Health Tips: ಅಂಜೂರ ಹಣ್ಣು ಮತ್ತು ಹಾಲು ಸೇವನೆಯ ಆರೋಗ್ಯ ಪ್ರಯೋಜನಗಳು

ಹಾಲಿನಲ್ಲಿ ಕ್ಯಾಲ್ಸಿಯಂ ಗುಣಗಳಿರುತ್ತದೆ. ಇದು ನಿಮ್ಮ ಮೂಳೆಗಳನ್ನು ಗಟ್ಟಿಗೊಳಿಸಲು ಸಹಾಯ ಮಾಡುತ್ತದೆ. ಹಾಗಿರುವಾಗ ಹಾಲಿನ ಜತೆ ಅಂಜೂರ ಹಣ್ಣನ್ನು ಸೇವಿಸುವ ಅಭ್ಯಾಸ ಮಾಡಿಕೊಳ್ಳಿ.

Health Tips: ಅಂಜೂರ ಹಣ್ಣು ಮತ್ತು ಹಾಲು ಸೇವನೆಯ ಆರೋಗ್ಯ ಪ್ರಯೋಜನಗಳು
ಸಾಂದರ್ಭಿಕ ಚಿತ್ರ
Follow us
TV9 Web
| Updated By: shruti hegde

Updated on: Sep 01, 2021 | 8:14 AM

ಪ್ರಸ್ತುತ ಸಮಯದಲ್ಲಿ ಆರೋಗ್ಯದ ಕುರಿತಾಗಿ ಹೆಚ್ಚು ಗಮನವಹಿಸುವುದು ಮುಖ್ಯ. ದೇಹಕ್ಕೆ ಬೇಕಾದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಬೇಕಾದ ಪೌಷ್ಟಿಕ ಆಹಾರವನ್ನು ಸೇವಿಸುವುದು ಮುಖ್ಯವಾಗಿದೆ. ಇತ್ತೀಚಿನ ಜನರು ಅಧಿಕ ರಕ್ತದೊತ್ತಡ, ತೂಕ ಹೆಚ್ಚಳ, ಹೊಟ್ಟೆ ನೋವು, ನಿದ್ರಾಹೀನತೆ ಮತ್ತು ಆಯಾಸದಂತಹ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಹೀಗಿರುವಾಗ ಆರೋಗ್ಯಕ್ಕೆ ಸಂಬಂಧಿಸಿದಂತೆ ಕೆಲವು ಟಿಪ್ಸ್​ಗಳು ನಿಮಗಾಗಿ ..

ಅಂಜೂರ ಸಾಮಾನ್ಯವಾಗಿ ಎಲ್ಲರಿಗೂ ಇಷ್ಟವಾಗುತ್ತದೆ. ಇದರಲ್ಲಿ ವಿಟಮಿನ್ ಎ, ಸಿ, ಇ, ಕೆ, ಫೈಬರ್, ಮೆಗ್ನೀಶಿಯಂ, ಕ್ಯಾಲ್ಸಿಯಂ, ಪೊಟ್ಯಾಶಿಯಂ ಮತ್ತು ತಾಮ್ರದ ಅಂಶವಿರುತ್ತದೆ. ಇದರಲ್ಲಿ ಆಂಟಿಆಕ್ಸಿಡೆಂಟ್ ಗುಣಗಳೂ ಸಹ ಅಧಿಕವಾಗಿರುತ್ತದೆ. ಇದು ನಿಮ್ಮ ದೇಹಕ್ಕೆ ಬೇಕಾದ ಪೌಷ್ಟಿಕ ಅಂಶಗಳನ್ನು ನೀಡುತ್ತದೆ.

ಹಾಲಿನಲ್ಲಿ ಕ್ಯಾಲ್ಸಿಯಂ ಗುಣಗಳಿರುತ್ತದೆ. ಇದು ನಿಮ್ಮ ಮೂಳೆಗಳನ್ನು ಗಟ್ಟಿಗೊಳಿಸಲು ಸಹಾಯ ಮಾಡುತ್ತದೆ. ಹಾಗಿರುವಾಗ ಹಾಲಿನ ಜತೆ ಅಂಜೂರ ಹಣ್ಣನ್ನು ಸೇವಿಸುವ ಅಭ್ಯಾಸ ಮಾಡಿಕೊಳ್ಳಿ. ಹೃದಯ ಆರೋಗ್ಯವನ್ನು ಕಾಪಾಡಲು ಜತೆಗೆ ರಕ್ತದೊತ್ತಡವನ್ನು ನಿಯಂತ್ರಿಸಲು ಇದು ಸಹಾಯ ಮಾಡುತ್ತದೆ.

