AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಡಯಟ್, ವ್ಯಾಯಾಮ ಯಾವುದೂ ಇಲ್ಲದೇ ಹೊಟ್ಟೆಯ ಬೊಜ್ಜನ್ನು ಕರಗಿಸುವುದು ಹೇಗೆ?; ಇಲ್ಲಿವೆ ಸರಳ ಉಪಾಯಗಳು

ವ್ಯಾಯಾಮ, ಡಯಟ್ ಮೊದಲಾದವುಗಳಿಲ್ಲದೇ ಹೊಟ್ಟೆಯ ಬೊಜ್ಜನ್ನು ಕರಗಿಸಲು ಪರಿಣಾಮಕಾರಿ ಸುಲಭದ ಉಪಾಯಗಳು ಇಲ್ಲಿವೆ. ಓದಿ, ಅಳವಡಿಸಿಕೊಳ್ಳಿ.

ಡಯಟ್, ವ್ಯಾಯಾಮ ಯಾವುದೂ ಇಲ್ಲದೇ ಹೊಟ್ಟೆಯ ಬೊಜ್ಜನ್ನು ಕರಗಿಸುವುದು ಹೇಗೆ?; ಇಲ್ಲಿವೆ ಸರಳ ಉಪಾಯಗಳು
ಸಾಂಕೇತಿಕ ಚಿತ್ರ
TV9 Web
| Updated By: preethi shettigar|

Updated on: Aug 29, 2021 | 8:34 AM

Share

ಆರೋಗ್ಯವಂತ ದೇಹವನ್ನು ಹೊಂದುವುದು ಎಲ್ಲರ ಕನಸು. ಆದರೆ ದೇಹದ ತೂಕ ಹಾಗೂ ಹೊಟ್ಟೆಯ ಭಾಗದ ಬೊಜ್ಜು ಬಹಳಷ್ಟು ಜನರಿಗೆ ಎದುರಾಗುವ ಸಾಮಾನ್ಯ ಸಮಸ್ಯೆ. ಈ ಸಮಸ್ಯೆ ಎಲ್ಲರಲ್ಲೂ ಕಂಡುಬರುವುದು ಹೌದಾದರೂ, ಇದಕ್ಕೆ ಪರಿಹಾರ ಕಂಡುಕೊಳ್ಳದೇ ಇದ್ದಾಗ, ಭವಿಷ್ಯದಲ್ಲಿ ಬೇರೆ ಬೇರೆ ಸಮಸ್ಯೆಗಳಿಗೆ ಇದು ಕಾರಣವಾಗಬಹುದು. ದೇಹದ ತೂಕವನ್ನು ಇಳಿಸುವುದಕ್ಕೆ ವ್ಯಾಯಾಮ, ಜಿಮ್ ಎಂದು ಮೊರೆ ಹೋಗುವವರಿದ್ದಾರೆ. ಆದರೆ ಎಲ್ಲರಿಗೂ ಅದು ಸಾಧ್ಯವಾಗದಿರಬಹುದು. ಮತ್ತು ಬಹಳಷ್ಟು ಬಾರಿ ತಜ್ಞರು ಹೇಳುವ ಪ್ರಕಾರ ದೇಹದ ತೂಕ ಇಳಿಯುವುದಕ್ಕೂ, ಹೊಟ್ಟೆಯ ಭಾಗದ ಬೊಜ್ಜು ಕರಗುವುದಕ್ಕೂ ವ್ಯತ್ಯಾಸವಿದೆ. ನಮ್ಮ ದಿನಚರಿಯಲ್ಲಿ ಮಾಡಿಕೊಳ್ಳುವ ಸಣ್ಣ ಬದಲಾವಣೆಗಳು ಬಹುದೊಡ್ಡ ಯಶಸ್ಸಿಗೆ ಕಾರಣವಾಗಬಹುದು. ಆದ್ದರಿಂದಲೇ, ಯಾವುದೇ ದೈಹಿಕ ಶ್ರಮಗಳನ್ನು ನಡೆಸದೇ, ಹೊಟ್ಟೆಯ ಬೊಜ್ಜನ್ನು ಕರಗಿಸುವ ಸುಲಭದ ಉಪಾಯಗಳನ್ನು ಇಲ್ಲಿ ನೀಡಲಾಗಿದೆ.

1. ಮಿತ ಪ್ರಮಾಣದಲ್ಲಿ ಆಹಾರ ಸೇವಿಸಿ: ಹೊಟ್ಟೆಯ ಬೊಜ್ಜು ಹೆಚ್ಚಲು ಮುಖ್ಯವಾಗಿ ಕಾರಣವಾಗಬಹುದಾದ ಅಂಶವೆಂದರೆ, ಅತಿಯಾಗಿ ತಿನ್ನುವುದು. ಆದ್ದರಿಂದಲೇ ಮಿತವಾಗಿ ತಿನ್ನುವುದರಿಂದ ಅನಾವಶ್ಯಕ ಕ್ಯಾಲೋರಿ ಹೆಚ್ಚಳ ಹಾಗೂ ತೂಕ ಏರಿಕೆಯನ್ನು ತಡೆಗಟ್ಟಬಹುದು. ಇದು ದೀರ್ಘಾವಧಿಯಲ್ಲಿ ಪರಿಣಾಮ ನೀಡುವಂತಹ ಅಂಶವಾಗಿದ್ದು, ಆಹಾರ ತಿನ್ನುವಾಗ ಇದನ್ನು ಗಮನದಲ್ಲಿಟ್ಟುಕೊಳ್ಳಬೇಕು.

