ಒಂದೆಡೆ ಚಳಿಗಾಲ ಮತ್ತೊಂದೆಡೆ ಮಳೆ, ತಂಪು ವಾತಾವರಣದಿಂದಾಗಿ ಮಕ್ಕಳು ಬಹುಬೇಗ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದು, ಪೋಷಕರಿಗೆ ಆತಂಕ ಶುರುವಾಗಿದೆ. ಶಾಲೆಗಳಲ್ಲಿ ಒಂದು ಮಗುವಿನಿಂದ ಒಂದು ಮಗುವಿಗೆ ಬಹುಬೇಕ ಸೋಂಕು ತಗುಲುತ್ತಿದೆ. ಚಳಿಗಾಲದ ಆರಂಭದಲ್ಲೇ ಆರೋಗ್ಯದ ಸಮಸ್ಯೆ ಅದರಲ್ಲೂ ಮಕ್ಕಳಲ್ಲಿ ಹೆಚ್ಚು ಕಂಡುಬರುತ್ತಿದೆ. ಪ್ರತಿ ದಿನ ಮಕ್ಕಳಲ್ಲಿ ಜ್ವರ, ಕೆಮ್ಮು, ಉಸಿರಾಟ ನೆಗಡಿಯಂಥದ ಸಮಸ್ಯೆಗಳು ಹೆಚ್ಚಾಗುತ್ತಿದೆ. ಮಳೆಗಾಲದ ಬಳಿಕ ಚಳಿಗಾಲದಲ್ಲೇ ಹೆಚ್ಚು ಮಕ್ಕಳಿಗೆ ಆರೋಗ್ಯದ ಸಮಸ್ಯೆ ಕಾಡುತ್ತಿದೆ, ಬೆಂಗಳೂರಿನ ಮಕ್ಕಳ ಆಸ್ಪತ್ರೆಯಲ್ಲಿ ಓಪಿಡಿಯಲ್ಲಿ ಮಕ್ಕಳು ಬರುವ ಸಂಖ್ಯೆ ತೀವ್ರವಾಗುತ್ತಿದೆ.
ಚಳಿಗಾಲದಲ್ಲಿ ಹೆಚ್ಚಾಗುತ್ತಿದೆ ಮಕ್ಕಳಲ್ಲಿ ವೈರಲ್ ಫೀವರ್ ಹೆಚ್ಚಾಗುತ್ತಿದೆ, ಕೇವಲ ಮಳೆಗಾಲ ಮಾತ್ರವಲ್ಲ ಚಳಿಗಾಲಕ್ಕೂ ಮಕ್ಕಳನ್ನು ಸುರಕ್ಷಿತವಾಗಿಡುವುದು ಪೋಷಕರು ಜವಾಬ್ದಾರಿಯಾಗಿದೆ.
ರೈನ್ ಬೋ ಚಿಲ್ಡ್ರನ್ ಆಸ್ಪತ್ರೆ, ದಾಖಲಾಗುತ್ತಿರುವ ಮಕ್ಕಳ ಸಂಖ್ಯೆ ದಿನಕ್ಕೆ ಶೇ.10-20% ರಷ್ಟು ಹೆಚ್ಚಳವಾಗುತ್ತಿದೆ. ಕೆ.ಸಿ.ಜನರಲ್ ಆಸ್ಪತ್ರೆ – ದಿನಕ್ಕೆ ಶೇ. 5-10% ಮಕ್ಕಳ ಸಂಖ್ಯೆ ಹೆಚ್ಚಳ., ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆ – ದಿನಕ್ಕೆ ಶೇ. 10-15% ಮಕ್ಕಳ ಸಂಖ್ಯೆ ಹೆಚ್ಚಳ , ಬೌರಿಂಗ್ ಆಸ್ಪತ್ರೆ – ದಿನಕ್ಕೆ ಶೇ. 5-10% ಮಕ್ಕಳ ಸಂಖ್ಯೆ ಹೆಚ್ಚಳವಾಗಿದೆ.
ಕಳೆದ ಒಂದು ವಾರದಿಂದ ಚಳಿಗಾಲದ ತೀವ್ರತೆ ಹೆಚ್ಚಾಗಿದ್ದರಿಂದ ಇನ್‌ಫ್ಲ್ಯುಯೆಂಜಾ ಎಂಬ ವೈರಾಣುವಿನಿಂದ ಹರಡುವ ಜ್ವರ ಹಾಗೂ ವೈರಲ್ ಸೋಂಕು ಹೆಚ್ಚಾಗುತ್ತಿದೆ. ಅದರಲ್ಲೂ 12 ತಿಂಗಳೊಳಗಿನ ಮಕ್ಕಳಲ್ಲಿ ಹಾಗೂ 65 ವರ್ಷಕ್ಕಿಂತ ಹೆಚ್ಚು ವಯಸ್ಸಿನವರನ್ನು ಇದು ಹೆಚ್ಚಾಗಿ ಕಾಡುತ್ತಿವೆ. ಇದರಿಂದ ಉಸಿರಾಟಕ್ಕೂ ತೊಂದರೆ ಶುರುವಾಗುತ್ತದೆ.
ಚಳಿಗಾಲದಲ್ಲಿ ಕೊಬ್ಬರಿ ಎಣ್ಣೆ ಗಟ್ಟಿಯಾಗುವುದನ್ನು ಗಮನಿಸಿದ್ದೇವೆ. ಅದೇ ರೀತಿ ತೀವ್ರ ಚಳಿಯಿಂದ ತಾಪಮಾನ ಕಡಿಮೆಯಾಗಿ ಅಪಧಮನಿಗಳು ಪೆಡಸಾಗುತ್ತವೆ. ಇದರಿಂದ ರಕ್ತದೊತ್ತಡ ಹಾಗೂ ಪ್ರೋಟೀನ್‌ಗಳ ಪ್ರಮಾಣ ಹೆಚ್ಚಳ ಆಗುತ್ತದೆ. ಇವೆಲ್ಲ ಕ್ರೋಡೀಕರಣಗೊಂಡು ರಕ್ತ ಹೆಪ್ಪುಗಟ್ಟುವ ಸಾಧ್ಯತೆ ಹೆಚ್ಚು. ಇದರಿಂದ ಹೆಚ್ಚಿನ ಹೃದಯಾಘಾತಗಳು ಚಳಿಗಾಲದ ನಸುಕಿನಲ್ಲೇ ಸಂಭವಿಸುತ್ತವೆ ಎನ್ನುತ್ತಾರೆ ವೈದ್ಯರು.
ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