Relieving Periods Pain: ಮುಟ್ಟಿನ ಸಮಯದ ನೋವು ನಿವಾರಣೆಗೆ ಸಹಾಯ ಮಾಡುತ್ತದೆ ಈ 5 ಪಾನೀಯಗಳು
ಹೆಚ್ಚಿನ ಮಹಿಳೆಯರಿಗೆ ಮುಟ್ಟಿನ ಸಮಯದಲ್ಲಿ ಹೊಟ್ಟೆ ನೋವು, ಬೆನ್ನು ನೋವು ಕಾಣಿಸಿಕೊಳ್ಳುವುದು ಇದ್ದೇ ಇರುತ್ತದೆ. ಈ ನೋವನ್ನು ಶಮನ ಮಾಡಲು ಇಲ್ಲಿವೆ ಮನೆಮದ್ದು ರೂಪದಲ್ಲಿರುವ 5 ಪಾನೀಯಗಳು.
ಪ್ರತಿ ತಿಂಗಳ ಮುಟ್ಟಿನ ಸಮಯದಲ್ಲಿ ಹೆಚ್ಚಿನ ಮಹಿಳೆಯರು ಬೆನ್ನು ನೋವು, ಹೊಟ್ಟೆ ನೋವು ಕಾಲುಗಳ ಸೆಳೆತ ಈ ರೀತಿಯ ನೋವಿನಿಂದ ಬಳಲುತ್ತಿರುತ್ತಾರೆ. ಕನಿಷ್ಟ ಐದು ದಿನಗಳ ವರೆಗೆ ಮುಟ್ಟು ನಿಮ್ಮನ್ನು ದುರ್ಬಲವಾಗಿರುವಂತೆ ಮಾಡುತ್ತದೆ. ಆದ್ದರಿಂದ ನಿಮ್ಮ ದೇಹಕ್ಕೆ ಆರೋಗ್ಯಕವಾದುದನ್ನು ನೀಡುವುದು ಬಹಳ ಮುಖ್ಯವಾಗಿರುತ್ತದೆ, ಮುಟ್ಟಿನ ಸಮಯದಲ್ಲಿ ಏನು ಕುಡಿಯಬೇಕು ಎಂದು ನಿಮ್ಮಲ್ಲಿ ಗೊಂದಲವಿದೆಯೇ? ಭಯಪಡಬೇಡಿ ಇಂದು ನಾವು ನಿಮಗೆ ಮುಟ್ಟಿನ ನೋವನ್ನು ಕಡಿಮೆ ಮಾಡುವ ೫ ಪಾನೀಯಗಳ ಬಗ್ಗೆ ತಿಳಿಸಿಕೊಡುತ್ತೇವೆ. ಮತ್ತು ಈ ಪಾನೀಯಗಳನ್ನು ಕುಡಿಯುವ ಮೂಲಕ ಮುಟ್ಟಿನ ನೋವನ್ನು ನಿವಾರಿಸಿಕೊಳ್ಳಿ.
ಮುಟ್ಟಿನ ಸಮಯದ ನೋವನ್ನು ನಿವಾರಣೆ ಮಾಡುವ 5 ಪಾನೀಯಗಳು:
ಕ್ಯಾಮೊಮೈಲ್ ಟೀ: ಈ ಕ್ಯಾಮೊಮೈಲ್ ಚಹಾವು ಬ್ರೂ ಹಿಪ್ಪುರೇಟ್ ಮತ್ತು ಗ್ಲೆಸೆಮಿಕ್‌ನಂತಹ ಸಂಯುಕ್ತಗಳಿಮದ ತುಂಬಿದೆ. ಅದು ಸ್ನಾಯು ಸೆಳೆತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಜೊತೆಗೆ ಮುಟ್ಟಿನ ಸಮಯದಲ್ಲಿ ಶಾಂತಿಯುತವಾಗಿ ವಿಶ್ರಾಂತಿ ಪಡೆಯಲು ಅದು ನಿಮಗೆ ಸಹಾಯ ಮಾಡುತ್ತದೆ. ನೀರನ್ನು ಕುದಿಸಿ, ಅದಕ್ಕೆ ಒಂದು ಟೀಚಮಚ ಕ್ಯಾಮೊಮೈಲ್ ಸೇರಿಸಿ. ಇದನ್ನು ಬಿಸಿ ಬಿಸಿಯಾಗಿ ಕುಡಿಯುವ ಮೂಲಕ ದೇಹಕ್ಕೆ ವಿಶ್ರಾಂತಿಯನ್ನು ಪಡೆದುಕೊಳ್ಳಬಹುದು.
