ಜನರು ಫಿಟ್ನೆಸ್ಗಾಗಿ ಏನೆಲ್ಲಾ ಮಾಡುತ್ತಾರೆ. ಬೆಳಗ್ಗಿನ ಉಪಹಾರ, ಸಂಜೆಯ ಊಟ ಬಿಡುವವರೂ ಇದ್ದಾರೆ. ಫಾಸ್ಟ್ ಫುಡ್ಗಳನ್ನು ಬೆಳಗ್ಗೆ ತಿನ್ನುವರೂ ಇದ್ದಾರೆ. ಇದರಿಂದ ದೇಹದಲ್ಲಿ ಅನಾರೋಗ್ಯ ಕಾಣಿಸಿಕೊಳ್ಳುತ್ತದೆ. ನೀವು ಸದೃಢವಾಗಿರಲು ಬೆಳಗ್ಗಿನ ಉಪಹಾರ ತುಂಬಾ ಮುಖ್ಯ. ನೀವು ತೂಕ ಹೆಚ್ಚಳವಾಗದಂತೆ ನೋಡಿಕೊಂಡು ಪಿಟ್ನೆಸ್ ಕಾಯ್ದುಕೊಳ್ಳಲು ಬಯಸಿದರೆ ಈ ಕೆಲವು ಆಹಾರವನ್ನು ಬೆಳಗ್ಗೆ ಸೇವಿಸುವುದನ್ನು ಕಡಿಮೆ ಮಾಡಿ.
ಬಿಳಿ ಬ್ರೆಡ್
ಹೆಚ್ಚಿನ ಜನರ ಬೆಳಗ್ಗಿನ ಉಪಹಾರ ಬ್ರೆಡ್. ಆದರೆ ಬ್ರೆಡ್ಅನ್ನು ಹೆಚ್ಚು ಸೇವಿಸುವುದರಿಂದ ಆರೋಗ್ಯ ಸ್ಥಿತಿ ಬದಲಾಗುತ್ತದೆ. ಆರೋಗ್ಯಕ್ಕೆ ಹಾನಿಯಾಗುವುದು ಮಾತ್ರವಲ್ಲದೇ ತೂಕವನ್ನು ಹೆಚ್ಚಿಸುತ್ತದೆ. ಹಾಗಿರುವಾಗ ಬಿಳಿ ಬಣ್ಣದ ಬ್ರೆಡ್ ಸೇವಿಸುವ ಬದಲು ಕಂದು ಬಣ್ಣದ ಬ್ರೆಡ್ ಸೇವಿಸಿ.
ಸಂಸ್ಕರಿಸಿದ ಆಹಾರ
ಎಣ್ಣೆ, ತುಪ್ಪ, ಹಾಲು, ಮೊಸರಿನ ಅತಿಯಾದ ಸೇವನೆಯೂ ಆರೋಗ್ಯಕ್ಕೆ ಒಳ್ಳೆಯದಲ್ಲ. ನೀವು ಬೆಳಿಗ್ಗೆ ಚಿಪ್ಸ್, ಪಾಪ್ ಕಾರ್ನ್, ಡ್ರೈ ಫ್ರೂಟ್ಸ್ಗಳು ಬೆಳಗ್ಗಿನ ಉಪಹಾರದಲ್ಲಿ ಸೇವಿಸುತ್ತಿದ್ದರೆ ಅದನ್ನು ಆದಷ್ಟು ಬೇಗ ತಪ್ಪಿಸಿ. ಇದು ನಿಮ್ಮ ದೇಹದಲ್ಲಿ ಕ್ಯಾಲೊರಿ ಅಂಶವನ್ನು ಹೆಚ್ಚಿಸಿ ಬಹುಬೇಗ ತೂಕ ಹೆಚ್ಚಳಕ್ಕೆ ಕಾರಣವಾಗುತ್ತದೆ.
ಕೇಕ್, ಕುಕೀಸ್
ಮೈದಾ ಜತೆಗೆ ತುಪ್ಪವನ್ನು ಕೇಕ್, ಕುಕೀಸ್ಗಳಲ್ಲಿ ಬಳಸಲಾಗುತ್ತದೆ. ಇದು ನಿಮ್ಮ ಫಿಟ್ನೆಸ್ಗೆ ಸೂಕ್ತವಲ್ಲ. ಹಾಗಾಗಿ ನೀವು ಈ ಕೆಲವು ತಿಂಡಿಗಳನ್ನು ಬೆಳಗಿನ ಉಪಹಾರದಲ್ಲಿ ಸೇವಿಸದಿರಿ.
ನೂಡಲ್ಸ್
ಫಾಸ್ಟ್ ಫುಡ್ಗಳನ್ನು ಕೆಲವರು ಬೆಳಗ್ಗಿನ ಉಪಹಾರವಾಗಿ ಬಳಸುತ್ತಾರೆ. ಬೆಳಗ್ಗಿನ ಉಪಹಾರದಲ್ಲಿ ನೂಡಲ್ಸ್ ತಿನ್ನುವುದು ನಿಮ್ಮ ಆರೋಗ್ಯ ಸ್ಥಿತಿಯನ್ನು ಹಾಳು ಮಾಡುತ್ತದೆ.
ಎಣ್ಣೆಯಲ್ಲಿ ಕರಿದ ಪದಾರ್ಥ
ಬೆಳ್ಳಂಬೆಳಗ್ಗಿನ ಉಪಹಾರಕ್ಕೆ ಎಣ್ಣೆಯಲ್ಲಿ ಕರಿದ ಪದಾರ್ಥವನ್ನು ಎನ್ನುವುದು ಸರಿಯಲ್ಲ. ನೀವು ಬೆಳಗ್ಗೆ ಪಕೋಡ ಮತ್ತು ಕಚೋರಿಗಳನ್ನು ತಿನ್ನುವುದು ನಿಮ್ಮ ಆರೋಗ್ಯ ಸ್ಥಿತಿಯನ್ನು ಹಾಳು ಮಾಡುತ್ತದೆ.
ಇದನ್ನೂ ಓದಿ:
Health Tips: ಅಂಜೂರ ಹಣ್ಣು ಮತ್ತು ಹಾಲು ಸೇವನೆಯ ಆರೋಗ್ಯ ಪ್ರಯೋಜನಗಳು
Health Tips: ದೇಹದಲ್ಲಿ ಆಗಾಗ ಕಾಣಿಸಿಕೊಳ್ಳುವ ನೋವನ್ನು ದೂರ ಮಾಡಲು ಈ ಕ್ರಮಗಳನ್ನು ಅನುಸರಿಸಿ
(Eating these 6 foods in breakfast rapidly weight increase)
Published On - 8:04 am, Thu, 2 September 21