Home Remedies: ಸುಟ್ಟಗಾಯ, ಬಾಯಿಹುಣ್ಣಿಗೆ ಮರೆತೂ ಕೂಡ ಈ ಮನೆಮದ್ದುಗಳನ್ನು ಪ್ರಯತ್ನಿಸಬೇಡಿ

ಅಚಾನಕ್ಕಾಗಿ ಕೈ ಸುಡಬಹುದು ಅಥವಾ ಏನೋ ತಾಗಿ ಗಾಯವಾಗಬಹುದು, ಎಲ್ಲಾ ಸಂದರ್ಭದಲ್ಲೂ ಮನೆಮದ್ದು (Home Remedies) ಉಪಯೋಗಿಸಿದರೆ ಸಮಸ್ಯೆ ಮತ್ತಷ್ಟು ಉಲ್ಬಣಗೊಳ್ಳುವ ಸಾಧ್ಯತೆ ಇರುತ್ತದೆ. ಹಾಗಾಗಿ ಸುಟ್ಟ ಗಾಯಗಳೇ ಇರಲಿ ಅಥವಾ ಸಾಮಾನ್ಯ ಗಾಯಗಳೇ ಆಗಲಿ ಮನೆಮದ್ದು ಮಾಡುವ ಮುನ್ನ ಎಚ್ಚರಿಕೆಯಿಂದಿರಿ.

Home Remedies: ಸುಟ್ಟಗಾಯ, ಬಾಯಿಹುಣ್ಣಿಗೆ ಮರೆತೂ ಕೂಡ ಈ ಮನೆಮದ್ದುಗಳನ್ನು ಪ್ರಯತ್ನಿಸಬೇಡಿ
Mouth Ulcer
Follow us
TV9 Web
| Updated By: ನಯನಾ ರಾಜೀವ್

Updated on: Sep 28, 2022 | 9:45 AM

ಅಚಾನಕ್ಕಾಗಿ ಕೈ ಸುಡಬಹುದು ಅಥವಾ ಏನೋ ತಾಗಿ ಗಾಯವಾಗಬಹುದು, ಎಲ್ಲಾ ಸಂದರ್ಭದಲ್ಲೂ ಮನೆಮದ್ದು (Home Remedies) ಉಪಯೋಗಿಸಿದರೆ ಸಮಸ್ಯೆ ಮತ್ತಷ್ಟು ಉಲ್ಬಣಗೊಳ್ಳುವ ಸಾಧ್ಯತೆ ಇರುತ್ತದೆ. ಹಾಗಾಗಿ ಸುಟ್ಟ ಗಾಯಗಳೇ ಇರಲಿ ಅಥವಾ ಸಾಮಾನ್ಯ ಗಾಯಗಳೇ ಆಗಲಿ ಮನೆಮದ್ದು ಮಾಡುವ ಮುನ್ನ ಎಚ್ಚರಿಕೆಯಿಂದಿರಿ.

ತುರ್ತು ಸಂದರ್ಭದಲ್ಲಿ ಮನೆಯ ಪ್ರಥಮ ಚಿಕಿತ್ಸೆಯು ಜೀವವನ್ನು ಉಳಿಸುತ್ತದೆ. ಮಕ್ಕಳಿಗೆ ಈ ಚಿಕಿತ್ಸಾ ವಿಧಾನಗಳ ಬಗ್ಗೆ ಆರಂಭಿಕ ತರಗತಿಗಳಲ್ಲಿ ಮಾತ್ರ ಹೇಳಲಾಗುತ್ತದೆ. ಆದರೆ ಗಾಯದ ತೀವ್ರತೆ ಏನೆಂಬುದನ್ನು ಅರ್ಥ ಮಾಡಿಕೊಳ್ಳದೆ ಮನೆಮದ್ದುಗಳನ್ನು ಬಳಕೆ ಮಾಡುವುದರಿಂದ ಅನೇಕ ಸಮಸ್ಯೆಗಳು ಎದುರಾಗಲಿವೆ.

