರಣವಾಗುತ್ತದೆ. ರಾತ್ರಿಯಲ್ಲಿ ದೋಸೆ ಅಥವಾ ಚಪಾತಿಯಂತಹ ಕಾರ್ಬೋಹೈಡ್ರೇಟ್ ಭರಿತ ಆಹಾರಗಳ ಸೇವನೆ, ತಡವಾಗಿ ಆಹಾರ ಸೇವನೆ ಮಾಡುವುದು ಅಥವಾ ಹೆಚ್ಚಿನ ಗ್ಲೈಸೆಮಿಕ್ ಸೂಚ್ಯಂಕವಿರುವ ಆಹಾರವನ್ನು ಸೇವಿಸುವುದರಿಂದ ರಾತ್ರಿಯಿಡೀ ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಹೆಚ್ಚಿಸಬಹುದು. ಇದು ಬೆಳಿಗ್ಗೆ ರಕ್ತದಲ್ಲಿನ ಸಕ್ಕರೆ ಮಟ್ಟದಲ್ಲಿ ಗಮನಾರ್ಹ ಹೆಚ್ಚಳಕ್ಕೆ ಕಾರಣವಾಗುತ್ತದೆ.
ಇದನ್ನೂ ಓದಿ: ಆರೋಗ್ಯ ಚೆನ್ನಾಗಿರಬೇಕಂದ್ರೆ, ರಾತ್ರಿ ಈ ನಿಗದಿತ ಸಮಯದೊಳಗೆ ಊಟ ಮಾಡುವುದು ಸೂಕ್ತವಂತೆ
ಅಧಿಕ ರಕ್ತದೊತ್ತಡ ಮತ್ತು ಹೃದಯ ಸಂಬಂಧಿ ಕಾಯಿಲೆಗಳ ಅಪಾಯ:
ತಡವಾಗಿ ಊಟ ಮಾಡುವುದು ಅಥವಾ ಮಲಗುವುದರಿಂದ ದೇಹದಲ್ಲಿ ಒತ್ತಡದ ಹಾರ್ಮೋನ್ ಕಾರ್ಟಿಸೋಲ್ ಹೆಚ್ಚಾಗುತ್ತದೆ. ಒತ್ತಡ ಹೆಚ್ಚಾದಾಗ ರಕ್ತದೊತ್ತಡ ಹೆಚ್ಚಾಗುತ್ತದೆ. ಇದು ಹೃದಯಕ್ಕೆ ಒಳ್ಳೆಯದಲ್ಲ. ರಾತ್ರಿ ರಕ್ತದೊತ್ತಡದಲ್ಲಿ ಏರಿಳಿತಗಳು ಹೃದಯಾಘಾತದಂತಹ ಸಮಸ್ಯೆಗಳಿಗೆ ಕಾರಣವಾಗಬಹುದು.
ಬೊಜ್ಜು ಸಂಬಂಧಿತ ಸಮಸ್ಯೆಗಳು:
ರಾತ್ರಿ ಸಮಯದಲ್ಲಿ ಬಿರಿಯಾನಿ, ಮಸಾಲೆಯುಕ್ತ ಆಹಾರಗಳು ಮತ್ತು ಕಾರ್ಬೋಹೈಡ್ರೇಟ್‌ಗಳಂತಹ ಹೆಚ್ಚಿನ ಕ್ಯಾಲೋರಿ ಇರುವ ಆಹಾರಗಳ ಸೇವನೆ ಮಾಡಿದಾಗ ಸ್ವಾಭಾವಿಕವಾಗಿ ತೂಕ ಹೆಚ್ಚಾಗಲು ಕಾರಣವಾಗುತ್ತದೆ. ಈ ಅಭ್ಯಾಸ ಮುಂದುವರಿದರೆ, ತೀವ್ರ ಬೊಜ್ಜಿನ ಸಮಸ್ಯೆಗಳಿಂದ ಬಳಲಬೇಕಾಗುತ್ತದೆ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
