AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

National Doctors Day: ವೈದ್ಯನಾಗಿ, ಮಂಗಳೂರಿನಲ್ಲಿ ನಡೆದ ಈ ದುರಂತವನ್ನು ನಾನು ಎಂದಿಗೂ ಮರೆಯುವುದಿಲ್ಲ: ಡಾ. ಅಣ್ಣಯ್ಯ ಕುಲಾಲ್

ರೋಗಕ್ಕೆ ತುತ್ತಾದ ಪ್ರತಿಯೊಬ್ಬರನ್ನು ಸರಿಯಾದ ಚಿಕಿತ್ಸೆ ನೀಡುವ ಮೂಲಕ ಗುಣಪಡಿಸಿ, ಅವರಿಗೆ ಪುನರ್ಜನ್ಮ ನೀಡುವುದು ವೈದ್ಯರ ಕಾಯಕವಾದರೆ, ಅವರಿಗೆ ಗೌರವ ಸಲ್ಲಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಹಾಗಾಗಿ ವೈದ್ಯರಿಗೆ ವಿಶೇಷ ಗೌರವ ಸಲ್ಲಿಸುವ ನಿಟ್ಟಿನಲ್ಲಿ ಪ್ರತಿ ವರ್ಷ ಜುಲೈ 1 ರಂದು ರಾಷ್ಟ್ರೀಯ ವೈದ್ಯರ ದಿನವನ್ನು ಆಚರಿಸಲಾಗುತ್ತದೆ. ಈ ವಿಶೇಷ ದಿನದಂದು ಮಂಗಳೂರು ಸರಕಾರಿ ಜಿಲ್ಲಾ ವೆನ್ಲಾಕ್ ಆಸ್ಪತ್ರೆಯ ಹಿರಿಯ ವೈದ್ಯ ಡಾ. ಎಂ ಅಣ್ಣಯ್ಯ ಕುಲಾಲ್ ಉಳ್ತೂರು ಅವರು ತಮ್ಮ ವೃತ್ತಿ ಜೀವನದಲ್ಲಿ ಮರೆಯಲಾಗದ ಕೆಲವು ಘಟನೆಗಳನ್ನು ಟಿವಿ9 ಜೊತೆ ಹಂಚಿಕೊಂಡಿದ್ದಾರೆ.

National Doctors Day: ವೈದ್ಯನಾಗಿ, ಮಂಗಳೂರಿನಲ್ಲಿ ನಡೆದ ಈ ದುರಂತವನ್ನು ನಾನು ಎಂದಿಗೂ ಮರೆಯುವುದಿಲ್ಲ: ಡಾ. ಅಣ್ಣಯ್ಯ ಕುಲಾಲ್
ಡಾ. ಅಣ್ಣಯ್ಯ ಕುಲಾಲ್
ಪ್ರೀತಿ ಭಟ್​, ಗುಣವಂತೆ
| Edited By: |

Updated on:Jul 01, 2024 | 9:56 AM

Share

ಆರೋಗ್ಯವೇ ಭಾಗ್ಯ ಎಂಬುದು ಸರ್ವಕಾಲಿಕ ಮಾತು. ಹಾಗಾಗಿಯೇ ಆರೋಗ್ಯ ಕಾಪಾಡುವ ವೈದ್ಯರನ್ನು ದೇವರಿಗೆ ಹೊಲಿಸಲಾಗುತ್ತದೆ. ರೋಗಕ್ಕೆ ತುತ್ತಾದ ಪ್ರತಿಯೊಬ್ಬರನ್ನು ಸರಿಯಾದ ಚಿಕಿತ್ಸೆ ನೀಡುವ ಮೂಲಕ ಗುಣಪಡಿಸಿ, ಅವರಿಗೆ ಪುನರ್ಜನ್ಮ ನೀಡುವುದು ವೈದ್ಯರ ಕಾಯಕವಾದರೆ, ಅವರಿಗೆ ಗೌರವ ಸಲ್ಲಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಹಾಗಾಗಿ ವೈದ್ಯರಿಗೆ ವಿಶೇಷ ಗೌರವ ಸಲ್ಲಿಸುವ ನಿಟ್ಟಿನಲ್ಲಿ ಪ್ರತಿ ವರ್ಷ ಜುಲೈ 1 ರಂದು ರಾಷ್ಟ್ರೀಯ ವೈದ್ಯರ ದಿನವನ್ನು ಆಚರಿಸಲಾಗುತ್ತದೆ. ಈ ವಿಶೇಷ ದಿನದಂದು ಮಂಗಳೂರು ಸರಕಾರಿ ಜಿಲ್ಲಾ ವೆನ್ಲಾಕ್ ಆಸ್ಪತ್ರೆಯ ಪ್ರಸಿದ್ಧ, ಹಿರಿಯ ವೈದ್ಯ ಡಾ. ಎಂ ಅಣ್ಣಯ್ಯ ಕುಲಾಲ್ ಉಳ್ತೂರು ಅವರು ತಮ್ಮ ವೃತ್ತಿ ಜೀವನದಲ್ಲಿ ಮರೆಯಲಾಗದ ಕೆಲವು ಘಟನೆಗಳನ್ನು ಟಿವಿ9 ಜೊತೆ ಹಂಚಿಕೊಂಡಿದ್ದಾರೆ.

