ಶ್ವಾಸಕೋಶದ ಕ್ಯಾನ್ಸರನ್ನು ಆರಂಭದಲ್ಲೇ ಪತ್ತೆ ಮಾಡುವುದು ಹೇಗೆ? ಇಲ್ಲಿದೆ ಮಾಹಿತಿ
ಇದೀಗ ಚೀನಾದ ಪೀಕಿಂಗ್ ಯುನಿವರ್ಸಿಟಿ ಪೀಪಲ್ಸ್ ಹಾಸ್ಪಿಟಲ್ನ ವಿಜ್ಞಾನಿಗಳು ಆರಂಭಿಕ ಹಂತದಲ್ಲಿಯೇ ಶ್ವಾಸಕೋಶದ ಕ್ಯಾನ್ಸರ್ ಅನ್ನು ಪತ್ತೆ ಮಾಡುವ ವಿಧಾನವನ್ನು ಕಂಡುಹಿಡಿದಿದ್ದಾರೆ ಎಂದು ಮೆಡಿಕಲ್ ನ್ಯೂಸ್ ಟುಡೆ ವರದಿ ಮಾಡಿದೆ.
ಇತ್ತೀಚಿನ ದಿನಗಳಲ್ಲಿ ಕ್ಯಾನ್ಸರ್(Cancer) ಅತಿ ಹೆಚ್ಚು ಕಾಡುತ್ತಿರುವ ಕಾಯಿಲೆಯಾಗಿದೆ. ಯುವ ಜನತೆಯಿಂದ ಹಿಡಿದು, ಎಲ್ಲಾ ವಯಸ್ಸಿನವರಲ್ಲಿಯೂ ಅತಿ ಸಂಖ್ಯೆಯಲ್ಲಿ ಕ್ಯಾನ್ಸರ್ ರೋಗಿಗಳು ಪತ್ತೆಯಾಗುತ್ತಿದ್ದಾರೆ. ಅದೇ ರೀತಿ ಸಾವಿನ ಸಂಖ್ಯೆ ಏರಿಕೆಯಾಗುತ್ತಿದೆ. ಇದಕ್ಕೆ ಕಾರಣ ಸರಿಯಾದ ಅರಿವು ಮತ್ತು ರೋಗವನ್ನು ಪತ್ತೆ ಮಾಡಲು ಆಗದೇ ಇರುವುದು. ಯಾವುದೇ ಕ್ಯಾನ್ಸರ್ ಇರಲಿ ಅದು ಆರಂಭದಲ್ಲಿ ಯಾವುದೇ ರೀತಿಯ ಲಕ್ಷಣಗಳು ಕಂಡುಬರುವುದಿಲ್ಲ. ಸಣ್ಣ ಪುಟ್ಟ ಅನಾರೋಗ್ಯ ಸಮಸ್ಯೆ ಕಂಡುಬರುತ್ತವೆ. ಇಲ್ಲವಾದರೆ ಕ್ಯಾನ್ಸರ್ ರೋಗದ ಲಕ್ಷಣ ಎಂದು ಕಂಡುಬರುವುದಿಲ್ಲ. ಅಂತಹ ಕ್ಯಾನ್ಸರ್ ಗಳಲ್ಲಿ ಒಂದು ಶ್ವಾಸಕೋಶದ ಕ್ಯಾನ್ಸರ್ (Lung Cancer). ಆರಂಭದಲ್ಲಿ ಯಾವುದೇ ಲಕ್ಷಣಗಳನ್ನು ತೋರಿಸದೆ ಅಪಾಯವನ್ನು ತಂದೊಡ್ಡುವ ಕಾಯಿಲೆಯಾಗಿದೆ. ಕ್ಯಾನ್ಸರ್ ಪತ್ತೆ ಮಾಡಲು ಸಿಟಿ ಸ್ಕ್ಯಾನ್ (CT Scan)ಗಳನ್ನು ಮಾಡಲಾಗುತ್ತದೆ. ಆದರೆ ಕಡಿಮೆ ಡೋಸ್ನ ಸ್ಕ್ಯಾನ್ಗಳಿಂದ ಸರಿಯಾದ ರಿಪೋರ್ಟ್ ಬರಲು ಸಾಧ್ಯವಿಲ್ಲ ಎನ್ನುತ್ತಾರೆ ತಜ್ಞರು.
