Health Tips: ಈ ಹಣ್ಣು, ತರಕಾರಿಗಳ ಸಿಪ್ಪೆಯನ್ನು ಎಂದಿಗೂ ಎಸೆಯಬೇಡಿ

Health Tips in Kannada: ಬಾಳೆಹಣ್ಣಿನ ಸಿಪ್ಪೆಯ ಸೇವನೆಯಿಂದ ಸಿರೊಟೋನಿನ್ ಎಂಬ ಹಾರ್ಮೋನ್ ಬಿಡುಗಡೆಯಾಗುತ್ತದೆ. ಇದನ್ನು ಫೀಲ್-ಗುಡ್ ಹಾರ್ಮೋನ್ ಎಂದೂ ಕರೆಯುತ್ತಾರೆ.

Health Tips: ಈ ಹಣ್ಣು, ತರಕಾರಿಗಳ ಸಿಪ್ಪೆಯನ್ನು ಎಂದಿಗೂ ಎಸೆಯಬೇಡಿ
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಝಾಹಿರ್ ಯೂಸುಫ್

Updated on: Aug 09, 2021 | 5:01 PM

Benefits Of Fruit And vegetable Peels: ಸಾಮಾನ್ಯವಾಗಿ ನಾವು ಹಣ್ಣು ಮತ್ತು ತರಕಾರಿಗಳನ್ನು ಕತ್ತರಿಸಿದಾಗ, ಅದರ ಸಿಪ್ಪೆಯನ್ನು ಕಸದ ಬುಟ್ಟಿಗೆ ಹಾಕ್ತೀವಿ. ಆದರೆ ಈ ಹಣ್ಣುಗಳ ಸಿಪ್ಪೆಯಲ್ಲೂ ಹಲವು ರೀತಿಯ ಪೌಷ್ಟಿಕಾಂಶದ ಗುಣಗಳು ಅಡಗಿರುತ್ತವೆ ಎಂಬುದು ಅನೇಕರಿಗೆ ತಿಳಿದಿಲ್ಲ. ಹೌದು, ಗಾಢ ಬಣ್ಣದ ಸಿಪ್ಪೆಗಳು ನಿಜವಾಗಿಯೂ ಅತ್ಯುತ್ತಮ ಪೌಷ್ಟಿಕಾಂಶ ಗುಣಗಳನ್ನು ಹೊಂದಿರುತ್ತವೆ ಎಂದು ಸಂಶೋಧನೆಯಿಂದ ತಿಳಿದು ಬಂದಿದೆ. ಅವುಗಳಲ್ಲಿ ಕೇಂದ್ರೀಕೃತ ಫೈಟೊಕಾಲ್ಸಿಯಂ ಸಮೃದ್ಧವಾಗಿರುತ್ತವೆ. ಇತ್ತೀಚಿನ ಸಂಶೋಧನೆಯ ಪ್ರಕಾರ ಸಿಟ್ರಸ್ ಹಣ್ಣುಗಳಾದ ಕಿತ್ತಳೆ ಸಿಪ್ಪೆಯಲ್ಲಿ ಸೂಪರ್-ಫ್ಲೇವೊನೈಡ್ಸ್ ಅಂಶಗಳಿರುತ್ತವೆ ಎಂಬುದು ತಿಳಿದು ಬಂದಿದೆ. ಇದು ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ರಕ್ತದ ಹರಿವಿನ ಸಮಯದಲ್ಲಿ ಅಪಧಮನಿಗಳ ಮೇಲೆ ಹೆಚ್ಚಿನ ಒತ್ತಡ ಬೀರುವುದನ್ನು ತಡೆಯುತ್ತದೆ. ಇಷ್ಟೇ ಅಲ್ಲದೆ ಇದು ಹೃದಯವನ್ನು ಸುರಕ್ಷಿತವಾಗಿಡಲು ಸಹಕಾರಿಯಾಗಿದೆ ಎಂದು ಸಂಶೋಧಕರು ತಿಳಿಸಿದ್ದಾರೆ. ಹಾಗಿದ್ರೆ ಯಾವ ಸಿಪ್ಪೆಯಿಂದ ಯಾವ್ಯಾವ ಅನುಕೂಲಗಳನ್ನು ಪಡೆಯಬಹುದು ಎಂಬುದನ್ನು ತಿಳಿಯೋಣ.