ಒಂದು ಲೋಟ ಹಾಲಿನಲ್ಲಿ 2 ರಿಂದ 3 ಅಂಜೂರದ ಹಣ್ಣನ್ನು (ಡ್ರೈ ಫ್ರೂಟ್) ಸೇರಿಸಿ. ಬಿಸಿ ಹಾಲಿನಲ್ಲಿ ಅಂಜೂರ ಹಣ್ಣನ್ನು ಸೇವಿಸುವುದು ಉತ್ತಮ. ಇಲ್ಲವೇ ಒಣಗಿದ ಅಂಜೂರ ಹಣ್ಣನ್ನು ಉಗುರು ಬೆಚ್ಚಗಿನ ಹಾಲಿನೊಂದಿಗೆ ಪತ್ಯೇಕವಾಗಿಯೂ ಸಹ ಸೇವಿಸಬಹುದು.

ಹಾರ್ಮೋನುಗಳ ಅಸಮತೋಲನ ಹಾರ್ಮೋನುಗಳ ಅಸಮತೋಲನ ಇತ್ತೀಚಿನ ಜನರಲ್ಲಿ ಹೆಚ್ಚಾಗಿ ಕಂಡು ಬರುತ್ತಿರುವ ಸಮಸ್ಯೆಯಾಗಿದೆ. ಇದರಿಂದ ರಕ್ತದೊತ್ತಡ, ತೂಕ ಹೆಚ್ಚಾಗುವುದು, ಹೊಟ್ಟೆ ಸಮಸ್ಯೆ, ನಿದ್ರಾಹೀನತೆ ಮತ್ತು ಆಯಾಸದಂತಹ ಸಮಸ್ಯೆಗಳು ಕಂಡು ಬರುತ್ತಿದೆ. ಅಂಜೂರ ಹಣ್ಣಿನ ಸೇವನೆ ನಿಮ್ಮ ಈ ಸಮಸ್ಯೆಗಳಿಗೆ ಪರಿಹಾರವಾಗಿ ಕೆಲಸ ಮಾಡುತ್ತದೆ.

ಜೀರ್ಣಕ್ರಿಯೆ ಜೀರ್ಗಣಾಂಗ ವ್ಯವಸ್ಥೆಯಲ್ಲಿ ಸಮಸ್ಯೆಗಳಿದ್ದರೆ ಅಂಜೂರ, ಹಾಲನ್ನು ಒಟ್ಟಿಗೆ ಸೇವಿಸಿ. ಇದು ಹೊಟ್ಟೆಯನ್ನು ಸುಧಾರಿಸುತ್ತದೆ. ಅಜೀರ್ಣ, ಮಲಬದ್ಧತೆ, ಆಸಿಡಿಟಿ ಮತ್ತು ಇತರ ಸಮಸ್ಯೆಗಳನ್ನು ನಿವಾರಿಸುತ್ತದೆ.

ರಕ್ತದೊತ್ತಡ ನಿಯಂತ್ರಣ ರಕ್ತದೊತ್ತಡ ಸಮಸ್ಯೆ ಇರುವವರು ಪ್ರತಿದಿನ ಹಾಲು ಮತ್ತು ಅಂಜೂರ ಹಣ್ಣುಗಳನ್ನು ಒಟ್ಟಿಗೆ ಸೇವಿಸಿ. ಈ ರೀತಿ ತೆಗೆದುಕೊಳ್ಳುವ ಮೂಲಕ ರಕ್ತದಲ್ಲಿನ ಸಕ್ಕರೆ ಮಟ್ಟವು ಕೆಲವೇ ದಿನಗಳಲ್ಲಿ ನಿಯಂತ್ರಣಕ್ಕೆ ಬರುತ್ತದೆ. ಒಣಗಿದ ಅಂಜೂರದಲ್ಲಿ ಪೊಟ್ಯಾಶಿಯಂ ಅಧಿಕವಾಗಿರುತ್ತದೆ. ಇದು ಸ್ನಾಯುವಿನ ಆರೋಗ್ಯವನ್ನು ಕಾಪಾಡುತ್ತದೆ. ಜತೆಗೆ ಸ್ನಾಯುವನ್ನು ಬಲಿಷ್ಠಗೊಳಿಸಲು ಸಹಾಯಕವಾಗಿದೆ.

ಇದನ್ನೂ ಓದಿ:

Health Tips: ಬೆಳಿಗ್ಗೆ ಎದ್ದ ತಕ್ಷಣ ಈ ರೀತಿ ಮಾಡುವುದರಿಂದ ಅನೇಕ ಆರೋಗ್ಯಕರ ಪ್ರಯೋಜನಗಳಿವೆ

Health Tips: ಮೂತ್ರಪಿಂಡದ ಆರೋಗ್ಯವನ್ನು ಕಾಪಾಡಲು ಹೀಗಿರಲಿ ನಿಮ್ಮ ಆಹಾರ ಕ್ರಮ