Physical Weakness: ದೈಹಿಕ ನಿಶ್ಯಕ್ತಿ ಕಾಡುತ್ತಿದೆಯಾ? ಚಿಂತೆ ಬಿಡಿ ಈ 5 ಆಹಾರಗಳನ್ನು ಸೇವಿಸಿ
ಯಥೇಚ್ಛವಾದ ವಿಟಮಿನ್, ಮಿನರಲ್ಸ್ಗಳಿಂದ ಕೂಡಿರುವ ಬಾಳೆಹಣ್ಣು ಡಯೆಟ್ಗೆ ಉತ್ತಮ ಆಹಾರವಾಗಿದೆ. ಇದರೊಂದಿಗೆ ದೇಹದ ಬಳಲಿಕೆಯನ್ನೂ ಕಡಿಮೆಗೊಳಿಸುತ್ತದೆ.
ಇತ್ತೀಚಿನ ದಿನಗಳಲ್ಲಿ ವರ್ಕ್ ಫ್ರಾಮ್ ಹೋಮ್, ಸಾಂಕ್ರಾಮಿಕ ರೋಗದ ಭೀತಿ, ವೈರಲ್ ಫೀವರ್ ಹೀಗೆ ಇಂದಿನ ಜನತೆ ಒಂದಲ್ಲ ಒಂದು ತೊಳಲಾಟಕ್ಕೆ ಸಿಲುಕಿ ಒದ್ದಾಡುವಂತಹ ಪರಿಸ್ಥಿತಿಯಿದೆ. ಅತಿಯಾದ ಕೆಲಸ, ಒತ್ತಡದಿಂದಾಗಿ (Stress) ದೇಹಕ್ಕೆ ಸರಿಯಾದ ಆಹಾರ ಪೂರೈಕೆಯಾಗದೆ ಸುಸ್ತು, ಬಳಲಿಕೆ, ನಿಶ್ಯಕ್ತಿ (Physical Weakness) ಕಾಡುತ್ತದೆ. ಇದರಿಂದ ಹಲವು ಆರೋಗ್ಯ ಸಮಸ್ಯೆಗಳೂ ಕೂಡ ಕಾಡುತ್ತದೆ. ಈ ರೀತಿ ನಿಶ್ಯಕ್ತಿ ವಯಸ್ಸಾದವರು, ಯುವ ಜನರಲ್ಲೂ ಕಾಡುತ್ತಿದೆ. ಇದಕ್ಕೆ ಹಲವು ಕಾರಣಗಳಿವೆ ಧೂಮಪಾನ, ಸರಿಯಾಗಿ ನೀರು ಕುಡಿಯದೇ ಇರುವುದು, ಅತಿಯಾದ ಕೆಲಸ, ಪೋಷಕಾಂಶಗಳ ಕೊರತೆ, ಕೆಫಿನ್ ಅಂಶವಿರುವ ಚಹಾ, ಕಾಫಿಗಳ ಅಧಿಕ ಸೇವನೆ ಈ ರೀತಿ ದೈಹಿಕ ಬಳಲಿಕೆಗೆ ಕಾರಣವಾಗುತ್ತದೆ. ಅಂತಹ ಸಂದರ್ಭಗಳಲ್ಲಿ ಸರಿಯಾದ ಆಹಾರ ಸೇವನೆ ಅಗತ್ಯವಾಗಿದೆ. ಸರಿಯಾದ ಸಮಯದಲ್ಲಿ ಪೌಷ್ಟಿಕ ಆಹಾರ ಸೇವನೆ, ಸರಿಯಾದ ಯೋಗ, ವ್ಯಾಯಾಮ ಸದೃಢ ದೇಹ ಮತ್ತು ಆರೋಗ್ಯಯುತ ಜೀವನಕ್ಕೆ ದಾರಿಯಾಗುತ್ತದೆ. ಹೀಗಾಗಿ ನೀವು ಈ ಆಹಾರಗಳನ್ನು ನೀವು ಸೇವಿಸಿದರೆ ನಿಮ್ಮ ದೇಹ ನಿಶ್ಯಕ್ತಿಯಿಂದ ಮುಕ್ತಗೊಳ್ಳುತ್ತದೆ.
ಮೊಟ್ಟೆ: ದಿನಕ್ಕೊಂದು ಮೊಟ್ಟೆ ಆರೋಗ್ಯವನ್ನು ಸುಧಾರಿಸುತ್ತದೆ. ಮೊಟ್ಟೆಯಲ್ಲಿರುವ ವಿಟಮಿನ್ ಎ. ಬಿ12, ಸೆಲೇನಿಯಂ ಅಂಶಗಳು ದೇಹದಲ್ಲಿ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ನಿಮ್ಮ ನಿಶ್ಯಕ್ತಿಯ ಸಮಸ್ಯೆಯನ್ನೂ ನಿವಾರಿಸುತ್ತದೆ. ಮೊಟ್ಟೆಯಲ್ಲಿರುವ ಪ್ರೊಟೀನ್ ಅಂಶಗಳು ಕಣ್ಣಿನ ಆರೋಗ್ಯವನ್ನೂ ಕಾಪಾಡುತ್ತದೆ. ಜತೆಗೆ ಸ್ನಾಯುಗಳನ್ನು ಬಲಪಡಿಸಲು ಕೂಡ ನೆರವಾಗುತ್ತದೆ. ಹೀಗಾಗಿ ನಿಮಗೆ ಪರಿಪೂರ್ಣ ಆಹಾರವಾಗುವುದರಲ್ಲಿ ಎರಡು ಮಾತಿಲ್ಲ. ದೈಹಿಕ ನಿಶ್ಯಕ್ತಿಯನ್ನು ಕೂಡ ಸುಧಾರಿಸುತ್ತದೆ.
