DIY Face Mist: ಸುಂದರ ತ್ವಚೆ ನಿಮ್ಮದಾಗಲು ಮನೆಯಲ್ಲಿ ತಯಾರಿಸಿದ ಈ 3 ಫೇಸ್ ಮಿಸ್ಟ್ ಬಳಸಿ

ನಿಮ್ಮ ಚರ್ಮವನ್ನು ಹೈಡ್ರೇಟ್ ಆಗಿ ಇರಿಸಲು ಮತ್ತು ಸುಂದರ ತ್ವಚೆ ನಿಮ್ಮದಾಗಲು 3 ಫೇಸ್ ಮಿಸ್ಟ್ ಗಳನ್ನು ನೀವು ಮನೆಯಲ್ಲಿಯೇ ಮಾಡಿಕೊಳ್ಳಬಹುದು. ಅದನ್ನು ಹೇಗೆ ತಯಾರಿಸುವುದು ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ.

DIY Face Mist: ಸುಂದರ ತ್ವಚೆ ನಿಮ್ಮದಾಗಲು ಮನೆಯಲ್ಲಿ ತಯಾರಿಸಿದ ಈ 3 ಫೇಸ್ ಮಿಸ್ಟ್ ಬಳಸಿ
ಸಾಂದರ್ಭಿಕ ಚಿತ್ರ
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​

Updated on: Jul 03, 2023 | 5:44 PM

ನಿಮ್ಮ ಚರ್ಮವನ್ನು ಹೈಡ್ರೇಟ್ ಆಗಿ ಇರಿಸಲು ಮತ್ತು ಸುಂದರ ತ್ವಚೆ ನಿಮ್ಮದಾಗಲು ಈ 3 ಫೇಸ್ ಮಿಸ್ಟ್ ಗಳನ್ನು ನೀವು ಮನೆಯಲ್ಲಿಯೇ ಮಾಡಿಕೊಳ್ಳಬಹುದು. ಈ ಫೇಶಿಯಲ್ ಸ್ಪ್ರೇಗಳು ದಿನವಿಡೀ ನಿಮ್ಮ ಚರ್ಮ ಹೊಳೆಯುವಂತೆ ಮಾಡಲು ಉತ್ತಮವಾಗಿದೆ. ಆದರೆ ನಿಮಗೆ ಗೊತ್ತಿರುವ ಹಾಗೇ ಮಾರುಕಟ್ಟೆಯಲ್ಲಿ ವಿವಿಧ ರೀತಿಯ ಫೇಸ್ ಮಿಸ್ಟ್ ಲಭ್ಯವಿದೆ, ಅದು ಹಾನಿಕಾರಕ ರಾಸಾಯನಿಕಗಳನ್ನು ಹೊಂದಿರುತ್ತದೆ ಮತ್ತು ನಮ್ಮ ಚರ್ಮವನ್ನು ಹಾಳು ಮಾಡುತ್ತವೆ. ಅಂತಹ ಪ್ರಾಡಕ್ಟ್ ಗಳಿಗೆ ದುಂದು ವೆಚ್ಚ ಮಾಡುವ ಬದಲು ಮನೆಯಲ್ಲಿಯೇ ಯಾವುದೇ ರೀತಿಯ ಅಡ್ಡ ಪರಿಣಾಮಗಳು ಇಲ್ಲದೆಯೇ ಫೇಸ್ ಮಿಸ್ಟ್ ತಯಾರಿಸಿ ಕೊಳ್ಳಬಹುದು.

ಸುಲಭವಾಗಿ ತಯಾರಿಸಲು ಮತ್ತು ಎಲ್ಲಾ ಚರ್ಮದ ಪ್ರಕಾರಗಳಿಗೆ ಸೂಕ್ತವಾದ 3 ಫೇಸ್ ಮಿಸ್ಟ್​​ಗಳ ಬಗ್ಗೆ ಇಲ್ಲಿವೆ ಮಾಹಿತಿ:

ಗ್ರೀನ್ ಟೀ ಮಿಸ್ಟ್:

