Sepsis: ನಾಯಿ ನಿಮ್ಮನ್ನು ನೆಕ್ಕುವುದರಿಂದ ಅಂಗಾಂಗಗಳನ್ನೇ ನೀವು ಕಳೆದುಕೊಳ್ಳಬಹುದು, ಪ್ರಾಣವೂ ಹೋಗಬಹುದು ಎಚ್ಚರ!

ನಾಯಿ ನಿಮ್ಮನ್ನು ನೆಕ್ಕುವುದರಿಂದ 'ಕ್ಯಾಪ್ಲೋಸೈಟೋಫಗಾ ಕ್ಯಾನಿಮೊರ್ಸಸ್' ಬ್ಯಾಕ್ಟೀರಿಯಾದಿಂದ ಮಾರಣಾಂತಿಕ ಸೆಪ್ಸಿಸ್ ಸೋಂಕು ಉಂಟಾಗಬಹುದು. ಇದು ಅಂಗಾಂಗ ವೈಫಲ್ಯ, ಅಂಗಾಂಗ ಕತ್ತರಿಸುವಿಕೆ ಮತ್ತು ಪ್ರಾಣಾಪಾಯಕ್ಕೂ ಕಾರಣವಾಗಬಹುದು. ಮಂಜೀತ್ ಸಂಘಾ ಅವರ ಕಥೆಯೇ ಇದಕ್ಕೆ ಉದಾಹರಣೆ. ವಿಶೇಷವಾಗಿ ಗಾಯಗಳಿದ್ದರೆ, ಸಾಕುಪ್ರಾಣಿಗಳನ್ನು ನೆಕ್ಕಲು ಬಿಡಬೇಡಿ. ಶುಚಿತ್ವ ಮತ್ತು ಮುನ್ನೆಚ್ಚರಿಕೆ ಕ್ರಮಗಳು ನಿಮ್ಮ ಜೀವವನ್ನು ಉಳಿಸಬಹುದು.

Sepsis: ನಾಯಿ ನಿಮ್ಮನ್ನು ನೆಕ್ಕುವುದರಿಂದ ಅಂಗಾಂಗಗಳನ್ನೇ ನೀವು ಕಳೆದುಕೊಳ್ಳಬಹುದು, ಪ್ರಾಣವೂ ಹೋಗಬಹುದು ಎಚ್ಚರ!
ನಾಯಿ
Image Credit source: The Academy of pets carreers

Updated on: Feb 24, 2026 | 10:50 AM

ಸಾಮಾನ್ಯವಾಗಿ ಸಾಕು ನಾಯಿ(Dog)ಗಳನ್ನು ಮನೆ ಮಾಲೀಕರು ಮನೆಯ ಒಂದು ಸದಸ್ಯನಂತೆ ಕಾಣುತ್ತಾರೆ. ಮನೆಯ ಒಳಗೇ ನಾಯಿಯನ್ನು ಬಿಟ್ಟುಕೊಳ್ಳುತ್ತಾರೆ. ತಮ್ಮ ಜತೆ ಬೆಡ್​ರೂಮಿನಲ್ಲೇ ಮಲಗಿಸಿಕೊಳ್ಳುತ್ತಾರೆ. ಹಾಗೆಯೇ ಆ ನಾಯಿಗಳು ಕೂಡ ಮನೆ ಸದಸ್ಯರ ಕೈಕಾಲು, ಮುಖಗಳನ್ನು ನೆಕ್ಕುತ್ತಾ ತಮ್ಮ ಪ್ರೀತಿಯನ್ನು ಸಾಬೀತುಪಡಿಸುತ್ತವೆ. ಆದರೆ ಆ ಪ್ರೀತಿ ಜನರ ಜೀವಕ್ಕೆ ಕುತ್ತು ತರಬಹುದು ಎಂಬುದು ಯಾರಿಗಾದರೂ ತಿಳಿದಿದೆಯೇ?.

