ಮಗುವಿನ ಸರಿಯಾದ ಬೆಳವಣಿಗೆಗೆ ಹಾಗೂ ಮಗುವಿಗೆ ಅಗತ್ಯ ಪೋಷಕಾಂಶಗಳು ತಾಯಿಯ ಎದೆಹಾಲಿನಿಂದ ದೊರೆಯುತ್ತದೆ. ನಿಮ್ಮ ಪುಟ್ಟ ಮಗುವಿನ ಪೌಷ್ಟಿಕಾಂಶದ ಅಗತ್ಯತೆಗಳನ್ನು ಪೂರೈಸುವುದರ ಜೊತೆಗೆ ಸ್ತನ್ಯಪಾನವು ನಿಮ್ಮ ಮಗುವಿನೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಲು ಸಹಾಯ ಮಾಡುತ್ತದೆ. ಆದ್ದರಿಂದ ಹಾಲುಣಿಸುವ ಸಂದರ್ಭದಲ್ಲಿ ಮಗುವಿನ ಮೇಲೆ ಗಮನಹರಿಸುವ ಸಲುವಾಗಿ ಫೋನ್ ಬಳಕೆ ಮಾಡುವುದನ್ನು ತಪ್ಪಿಸಿ. ಹಾಲುಣಿಸುವ ಸಂದರ್ಭದಲ್ಲಿ ಮೊಬೈಲ್ ಫೋನ್ ಏಕೆ ಬಳಸಬಾರದು ಎಂಬುದಕ್ಕೆ ಕೆಲವು ಕಾರಣಗಳಿವೆ.
ಪ್ರಸ್ತುತ ಯುಗದಲ್ಲಿ ಮೊಬೈಲ್ ಫೋನ್ ನಮ್ಮ ಜೀವನ ಪ್ರಮುಖ ಅಂಶವಾಗಿ ಮಾರ್ಪಟ್ಟಿದೆ. ಮೊಬೈಲ್ ಫೋನ್ ಇಲ್ಲದೆ ನಾವು ಜೀವನವನ್ನು ಕಲ್ಪಿಸಲು ಸಾಧ್ಯವಿಲ್ಲ. ಆದರೆ ಒಬ್ಬ ತಾಯಿ ಮಗುವಿಗೆ ಹಾಲುಣಿಸುವಾಗ ಮೊಬೈಲ್ ಬಳಕೆ ಮಾಡುವುದರಿಂದ, ಮಗುವಿಗೆ ಹಾಲುಣಿಸುವಾಗ ಮಗುವಿನೊಂದಿಗೆ ಕಳೆಯುವ ಪ್ರಮುಖ ಜೀವನ ಅನುಭವಗಳನ್ನು ಕಳೆದುಕೊಳ್ಳಬಹುದು. ಆದ್ದರಿಂದ ಮಗುವಿನೊಂದಿಗೆ ನಿಕಟ ಬಾಂಧವ್ಯವನ್ನು ಹೊಂದಲು, ಮಗುವಿನ ಆರೋಗ್ಯ ದೃಷ್ಟಿಯಿಂದ ತಾಯಿಯು ಮಗುವಿನ ಜೊತೆಯಲ್ಲಿರುವಾಗ ಆದಷ್ಟು ಮೊಬೈಲ್‌ನಿಂದ ದೂರವಿರುವುದು ಒಳ್ಳೆಯದು. ಹಾಲುಣಿಸುವ ಸಂದರ್ಭದಲ್ಲಿ ಮೊಬೈಲ್ ಫೋನ್ ಬಳಕೆ ಮಾಡಬಾರದು ಎಂಬುದಕ್ಕೆ ಕಾರಣಗಳು ಇಲ್ಲಿವೆ.
