ಕುಷ್ಠರೋಗ ಹೇಗೆ ಹರಡುತ್ತದೆ ಎಂಬುದು ತಿಳಿದಿದೆಯೇ?
ಕುಷ್ಠರೋಗದ ಬಗ್ಗೆ ಜನರಿಗೆ ಸರಿಯಾದ ಮಾಹಿತಿ ಇಲ್ಲದ ಕಾರಣ ಈ ಬಗ್ಗೆ ನಾನಾ ರೀತಿಯ ಊಹಾಪೋಹಗಳು ಹುಟ್ಟಿಕೊಂಡಿದ್ದು ಏನನ್ನು ಅರಿಯದವರು ಅದನ್ನೇ ಸತ್ಯ ಎಂದು ಭಾವಿಸಿಕೊಂಡಿದ್ದಾರೆ. ಆದರೆ ಕುಷ್ಠರೋಗದ ಬಗ್ಗೆ ಸರಿಯಾಗಿ ತಿಳಿದು ಈ ಕುರಿತಾಗಿ ಜನರಿಗೆ ಸರಿಯಾದ ರೀತಿಯಲ್ಲಿ ಅರಿವು ಮೂಡಿಸುವುದು ಬಹಳ ಮುಖ್ಯವಾಗಿದೆ. . ಹಾಗಾದರೆ ಕುಷ್ಠರೋಗಕ್ಕೆ ಕಾರಣವೇನು? ಇದು ಸಾಂಕ್ರಾಮಿಕವೇ ತಿಳಿದುಕೊಳ್ಳಿ.

ಕುಷ್ಠರೋಗ ಎಂದಾಕ್ಷಣ ದೇಹ ಒಮ್ಮೆ ಕಂಪಿಸುತ್ತದೆ. ಈ ರೋಗಕ್ಕೆ ಹೆದರದವರಿಲ್ಲ. ಆದರೆ ಕುಷ್ಠರೋಗದ ಬಗ್ಗೆ ಜನರಿಗೆ ಸರಿಯಾದ ಮಾಹಿತಿ ಇಲ್ಲದ ಕಾರಣ ಈ ಬಗ್ಗೆ ನಾನಾ ರೀತಿಯ ಊಹಾಪೋಹಗಳು ಹುಟ್ಟಿಕೊಂಡಿದ್ದು ಏನನ್ನು ಅರಿಯದವರು ಅದನ್ನೇ ಸತ್ಯ ಎಂದು ಭಾವಿಸಿಕೊಂಡಿದ್ದಾರೆ. ಆದರೆ ಕುಷ್ಠರೋಗದ ಬಗ್ಗೆ ಸರಿಯಾಗಿ ತಿಳಿದು ಈ ಕುರಿತಾಗಿ ಜನರಿಗೆ ಸರಿಯಾದ ರೀತಿಯಲ್ಲಿ ಅರಿವು ಮೂಡಿಸುವುದು ಬಹಳ ಮುಖ್ಯವಾಗಿದೆ. ಅದಲ್ಲದೆ ಮಹಾತ್ಮ ಗಾಂಧಿಯವರು ಕೂಡ ಕುಷ್ಠರೋಗದಿಂದ ಬಳಲುತ್ತಿರುವ ಜನರ ಬಗ್ಗೆ ಕರುಣೆ ಹೊಂದಿದ್ದು, ರೋಗಿಗಳ ಅಭಿವೃದ್ಧಿಗೆ ಶ್ರಮಿಸಿದ್ದರು. ಅವರಿಗೆ ಚಿಕಿತ್ಸೆ ಮತ್ತು ಸೌಲಭ್ಯಗಳನ್ನು ಒದಗಿಸಿದರು ಮತ್ತು ಈ ಆರೋಗ್ಯ ಸಮಸ್ಯೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿದ್ದರು. ಆದರೆ ಇಂದಿಗೂ ಜನರಲ್ಲಿನ ತಪ್ಪು ಕಲ್ಪನೆಗಳು ಹೋಗಿಲ್ಲ. ಹಾಗಾದರೆ ಕುಷ್ಠರೋಗಕ್ಕೆ ಕಾರಣವೇನು? ಇದು ಸಾಂಕ್ರಾಮಿಕವೇ ತಿಳಿದುಕೊಳ್ಳಿ.
ಕುಷ್ಠರೋಗಕ್ಕೆ ಕಾರಣವೇನು?