ಇದೀಗ ಚೀನಾದ ಪೀಕಿಂಗ್ ಯುನಿವರ್ಸಿಟಿ ಪೀಪಲ್ಸ್ ಹಾಸ್ಪಿಟಲ್ನ ವಿಜ್ಞಾನಿಗಳು ಆರಂಭಿಕ ಹಂತದಲ್ಲಿಯೇ ಶ್ವಾಸಕೋಶದ ಕ್ಯಾನ್ಸರ್ ಅನ್ನು ಪತ್ತೆ ಮಾಡುವ ವಿಧಾನವನ್ನು ಕಂಡುಹಿಡಿದಿದ್ದಾರೆ ಎಂದು ಮೆಡಿಕಲ್ ನ್ಯೂಸ್ ಟುಡೆ ವರದಿ ಮಾಡಿದೆ. ಈ ವಿಧಾನವು ದೇಹದಲ್ಲಿನ ರಕ್ತದಲ್ಲಿ ಇರುವ ಲಿಪಿಡ್ ಅಂಶಗಳನ್ನು ಗುರುತಿಸಿ ಕ್ಯಾನ್ಸರ್ ಇರುವ ಬಗ್ಗೆ ಸ್ಪಷ್ಟ ವರದಿ ನೀಡಲಿದೆ ಎಂದು ಹೇಳಲಾಗಿದೆ. ಈ ವಿಧಾನವನ್ನು ಲಂಗ್ ಕ್ಯಾನ್ಸರ್ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಡಿಟೆಕ್ಟರ್ ( Lung Cancer Artificial Intelligence Detector) ಎಂದು ಕರೆಯುತ್ತಾರೆ. ಇದರಿಂದ ಸುಲಭವಾಗಿ ಶ್ವಾಸಕೋಶದ ಕ್ಯಾನ್ಸರ್ ಅನ್ನು ಪತ್ತೆ ಮಾಡಬಹುದಾಗಿದೆ, ಇದರ ಜತೆಗೆ ಹಲವು ರೀತಿಯ ರಕ್ತ ಪರೀಕ್ಷೆಗಳು ಕ್ಯಾನ್ಸರ್ ಅನ್ನು ಪತ್ತೆ ಮಾಡುತ್ತವೆ.
ಪರೀಕ್ಷೆಗಳ ಜತೆಗೆ ಈ ಲಕ್ಷಣಗಳು ಶ್ವಾಸಕೋಶದ ಕ್ಯಾನ್ಸರ್ ಬಗ್ಗೆ ತಿಳಿಸುತ್ತದೆ:
ಸದಾ ಕಾಲ ಕೆಮ್ಮು ಕೆಮ್ಮಿನೊಂದಿಗೆ ರಕ್ತ ಕಾಣಿಸಿಕೊಳ್ಳುವುದು ದೇಹ ಮತ್ತು ಹೃದಯ ಭಾಗದಲ್ಲಿ ಭಾರವಾಗುವ ಅನುಭವ ಆಗಾಗ ಎದೆನೋವು ತಲೆನೋವು ಮೂಳೆಗಳಲ್ಲಿ ನೋವು ಕಾಣಿಸಿಕೊಳ್ಳುವುದು ದೇಹದ ತೂಕ ಇಳಿಕೆ. ಇವುಗಳು ಶ್ವಾಸಕೋಶ ಕ್ಯಾನ್ಸರ್ನ ಮುಖ್ಯವಾದ ಲಕ್ಷಣವಾಗಿದೆ.
