Eye Cancer: ಕಣ್ಣಿನ ಕ್ಯಾನ್ಸರ್ ಬಗ್ಗೆ ಕೇಳಿದ್ದೀರಾ? ಲಕ್ಷಣಗಳು ಹೇಗಿರುತ್ತವೆ ನೋಡಿ

ಕಣ್ಣುಗಳಿಗೂ ಕ್ಯಾನ್ಸರ್ ಬರಬಹುದು. ಅಷ್ಟೇ ಅಲ್ಲ, ಈ ಕಣ್ಣಿನ ಕ್ಯಾನ್ಸರ್ ದೇಹದಾದ್ಯಂತ ಹರಡಬಹುದು. ಇದು ಆರಂಭಿಕ ಹಂತದಲ್ಲಿರುವಾಗ, ಕಣ್ಣುಗಳಲ್ಲಿ ಕೆಲವು ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಆಗ ಅವುಗಳನ್ನು ನಿರ್ಲಕ್ಷಿಸಬಾರದು. ಅದನ್ನು ಸರಿಯಾಗಿ ಗುರುತಿಸಿ, ಹೆಚ್ಚಾಗುವ ಸಂಭವಗಳನ್ನು ತಡೆಯಬೇಕು. ಹಾಗಾದರೆ ಕಣ್ಣುಗಳಲ್ಲಿ ಕ್ಯಾನ್ಸರ್‌ ಕಂಡುಬರುವುದಕ್ಕೆ ಕಾರಣಗಳೇನು? ಲಕ್ಷಣಗಳು ಹೇಗಿರುತ್ತವೆ? ಎಂಬುದನ್ನು ತಿಳಿದುಕೊಳ್ಳಿ.

Eye Cancer: ಕಣ್ಣಿನ ಕ್ಯಾನ್ಸರ್ ಬಗ್ಗೆ ಕೇಳಿದ್ದೀರಾ? ಲಕ್ಷಣಗಳು ಹೇಗಿರುತ್ತವೆ ನೋಡಿ
ಕಣ್ಣಿನ ಕ್ಯಾನ್ಸರ್
Image Credit source: Getty Images

Updated on: May 16, 2025 | 4:02 PM

ಕಣ್ಣುಗಳಿಗೆ ಕ್ಯಾನ್ಸರ್ (Eye Cancer) ಬರಬಹುದೇ ಎಂಬ ಪ್ರಶ್ನೆ ನಿಮ್ಮಲ್ಲಿ ಉದ್ಭವವಾದರೆ, ಹೌದು ನಿಮ್ಮ ಊಹೆ ನಿಜ. ಕಣ್ಣುಗಳಲ್ಲಿಯೂ ಕ್ಯಾನ್ಸರ್ (Cancer) ಕಂಡು ಬರಬಹುದು. ಇತರ ಕ್ಯಾನ್ಸರ್‌ಗಳಂತೆ, ಇದು ಕಂಡು ಬರುವಾಗಲೂ ಕೂಡ ದೇಹದಲ್ಲಿ ಕೆಲವು ರೋಗಲಕ್ಷಣಗಳು ಕಂಡು ಬರುತ್ತದೆ. ಆದರೆ ಅದನ್ನು ಮೊದಲೇ ಗುರುತಿಸಬೇಕಾಗುತ್ತದೆ. ಹಾಗಾದರೆ ಕಣ್ಣುಗಳಲ್ಲಿ ಕ್ಯಾನ್ಸರ್‌ ಕಂಡುಬರುವುದಕ್ಕೆ ಕಾರಣಗಳೇನು? ಲಕ್ಷಣಗಳು (Eye cancer symptoms) ಹೇಗಿರುತ್ತವೆ? ಕಣ್ಣಿನ ಕ್ಯಾನ್ಸರ್ ದೇಹದ ಇತರ ಭಾಗಗಳಿಗೆ ಹರಡಬಹುದೇ? ಚಿಕಿತ್ಸೆ ಹೇಗಿರುತ್ತದೆ? ಈ ಬಗ್ಗೆ ಮತ್ತೊಂದಿಷ್ಟು ಮಾಹಿತಿ ಇಲ್ಲಿದೆ.