ಸಾಮಾನ್ಯವಾಗಿ ಇದೊಂದು ಬ್ಯಾಕ್ಟೀರಿಯಾ ಸೋಂಕಾಗಿದ್ದು, ನಿಧಾನವಾಗಿ ಹೆಚ್ಚಾಗಿ ಚರ್ಮ ಮತ್ತು ನರಮಂಡಲಕ್ಕೆ ಹಾನಿಯನ್ನುಂಟು ಮಾಡುತ್ತದೆ. ಮೈಕ್ರೋಬ್ಯಾಕ್ಟೀರಿಯಂ ಲೆಪ್ರೆ ಎಂಬ ಬ್ಯಾಕ್ಟೀರಿಯಾಗಳು ಈ ಸೋಂಕನ್ನು ಉಂಟು ಮಾಡುತ್ತವೆ. ಸಕಾಲದಲ್ಲಿ ಚಿಕಿತ್ಸೆ ಪಡೆಯದಿದ್ದರೆ ಕುಷ್ಠರೋಗವು ಶರೀರ ವಿರೂಪಗೊಳ್ಳುವಿಕೆ ಮತ್ತು ಅಂಗವೈಕಲ್ಯದಂತಹ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ.
ಇದನ್ನೂ ಓದಿ: ಗುಯಿಲಿನ್ ಬಾರ್ ಸಿಂಡ್ರೋಮ್ ಎಂದರೇನು? ತಡೆಗಟ್ಟುವುದು ಹೇಗೆ ತಿಳಿದುಕೊಳ್ಳಿ
ಕುಷ್ಠರೋಗ ಸಾಂಕ್ರಾಮಿಕವೇ?
ಸಾಮಾನ್ಯವಾಗಿ ಇದು ಸಾಂಕ್ರಾಮಿಕವಲ್ಲ. ಜಾಗತಿಕ ಜನಸಂಖ್ಯೆಯಲ್ಲಿ ಸುಮಾರು 95%ರಷ್ಟು ಜನರು ರೋಗನಿರೋಧಕ ಶಕ್ತಿಯನ್ನು ಹೊಂದಿದ್ದಾರೆ. ಒಂದು ವೇಳೆ ಸೋಂಕಿತ ವ್ಯಕ್ತಿಯೊಂದಿಗೆ ದೀರ್ಘಕಾಲದ ನಿಕಟ ಸಂಪರ್ಕ ಹೊಂದಿದಲ್ಲಿ ಈ ಸಮಸ್ಯೆ ಹರಡುವ ಸಾಧ್ಯತೆ ಇರುತ್ತದೆ. ಆದರೆ ಕೈಕುಲುಕುವುದು ಅಥವಾ ಕುಷ್ಠರೋಗವಿರುವ ಯಾರನ್ನಾದರೂ ಸ್ಪರ್ಶಿಸುವುದರಿಂದ ಈ ಸಮಸ್ಯೆ ಬರುವುದಿಲ್ಲ. ಈ ರೋಗದ ಲಕ್ಷಣವು ನಿಧಾನವಾಗಿ ಕಂಡುಬರುತ್ತದೆ. ಸಾಮಾನ್ಯವಾಗಿ ಈ ಸಮಸ್ಯೆಯ ಲಕ್ಷಣಗಳು ಕಂಡುಬಂದಾಗ ಚಿಕಿತ್ಸೆ ನೀಡದೆ ಇದ್ದರೆ ಮಾತ್ರ ಇದು ವಿರೂಪಕ್ಕೆ ಕಾರಣವಾಗುತ್ತದೆ. ಮಲ್ಟಿ- ಡ್ರಗ್ ಥೆರಪಿ (MDT) ಮೂಲಕ ಕುಷ್ಠರೋಗವನ್ನು ಪರಿಣಾಮಕಾರಿಯಾಗಿ ಗುಣಪಡಿಸಬಹುದು. ಆದರೆ ಚಿಕಿತ್ಸೆಯನ್ನು ತ್ವರಿತವಾಗಿ ಪ್ರಾರಂಭಿಸುವುದು ಬಹಳ ಮುಖ್ಯವಾಗಿರುತ್ತದೆ. ಅದಲ್ಲದೆ ಕುಷ್ಠರೋಗವು ದೇವರ ಶಾಪ ಅಥವಾ ಶಿಕ್ಷೆ ಎಂದು ಕೊಂಡು ಜನ ಹೆದರುತ್ತಾರೆ ಆದರೆ ಇದು ಬ್ಯಾಕ್ಟೀರಿಯಾ ದಿಂದ ಹರಡುತ್ತದೆ. ಪರಿಸರ ಅಥವಾ ಸೋಂಕಿತ ವ್ಯಕ್ತಿಯ ಮೂಲಕ ಹರಡುತ್ತದೆ ಅಷ್ಟೇ. ಹಾಗಾಗಿ ಈ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸುವುದು ಅನಿವಾರ್ಯವಾಗಿದೆ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