ಕಣ್ಣೆದುರಲ್ಲಿಯೇ 158 ಮಂದಿ ಸುಟ್ಟು ಕರಕಲಾಗಿದ್ದರು

“2010 ರ ಮೇ 22 ರ ಬೆಳ್ಳಂಬೆಳಿಗ್ಗೆ ನನ್ನ ಆತ್ಮೀಯರಿಂದ ಮಂಗಳೂರು ವಿಮಾನ ನಿಲ್ದಾಣದಲ್ಲಿ, ದುಬೈಯಿಂದ ಬಂದ ವಿಮಾನಕ್ಕೆ ಬೆಂಕಿ ಬಿದ್ದಿದೆ ಎಂಬ ಸುದ್ದಿ ತಿಳಿಯಿತು. ನಮ್ಮ ತಂಡ ತುರ್ತಾಗಿ ವಿಮಾನ ನಿಲ್ದಾಣಕ್ಕೆ ತೆರಳಿ ರಕ್ಷಣೆ (rescue) ಕಾರ್ಯದಲ್ಲಿ ಸಹಕರಿಸಬೇಕಾಗಿತ್ತು. ನಾವು ಹೋಗುತ್ತಿದ್ದ ಆಂಬುಲೆನ್ಸ್ ವಾಹನ ದಟ್ಟಣೆಯಿಂದ ಮಧ್ಯೆದಲ್ಲಿ ಸಿಕ್ಕಿ ಬಿದ್ದಿತ್ತು. ಆ ಸಮಯದಲ್ಲಿ ನಮ್ಮ ತಂಡಕ್ಕೆ ಆಗಿನ ಗೃಹಸಚಿವರಾಗಿದ್ದ ವಿ.ಎಸ್​​ ಆಚಾರ್ಯ ಅವರಿಂದ ಫೋನ್ ಬಂತು. ತಕ್ಷಣ ಅಲ್ಲಿಂದ ನಮ್ಮ ತಂಡ (ಭಾರತೀಯ ವೈದ್ಯಕೀಯ ಸಂಘ ಮಂಗಳೂರು) ವೆನ್ಲೋಕ್ ಶವಗಾರಕ್ಕೆ ಹೋಗಬೇಕು ಎಂದು ಹೇಳಿದರು. ಬಳಿಕ ಅಲ್ಲಿಗೆ ತೆರಳಿ ಸತ್ತವರ ಸಂಬಂಧಿಕರನ್ನ ಸಂತೈಸಿ ಅವರ ಶವ ಗುರುತಿಸಲು, ಅವರ ಲಗ್ಗೆಜ್, ಚಿನ್ನಾಭರಣಗಳನ್ನು ಸುರಕ್ಷಿತವಾಗಿಸಲು, ದುಃಖ ತೃಪ್ತರನ್ನು ಸಂತೈಸುವ ಕೆಲಸ ಮಾಡಿದೆವು. ಆ ಕೆಲಸ ಬೆಳಿಗ್ಗೆಯಿಂದ ತಡ ರಾತ್ರಿಯವರೆಗೂ ನಡೆದಿತ್ತು. ಮಾರನೇ ದಿನದ ವರೆಗೆ 166 ಮಂದಿಯಲ್ಲಿ ಬದುಕಿ ಉಳಿದ 8 ಮಂದಿಯನ್ನು ಬಿಟ್ಟರೆ ಉಳಿದ 158 ಮಂದಿ ಸುಟ್ಟು ಕರಕಲಾಗಿದ್ದರು. ಆ ಪರಿಸ್ಥಿತಿಯನ್ನು ನಾನು ಇಂದಿಗೂ ಮರೆಯಲು ಸಾಧ್ಯವಿಲ್ಲ. ಕುಟುಂಬದ ಗೋಳಾಟ, ತನ್ನವರನ್ನು ಕಳೆದುಕೊಂಡ ದುಃಖ, ತಮ್ಮವರನ್ನು ಹುಡುಕುವಾಗ ಅವರ ಆತಂಕ ಯಾವುದನ್ನೂ ಮರೆಯಲು ಸಾಧ್ಯವಿಲ್ಲ. ವೈದ್ಯ ವೃತ್ತಿಯಲ್ಲಿ ನನಗೆ ಮರೆಯಲಾಗದ ಘಟನೆಗಳಲ್ಲಿ ಇದು ಒಂದಾಗಿದೆ.