ಲಕ್ಷಣಗಳು ಹೇಗಿರುತ್ತವೆ?

ಕಣ್ಣಿನ ಕ್ಯಾನ್ಸರ್ ಅನ್ನು ಅಪರೂಪದ ಕ್ಯಾನ್ಸರ್ ಎಂದು ವರ್ಗೀಕರಿಸಲಾಗಿದೆ. ಕಣ್ಣಿನಲ್ಲಿ ಹಲವಾರು ರೀತಿಯ ಕ್ಯಾನ್ಸರ್ ಕಂಡುಬರಬಹುದು. ಇದರಲ್ಲಿ ಕಣ್ಣುಗಳಲ್ಲಿ ಗೆಡ್ಡೆ ಬೆಳೆಯುವುದು ಕೂಡ ಒಂದು. ಈ ಗೆಡ್ಡೆಗಳು ಕಣ್ಣುಗಳ ಕೆಲವು ಭಾಗಗಳಲ್ಲಿ ಬೆಳೆಯಬಹುದು. ಕಣ್ಣಿನಲ್ಲಿ ಬೆಳೆಯುವ ಎಲ್ಲಾ ಗೆಡ್ಡೆಗಳು ಕ್ಯಾನ್ಸರ್ ಅಲ್ಲದಿದ್ದರೂ, ಅವುಗಳನ್ನು ಪರೀಕ್ಷಿಸುವುದು ಬಹಳ ಮುಖ್ಯವಾಗುತ್ತದೆ. ಅದರಲ್ಲಿಯೂ ಕಣ್ಣಿನ ಕ್ಯಾನ್ಸರ್‌ಗೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡದಿದ್ದರೆ, ಅದು ದೇಹದಾದ್ಯಂತ ಹರಡಬಹುದು. ಆದ್ದರಿಂದ, ಕಣ್ಣುಗಳಲ್ಲಿನ ಕ್ಯಾನ್ಸರ್‌ನ ಲಕ್ಷಣಗಳನ್ನು ನಿರ್ಲಕ್ಷಿಸಬಾರದು. ನೀವು ಆರಂಭದಲ್ಲಿ ಮಾಡುವ ಚಿಕಿತ್ಸೆ ಕ್ಯಾನ್ಸರ್ ಹೆಚ್ಚಿಸುವುದನ್ನು ತಡೆಯಬಹುದು. ಕಣ್ಣಿನ ಕ್ಯಾನ್ಸರ್‌ನಲ್ಲಿ ಹಲವಾರು ವಿಧಗಳಿದ್ದು, ಇವುಗಳಲ್ಲಿ ಕಣ್ಣಿನ ಅಥವಾ ಐರಿಸ್‌ನ ಬಣ್ಣದ ಭಾಗದಲ್ಲಿ ಬೆಳೆಯುವ ಐರಿಸ್ ಮೆಲನೋಮ, ನಿಮ್ಮ ಕಣ್ಣಿನ ಮಸೂರಗಳಲ್ಲಿ ಬೆಳೆಯುವ ಸಿಲಿಯರಿ ಬಾಡಿ ಮೆಲನೋಮ, ಮತ್ತು ನಿಮ್ಮ ಕಣ್ಣಿನ ಪದರದಲ್ಲಿ ರೂಪುಗೊಳ್ಳುವ ಕೊರೊಯ್ಡಲ್ ಮೆಲನೋಮ ಸೇರಿವೆ, ಈ ಕ್ಯಾನ್ಸರ್‌ ಕಂಡು ಬರುವ ಮೊದಲು ಕೆಲವು ಆರಂಭಿಕ ಲಕ್ಷಣಗಳು ಕಂಡು ಬರುತ್ತದೆ. ಇವುಗಳಲ್ಲಿ ದೃಷ್ಟಿ ದುರ್ಬಲಗೊಳ್ಳುವುದು, ಮಸುಕಾದ ದೃಷ್ಟಿ, ಕಣ್ಣಿನಲ್ಲಿ ಕಲೆಗಳು, ಕಿರಿಕಿರಿ ಸೇರಿವೆ. ಈ ರೀತಿ ಲಕ್ಷಣಗಳು ಕಾಣಿಸಿಕೊಂಡ ತಕ್ಷಣ ಪರೀಕ್ಷೆ ನಡೆಸಿ ಸರಿಯಾದ ಚಿಕಿತ್ಸೆ ಪಡೆದುಕೊಳ್ಳಬೇಕು.

