AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

African Swine Fever: ಆಫ್ರಿಕನ್ ಹಂದಿ ಜ್ವರದಿಂದ ಮಧ್ಯಪ್ರದೇಶದಲ್ಲಿ 85 ಹಂದಿಗಳು ಸಾವು, 115ಕ್ಕೆ ಸೋಂಕು

African Swine Flu: ಮಧ್ಯಪ್ರದೇಶದ ಕಟ್ನಿ ಜಿಲ್ಲೆಯಲ್ಲಿ ಆಫ್ರಿಕನ್ ಹಂದಿ ಜ್ವರದಿಂದ ಇದುವರೆಗೆ 85 ಹಂದಿಗಳು ಸಾವನ್ನಪ್ಪಿದ್ದು, 115 ಹಂದಿಗಳಿಗೆ ಸೋಂಕು ತಗುಲಿದೆ. ಈ ಪ್ರದೇಶದಲ್ಲಿ ಸೋಂಕಿತ ಹಂದಿಗಳನ್ನು ಗುರುತಿಸಲು ಸಮೀಕ್ಷೆ ನಡೆಯುತ್ತಿದೆ.

African Swine Fever: ಆಫ್ರಿಕನ್ ಹಂದಿ ಜ್ವರದಿಂದ ಮಧ್ಯಪ್ರದೇಶದಲ್ಲಿ 85 ಹಂದಿಗಳು ಸಾವು, 115ಕ್ಕೆ ಸೋಂಕು
ಹಂದಿಗಳು
TV9 Web
| Edited By: |

Updated on: Nov 08, 2022 | 12:47 PM

Share

ಕಟ್ನಿ: ಮಧ್ಯಪ್ರದೇಶದ ಕಟ್ನಿ ಜಿಲ್ಲೆಯಲ್ಲಿ ಕಾಣಿಸಿಕೊಂಡಿರುವ ಆಫ್ರಿಕನ್ ಹಂದಿ ಜ್ವರದಿಂದ (African Swine Flu) ಇದುವರೆಗೆ 85 ಹಂದಿಗಳು ಸಾವನ್ನಪ್ಪಿದ್ದು, 115 ಹಂದಿಗಳು ಸೋಂಕಿಗೆ ತುತ್ತಾಗಿವೆ. ಈ ಪ್ರದೇಶದಲ್ಲಿ ಸಮೀಕ್ಷೆ ನಡೆಸಿ, ಸೋಂಕಿತ ಹಂದಿಗಳನ್ನು ಕೊಲ್ಲಲು ಆಡಳಿತ ಮಂಡಳಿ ಸಿದ್ಧತೆ ನಡೆಸಿದೆ. ಸೋಂಕಿತ ಹಂದಿಗಳ ಹತ್ಯೆಗೆ ಪರಿಹಾರ ಮೊತ್ತವನ್ನೂ ನೀಡಲಾಗುವುದು.

ಈ ಬಗ್ಗೆ ಮಾಹಿತಿ ನೀಡಿರುವ ಪಶುವೈದ್ಯಕೀಯ ಇಲಾಖೆಯ ಉಪ ನಿರ್ದೇಶಕ ಆರ್.ಕೆ. ಸಿಂಗ್, ಆಫ್ರಿಕನ್ ಹಂದಿ ಜ್ವರದಿಂದ ಇದುವರೆಗೆ 85 ಹಂದಿಗಳು ಸಾವನ್ನಪ್ಪಿದ್ದು, 115 ಹಂದಿಗಳಿಗೆ ಸೋಂಕು ತಗುಲಿದೆ. ಈ ಪ್ರದೇಶದಲ್ಲಿ ಸೋಂಕಿತ ಹಂದಿಗಳನ್ನು ಗುರುತಿಸಲು ಸಮೀಕ್ಷೆ ಕಾರ್ಯ ನಡೆಯುತ್ತಿದೆ. ಸೋಂಕನ್ನು ತಡೆಗಟ್ಟಲು 2 ವಲಯಗಳನ್ನು ರಚಿಸಲಾಗಿದೆ. ಅವುಗಳಲ್ಲಿ ಒಂದು ‘ಸೋಂಕಿತ ವಲಯ’ವಾಗಿದ್ದು, ಇನ್ನೊಂದು ‘ಕಣ್ಗಾವಲು ವಲಯ’ವಾಗಿದೆ ಎಂದಿದ್ದಾರೆ.

ಇದನ್ನೂ ಓದಿ: Big News: ಜಾರ್ಖಂಡ್​​ನ ರಾಂಚಿಯಲ್ಲಿ ಆಫ್ರಿಕನ್ ಹಂದಿಜ್ವರದಿಂದ 800 ಹಂದಿಗಳು ಸಾವು; ರೇವಾದಲ್ಲಿ 2000 ಹಂದಿಗಳು ಬಲಿ

ಈಗಾಗಲೇ ಪಶು ವೈದ್ಯಕೀಯ ಇಲಾಖೆಯ ತಂಡಗಳು ಈ ಪ್ರದೇಶದಲ್ಲಿ ಸಮೀಕ್ಷೆ ಕಾರ್ಯದಲ್ಲಿ ತೊಡಗಿವೆ. ಮುಂದಿನ 2 ದಿನಗಳಲ್ಲಿ ಸಮೀಕ್ಷೆ ಪೂರ್ಣಗೊಳ್ಳುವ ಸಾಧ್ಯತೆ ಇದೆ. ಅದರ ನಂತರ ನಾವು ಸೋಂಕಿತ ವಲಯಗಳಲ್ಲಿ ಹಂದಿಗಳನ್ನು ಕೊಲ್ಲುತ್ತೇವೆ. ಹಂದಿಗಳ ಮಾಲೀಕರಿಗೂ ಪರಿಹಾರ ಧನ ನೀಡಲಾಗುವುದು’’ ಎಂದು ತಿಳಿಸಿದ್ದಾರೆ.

ಕೇಂದ್ರ ಸರ್ಕಾರದಿಂದ ಈಗಾಗಲೇ ಪರಿಹಾರ ಮೊತ್ತ ಬಂದಿದ್ದು, ಹಂದಿಗಳ ತೂಕಕ್ಕೆ ಅನುಗುಣವಾಗಿ ಪರಿಹಾರದ ಹಣವನ್ನು ವಿತರಿಸಲಾಗುವುದು. ಈ ಮೊತ್ತವು ಕನಿಷ್ಠ 2,200 ರೂ. ಮತ್ತು ಗರಿಷ್ಠ 15,000 ರೂ. ಇರುತ್ತದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