1. ಆ್ಯಪಲ್ ಸಿಪ್ಪೆ: ಆಪಲ್ ಸಿಪ್ಪೆಯಲ್ಲಿ ಫೈಬರ್ ಅಂಶ ಸಮೃದ್ಧವಾಗಿದೆ. ಇದು ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ. ಈ ಸಿಪ್ಪೆಯಲ್ಲಿ ಪೆಕ್ಟಿನ್ ಎಂಬ ಫೈಬರ್ ಇದ್ದು, ಇದು ರಕ್ತದಲ್ಲಿನ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಮತ್ತು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದರಲ್ಲಿರುವ ಉತ್ಕರ್ಷಣ ನಿರೋಧಕ ಗುಣಗಳು ಕ್ಯಾನ್ಸರ್ ಕೋಶಗಳನ್ನು ನಿಯಂತ್ರಿಸುತ್ತದೆ.

2- ಆಲೂಗಡ್ಡೆ ಸಿಪ್ಪೆ: ಆಲೂಗಡ್ಡೆ ಸಿಪ್ಪೆಯಲ್ಲಿ ಸತು ಅಂಶ ಸಮೃದ್ಧವಾಗಿರುತ್ತವೆ. ಅಲ್ಲದೆ ಇದರಲ್ಲಿ ಫೈಬರ್, ವಿಟಮಿನ್ ಸಿ, ಕಬ್ಬಿಣ, ಪೊಟ್ಯಾಸಿಯಮ್, B ಜೀವಸತ್ವಗಳು ಕೂಡ ಕಂಡು ಬರುತ್ತವೆ. ಇದು ಉತ್ಕರ್ಷಣ ನಿರೋಧಕ ಗುಣಗಳನ್ನು ಸಹ ಹೊಂದಿದ್ದು, ಹೀಗಾಗಿ ಈ ಸಿಪ್ಪೆ ತೆಗೆಯದೆ ಆಲೂಗಡ್ಡೆ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು. ಏಕೆಂದರೆ ಆಲೂಗಡ್ಡೆ ಸಿಪ್ಪೆಗಳು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಸಹ ಸಹಾಯ ಮಾಡುತ್ತದೆ. ಜೊತೆಗೆ ಚರ್ಮವನ್ನು ಆರೋಗ್ಯಕರವಾಗಿಸುತ್ತದೆ.

3. ಬಾಳೆಹಣ್ಣಿನ ಸಿಪ್ಪೆ: ಬಾಳೆಹಣ್ಣಿನ ಸಿಪ್ಪೆಯ ಸೇವನೆಯಿಂದ ಸಿರೊಟೋನಿನ್ ಎಂಬ ಹಾರ್ಮೋನ್ ಬಿಡುಗಡೆಯಾಗುತ್ತದೆ. ಇದನ್ನು ಫೀಲ್-ಗುಡ್ ಹಾರ್ಮೋನ್ ಎಂದೂ ಕರೆಯುತ್ತಾರೆ. ಇದು ಪ್ರಕ್ಷುಬ್ಧತೆ ಅಥವಾ ದುಃಖದ ಭಾವನೆಯನ್ನು ಕಡಿಮೆ ಮಾಡುತ್ತದೆ ಮತ್ತು ನಿಮ್ಮನ್ನು ಸಂತೋಷವಾಗಿರಿಸುತ್ತದೆ. ಇದರಲ್ಲಿ ಲುಟೀನ್ ಎಂಬ ಉತ್ಕರ್ಷಣ ನಿರೋಧಕವಿದ್ದು, ಇದು ನೇರಳಾತೀತ ಕಿರಣಗಳಿಂದ ಕಣ್ಣಿನ ಕೋಶಗಳನ್ನು ರಕ್ಷಿಸುತ್ತದೆ ಮತ್ತು ಕಣ್ಣಿನ ಪೊರೆಯ ಅಪಾಯವನ್ನು ಕಡಿಮೆ ಮಾಡುತ್ತದೆ. ನೀವು ಬಾಳೆಹಣ್ಣಿನ ಸಿಪ್ಪೆಯನ್ನು ನೀರಿನಲ್ಲಿ ಕುದಿಸಿ ಅಥವಾ ತರಕಾರಿ ರೂಪದಲ್ಲಿ ಬೇಯಿಸಿ ಸೇವಿಸಬಹುದು.

