ಬೇಸಿಗೆಯಲ್ಲಿ ಖಾಲಿ ಹೊಟ್ಟೆಯಲ್ಲಿ ವಾಕ್ ಮಾಡುವ ಅಭ್ಯಾಸವಿದ್ಯಾ? ತಜ್ಞರು ಈ ಬಗ್ಗೆ ಏನ್ ಹೇಳ್ತಾರೆ ನೋಡಿ

ಬಿಸಿಲಿನ ತಾಪಮಾನ ಎಲ್ಲಾ ಕಡೆಯಲ್ಲಿಯೂ ಹೆಚ್ಚಾಗುತ್ತಿರುವುದರಿಂದ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಬಹಳ ಮುಖ್ಯವಾಗಿದೆ. ಅದರಲ್ಲಿಯೂ ಖಾಲಿ ಹೊಟ್ಟೆಯಲ್ಲಿ ಬೆಳಗಿನ ವಾಕ್ ಮಾಡುವವರು ಕೆಲವು ಸಲಹೆಗಳನ್ನು ಅನುಸರಿಸುವುದು ಅನಿವಾರ್ಯವಾಗಿದೆ. ಹಾಗಾದರೆ ಖಾಲಿ ಹೊಟ್ಟೆಯಲ್ಲಿ ವಾಕ್ ಮಾಡುವುದು ಸುರಕ್ಷಿತವೇ, ಆರೋಗ್ಯ ತಜ್ಞರ ಅಭಿಪ್ರಾಯವೇನು, ಯಾರು ಹೆಚ್ಚು ಅಪಾಯದಲ್ಲಿದ್ದಾರೆ, ಹೀಗೆ ಮತ್ತಷ್ಟು ಮಾಹಿತಿಯನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಬೇಸಿಗೆಯಲ್ಲಿ ಖಾಲಿ ಹೊಟ್ಟೆಯಲ್ಲಿ ವಾಕ್ ಮಾಡುವ ಅಭ್ಯಾಸವಿದ್ಯಾ? ತಜ್ಞರು ಈ ಬಗ್ಗೆ ಏನ್ ಹೇಳ್ತಾರೆ ನೋಡಿ
Walking on Empty Stomach in Hot Weather
Image Credit source: Getty Images

Updated on: Apr 25, 2026 | 3:35 PM

ದೇಶದ ಹಲವು ಭಾಗಗಳಲ್ಲಿ ಬೇಸಿಗೆ ಶಾಖ ತೀವ್ರವಾಗುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಕೊಡುವುದು ಅನಿವಾರ್ಯವಾಗಿದೆ. ಅದರಲ್ಲಿಯೂ ಖಾಲಿ ಹೊಟ್ಟೆಯಲ್ಲಿ ಬೆಳಗಿನ ವಾಕ್ ಮಾಡುವವರು ಕೆಲವು ಸಲಹೆಗಳನ್ನು ಅನುಸರಿಸುವುದು ಅನಿವಾರ್ಯವಾಗಿದೆ. ಏಕೆಂದರೆ ಬೇಸಿಗೆ ಎಲ್ಲಾ ಸಮಯದ ಹಾಗಲ್ಲ. ಎಷ್ಟು ಕಾಳಜಿ ವಹಿಸಿದರೂ ಸಾಲುವುದಿಲ್ಲ. ಹಾಗಾದರೆ ಖಾಲಿ ಹೊಟ್ಟೆಯಲ್ಲಿ ವಾಕ್ (Walking) ಮಾಡುವುದು ಸುರಕ್ಷಿತವೇ, ಆರೋಗ್ಯ ತಜ್ಞರ ಅಭಿಪ್ರಾಯವೇನು, ಯಾರು ಹೆಚ್ಚು ಅಪಾಯದಲ್ಲಿದ್ದಾರೆ, ಹೀಗೆ ಈ ಬಗ್ಗೆ ಮತ್ತಷ್ಟು ಮಾಹಿತಿಯನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಖಾಲಿ ಹೊಟ್ಟೆಯಲ್ಲಿ ವಾಕ್ ಸುರಕ್ಷಿತವೇ?

