
ಎಬೋಲಾ (Ebola) ವೈರಸ್ ಮತ್ತೆ ಜಗತ್ತಿನ ಆತಂಕಕ್ಕೆ ಕಾರಣವಾಗಿದೆ. ವಿಶ್ವ ಆರೋಗ್ಯ ಸಂಸ್ಥೆ (WHO) ಈ ವೈರಸ್ ಅನ್ನು ಜಾಗತಿಕ ಆರೋಗ್ಯ ತುರ್ತು ಪರಿಸ್ಥಿತಿಯಾಗಿ ಘೋಷಿಸಿದೆ. ಈಗಾಗಲೇ ಈ ಸೋಂಕಿನಿಂದ 100ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ವಿಶೇಷವಾಗಿ ಆಫ್ರಿಕಾದ ಕೆಲವು ಭಾಗಗಳಲ್ಲಿ ವೈರಸ್ ವೇಗವಾಗಿ ಹರಡುತ್ತಿರುವುದು ಆರೋಗ್ಯ ತಜ್ಞರ ಚಿಂತೆಗೆ ಕಾರಣವಾಗಿದೆ. ಆದರೆ ಈ ಎಬೋಲಾ ವೈರಸ್‌ಗೆ ಲಸಿಕೆ ಲಭ್ಯವಿದ್ದರೂ ಅಪಾಯ ಏಕೆ ಕಡಿಮೆಯಾಗಿಲ್ಲ ಎಂಬ ಪ್ರಶ್ನೆ ಹಲವರಲ್ಲಿ ಮೂಡಿದೆ. ಹಾಗಾದರೆ ಎಬೋಲಾ ವೈರಸ್ ಎಂದರೇನು, ಯಾವ ರೀತಿಯ ಲಕ್ಷಣಗಳು ಕಂಡುಬರುತ್ತದೆ, ಲಸಿಕೆ ಇದ್ದರೂ ಈ ಮಹಾಮಾರಿಗೆ ಕಡಿವಾಣ ಹಾಕಲು ಆಗದಿರುವುದಕ್ಕೆ ಕಾರಣವೇನು ಎಂಬುದನ್ನು ಈ ಸ್ಟೋರಿಯಲ್ಲಿ ತಿಳಿದುಕೊಳ್ಳಿ.
ಸಾಮಾನ್ಯವಾಗಿ ಎಬೋಲಾ ಒಂದು ಗಂಭೀರ ವೈರಲ್ ಸೋಂಕು. ಸೋಂಕಿತ ವ್ಯಕ್ತಿಯ ರಕ್ತ, ದೇಹದ ದ್ರವಗಳು ಅಥವಾ ಸೋಂಕಿತ ಪ್ರಾಣಿಗಳ ಸಂಪರ್ಕದಿಂದ ಇದು ಹರಡುತ್ತದೆ. 1976ರಲ್ಲಿ ಕಾಂಗೋದಲ್ಲಿ ಮೊದಲ ಬಾರಿ ಈ ವೈರಸ್ ಪತ್ತೆಯಾಯಿತು. ಬಳಿಕ ಉಪ- ಸಹಾರಾ ಆಫ್ರಿಕಾದ ಹಲವು ಪ್ರದೇಶಗಳಲ್ಲಿ ಪ್ರಕರಣಗಳು ವರದಿಯಾಗಿವೆ. ತಜ್ಞರ ಪ್ರಕಾರ, ಎಬೋಲಾ ಸೋಂಕಿನ ಮರಣ ಪ್ರಮಾಣ ತುಂಬಾ ಹೆಚ್ಚು. ಕೆಲ ಸಂದರ್ಭಗಳಲ್ಲಿ ಸೋಂಕಿತ ವ್ಯಕ್ತಿಯ ದೇಹದ ಒಳಭಾಗದಲ್ಲಿ ರಕ್ತಸ್ರಾವ ಉಂಟಾಗಿ ಜೀವಕ್ಕೆ ಅಪಾಯವಾಗಬಹುದು. ಕೆಲವು ಅಧ್ಯಯನಗಳ ಪ್ರಕಾರ, ಈ ವೈರಸ್‌ನ ಮರಣ ಪ್ರಮಾಣ 80ರಿಂದ 90 ಶೇಕಡಾವರೆಗೆ ಇರಬಹುದು. ಹಾಗಾಗಿ ಎಚ್ಚರಿಕೆ ಅನುಸರಿಸುವುದು ಬಹಳ ಅನಿವಾರ್ಯವಾಗಿದೆ.