ಇದನ್ನೂ ಓದಿ: ಜುಲೈ 1ರಂದು ರಾಷ್ಟ್ರೀಯ ವೈದ್ಯರ ದಿನ! ಈ ದಿನದ ಇತಿಹಾಸ, ಮಹತ್ವದ ಮಾಹಿತಿ ಇಲ್ಲಿದೆ

ಆ ಆಕ್ರಂದನ ತುಂಬಾ ಸಂಕಟ ನೀಡುತ್ತವೆ

ಈ ಘಟನೆ ನಡೆದು ಹತ್ತು ವರ್ಷದ ಬಳಿಕ ಕೋವಿಡ್ ಬಂದಾಗ ವೆನ್ಲೋಕ್ ಆಸ್ಪತ್ರೆಯ ಐಸಿಯು (icu) ನಲ್ಲಿ ಗಂಭೀರ ರೋಗಿಗಳ ಸಂಬಂಧಿಕರನ್ನ ಸಂತೈಸುವ, ಶವಗಳನ್ನ ವಿಲೇವಾರಿ ಮಾಡುವ, ಉದ್ರಿಕ್ತ ಗುಂಪನ್ನ ನಿಭಾಯಿಸುವ ಜವಾಬ್ದಾರಿ ನನ್ನ ಮೇಲಿತ್ತು. ನನ್ನ ಕಣ್ಣ ಮುಂದೆ ಆ ರೋಗಿಗಳನ್ನು ಪರೀಕ್ಷಿಸುವಾಗ, ರೋಗಿಗಳ ಕುಟುಂಬದ ಆಕ್ರಂದನ ನೋಡುವಾಗ ತುಂಬಾ ಸಂಕಟವಾಗುತ್ತಿತ್ತು. ಈಗಲೂ ನನಗೆ ಆ ನೆನಪು ಕಾಡುತ್ತದೆ. ಈ ಎರಡು ಘಟನೆಗಳು ನನ್ನ ಜೀವಮಾನದಲ್ಲಿ ಮರೆಯಲಾಗದ ಘಟನೆಗಳು. ಸತ್ತವರ ಮನೆಯಲ್ಲಿ ಇಂದಿಗೂ ಸಾವಿನ ನೋವು ಇರುತ್ತೆ. ಅಂದು ಸತ್ತವರ ಆತ್ಮಕ್ಕೆ ಶಾಂತಿ ಕೋರಿದ್ದೇವೆ. ಆದರೆ ಆ ಹೆಣ, ರೋಧಿಸುವ ಮನೆ ಮಂದಿಯ ಚಿತ್ರಣ ಇಂದಿಗೂ ಕಾಡುತ್ತಲೇ ಇದೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:24 am, Mon, 1 July 24