
ಆರೋಗ್ಯಕರ ಆಹಾರ ಎಂದಾಕ್ಷಣ ಮೊಟ್ಟೆ ಮತ್ತು ಅವಕಾಡೋ ಎರಡೂ ಕೂಡ ನೆನಪಿಗೆ ಬರುತ್ತವೆ. ಆದರೆ ಪ್ರೋಟೀನ್, ಫೈಬರ್ ಅಂಶ ಹೆಚ್ಚಿಸಿಕೊಳ್ಳಲು ಮೊಟ್ಟೆ ಅಥವಾ ಅವಕಾಡೋ ಇವೆರಡರಲ್ಲಿ ಯಾವುದು ಬೆಸ್ಟ್ ಎಂಬ ಪ್ರಶ್ನೆ ಮೂಡುತ್ತದೆ. ವಾಸ್ತವವಾಗಿ ಈ ಎರಡೂ ಆಹಾರಗಳ ಪೌಷ್ಟಿಕ ಗುಣಗಳು ವಿಭಿನ್ನವಾಗಿವೆ. ಮೊಟ್ಟೆ ಉತ್ತಮ ಗುಣಮಟ್ಟದ ಪ್ರೋಟೀನ್‌ನ ಮೂಲವಾಗಿದ್ದರೆ, ಅವಕಾಡೋ ಫೈಬರ್, ಪೊಟ್ಯಾಸಿಯಂ ಮತ್ತು ಆರೋಗ್ಯಕರ ಕೊಬ್ಬುಗಳನ್ನು ಒದಗಿಸುತ್ತದೆ. ಹೀಗಾಗಿ ನಿಮ್ಮ ಗುರಿಗೆ ಅನುಗುಣವಾಗಿ ಆಯ್ಕೆ ಮಾಡುವುದು ಬಹಳ ಮುಖ್ಯ.
ಅವಕಾಡೋದಲ್ಲಿ ಮೋನೋಅನ್‌ಸ್ಯಾಚುರೇಟೆಡ್ ಫ್ಯಾಟ್ಸ್, ಫೈಬರ್, ಪೊಟ್ಯಾಸಿಯಂ, ವಿಟಮಿನ್ ಸಿ, ಕೆ, ಇ ಮತ್ತು ಫೋಲೇಟ್ ಸೇರಿದಂತೆ ಹಲವು ಪೋಷಕಾಂಶಗಳಿವೆ. ಇದರಲ್ಲಿರುವ ಫೈಬರ್ ಹೊಟ್ಟೆ ತುಂಬಿದ ಅನುಭವ ನೀಡುವುದಕ್ಕೆ ಸಹಾಯ ಮಾಡಬಹುದು.
ಒಂದು ದೊಡ್ಡ ಮೊಟ್ಟೆಯಲ್ಲಿ ಸುಮಾರು 6 ಗ್ರಾಂ ಪ್ರೋಟೀನ್ ಸಿಗುತ್ತದೆ. ಜೊತೆಗೆ ವಿಟಮಿನ್ ಬಿ12, ವಿಟಮಿನ್ ಡಿ, ಸೆಲೆನಿಯಂ ಮತ್ತು ಕೋಲಿನ್‌ನಂತಹ ಪೋಷಕಾಂಶಗಳಿವೆ. ಮೊಟ್ಟೆಯ ಪ್ರೋಟೀನ್ ದೇಹಕ್ಕೆ ಅಗತ್ಯವಾದ ಎಲ್ಲಾ essential amino acidsಗಳನ್ನು ಒದಗಿಸುತ್ತದೆ. ಮೊಟ್ಟೆ ಅವಕಾಡೋಗಿಂತ ಹೆಚ್ಚು ಪ್ರೋಟೀನ್ ಒದಗಿಸುತ್ತದೆ. ವ್ಯಾಯಾಮ ಮಾಡುವವರು ಮೊಟ್ಟೆಯ ಜೊತೆಗೆ ಬೇಳೆ, ಮೊಸರು, ಮೀನು, ಸೋಯಾ ಮುಂತಾದ ಇತರ ಪ್ರೋಟೀನ್ ಮೂಲಗಳನ್ನೂ ಆಹಾರದಲ್ಲಿ ಸೇರಿಸಬಹುದು.