ನಾಯಿ ನಿಮ್ಮ ನೆಕ್ಕುವುದರಿಂದ ಅಂಗಾಂಗಗಳನ್ನೇ ನೀವು ಕಳೆದುಕೊಳ್ಳಬಹುದು, ಅಂಗಾಂಗ ವೈಫಲ್ಯ ಉಂಟಾಗಬಹುದು, ಟಿಶ್ಯೂ ಡ್ಯಾಮೇಜ್ ಆಗಬಹುದು, ನಿಮ್ಮ ಜೀವಕ್ಕೇ ಇದು ಕುತ್ತು ತರಬಹುದು.  ಆ ಅಪಾಯಕಾರಿ ಸೋಂಕನ್ನು ಸೆಪ್ಸಿಸ್(Sepsis)ಎಂದು ಕರೆಯುತ್ತಾರೆ. ಯುಕೆಯ 52 ವರ್ಷದ ಮಂಜೀತ್ ಸಂಘಾ ಅವರಿಗೂ ಇದೇ ರೀತಿಯ ಅಪಾಯ ಉಂಟಾಗಿದೆ. 2025ರ ಜುಲೈನಲ್ಲಿ ಒಂದು ದಿನ ಎಂದಿನಂತೆ ಅವರು ಕೆಲಸಕ್ಕೆ ಹೋಗಿದ್ದರು, ಆರೋಗ್ಯವಾಗಿಯೇ ಹಿಂದಿರುಗಿದ್ದರು.

ಮರುದಿನವೇ ಅವರ ಸ್ಥಿತಿ ತುಂಬಾ ಹದಗೆಟ್ಟಿತ್ತು ಮೂರ್ಛೆ ಕೂಡಾ ಹೋಗಿದ್ದರು. ಅವರ ಕೈಗಳು ಹಾಗೂ ಪಾದಗಳು ಮಂಜುಗಡ್ಡೆಯಂತೆ ತಣ್ಣಗಾಗಿದ್ದವು. ಅವರ ತುಟಿಗಳು ನೀಲಿ ಬಣ್ಣಕ್ಕೆ ತಿರುಗಿದ್ದವು ಮತ್ತು ಉಸಿರಾಟದ ತೊಂದರೆಯೂ ಎದುರಾಗಿತ್ತು.

ಅವರನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತು, ವೈದ್ಯರು ಅವರಿಗೆ ಸೆಪ್ಸಿಸ್(Sepsis) ಇದೆ ಎಂದು ಪತ್ತೆ ಹಚ್ಚಿದ್ದರು. ಸೆಪ್ಸಿಸ್ ಅಂದರೆ ರಕ್ತದಲ್ಲಿ ವಿಷಕಾರಕ ಅಂಶ ಸೇರುವುದು ಎಂದರ್ಥ. ಇದು ಸೋಂಕಿಗೆ ತಿರುಗಿ ದೇಹಕ್ಕೆ ಹಾನಿ ಮಾಡಲು ಶುರು ಮಾಡಿತ್ತು. ಈ ಸ್ಥಿತಿ ಎಷ್ಟು ತೀವ್ರವಾಗಿತ್ತೆಂದರೆ ವೈದ್ಯರು ಅವರ ಎರಡೂ ಕಾಲುಗಳನ್ನು ಮೊಣಕಾಲುಗಳ ಕೆಳಗೆ ಮತ್ತು ಎರಡೂ ತೋಳುಗಳನ್ನು ಕತ್ತರಿಸಬೇಕಾಯಿತು.

Manjit

ಸಮಸ್ಯೆ ಶುರುವಾಗಿದ್ದು ಹೇಗೆ?