ಯಾವೆಲ್ಲಾ ವಿಧಾನದಿಂದ ಕ್ಯಾನ್ಸರ್ ರೋಗವನ್ನು ಪತ್ತೆ ಮಾಡಬಹುದು? ಇಲ್ಲಿದೆ ಮಾಹಿತಿ
- ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಡಿಟೆಕ್ಟರ್ ಮೂಲಕ ಶ್ವಾಸಕೋಶದ ಕ್ಯಾನ್ಸರ್ ಅನ್ನು ಪತ್ತೆ ಮಾಡಬಹುದು. ಇದು ಶ್ವಾಸಕೋಶದಲ್ಲಿನ ಪ್ಲಾಸ್ಮಾದ ಬಯೋಮಾರ್ಕ್ಗಳನ್ನು ಗುರುತಿಸುತ್ತದೆ.
- ಶ್ವಾಸಕೋಶದ ಕ್ಯಾನ್ಸರ್ ಕಾಯಿಲೆ ತಗುಲಿದರೆ ಶ್ವಾಸಕೋಶದಲ್ಲಿ ಗಡ್ಡೆಗಳು ಬೆಳೆಯಲು ಆರಂಭವಾಗುತ್ತದೆ, ಇದರಿಂದ ನೋವು ಕಾಣಿಸಿಕೊಳ್ಳುತ್ತದೆ.
-
ಶ್ವಾಸಕೋಶದ ಕ್ಯಾನ್ಸರ್ ಉಂಟಾದಾಗ ಜೀನ್ನಲ್ಲಿ ಬದಲಾವಣೆ ಉಂಟಾಗುತ್ತದೆ. ಇದು ಲಿಪಿಡ್ ಚಯಾಪಯ ಕ್ರಿಯೆಯ ಮೇಲೂ ವ್ಯತಿರಿಕ್ತ ಪರಿಣಾಮ ಬೀರುತ್ತದೆ.
-
ಶ್ವಾಸಕೋಶದ ಕ್ಯಾನ್ಸರ್ ಹೊಂದಿರುವ ವ್ಯಕ್ತಿಗಳಲ್ಲಿ ಹಾಗೂ ಆರೋಗ್ಯವಂತ ವ್ಯಕ್ತಿಯ ದೇಹದಲ್ಲಿ ಕಂಡುಬರುವ ಲಿಪಿಡ್ ಅಂಶಗಳಲ್ಲಿ ದೊಡ್ಡ ಪ್ರಮಾಣದಲ್ಲಿ ವ್ಯತ್ಯಾಸ ಕಂಡುಬರುತ್ತದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.
-
ಒಟ್ಟು 311 ಮಂದಿಯನ್ನು ಅಧ್ಯಯನದಲ್ಲಿ ಬಳಸಿಕೊಂಡ ವಿಜ್ಞಾನಿಗಳು ಪ್ಲಾಸ್ಮಾ ಮೂಲಕ ಶ್ವಾಸಕೋಶದ ಕ್ಯಾನ್ಸರ್ಅನ್ನು ಪತ್ತೆ ಮಾಡಬಹುದು ಎಂದು ಕಂಡುಕೊಂಡಿದ್ದಾರೆ.
-
ಒಟ್ಟು 9 ಲಿಪಿಡ್ಗಳ ಕೂಡ ಶ್ವಾಸಕೋಶದ ಕ್ಯಾನ್ಸರ್ನ ಆರಂಭಿಕ ಹಂತವನ್ನು ಪತ್ತೆ ಮಾಡಬಹುದು ಎಂದು ಹೇಳಲಾಗಿದೆ.
ಇದನ್ನೂಓದಿ:
Headache: ಆಗಾಗ ತಲೆನೋವು ಬರುತ್ತಾ? ತಲೆನೋವಿನಿಂದ ಸುಲಭವಾಗಿ ಮುಕ್ತಿ ಹೊಂದಲು ಹೀಗೆ ಮಾಡಿ
Published On - 10:31 am, Fri, 18 February 22