ದಿನಕ್ಕೊಂದು ಆವಕಾಡೊ, ವೈದ್ಯರನ್ನು ದೂರವಿಡುತ್ತದೆ -ಸಂಶೋಧನೆಯಲ್ಲಿ ಕುತೂಹಲಕರ ವಿಷಯ ಬಹಿರಂಗ
ದಕ್ಷಿಣ ಅಮೆರಿಕಾ, ಕ್ಯಾಲಿಫೋರ್ನಿಯಾದಲ್ಲಿ ಹೆಚ್ಚಾಗಿ ಬೆಳೆಯುವ ಆವಕಾಡೊ ಹಣ್ಣಿನಲ್ಲಿ 20ಕ್ಕೂ ಹೆಚ್ಚು ಜೀವಸತ್ವಗಳು ಮತ್ತು ಖನಿಜಗಳಿವೆ. ಇತರ ಯಾವುದೇ ಹಣ್ಣುಗಳಿಗಿಂತ ಹೆಚ್ಚು ಪೋಷಕಾಂಶಗಳನ್ನು ಈ ಹಣ್ಣು ಹೊಂದಿದೆ. ದುಬಾರಿ ಎಂಬ ಕಾರಣಕ್ಕೆ ಈ ಹಣ್ಣನ್ನು ಅಷ್ಟಾಗಿ ಖರೀದಿಸಲ್ಲ. ಆದರೆ ಈ ಹಣ್ಣಿನಲ್ಲಿ ಪೋಷಕಾಂಶಗಳ ಭಂಡಾರವೇ ಅಡಗಿದೆ. ಇತ್ತೀಚೆಗೆ ನಡೆದ ಸಂಶೋಧನೆಯಲ್ಲಿ ಅನೇಕ ವಿಚಾರಗಳು ಬಹಿರಂಗವಾಗಿವೆ.

ಸಾಮಾನ್ಯವಾಗಿ ಬಹುತೇಕ ಡಾಕ್ಟರ್ಗಳು ಹೇಳೋದು ನಾವು ಊಟ ಮಾಡಲು ಕೂತಾಗ ನಮ್ಮ ತಟ್ಟೆ ಕಲರ್ ಫುಲ್ ಆಗಿ ಇರಬೇಕು ಅಂತ. ಅಂದರೆ ತಟ್ಟೆಯಲ್ಲಿ ಅನ್ನದ ಜೊತೆಗೆ ತರಕಾರಿ, ಹಣ್ಣು-ಹಂಪಲುಗಳನ್ನೂ ಸೇವಿಸಬೇಕು ಎಂದು. ಈ ರೀತಿ ಊಟ ಬ್ಯಾಲೆನ್ಸ್ ಆಗಿ ತಿನ್ನುವುದರಿಂದ ಆರೋಗ್ಯದ ಸಮಸ್ಯೆಗಳು ಕಾಡೊಲ್ಲ. ದೇಹ ಸದೃಢವಾಗಿ, ಬುದ್ದಿ ಚುರುಕಾಗಿ, ಉತ್ತಮ ಜೀವನಕ್ಕೆ ದಾರಿ ಆಗುತ್ತೆ. ಆದರೆ ಇತ್ತೀಚೆಗೆ ಬೆಣ್ಣೆ ಹಣ್ಣು ಎಂದು ಕರೆಯುವ ಆವಕಾಡೊ ಹಣ್ಣಿನ ಮೇಲೆ ಸಂಶೋಧನೆಗಳನ್ನು ನಡೆಸಲಾಗಿದ್ದು ಈ ಹಣ್ಣನ್ನು ಪ್ರತಿ ದಿನ ತಿಂದರೆ ಅನೇಕ ಪ್ರಯೋಜನಗಳಿವೆ ಎಂಬ ಮಾಹಿತಿ ಬಹಿರಂಗವಾಗಿದೆ. ಹಿಂದೆ ಒಂದು ಮಾತಿತ್ತು, ದಿನಕ್ಕೆ ಒಂದು ಸೇಬು ತಿನ್ನಿ, ವೈದ್ಯರಿಂದ ದೂರ ಇರಿ ಎಂದು. ಆದರೆ ಅದು ಈಗ ಬದಲಾಗಿದೆ. ದಿನಕ್ಕೆ ಒಂದು ಆವಕಾಡೊ ಸೇವನೆ ವೈದ್ಯರನ್ನು ದೂರವಿಡುತ್ತದೆ ಎಂದು. ಅಷ್ಟರ ಮಟ್ಟಿಗೆ ಈ ಹಣ್ಣಿನಲ್ಲಿ ಪೋಷಕಾಂಶಗಳಿವೆ ಎಂದು ಸಂಶೋಧನೆ ತಿಳಿಸಿದೆ. ಪ್ರತಿ ದಿನವೂ ಒಂದು ಆವಕಾಡೊವನ್ನು ತಿನ್ನುವುದರಿಂದ ಒಳ್ಳೆಯ ನಿದ್ರೆ ಮತ್ತು ಹೃದಯದ ಆರೋಗ್ಯ ಉತ್ತಮವಾಗಿರುತ್ತದೆಯಂತೆ. ಆವಕಾಡೊ ಕೊಲೆಸ್ಟ್ರಾಲ್ ಅನ್ನೂ ಕಡಿಮೆ ಮಾಡುತ್ತೆ ಅಮೆರಿಕಾದ ಚಿಕಾಗೋದಲ್ಲಿ ಇತ್ತೀಚೆಗೆ ನಡೆದ ನ್ಯೂಟ್ರಿಷನ್ 2024ರ ಸಮ್ಮೇಳನದಲ್ಲಿ ಅವಕಾಡೊ ಮೇಲೆ ನಡೆದ ಸಂಶೋಧನಾ ವರದಿಯನ್ನು ಪ್ರಸ್ತಾಪಿಸಲಾಯಿತು. ಈ ಸಂಶೋಧನೆಯ ಪ್ರಕಾರ ಆವಕಾಡೊ ಹಣ್ಣು “ದೇಹದ ತೂಕದ ಮೇಲೆ ಪ್ರತಿಕೂಲ ಪರಿಣಾಮ ಬೀರದೆ ಒಟ್ಟು ಕೊಲೆಸ್ಟ್ರಾಲ್ ಮತ್ತು LDL-C ಅನ್ನು ಕಡಿಮೆ ಮಾಡುವ ಮೂಲಕ ಹೃದಯರಕ್ತನಾಳದ ಅಪಾಯಕಾರಿ ಅಂಶಗಳನ್ನು ಸುಧಾರಿಸಬಹುದು” ಎಂದು ತಿಳಿದುಬಂದಿದೆ. ಆವಕಾಡೊ ಹಣ್ಣಿನ ಸೇವನೆಯು ಹೃದಯರಕ್ತನಾಳದ ಕಾಯಿಲೆಯ ಅಪಾಯವನ್ನು ಕಡಿಮೆ ಮಾಡಲು ಸಹಾಯ...
Published On - 1:33 pm, Wed, 31 July 24