2. ನಿಧಾನವಾಗಿ ತಿನ್ನಿ, ಜಗಿದು ತಿನ್ನಿ: ಮಿತವಾಗಿ ತಿನ್ನುವುದು ಹೇಗೆ ಮುಖ್ಯವೋ ಹಾಗೆಯೇ, ತಿನ್ನುವ ಆಹಾರವನ್ನು ಚೆನ್ನಾಗಿ ಜಗಿದು ನಿಧಾನವಾಗಿ ತಿನ್ನುವುದು ಬಹಳ ಮುಖ್ಯ. ಎಷ್ಟೇ ತುರ್ತಿನ ಕಾರಣವಿದ್ದರೂ ಕೂಡ, ಆಹಾರ ತಿನ್ನುವಾಗ ಸಾವಧಾನದಿಂದಲೇ ತಿನ್ನಬೇಕು ಎಂದು ತಜ್ಞರು, ಹಿರಿಯರು ಹೇಳುತ್ತಾರೆ. ಅಂತೆಯೇ, ನಿಧಾನವಾಗಿ, ಜಗಿದು ತಿಂದಾಗ ಆಹಾರ ಚೆನ್ನಾಗಿ ಜೀರ್ಣವಾಗುವುದಲ್ಲದೇ, ದೀರ್ಘಾವಧಿಯಲ್ಲಿ ಉತ್ತಮ ಪರಿಣಾಮವನ್ನು ನೀಡುತ್ತದೆ.

3. ಕೆಲಸದ ಒತ್ತಡವನ್ನು ಬದಿಗಿಡಿ, ಚೆನ್ನಾಗಿ ನಿದ್ರಿಸಿ: ಉದರ ಭಾಗದ ಬೊಜ್ಜಿಗೆ ಮುಖ್ಯ ಕಾರಣ ನಿದ್ರೆಯ ಕೊರತೆ. ದಿನಕ್ಕೆ ಕನಿಷ್ಠ ಏನಿಲ್ಲವೆಂದರೂ 7-8 ಗಂಟೆ ನಿದ್ರೆ ಅವಶ್ಯವಾಗಿ ಬೇಕು. ಒತ್ತಡದ ಕೆಲಸದಲ್ಲಿ ದೇಹವನ್ನು, ಮನಸ್ಸನ್ನು ತೊಡಗಿಸಿ ಅದಕ್ಕೆ ಬೇಕಾದ ವಿಶ್ರಾಂತಿಯನ್ನು ನೀಡದಿದ್ದಾಗ, ಅಡ್ಡ ಪರಿಣಾಮಗಳಿ ಕಾಣಿಸಿಕೊಳ್ಳುತ್ತವೆ. ಅದರಲ್ಲಿ ಬೊಜ್ಜು, ಅಧಿಕ ತೂಕ ಮೊದಲಾದವುಗಳೂ ಒಂದು. ಆದ್ದರಿಂದಲೇ, ದಿನಚರಿಯನ್ನು ಸರಿದೂಗಿಸಿ, ಕೆಲಸದ ಒತ್ತಡವಿದ್ದರೂ ನಿದ್ರೆಯ ಸಮಯವನ್ನು ಕಡಿಮೆ ಮಾಡಿಕೊಳ್ಳದಿರುವುದು ಆರೋಗ್ಯದ ದೃಷ್ಟಿಯಿಂದ ಜಾಣತನ ಮತ್ತು ಅತ್ಯಗತ್ಯ.