ಚಿಕಿತ್ಸೆಯ ಸಮಯದಲ್ಲಿ, ಅವರಿಗೆ ಹೃದಯಾಘಾತವೂ ಆಗಿತ್ತು, ಸುಮಾರು ತೊಡಕುಗಳನ್ನು ಎದುರಿಸಬೇಕಾಯಿತು.
ಆಕೆಯ ದೇಹದಲ್ಲಿ ಸಣ್ಣ ಗಾಯವಾಗಿತ್ತು, ಆ ಗಾಯವನ್ನು ನೆಕ್ಕಿದಾಗ ಈ ಸಮಸ್ಯೆ ಶುರುವಾಗಿತ್ತು. ನಾಯಿಯ ಲಾಲಾರಸದಲ್ಲಿ ಕಂಡುಬರುವ

‘ಕ್ಯಾಪ್ಲೋಸೈಟೋಫಗಾ ಕ್ಯಾನಿಮೊರ್ಸಸ್’ ಎಂಬ ಬ್ಯಾಕ್ಟೋರಿಯಾವು ಸಾಮಾನ್ಯವಾಗಿ ನಾಯಿಗಳಿಗೆ ಹಾನಿಕಾರಕವಲ್ಲ, ಆದರೆ ಮಾನವರಲ್ಲಿ ಇದು ಗಂಭೀರ ಸೋಂಕು ಮತ್ತು ಸೆಪ್ಸಿಸ್​ಗೆ ಕಾರಣವಾಗಬಹುದು.

ಮತ್ತಷ್ಟು ಓದಿ:  ಪ್ರತಿದಿನ ವಾಕಿಂಗ್‌ ಮಾಡುವುದರಿಂದ ಎಷ್ಟೆಲ್ಲಾ ಪ್ರಯೋಜನಗಳು ಲಭಿಸುತ್ತವೆ ಗೊತ್ತಾ?

ಸೆಪ್ಸಿಸ್ ಎಂದರೇನು?

ಸೆಪ್ಸಿಸ್ ಒಂದು ಜೀವಕ್ಕೆ ಅಪಾಯ ತಂದೊಡ್ಡುವ ಸ್ಥಿತಿಯಾಗಿದ್ದು, ಇದರಲ್ಲಿ ದೇಹದ ಪ್ರತಿರಕ್ಷಣಾ ವ್ಯವಸ್ಥೆಯು ಸೋಂಕಿಗೆ ಅತಿಯಾಗಿ ಪ್ರತಿಕ್ರಿಯಿಸುತ್ತದೆ. ಈ ಪ್ರತಿಕ್ರಿಯೆಯು ದೇಹದಾದ್ಯಂತ ಉರಿಯೂತವನ್ನು ಉಂಟುಮಾಡುತ್ತದೆ ಮತ್ತು ಆರೋಗ್ಯಕರ ಅಂಗಾಂಶ ಮತ್ತು ಅಂಗಗಳನ್ನು ಹಾನಿಗೊಳಿಸುತ್ತದೆ.ರಕ್ತದೊತ್ತಡ ಇದ್ದಕ್ಕಿದ್ದಂತೆ ಕಡಿಮೆಯಾಗುತ್ತದೆ, ಅಂಗಗಳಿಗೆ ಸಾಕಷ್ಟು ಆಮ್ಲಜನಕದ ಪೂರೈಕೆಯನ್ನು ತಡೆಯುತ್ತದೆ ಮತ್ತು ಬಹು-ಅಂಗಾಂಗ ವೈಫಲ್ಯದ ಅಪಾಯವನ್ನು ಹೆಚ್ಚಿಸುತ್ತದೆ.

ಸೆಪ್ಸಿಸ್ ಕಾರಣಗಳು
ಯಾವುದೇ ಸೋಂಕಿನಿಂದ ಸೆಪ್ಸಿಸ್ ಪ್ರಚೋದಿಸಬಹುದು

  • ಶ್ವಾಸಕೋಶದ ಸೋಂಕು
  • ಮೂತ್ರನಾಳದ ಸೋಂಕು
  • ಹೊಟ್ಟೆ ಅಥವಾ ಕರುಳಿನ ಸೋಂಕು
  • ಚರ್ಮದ ಸೋಂಕು
  • ಮೆದುಳು ಅಥವಾ ಬೆನ್ನುಹುರಿ ಸೋಂಕು