ಸುಟ್ಟಗಾಯಕ್ಕೆ ಬೆಣ್ಣೆ ಲೇಪನ ಹಠಾತ್ತನೆ ಸುಟ್ಟಾಗ ಆ ಗಾಯಕ್ಕೆ ಸಾಕಷ್ಟು ಮಂದಿ ಬೆಣ್ಣೆಯನ್ನು ಹಚ್ಚಿಬಿಡುತ್ತಾರೆ, ಹೀಗೆ ಮಾಡುವುದರಿಂದ ಗಾಯ ಗುಣವಾಗುವ ಬದಲು ಹೆಚ್ಚಾಗುತ್ತದೆ. ನೀವು ಆ ಜಾಗಕ್ಕೆ ತಣ್ಣೀರು ಬಳಸಬಹುದು.

ಬಾಯಿ ಹುಣ್ಣಾದರೆ ಏನು ಮಾಡಬೇಕು? ದೇಹದ ಸುಟ್ಟಗಾಯಗಳಿಗೆ ಟೂತ್‌ಪೇಸ್ಟ್ ಅನ್ನು ಬಳಸುತ್ತೇವೆಯೋ ಹಾಗೆಯೇ ಅದೇ ರೀತಿಯಲ್ಲಿ ಅದು ಬಾಯಿಯಲ್ಲಿನ ಹುಣ್ಣಿನ ಮೇಲೂ ಇದು ಪರಿಣಾಮಕಾರಿ ಎಂದು ಸಾಬೀತಾಗಿದ್ದರೂ ಕೂಡರೆ ಬಾಯಿ ಹುಣ್ಣುಗಳಿಗೆ ನಿಮ್ಮ ಟೂತ್‌ಪೇಸ್ಟ್ ಹಚ್ಚುವುದರಿಂದ ಸಮಸ್ಯೆಗಳನ್ನು ಮತ್ತಷ್ಟು ಹೆಚ್ಚಾಗುತ್ತದೆ. ಏಕೆಂದರೆ ಟೂತ್‌ಪೇಸ್ಟ್‌ನಲ್ಲಿರುವ ಮೆಂಥಾಲ್ ಪರಿಹಾರವನ್ನು ನೀಡುವ ಬದಲು ಗಾಯವನ್ನು ಉಲ್ಬಣಗೊಳಿಸುತ್ತದೆ.

ಗಾಯವಾದ ಸಂದರ್ಭದಲ್ಲಿ ಏನು ಮಾಡಬಾರದು? ದೇಹದ ಯಾವುದೇ ಭಾಗದಲ್ಲಿ ಆಂತರಿಕ ಗಾಯದ ಸಂದರ್ಭದಲ್ಲಿ, ಕೆಲವರು ತಕ್ಷಣ ಮಸಾಜ್ ಮಾಡಲು ಪ್ರಾರಂಭಿಸುತ್ತಾರೆ, ಆದರೆ ಹಾಗೆ ಮಾಡುವುದರಿಂದ ಗಾಯವು ಉಲ್ಬಣಗೊಳ್ಳುತ್ತದೆ. ಕೆಲವೊಮ್ಮೆ ಅಂತಹ ಗಾಯದಿಂದ ಮೂಳೆಗಳು ಬಿರುಕು ಬಿಡುತ್ತವೆ ಮತ್ತು ಈ ಮಸಾಜ್ ಸಮಯದಲ್ಲಿ ಮೂಳೆಗಳು ಮುರಿಯಬಹುದು ಮಸಾಜ್ ಮಾಡುವುದರಿಂದ, ಮುರಿದ ಮೂಳೆಯಲ್ಲಿ ಅಂತರ ಹೆಚ್ಚಾಗಬಹುದು. ಹೀಗಾಗಿ ಯಾವುದೇ ಇಂತಹ ಘಟನೆಗಳು ಸಂಭವಿಸಿದಾಗ ಪ್ರಥಮ ಚಿಕಿತ್ಸೆ ನೀಡಿ ಅದರಿಂದ ತಪ್ಪೇನಿಲ್ಲ, ಆದರೆ ಅದರ ಬಗ್ಗೆ ಸ್ವಲ್ಪ ತಿಳಿದಿರಿ, ನೀವೇ ವೈದ್ಯರಾಗಬೇಡಿ.

(ಈ ಮೇಲಿನ ಲೇಖನವು ಟಿವಿ9ನ ಅಧಿಕೃತ ಮಾಹಿತಿಯಾಗಿರುವುದಿಲ್ಲ, ಸಾಮಾನ್ಯ ಮಾಹಿತಿಯನ್ನು ಒಳಗೊಂಡಿರುತ್ತದೆ)

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