ಇದನ್ನೂ ಓದಿ: ನೀವು ಮಾಡುವ ಈ ತಪ್ಪುಗಳೇ ರಕ್ತದೊತ್ತಡ ಹೆಚ್ಚಾಗಲು ಕಾರಣ ?

ಇದನ್ನೂ ಓದಿ
ಬೋಳುತಲೆ ಪುರುಷರಲ್ಲಿಯೇ ಹೆಚ್ಚಾಗಿ ಕಂಡುಬರುವುದು ಇದೆ ಕಾರಣಕ್ಕೆ
ಇದ್ದಕ್ಕಿದ್ದಂತೆ ಬಿಪಿ ಹೆಚ್ಚಾಗಲು ಈ ತಪ್ಪುಗಳೇ ಕಾರಣ
Milk Rice: ಹಾಲು ಅನ್ನ ಆರೋಗ್ಯಕ್ಕೆ ಅಮೃತವಿದ್ದಂತೆ
ಲಿಚಿ ಹಣ್ಣು ಚಿಕ್ಕದಾಗಿದ್ದರೂ ಪ್ರಯೋಜನ ಸಾಕಷ್ಟಿದೆ!

ತಡೆಗಟ್ಟುವುದು ಹೇಗೆ?

ನಿಮ್ಮ ಕಣ್ಣುಗಳ ಶುಚಿತ್ವ ಮತ್ತು ಸುರಕ್ಷತೆಯನ್ನು ಯಾವಾಗಲೂ ಕಾಪಾಡಿಕೊಳ್ಳಿ. ನೇರ ಸೂರ್ಯನ ಬೆಳಕಿನಿಂದ ನಿಮ್ಮ ಕಣ್ಣುಗಳನ್ನು ರಕ್ಷಿಸಿಕೊಳ್ಳಿ. ಧೂಳು ಮತ್ತು ವಾಯು ಮಾಲಿನ್ಯಕ್ಕೆ ದೀರ್ಘಕಾಲದ ವರೆಗೆ ಒಡ್ಡಿಕೊಳ್ಳುವುದನ್ನು ತಪ್ಪಿಸಿ. ನಿಮ್ಮ ಕಣ್ಣುಗಳಲ್ಲಿ ಯಾವುದೇ ರೀತಿಯ ಅಸ್ವಸ್ಥತೆ ಕಂಡು ಬಂದರೆ ಕಣ್ಣಿನ ಪರೀಕ್ಷೆ ಮಾಡಿಸಿ. ನಿಮ್ಮ ಕುಟುಂಬದಲ್ಲಿ ಯಾರಿಗಾದರೂ ಈ ರೀತಿ ಸಮಸ್ಯೆ ಇದ್ದರೆ, ನಿಯಮಿತವಾಗಿ ಕಣ್ಣಿನ ತಪಾಸಣೆ ಮಾಡಿಕೊಳ್ಳಿ. ಭಾರತದಲ್ಲಿ ಕಣ್ಣಿನ ಕ್ಯಾನ್ಸರ್ ಅತ್ಯಂತ ವಿರಳವಾಗಿದ್ದು, 1% ಕ್ಕಿಂತ ಕಡಿಮೆ ಹರಡುವಿಕೆ ಇದೆ. ಆದರೆ ಈ ಬಗ್ಗೆ ಅಲಕ್ಷ್ಯ ಮಾಡುವುದು ಒಳ್ಳೆಯದಲ್ಲ. ಅದರ ಬದಲು ಈ ಬಗ್ಗೆ ತಿಳಿದುಕೊಂಡು ಜಾಗೃತೆ ಮೂಡಿಸುವುದು ಒಳ್ಳೆಯದು.

ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಯಾವುದೇ ರೀತಿಯಲ್ಲಿ ಅರ್ಹ ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞರನ್ನು ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸುವುದನ್ನು ಮರೆಯಬೇಡಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