ಇದು ಕಣ್ಣಿನ ಸಂಪರ್ಕಕ್ಕೆ ಅಡ್ಡಿಯಾಗುತ್ತದೆ: ತಾಯಿಯ ಹಾಗೂ ಮಗುವಿನ ಬಾಂಧವ್ಯವನ್ನು ಬಲಪಡಿಸಲು ಮೊದಲ 6 ತಿಂಗಳುಗಳಲ್ಲಿ ಹಾಲುಣಿಸುವಾಗ ತಾಯಿ ಮತ್ತು ಮಗುವಿನ ನಡುವೆ ಕಣ್ಣಿನ ಸಂಪರ್ಕವು ತುಂಬಾ ಮುಖ್ಯವಾಗಿರುತ್ತದೆ. ಈ ಸಮಯದಲ್ಲಿ ಮೊಬೈಲ್ ಬಳಕೆ ಮಾಡುವುದರಿಂದ ನಿಮ್ಮ ಮಗುವಿನೊಂದಿಗೆ ಕಣ್ಣಿನ ಸಂಪರ್ಕವನ್ನು ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ. ತಾಯಿ ಮತ್ತು ಮಗುವಿನ ನಡುವಿನ ಕಣ್ಣಿನ ಸಂಪರ್ಕವು ಅವರ ಭಾವನೆಗಳು ಮತ್ತು ಮಿದುಳನ್ನು ಜೋಡಿಸುತ್ತದೆ ಎಂದು ಸಂಶೋಧನೆಗಳು ಹೇಳುತ್ತವೆ. ಮತ್ತು ಇದು ಭವಿಷ್ಯದಲ್ಲಿ ಮಗುವಿನ ಕಲಿಕೆ ಮತ್ತು ಸಂವಹನ ಕೌಶಲ್ಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ಇದು ನಿಮ್ಮ ಮಗುವಿನ ಗಮನದಲ್ಲಿ ಬದಲಾವಣೆಯನ್ನು ಉಂಟುಮಾಡಬಹುದು: ಹಾಲುಣಿಸುವಾಗ ನಿಮ್ಮ ಫೋನ್‌ನಲ್ಲಿ ನೀವು ವಿಚಲಿತರಾದಾಗ, ನಿಮ್ಮ ಮಗು ನಿಮ್ಮ ಗಮನದಲ್ಲಿ ಬದಲಾವಣೆಯನ್ನು ಕಾಣಬಹುದು ಮತ್ತು ಇದರಿಂದ ಮಗು ಅಳಲು ಪ್ರಾರಂಭಿಸಬಹುದು ಅಥವಾ ನಿಮ್ಮ ಗಮನವನ್ನು ಮಗು ತನ್ನ ಕಡೆ ಸೆಳೆಯಲು ಪ್ರಯತ್ನಿಸಬಹುದು. ಸ್ಟಿಲ್ ಫೇಸ್ ಪ್ರಯೋಗ ಎಂದು ಕರೆಯಲ್ಪಡುವ ಒಂದು ಅಧ್ಯಯನವು ಮಗು ತಾಯಿಯ ಅಭಿವ್ಯಕ್ತಿಯನ್ನು ಗಮನಿಸುತ್ತದೆ ಮತ್ತು ಶಿಶುಗಳು ತಮ್ಮ ಹೆತ್ತವರ ಗಮನ ಸೆಳೆಯಲು ಅಳುವುದಕ್ಕೆ ಪ್ರಾರಂಭಿಸುತ್ತದೆ ಎಂದು ಈ ಅಧ್ಯಯನ ಕಂಡುಹಿಡಿದಿದೆ.
ಇದು ನಿಮ್ಮ ಗಮನವನ್ನು ಬೇರೆಡೆಗೆ ತಿರುಗಿಸುತ್ತದೆ: ಸ್ತನ್ಯಪಾನ ಮಾಡುವಾಗ ನೀವು ಮೊಬೈಲ್‌ನಲ್ಲಿ ಮುಳುಗಿರುವುದರಿಂದ ನಿಮ್ಮ ಗಮನ ಮಗುವಿನ ಕಡೆ ಇರದೆ ಮೊಬೈಲ್‌ನಲ್ಲಿಯೇ ನಿಮ್ಮ ಗಮನ ಕೆಂದ್ರೀಕೃತವಾಗಿರುತ್ತದೆ. ಹಾಗೂ ನಿಮ್ಮ ಮಗುವಿನ ಹಾಗು ಹೋಗುಗಳ ಸಣ್ಣ ಸುಳಿವು ಕೂಡಾ ನಿಮಗೆ ಇರುವುದಿಲ್ಲ. ಆದ್ದರಿಂದ ಹಾಲುಣಿಸುವಾಗ ಮೊಬೈಲ್‌ನಿಂದ ಆದಷ್ಟು ದೂರವಿದ್ದು, ನಿಮ್ಮ ಗಮನ ಕೇವಲ ಮಗುವಿನ ಮೇಲೆ ಇರುವಂತೆ ನೋಡಿಕೊಳ್ಳಿ.