ಮಹಾಮಾರಿ ತಜ್ಞ ಡಾ. ಜುಗಲ್ ಕಿಶೋರ್ ಅವರ ಪ್ರಕಾರ, ಇದಕ್ಕೆ ಪ್ರಮುಖ ಕಾರಣ ವೈರಸ್‌ನ ವಿಭಿನ್ನ ಸ್ಟ್ರೇನ್‌ಗಳು. ಎಬೋಲಾ ವೈರಸ್ ಹಲವು ರೂಪಗಳಲ್ಲಿ ಕಂಡುಬರುತ್ತದೆ. ಕೆಲವು ಸ್ಟ್ರೇನ್‌ಗಳ ವಿರುದ್ಧ ಲಸಿಕೆ ಪರಿಣಾಮಕಾರಿಯಾಗಿದ್ದರೂ, ಎಲ್ಲ ರೂಪಗಳ ಮೇಲೂ ಅದು ಸಮಾನವಾಗಿ ಕೆಲಸ ಮಾಡುವುದಿಲ್ಲ. ಅದೇರೀತಿ ಎಬೋಲಾದ ಬುಂಡಿಬುಗ್ಯೊ (Bundibugyo) ಎಂಬ ಅಪಾಯಕಾರಿ ಸ್ಟ್ರೇನ್ ಈಗ ಹೆಚ್ಚು ಪ್ರಕರಣಗಳಿಗೆ ಕಾರಣವಾಗುತ್ತಿದೆ. ಈ ಸ್ಟ್ರೇನ್ ವಿರುದ್ಧ ಪರಿಣಾಮಕಾರಿ ಮತ್ತು ಪ್ರಮಾಣಿತ ಲಸಿಕೆ ಇನ್ನೂ ಲಭ್ಯವಿಲ್ಲ. ಇದೇ ಕಾರಣದಿಂದ ಸೋಂಕಿನ ಭೀತಿ ಹೆಚ್ಚುತ್ತಿದೆ. ಇದಕ್ಕೂ ಹೊರತು, ಆಫ್ರಿಕಾದ ದೂರದ ಪ್ರದೇಶಗಳಲ್ಲಿ ಆರೋಗ್ಯ ಸೌಲಭ್ಯಗಳ ಕೊರತೆ, ಸಮಯಕ್ಕೆ ಚಿಕಿತ್ಸೆ ಸಿಗದಿರುವುದು ಹಾಗೂ ಲಸಿಕೆ ತಲುಪಿಸುವಲ್ಲಿ ಆಗುತ್ತಿರುವ ತೊಂದರೆಗಳು ಪರಿಸ್ಥಿತಿಯನ್ನು ಗಂಭೀರಗೊಳಿಸುತ್ತಿವೆ.
ಇದನ್ನೂ ಓದಿ: ಕಿಡ್ನಿ ವೈಫಲ್ಯಕ್ಕೆ ಟ್ರಾನ್ಸ್‌ಪ್ಲಾಂಟ್ ಯಾವಾಗ ಅಗತ್ಯ ಎಂಬುದನ್ನು ಡಾ. ರವಿಶಂಕರ್ ಅವರಿಂದ ತಿಳಿದುಕೊಳ್ಳಿ
ತಜ್ಞರು ಹೇಳುವಂತೆ, ಸೋಂಕು ಹೆಚ್ಚಿರುವ ಪ್ರದೇಶಗಳಿಗೆ ಅನಗತ್ಯ ಪ್ರಯಾಣ ತಪ್ಪಿಸುವುದು ಉತ್ತಮ. ಸೋಂಕಿತ ವ್ಯಕ್ತಿಗಳ ಸಂಪರ್ಕದಿಂದ ದೂರವಿರಬೇಕು. ಕೈಗಳ ಸ್ವಚ್ಛತೆ ಮತ್ತು ಆರೋಗ್ಯ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು ಅಗತ್ಯ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