AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯಾವುದೇ ಕಾರಣಕ್ಕೂ ಮೂಗಿನ ಕೂದಲು ತೆಗೆಯಬೇಡಿ, ಇದು ದೇಹಕ್ಕೆ ರಕ್ಷಣಾ ಕವಚ

ಮೂಗಿನೊಳಗೆ ಕೂದಲು ಬೆಳೆದರೆ ಮುಜುಗರ ಪಡುವವರು ಹೆಚ್ಚು, ಅದಕ್ಕಾಗಿ ಅದನ್ನು ಬೇರೆ ಬೇರೆ ಕ್ರೀಮ್ ಬಳಸಿ ತೆಗೆಯುತ್ತಾರೆ. ಆದರೆ ಇದು ತಪ್ಪು ಎಂದು ಚರ್ಮರೋಗ ತಜ್ಞ ಅಂಕುರ್ ಸರಿನ್ ಹೇಳುತ್ತಾರೆ. ಯಾವುದೇ ಕಾರಣಕ್ಕೂ ಈ ತಂತ್ರಗಳನ್ನು ಅನುಸರಿಸಬೇಡಿ ಎಂದು ಅವರು ಸಲಹೆ ನೀಡಿದ್ದಾರೆ. ಇದಕ್ಕೆ ಪರ್ಯಾಯ ಮಾರ್ಗಗಳೇನು? ಹಾಗಾದರೆ ಈ ಕೂದಲನ್ನು ತೆಗೆಯುವ ಕ್ರಮ ಹೇಗೆ? ಇಲ್ಲಿದೆ ನೋಡಿ.

ಯಾವುದೇ ಕಾರಣಕ್ಕೂ ಮೂಗಿನ ಕೂದಲು ತೆಗೆಯಬೇಡಿ, ಇದು ದೇಹಕ್ಕೆ ರಕ್ಷಣಾ ಕವಚ
ಸಾಂದರ್ಭಿಕ ಚಿತ್ರ
ಸಾಯಿನಂದಾ
|

Updated on: Jul 02, 2025 | 5:06 PM

Share

ಮೂಗಿನೊಳಗೆ ಕೂದಲು (remove nose hairs) ಬೆಳೆದರೆ ಒಂದು ರೀತಿಯ ಕಿರಿಕಿರಿ, ಇದರಿಂದ ಸ್ವಲ್ಪ ನಾಚಿಕೆ ಕೂಡ ಆಗುವುದುಂಟು, ಅದಕ್ಕಾಗಿ ಪದೇ ಪದೇ ಕತ್ತರಿ ಹಾಕುತ್ತೇವೆ. ಆದರೆ ಹೀಗೆ ಮಾಡಿದ್ರೆ ಒಳ್ಳೆಯದಾ?, ಇದರಿಂದ ಏನಾದರೂ ತೊಂದರೆಯಾಗುತ್ತಾ? ಎಂಬುದನ್ನು ಮೊದಲು ತಿಳಿದುಕೊಳ್ಳಬೇಕು. ಈ ವಿಚಾರದ ಕುರಿತು ಚರ್ಮರೋಗ ತಜ್ಞ ಅಂಕುರ್ ಸರಿನ್ ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಮೂಗಿನ ಒಳಗೆ ಬೆಳೆದಿರುವ ಕೂದಲು ನಮ್ಮ ದೇಹಕ್ಕೆ ರಕ್ಷಣಾತ್ಮಕ ಕವಚದಂತೆ ಕಾರ್ಯನಿರ್ವಹಿಸುತ್ತದೆ. ಅಂದರೆ ಈ ಸಣ್ಣ ಕೂದಲುಗಳು ಧೂಳು, ಕೊಳಕು, ಬ್ಯಾಕ್ಟೀರಿಯಾ ಮತ್ತು ಅಲರ್ಜಿ ಉಂಟುಮಾಡುವ ಕಣಗಳನ್ನು ನಮ್ಮ ಉಸಿರಾಟದ ಮೂಲಕ ಮೂಗಿಗೆ ಪ್ರವೇಶಿಸುವುದನ್ನು ತಡೆಯುತ್ತದೆ. ಈ ಕೂದಲುಗಳು ದೇಹವನ್ನು ರೋಗಗಳಿಂದ ನೇರವಾಗಿ ರಕ್ಷಿಸುತ್ತವೆ. ಹಾಗಾಗಿ ಇದನ್ನು ತೆಗೆಯುವುದು ಒಂದೇ, ದೇಹಕ್ಕೆ ರೋಗ ಬರುವಂತೆ ಮಾಡುವುದು ಒಂದೇ ಎಂದು ಹೇಳಿದ್ದಾರೆ.