ಸೆಪ್ಸಿಸ್ ಲಕ್ಷಣಗಳು

  • ಹೆಚ್ಚಿನ ಜ್ವರ ಅಥವಾ ತುಂಬಾ ಕಡಿಮೆ ದೇಹದ ಉಷ್ಣತೆ
  • ವೇಗದ ಹೃದಯಬಡಿತ
  • ಉಸಿರಾಟದ ತೊಂದರೆ
  • ತುಂಬಾ ಕಡಿಮೆ ಮೂತ್ರ ವಿಸರ್ಜನೆ
  • ತುಂಬಾ ಆಯಾಸ
  • ಚರ್ಮದ ಮೇಲೆ ಕೆಂಪು ಅಥವಾ ಕಪ್ಪು ಕಲೆಗಳು
  • ಕಡಿಮೆ ರಕ್ತದೊತ್ತಡ
  • ಚಳಿ ಅಥವಾ ನಡುಕ
  • ತೀವ್ರ ನೋವು ಅಥವಾ ಅಸ್ವಸ್ಥತೆ

ಮುನ್ನೆಚ್ಚರಿಕಾ ಕ್ರಮಗಳು

ಚರ್ಮದ ಮೇಲೆ ಗಾಯ ಆಗಿದ್ದರೆ, ಯಾವುದೇ ಸಾಕು ಪ್ರಾಣಿಯನ್ನು ನೆಕ್ಕಲು ಬಿಡಬೇಡಿ.
ಯಾವುದೇ ಸಣ್ಣ ಗಾಯಗಳಿದ್ದರೂ ಅದನ್ನು ಸ್ವಚ್ಛಗೊಳಿಸಿ ಅದಕ್ಕೆ ಬ್ಯಾಂಡೇಜ್ ಅಥವಾ ಬ್ಯಾಂಡೆಡ್ ಏನಾದರೂ ಹಾಕಿ
ಜ್ವರ, ಶೀತ ಅಥವಾ ಹಠಾತ್ ದೌರ್ಬಲ್ಯವನ್ನು ನಿರ್ಲಕ್ಷಿಸಬೇಡಿ

ಸೆಪ್ಸಿಸ್​​ನಿಂದ ಏನೇನಾಗಬಹುದು

  • ಸೆಪ್ಟಿಕ್ ಶಾಕ್-ರಕ್ತದೊತ್ತಡ ಅಪಾಯಕಾರಿ ಮಟ್ಟಕ್ಕೆ ಇಳಿಯುತ್ತದೆ
  • ತೀವ್ರ ಉಸಿರಾಟ ತೊಂದರೆಯ ಸಿಂಡ್ರೋಮ್- ಶ್ವಾಸಕೋಶದಲ್ಲಿ ದ್ರವ ಸಂಗ್ರಹವಾಗುತ್ತದೆ. ಉಸಿರಾಟವನ್ನು ಕಷ್ಟಕರವಾಗಿಸುತ್ತದೆ.
  • ಡಿಐಸಿ-ಅಸಹಜ ರಕ್ತ ಹೆಪ್ಪುಗಟ್ಟುವಿಕೆ ಮತ್ತು ಅತಿಯಾದ ರಕ್ತಸ್ರಾವ
  • ಮೂತ್ರಪಿಂಡ ವೈಫಲ್ಯ-ಡಯಾಲಿಸಿಸ್ ಅಗತ್ಯವಿರಬಹುದು
  • ಸೆಪ್ಸಿಸ್ ನಂತರದ ಸಿಂಡ್ರೋಮ್-ದೀರ್ಘಕಾಲದ ಆಯಾಸ, ದೌರ್ಬಲ್ಯ, ಮಾನಸಿಕ ಒತ್ತಡ ಮತ್ತು ಶಾಶ್ವತ ಅಂಗಾಂಗ ವೈಫಲ್ಯ

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us