ಶುಂಠಿ ಟೀ: ಒಂದು ಕಪ್ ಮಸಾಲೆಯುಕ್ತ ಶುಂಠಿ ಚಹಾದೊಂದಿಗೆ ಮುಟ್ಟಿನ ನೋವಿಗೆ ವಿದಾಯ ಹೇಳಬಹುದು. ಶುಂಠಿಯು ನೈಸರ್ಗಿಕ ಉರಿಯೂತ ವಿರೋಧಿ ಹಾಗೂ ನೋವು ನಿವಾರಕವಾಗಿದೆ. ಇದು ಮುಟ್ಟಿನ ಸಮಯಕ್ಕೆ ಕುಡಿಯಲು ಸೂಕ್ತವಾದ ಪಾನೀಯವಾಗಿದೆ. ಕುದಿಯುವ ನೀರಿಗೆ ಶುಂಠಿಯ ಕೆಲವು ತೆಳುವಾದ ಹೋಳುಗಳನ್ನು ಸೇರಿಸಿ ಮತ್ತು ಅದನ್ನು 5 ನಿಮಿಷಗಳ ಕಾಲ ಕುದಿಯಲು ಬಿಡಿ. ನಂತರ ಬಿಸಿ ಬಿಸಿಯಾಗಿ ಅದನ್ನು ಸೇವಿಸಿ.
ಹಸಿರು ಸ್ಮೂಥಿಗಳು: ಸ್ವಲ್ಪ ಕಿವಿ ಹಣ್ಣು, ಸೀಯಾಳ, ತಾಜಾ ಪುದೀನಾ ಎಲೆಗಳು ಹಾಗೂ ಕೆಲವು ಶುಂಠಿ ಹೋಳುಗಳನ್ನು ಚೆನ್ನಾಗಿ ಬ್ಲೆಂಡ್ ಮಾಡಿ ಕುಡಿಯಿರಿ. ಈ ಸ್ಮೂಥಿಯು ಮುಟ್ಟಿನ ನೋವನ್ನು ನಿವಾರಿಸಲು ಸಹಾಯ ಮಾಡುತ್ತದೆ.
ಪುದೀನಾ ಟೀ: ಮುಟ್ಟಿನ ಸೆಳೆತವನ್ನು ನಿವಾರಿಸಲು ಪುದೀನಾ ಟೀ ನಿಮಗೆ ಸಹಕಾರಿಯಾಗಿದೆ. ತಾಜಾ ಪುದೀನಾ ಎಲೆಗಳನ್ನು ನೀರಿನಲ್ಲಿ ಕುದಿಸಿ, ಪುದೀನಾ ಚಹಾವನ್ನು ತಯಾರಿಸಿ. ಇದನ್ನು ಬಿಸಿ ಬಿಸಿಯಾಗಿ ಮುಟ್ಟಿನ ಸಮಯದಲ್ಲಿ ಕುಡಿಯುವ ಮೂಲಕ ನೋವಿನ ಸೆಳೆತವನ್ನು ಕಡಿಮೆ ಮಾಡಬಹುದು.
ಇದನ್ನೂ ಓದ: Late Periods: ಮುಟ್ಟು ತಡವಾಗುತ್ತಿದೆಯೇ? ಸಮಸ್ಯೆ ದೂರ ಮಾಡಲು ಸುಲಭ ಟಿಪ್ಸ್ಗಳು ಇಲ್ಲಿವೆ
ದಾಲ್ಚಿನಿ ಟೀ: ದಾಲ್ಚಿನ್ನಿಯು ವಿವಿಧ ಆರೋಗ್ಯ ಪ್ರಯೋಜನಗಳನ್ನು ಹೊಂದಿರುವ ಮಸಾಲೆ ಪದಾರ್ಥವಾಗಿದೆ. ಇದು ಮುಟ್ಟಿನ ಸಮಯದಲ್ಲಿ ಉಂಟಾಗುವ ನೋವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಒಂದು ದಾಲ್ಚಿನ್ನಿ ತುಂಡು ಮತ್ತು ಒಂದು ಚಿಟಿಕೆ ದಾಲ್ಚಿನ್ನಿ ಪುಡಿಯನ್ನು ನೀರಿನೊಂದಿಗೆ ಸೇರಿಸಿ ಈ ಮಿಶ್ರಣ ಮಣ್ಣಿನ ಪರಿಮಳ ಬರುವವರೆಗೆ ಮಧ್ಯಮ ಉರಿಯಲ್ಲಿ ಕುದಿಸಿ. ನಂತರ ನೀರನ್ನು ಸೋಸಿಕೊಂಡು ಅದಕ್ಕೆ ಜೇನುತುಪ್ಪ ಸೇರಿಸಿ ಕುಡಿಯಿರಿ. ಇದು ನಿಮ್ಮ ದೇಹಕ್ಕೆ ವಿಶ್ರಾಂತಿಯನ್ನು ನೀಡುತ್ತದೆ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:49 pm, Thu, 23 March 23