4. ಕುಂಬಳಕಾಯಿ ಸಿಪ್ಪೆ: ಕುಂಬಳಕಾಯಿ ಸಿಪ್ಪೆಯಲ್ಲಿ ಬೀಟಾ ಕ್ಯಾರೋಟಿನ್ ಇರುವುದರಿಂದ ಇದು ಫ್ರೀ ರಾಡಿಕಲ್‌ಗಳಿಂದ ರಕ್ಷಿಸುತ್ತದೆ. ಹಾಗೆಯೇ ಇದರ ಸೇವನೆಯಿಂದ ಕ್ಯಾನ್ಸರ್ ಅನ್ನು ದೂರ ಮಾಡಬಹುದು. ಇದರಲ್ಲಿರುವ ಸತುವು ನಮ್ಮ ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ಹಾಗೆಯೇ ಕುಂಬಳಕಾಯಿ ಸಿಪ್ಪೆಯು ನಮ್ಮ ಚರ್ಮದ ಕೋಶಗಳನ್ನು ಅತಿ ನೇರಳೆ ಕಿರಣಗಳಿಂದ ರಕ್ಷಿಸುತ್ತದೆ.

5. ಕಿತ್ತಲೆ ಅಥವಾ ಮೊಸಂಬಿ ಸಿಪ್ಪೆ: ಕಿತ್ತಳೆ ಮತ್ತು ಮೊಸಂಬಿ ಸಿಪ್ಪೆಯಲ್ಲಿ ಸೂಪರ್-ಫ್ಲೇವನಾಯ್ಡ್‌ಗಳು ಇರುತ್ತವೆ. ಇದು ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ರಕ್ತದ ಹರಿವಿನ ಸಮಯದಲ್ಲಿ ಅಪಧಮನಿಗಳ ಮೇಲೆ ಹೆಚ್ಚಿನ ಒತ್ತಡವನ್ನು ಅನುಮತಿಸುವುದಿಲ್ಲ. ಇದು ಹೃದಯವನ್ನು ಸುರಕ್ಷಿತವಾಗಿಡುವುದಲ್ಲದೆ, ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡುತ್ತದೆ.

ಇದನ್ನೂ ಓದಿ: Airtel: ಏರ್​ಟೆಲ್ ಕಡೆಯಿಂದ ನಿಮಗೆ ಈ ಮೆಸೇಜ್ ಬಂದಿದ್ರೆ ನಿರ್ಲಕ್ಷಿಸಿ

ಇದನ್ನೂ ಓದಿ: Suresh Raina: ರೈನಾ ಜೊತೆ ಸಚಿನ್ ಹೆಂಡ್ತಿಯನ್ನು ವಿಚಾರಿಸಿದ ಏರ್​ ಹೋಸ್ಟೆಸ್: ಆಮೇನಾಯ್ತು?

ಇದನ್ನೂ ಓದಿ: Jasprit Bumrah: ಜಹೀರ್ ಖಾನ್ ದಾಖಲೆ ಸರಿಗಟ್ಟಿದ ಜಸ್​ಪ್ರೀತ್ ಬುಮ್ರಾ

(Don’t throw away peels of fruits and veggies)

ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್