ಇದನ್ನೂ ಓದಿ: Loneliness Health Issues: ಒಂಟಿತನದಿಂದ ಈ 5 ಗಂಭೀರ ಕಾಯಿಲೆ ಬರಬಹುದು
ಇದು ವಿಕಿರಣಕ್ಕೆ ಒಡ್ಡಿಕೊಳ್ಳುವ ಅಪಾಯವನ್ನು ಹೊಂದಿದೆ: ಮೊಬೈಲ್ ಫೋನ್‌ಗಳು ವಿಕಿರಣವನ್ನು ಹೊರಸೂಸುತ್ತವೆ ಮತ್ತು ನಿಮ್ಮ ಮಗು ತುಂಬಾ ಚಿಕ್ಕದಾಗಿರುವುದರಿಂದ ಈ ವಿಕಿರಣಗಳನ್ನು ಹೀರಿಕೊಳ್ಳಬಹುದು. ಇದು ನಿಮ್ಮ ಮಗುವಿನ ಡಿಎನ್‌ಎ ರಚನೆ, ಮೆದುಳಿನ ಕೋಶಗಳನ್ನು ಹಾನಿಗೊಳಿಸಬಹುದು. ಹಾಗೂ ಕ್ಯಾನ್ಸರ್ ಮತ್ತು ಇತರ ಕಾಯಿಲೆಯ ಅಪಾಯವನ್ನು ಉಂಟುಮಾಡಬಹುದು. ಆದ್ದರಿಂದ ಹಾಲುಣಿಸುವ ಸಮಯದಲ್ಲಿ ಮಾತ್ರವಲ್ಲದೆ ಮಗುವಿನೊಂದಿಗೆ ನೀವು ಕಳೆಯುವ ಬಹುತೇಕ ಸಮಯಗಳಲ್ಲಿ ಮಗುನಿಂದ ಮೊಬೈಲ್‌ನ್ನು ಆದಷ್ಟು ದೂರವಿರಿಸಲು ಪ್ರಯತ್ನಿಸಿ.
ಇದು ಶುಶ್ರೂಷಾ ಮಾದರಿಗಳನ್ನು ಟ್ರಾಕ್ ಮಾಡಲು ನಿಮ್ಮನ್ನು ವಿಫಲಗೊಳಿಸುತ್ತದೆ: ಶೀಶುಗಳು ಸ್ತನ್ಯಪಾನ ಮಾಡುವಾಗ ಕೆಲವು ಮಾದರಿಗಳನ್ನು ಹೊಂದಿರುತ್ತವೆ. ಮತ್ತು ನಿಮ್ಮ ಮಗುವಿನ ಶುಶ್ರೂಷಾ ಮಾದರಿಯನ್ನು ಟ್ರಾಕ್ ಮಾಡುವುದು ತುಂಬಾ ಮುಖ್ಯವಾಗಿರುತ್ತದೆ. ಇದರಿಂದ ನಿಮ್ಮ ಮಗುವಿಗೆ ನೀವು ಉತ್ತಮ ಪ್ರಮಾಣದ ಹಾಲುನ್ನು ನೀಡಬಹುದು. ನಿಮ್ಮ ಗಮನ ಮಗುವಿನ ಮೇಲೆ ಕೇಂದ್ರೀಕೃತವಾಗಿದ್ದರೆ, ಎಷ್ಟು ಪ್ರಮಾಣದಲ್ಲಿ ಮಗು ಹಾಲನ್ನು ಸೇವಿಸಿದೆ ಅದರ ಹೊಟ್ಟೆ ತುಂಬಿದೆಯೇ ಎಂಬುದೆಲ್ಲಾ ನಿಮಗೆ ಗೊತ್ತಾಗುತ್ತದೆ. ಆದ್ದರಿಂದ ಮಗುವಿಗೆ ಹಾಲುಣಿಸುವಾಗ ಆದಷ್ಟು ಮೊಬೈಲ್ ಬಳಕೆಯನ್ನು ತಪ್ಪಿಸುವುದು ನಿಮ್ಮ ಮಗುವಿನ ಆರೋಗ್ಯದ ದೃಷ್ಟಿಯಿಂದ ತುಂಬಾ ಒಳ್ಳೆಯದು.
Published On - 4:01 pm, Thu, 23 March 23