ಇದನ್ನೂ ಓದಿ: Mix Fruits: ಹಣ್ಣುಗಳನ್ನು ಮಿಕ್ಸ್ ಮಾಡಿ ತಿನ್ನುವ ಮುನ್ನ ಈ ವಿಷಯ ತಿಳಿಯಿರಿ
ಸಾಮಾನ್ಯವಾಗಿ ಫೈಬರ್ ಮತ್ತು ಆರೋಗ್ಯಕರ ಕೊಬ್ಬುಗಳನ್ನು ಪಡೆಯಲು ಅವಕಾಡೋ ಉಪಯುಕ್ತ ಆಯ್ಕೆಯಾಗಿದೆ. ಸ್ಯಾಚುರೇಟೆಡ್ ಫ್ಯಾಟ್ ಹೆಚ್ಚಿರುವ ಆಹಾರಗಳ ಬದಲಿಗೆ ಕೊಬ್ಬುಗಳಿರುವ ಆಹಾರಗಳನ್ನು ಆಯ್ಕೆ ಮಾಡುವುದು ಒಳ್ಳೆಯದು.
ಮೊಟ್ಟೆ ಕಡಿಮೆ ಕ್ಯಾಲೊರಿಗಳಲ್ಲಿ ಉತ್ತಮ ಪ್ರಮಾಣದ ಪ್ರೋಟೀನ್ ನೀಡುತ್ತದೆ. ಅವಕಾಡೋದಲ್ಲಿನ ಫೈಬರ್ ಮತ್ತು ಕೊಬ್ಬು ಹೊಟ್ಟೆ ತುಂಬಿದ ಅನುಭವಕ್ಕೆ ಸಹಾಯ ಮಾಡಬಹುದು. ಆದರೆ ತೂಕ ಕಡಿಮೆಯಾಗುವುದನ್ನು ಒಂದೇ ಆಹಾರ ಸೇವನೆ ಮಾಡುವುದು ಒಳ್ಳೆಯದಲ್ಲ. ಒಟ್ಟು ಕ್ಯಾಲೊರಿ ಸೇವನೆ, ಆಹಾರದ ಗುಣಮಟ್ಟ, ವ್ಯಾಯಾಮ, ನಿದ್ರೆ ಎಲ್ಲವೂ ಮುಖ್ಯವಾಗುತ್ತದೆ.
ಮೊಟ್ಟೆಯ ಹಳದಿ ಭಾಗದಲ್ಲಿ ಲುಟೀನ್ ಮತ್ತು ಜಿಯಾಕ್ಸಾಂಥಿನ್ ಎಂಬ ಕ್ಯಾರೋಟಿನಾಯ್ಡ್‌ಗಳಿವೆ. ಇವು ಕಣ್ಣಿನ ಆರೋಗ್ಯಕ್ಕೆ ಸಂಬಂಧಿಸಿದ ಪೋಷಕಾಂಶಗಳಾಗಿವೆ. ಮೊಟ್ಟೆಯಲ್ಲಿರುವ ಕೋಲಿನ್ ಮೆದುಳು ಮತ್ತು ನರಮಂಡಲದ ಹಲವು ಕಾರ್ಯಗಳಲ್ಲಿ ಪಾತ್ರವಹಿಸುತ್ತದೆ.
ಹೌದು. ಮೊಟ್ಟೆ, ಅವಕಾಡೋ, ತರಕಾರಿಗಳು ಮತ್ತು ಸಂಪೂರ್ಣ ಧಾನ್ಯಗಳನ್ನು ಒಳಗೊಂಡ ಉಪಾಹಾರದಿಂದ ಪ್ರೋಟೀನ್ + ಫೈಬರ್ + ಆರೋಗ್ಯಕರ ಕೊಬ್ಬುಗಳು ದೊರೆಯಬಹುದು. ಹೀಗಾಗಿ ಒಂದನ್ನು ಮತ್ತೊಂದಕ್ಕೆ ಪರ್ಯಾಯವೆಂದು ನೋಡುವ ಬದಲು, ಸಮತೋಲಿತ ಆಹಾರದ ಭಾಗವಾಗಿ ಎರಡನ್ನೂ ಬಳಸಬಹುದು. ಪ್ರೋಟೀನ್‌ಗಾಗಿ ಮೊಟ್ಟೆ, ಫೈಬರ್ ಮತ್ತು ಆರೋಗ್ಯಕರ ಕೊಬ್ಬುಗಳಿಗಾಗಿ ಅವಕಾಡೋ ಹೆಚ್ಚು ಉಪಯುಕ್ತ. ಆದರೆ “ಯಾವುದು ಆರೋಗ್ಯಕರ?” ಎನ್ನುವುದಕ್ಕೆ ಒಂದೇ ಉತ್ತರ ಇಲ್ಲ. ನಿಮ್ಮ ಪೌಷ್ಟಿಕ ಅಗತ್ಯ ಮತ್ತು ಒಟ್ಟು ಆಹಾರ ಪದ್ಧತಿಯನ್ನು ಗಮನಿಸಿ ಎರಡನ್ನೂ ಸೂಕ್ತ ಪ್ರಮಾಣದಲ್ಲಿ ಸೇರಿಸಿಕೊಳ್ಳಬಹುದು.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