ಚರ್ಮರೋಗ ತಜ್ಞ ಅಂಕುರ್ ಸರಿನ್ ಹೇಳಿರುವ ಪ್ರಕಾರ, ಟ್ವೀಜರ್‌ಗಳಿಂದ ಕೂದಲನ್ನು ವ್ಯಾಕ್ಸಿಂಗ್ ಮಾಡುವುದು ಅಥವಾ ಕೀಳುವುದು ಅಪಾಯಕಾರಿ. ಇದು ಮೂಗಿನ ಒಳಗಿನ ಚರ್ಮದ ಮೇಲೆ ಸಣ್ಣ ಗಾಯಗಳನ್ನು ಉಂಟುಮಾಡಬಹುದು, ಅಲ್ಲಿ ಬ್ಯಾಕ್ಟೀರಿಯಾಗಳು ಸುಲಭವಾಗಿ ಪ್ರವೇಶಿಸಿ ಸೋಂಕನ್ನು ಉಂಟುಮಾಡಬಹುದು. ಮೂಗಿನ ಒಳಭಾಗವು ತುಂಬಾ ಸೂಕ್ಷ್ಮವಾಗಿರುತ್ತದೆ ಮತ್ತು ಸೋಂಕು ಬೇಗನೆ ಹರಡಬಹುದು ಎಂದು ಹೇಳಿದ್ದಾರೆ. ಒಂದು ವೇಳೆ ಮೂಗಿನ ಒಳಗಿನ ಕೂದಲನ್ನು ತೆಗೆಯಲೇಬೇಕೆಂದರೆ  ಅಥವಾ ಕೂದಲು ದಪ್ಪ ಹಾಗೂ ಉದ್ದವಾಗಿದ್ದರೆ, ಇದರಿಂದ ಮುಜುಗರ ಉಂಟು ಮಾಡುತ್ತದೆ ಎಂಬ ಭಾವನೆ ಇದ್ದರೆ, ಅದನ್ನು ಟ್ರಿಮ್ ಮಾಡಬಹುದು. ಹಾಗಾಗಿ ಮೂಗಿನ ಕೂದಲನ್ನು ಪೂರ್ತಿಯಾಗಿ ಕ್ಲೀನ್​​​​ ಮಾಡಬೇಕಿಲ್ಲ.

ಇದನ್ನೂ ಓದಿ
Image
ಕಣ್ಣಿನ ಆರೋಗ್ಯದಿಂದ ಕ್ಯಾನ್ಸರ್ ತಡೆಗಟ್ಟುವ ವರೆಗೆ; ಚೀನಿಕಾಯಿಯ ಉಪಯೋಗಗಳಿವು
Image
ರಾತ್ರಿಯಲ್ಲಿ ಕಂಡು ಬರುವ ಕಾಲು ಸೆಳೆತವನ್ನು ತಡೆಯಲು ಇಲ್ಲಿದೆ ಸಲಹೆಗಳು
Image
ನೀವು ಏನಾದರೂ ತಿಂದ ತಕ್ಷಣ ಟಾಯ್ಲೆಟ್ ಗೆ ಹೋಗುತ್ತೀರಾ? ನಿಮಗೆ ಇಲ್ಲಿದೆ ಸಲಹೆ
Image
ಹಾಗಲಕಾಯಿ ಕಹಿ ಎಂದು ಮನೆಗೆ ತರದೇ ಇರುವವರು ಈ ಸುದ್ದಿಯನ್ನು ತಪ್ಪದೆ ಓದಿ

ಇದನ್ನೂ ಓದಿ: ಮಧುಮೇಹ ಇದ್ಯಾ? ಹಾಗಿದ್ರೆ ಈ ಹಣ್ಣಿನ ಎಲೆ ಸೇವಿಸಿ ನೋಡಿ, ಶುಗರ್ ಲೆವೆಲ್ ಹೆಚ್ಚಾಗುವುದೇ ಇಲ್ಲ

ವಿಡಿಯೋ ಇಲ್ಲಿದೆ ನೋಡಿ:

ಇನ್ನು ಸಣ್ಣ ಅಥವಾ ಸ್ವಚ್ಛವಾದ ಕತ್ತರಿಯಿಂದ ಕೂದಲನ್ನು ಕತ್ತರಿಸಬೇಕು. ಹಾಗಾಗಿ ಯಾವುದೇ ಕಾರಣಕ್ಕೂ ಕೂದಲಿನ ಬೇರಿಗೆ ಕೈ ಹಾಕಬೇಡಿ. ಮೇಲಿಂದ ಚಿಕ್ಕದಾಗಿ ಕತ್ತರಿಸಬಹುದು. ಈ ವಿಧಾನವು ಸುರಕ್ಷಿತ ಮತ್ತು ಅತ್ಯಂತ ಪರಿಣಾಮಕಾರಿಯಾಗಿದೆ ಎಂದು ತಜ್ಞರು ಹೇಳಿದ್ದಾರೆ. ಕೂದಲಿಗೆ ಕತ್ತರಿ ಹಾಕುವಾಗ ಕೂಡ ಸ್ವಲ್ಪ ನೋಡಿಕೊಂಡು ಮಾಡಿ. ಕತ್ತರಿಯಿಂದ ಮೂಗಿಗೆ ಗಾಯಗಳಾದರೂ ಕೂಡ ಇದರಿಂದ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹಾಗಾಗಿ ದೇಹದ ಸೂಕ್ಷ್ಮ ಭಾಗಗಳಲ್ಲಿ ಈ ಮೂಗು ಕೂಡ ಒಂದು, ಇದನ್ನು ಕೂಡ ಕಾಳಜಿಯಿಂದ ನೋಡಿಕೊಳ್ಳಬೇಕು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