4. ಮಧ್ಯಾಹ್ನ ನಿದ್ರೆ ಮಾಡಬೇಡಿ: ತಜ್ಞರ ಪ್ರಕಾರ, ಬೊಜ್ಜು ಹಾಗೂ ತೂಕವನ್ನು ಕಡಿಮೆಗೊಳಿಸಲು ನಿದ್ರೆ ಹೇಗೆ ಮುಖ್ಯವೋ ಹಾಗೆಯೇ ಮಧ್ಯಾಹ್ನದ ನಿದ್ರೆ ಆರೋಗ್ಯಕ್ಕೆ ಅಷ್ಟೇ ಹಾನಿಕರ. ಮಧ್ಯಾಹ್ನ ದೇಹಕ್ಕೆ ತುಸು ವಿಶ್ರಾಂತಿ ಬೇಕು, ನಿಜ. ಆದರೆ ಅದು ನಿದ್ರೆಯ ರೂಪದಲ್ಲಿರಬಾರದು. ಸುಮಾರು ಹತ್ತರಿಂದ ಇಪ್ಪತ್ತು ನಿಮಿಷಕ್ಕೂ ಅಧಿಕವಾಗಿ ಮಧ್ಯಾಹ್ನ ಮಲಗಿದಾಗ ಹೊಟ್ಟೆಯ ಬೊಜ್ಜು ಏರಿಕೆಯಾಗುತ್ತದೆ. ಆದ್ದರಿಂದಲೇ, ಮಿತವಾಗಿ ಆಹಾರ ಸೇವಿಸಿ, ತುಸುವೇ ವಿಶ್ರಾಂತಿ ಪಡೆದು ಮತ್ತಷ್ಟು ಉತ್ಸಾಹದಿಂದ ಕೆಲಸದಲ್ಲಿ ತೊಡಗಿಕೊಳ್ಳುವುದು ಬಹುಮುಖ್ಯ.

5. ಕೆಲಸದ ಭಂಗಿಯನ್ನು ಸರಿಯಾಗಿಸಿಕೊಳ್ಳಿ: ಬೊಜ್ಜು ಏರಿಕೆಯಾಗಲು ಮತ್ತೊಂದು ಮುಖ್ಯ ಕಾರಣ, ಕೆಲಸಕ್ಕೆ ತಪ್ಪಾದ ಭಂಗಿಯಲ್ಲಿ ಕುಳಿತುಕೊಳ್ಳುವುದು. ಇದರಿಂದಾಗಿ ದೀರ್ಘಾವದಿಯಲ್ಲಿ ಬೇರೆ ಅಡ್ಡ ಪರಿಣಾಮಗಳೂ ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಆದ್ದರಿಂದಲೇ ಬೆನ್ನು ನೇರವಾಗಿಸಿ, ಉತ್ತಮ ಭಂಗಿಯಲ್ಲಿ ಕುಳಿತುಕೊಂಡು ಕೆಲಸ ಮಾಡುವುದು ಒಳ್ಳೆಯದು. ದೈಹಿಕ ಶ್ರಮದ ಕೆಲಸವಾದರೆ, ಅದನ್ನು ಜಾಣತನದಿಂದ ಮಾಡುವುದು ಆರೋಗ್ಯಕ್ಕೆ ಒಳ್ಳೆಯದು.

6. ನೀರು ಕುಡಿಯಿರಿ: ನೀರನ್ನು ತೂಕ ಇಳಿಸಲು, ಬೊಜ್ಜನ್ನು ಕರಗಿಸುವ ಉದ್ದೇಶಕ್ಕೆ ಕುಡಿಯುವುದಕ್ಕಿಂತ, ದೇಹಕ್ಕೆ ಅದು ಅಗತ್ಯವಾಗಿ ಬೇಕು ಎಂಬ ಭಾವನೆ ಬೆಳೆಸಿಕೊಳ್ಳಿ. ಒಮ್ಮೆಲೇ ಅತಿಯಾಗಿ ನೀರು ಕುಡಿಯುವುದಕ್ಕಿಂತ, ಕಾಲಕಾಲಕ್ಕೆ ನೀರನ್ನು ಕುಡಿಯುತ್ತಿರುವುದು ದೇಹವನ್ನು ಉಲ್ಲಾಸಿತವಾಗಿರಿಸುತ್ತದೆ. ಜೊತೆಗೆ ಜೀರ್ಣಕ್ರಿಯೆಗೆ ಇದು ಸಹಾಯ ಮಾಡುತ್ತದೆ. ಈ ಅಭ್ಯಾಸದಿಂದ ದೀರ್ಘಾವಧಿಯಲ್ಲಿ ಉತ್ತಮ ಪ್ರಯೋಜನಗಳಿದ್ದು, ಉದರ ಭಾಗದ ಬೊಜ್ಜು ತಾನಾಗಿಯೇ ಕರಗುತ್ತದೆ.

ಇದನ್ನೂ ಓದಿ:

Women Health: ಯುವತಿಯರಿಗಾಗಿಯೇ ಕೆಲವೊಂದಿಷ್ಟು ಟಿಪ್ಸ್​; ಹೊಟ್ಟೆಯ ಬೊಜ್ಜು ಕರಗಿಸಲು ಇಲ್ಲಿದೆ ಸುಲಭ ವಿಧಾನಗಳು

ಕಣ್ಣು ಮಂಜಾಗುತ್ತಿದ್ದರೆ ಕನ್ನಡಕ ಮಾತ್ರ ಪರಿಹಾರವಲ್ಲ; ಇತರ ಆರೋಗ್ಯ ಸಮಸ್ಯೆಯೂ ಕಾರಣವಾಗಿರಬಹುದು ಗಮನಿಸಿ

(Easy tips to lose belly fat without doing an exercise)

ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