ಪನ್ನೀರ್: ಸಮೃದ್ದವಾದ ಪ್ರೊಟೀನ್ ಮತ್ತು ಮ್ಯಾಗ್ನೀಶಿಯಂ ಗುಣಗಳನ್ನು ಹೊಂದಿರುವ ಪನ್ನೀರ್ ಸಸ್ಯಾಹಾರಿಗಳಿಗೆ ಉತ್ತಮ ಆಹಾರವಾಗಿದೆ. ದೇಹದಲ್ಲಿನ ಬಳಲಿಕೆಯನ್ನು ಕಡಿಮೆ ಮಾಡಿ ದೇಹವನ್ನು ಸುರಕ್ಷಿವಾಗಿಡುತ್ತದೆ. ಹೀಗಾಗಿ ಪನ್ನೀರ್ ದೇಹದ ಸುಸ್ತನ್ನು ಸುಧಾರಿಸುತ್ತದೆ,
ಓಟ್ಸ್: ಓಟ್ಸ್ನ ಓಟ್ಮೀಲ್ ಸೇವನೆ ದೇಹವನ್ನು ಅಶಕ್ತತೆಯಿಂದ ಕಾಪಾಡುತ್ತದೆ. ಓಟ್ಸ್ಅನ್ನು ಪ್ರತಿದಿನ ಬೆಳಗ್ಗೆ ಉಪಹಾರದ ರೀತಿಯಲ್ಲಿ ಸೇವಿಸಿದರೆ ದೇಹವೂ ಆರೋಗ್ಯವಾಗಿರುತ್ತದೆ. ಜತೆಗೆ ಅತಿಯಾದ ತೂಕ ಇಳಿಕೆಗೂ ನೆರವಾಗುತ್ತದೆ.
ಬಾಳೆಹಣ್ಣು: ಯಥೇಚ್ಛವಾದ ವಿಟಮಿನ್, ಮಿನರಲ್ಸ್ಗಳಿಂದ ಕೂಡಿರುವ ಬಾಳೆಹಣ್ಣು ಡಯೆಟ್ಗೆ ಉತ್ತಮ ಆಹಾರವಾಗಿದೆ. ಇದರೊಂದಿಗೆ ದೇಹದ ಬಳಲಿಕೆಯನ್ನೂ ಕಡಿಮೆಗೊಳಿಸುತ್ತದೆ. ಬಾಳೆಹಣ್ಣಿನ ಮಿಲ್ಕ್ಶೇಕ್ಅನ್ನೂ ಕೂಡ ಮಾಡಿ ಸೇವಿಸಬಹುದು.
ಡ್ರೈ ಪ್ರೂಟ್ಸ್: ಬಾದಾಮಿ, ಪಿಸ್ತಾ, ಗೋಡಂಬಿಯಂತಹ ಡ್ರೈ ಪ್ರೂಟ್ಸ್ಗಳು ದೇಹಕ್ಕೆ ಶಕ್ತಿಯನ್ನು ನೀಡುತ್ತದೆ. ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಮೂಲಕ ನಿಶ್ಯಕ್ತಿಯನ್ನು ಕಡಿಮೆಗೊಳಿಸುತ್ತದೆ.
ನೀರಿನ ಸೇವನೆ: ದೇಹಕ್ಕೆ ಸರಿಯಾದ ಪ್ರಮಾಣದಲ್ಲಿ ನೀರು ಪೂರೈಕೆಯಾಗದಿದ್ದರೆ ಸುಸ್ತು ಕಾಣಿಸಿಕೊಳ್ಳುತ್ತದೆ. ದೇಹದಲ್ಲಿ ಉಷ್ಣತೆ ಜಾಸ್ತಿಯಾದಾಗ ದೇಹ ನಿರ್ಜಲೀಕರಣಗೊಳ್ಳುತ್ತದೆ. ಅಂತಹ ಸಂದರ್ಭಗಳಲ್ಲಿ ಹೆಚ್ಚು ನೀರು ಬೇಕಾಗುತ್ತದೆ. ಏಳನೀರು ಅಥವಾ ನೀರು ಯಾವುದನ್ನು ಸೇವಿಸಿದರೂ ದೇಹಕ್ಕೆ ಉತ್ತಮ ಎನ್ನುತ್ತಾರೆ ತಜ್ಞರು.
ಇದನ್ನೂ ಓದಿ:
Pumpkin: ರೋಗ ನಿರೋಧಕ ಶಕ್ತಿ ವೃದ್ಧಿಗೆ ಸಹಕಾರಿ ಕುಂಬಳಕಾಯಿ
Published On - 4:11 pm, Sat, 5 February 22