ತಜ್ಞರು ಹೇಳುವಂತೆ, ಇದು ವ್ಯಕ್ತಿಯ ಆರೋಗ್ಯ ಸ್ಥಿತಿಯ ಮೇಲೆ ಅವಲಂಬಿತವಾಗಿರುತ್ತದೆ. ಯಾವುದೇ ಗಂಭೀರ ಆರೋಗ್ಯ ಸಮಸ್ಯೆಗಳಿಲ್ಲದವರು ಮತ್ತು ದೇಹದಲ್ಲಿ ನೀರಿನ ಕೊರತೆ (ಡಿಹೈಡ್ರೇಶನ್) ಇಲ್ಲದಿದ್ದರೆ ಖಾಲಿ ಹೊಟ್ಟೆಯಲ್ಲಿ ಬೆಳಗಿನ ವಾಕ್ ಮಾಡಬಹುದು. ಆದರೆ, ಎಲ್ಲರಿಗೂ ಇದು ಸೂಕ್ತವಾಗಿರುವುದಿಲ್ಲ. ವಾಕ್ ಹೋದಾಗ ತುಂಬಾ ಆಯಾಸ, ದಣಿವು ಕಂಡುಬರುತ್ತಿದ್ದರೆ ವೈದ್ಯರ ಸಂಪರ್ಕ ಮಾಡಿ.

ಯಾರು ಎಚ್ಚರಿಕೆ ವಹಿಸಬೇಕು?

ಮಧುಮೇಹ (ಡಯಾಬಿಟೀಸ್) ಇರುವವರು ಖಾಲಿ ಹೊಟ್ಟೆಯಲ್ಲಿ ವಾಕ್ ಮಾಡುವುದನ್ನು ತಪ್ಪಿಸಬೇಕು. ಇದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ಅಕಸ್ಮಾತ್ ಕಡಿಮೆಯಾಗುವ ಸಾಧ್ಯತೆ ಇರುತ್ತದೆ, ಇದು ತಲೆಸುತ್ತು ಅಥವಾ ದುರ್ಬಲತೆಯನ್ನು ಉಂಟುಮಾಡಬಹುದು. ಇಂತಹವರು ಬೆಳಿಗ್ಗೆ ಸ್ವಲ್ಪ ಪ್ರೋಟೀನ್ ಇರುವ ಆಹಾರ ಸೇವನೆ ಮಾಡಬೇಕು. ಉದಾಹರಣೆಗೆ ನೆನೆಸಿದ ಕಡಲೆ ತಿಂದು ವಾಕ್‌ಗೆ ಹೋಗುವುದು ಉತ್ತಮ.

ಇದನ್ನೂ ಓದಿ: ಬೆಳಗಿನ ನಡಿಗೆ ಅಥವಾ ಊಟದ ನಂತರದ ನಡಿಗೆ ಯಾವುದು ಉತ್ತಮ?

ಬೇಸಿಗೆಯಲ್ಲಿ ಏಕೆ ಹೆಚ್ಚಿನ ಜಾಗ್ರತೆ ಅಗತ್ಯ?

ಬೇಸಿಗೆಯಲ್ಲಿ ಹೆಚ್ಚು ಬೆವರು ಬರುತ್ತದೆ, ಇದರಿಂದ ದೇಹದಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತದೆ. ಖಾಲಿ ಹೊಟ್ಟೆಯಲ್ಲಿರುವಾಗ ಇದು ಹೆಚ್ಚಾಗಿ ಪರಿಣಾಮ ಬೀರುತ್ತದೆ. ತಲೆನೋವು, ದಣಿವು ಮತ್ತು ಡಿಹೈಡ್ರೇಶನ್ ಸಮಸ್ಯೆಗಳು ಕಾಣಿಸಬಹುದು. ಆದ್ದರಿಂದ ವಾಕ್‌ಗೆ ಹೊರಡುವ ಮೊದಲು ಸಾಕಷ್ಟು ನೀರು ಕುಡಿಯುವುದನ್ನು ಮರೆಯಬೇಡಿ. ಜೊತೆಗೆ ಬೆಳಗ್ಗೆ 5ರಿಂದ 6 ಗಂಟೆಯೊಳಗೆ ವಾಕ್ ಮಾಡುವುದು ಉತ್ತಮ. ನಂತರ ಸೂರ್ಯನ ತಾಪಮಾನ ಹೆಚ್ಚುತ್ತಾ ಹೋಗುವುದರಿಂದ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us