ನೀವು ಮನೆಯಲ್ಲಿಯೇ ಬಳಸುವ ಯಾವುದಾದರೂ ಉತ್ತಮ ಗುಣಮಟ್ಟದ ಹಸಿರು ಚಹಾದ ಪುಡಿಯನ್ನು ಕುದಿಸಿ ಅದು ತಣಿದ ಬಳಿಕ ಅದನ್ನು ಸ್ಪ್ರೇ ಬಾಟಲಿಗೆ ಹಾಕಿ, ಮತ್ತು ಅದನ್ನು ಮಿಸ್ಟ್ ಆಗಿ ಬಳಸಿಕೊಳ್ಳಿ. ಎಣ್ಣೆಯುಕ್ತ ಮತ್ತು ಮೊಡವೆ ಪೀಡಿತ ಚರ್ಮಕ್ಕೆ ಗ್ರೀನ್ ಟೀ ಒಳ್ಳೆಯದು. ಹಾಗಾಗಿ ಇದನ್ನು ನೀವು ಮನೆಯಲ್ಲಿಯೇ ಸುಲಭವಾಗಿ ಮಾಡಿಕೊಳ್ಳಬಹುದು.

ರೋಸ್ ವಾಟರ್ ಮತ್ತು ಅಲೋವೆರಾ ಸ್ಪ್ರೇ:

ರೋಸ್ ವಾಟರ್ ಮತ್ತು ಅಲೋವೆರಾ ಜೆಲ್​​ನ್ನು ಸಮಾನವಾಗಿ ಒಂದು ಬೌಲ್​​​ನಲ್ಲಿ ಗಂಟುಗಳಿಲ್ಲದಂತೆ ಸರಿಯಾದ ರೀತಿಯಲ್ಲಿ ಮಿಶ್ರಣ ಮಾಡಿ ಮತ್ತು ಅದನ್ನು ಸ್ಪ್ರೇ ಬಾಟಲಿಗೆ ವರ್ಗಾಯಿಸಿ. ಈ ಸ್ಪ್ರೇ ನಿಮ್ಮ ಚರ್ಮವನ್ನು ಹೈಡ್ರೇಟ್ ಆಗಿರಲು ಮತ್ತು ಯಾವಾಗಲೂ ಸುಂದರವಾಗಿ ಕಾಣುವಂತೆ ಮಾಡುವಲ್ಲಿ ಸಹಾಯ ಮಾಡುತ್ತದೆ. ಈ ಮಿಶ್ರಣ ಒರಟು ಚರ್ಮದವರಿಗೂ ಒಳ್ಳೆಯದು ಏಕೆಂದರೆ ಇದು ಚರ್ಮ ಮೃದುವಾಗಿರಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: Skin Allergies: ಮಳೆಗಾಲದಲ್ಲಿ ಕಂಡುಬರುವ ಚರ್ಮದ ಅಲರ್ಜಿ ಸಮಸ್ಯೆಗೆ ತಜ್ಞರ ಸಲಹೆ

ಜೇನು ಮತ್ತು ಗ್ಲಿಸರಿನ್ ಮಿಸ್ಟ್:

ನೀರಿಗೆ 1- 2 ಟೀ ಸ್ಪೂನ್ ಜೇನು ತುಪ್ಪವನ್ನು ಸೇರಿಸಿ ಮತ್ತು ಅದಕ್ಕೆ 1- 2 ಟೀ ಸ್ಪೂನ್ ಗ್ಲಿಸರಿನ್ ಸೇರಿಸಿಕೊಂಡು ಸ್ಪ್ರೇ ಆಗಿ ಬಳಸಿಕೊಳ್ಳಿ. ಈ ಮಿಸ್ಟ್ ಚರ್ಮಕ್ಕೆ ಕಾಂತಿ ನೀಡುವುದರ ಜೊತೆಗೆ ಹಳೆಯ ಕಲೆಗಳನ್ನು ನಿಧಾನವಾಗಿ ಮಾಯ ಮಾಡುತ್ತವೆ. ಅದಕ್ಕೂ ಮಿಗಿಲಾಗಿ ನಿಮ್ಮ ಮುಖವನ್ನು ಯಾವಾಗಲೂ ಹೈಡ್ರೇಟ್ ಆಗಿ ಇರಿಸಲು ಸಹಾಯ ಮಾಡುತ್ತವೆ.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್