Erectile Dysfunction : ಪುರುಷರಲ್ಲಿ ಕಂಡುಬರುವ ಈ ಲೈಂಗಿಕ ಅಸಮರ್ಥತೆ ಹೃದಯಾಘಾತದ ಅಪಾಯವನ್ನು ಹೆಚ್ಚಿಸಬಹುದು

|

Updated on: Jun 28, 2023 | 10:51 AM

ನಿಮಿರು ದೌರ್ಬಲ್ಯ ಹೊಂದಿರುವ ಪುರುಷರಲ್ಲಿ ಮಾರಣಾಂತಿಕ ಹೃದಯಾಘಾತದ ಅಪಾಯವನ್ನು ಹೆಚ್ಚಾಗಿ ಕಂಡುಬರುತ್ತದೆ. ಆದ್ದರಿಂದ ಈ ಸಮಸ್ಯೆಯಿಂದ ಹೊರಬರುವುದು ಹೇಗೆ ಎಂಬುದರ ಕುರಿತು ಮಾಹಿತಿ ಇಲ್ಲಿದೆ.

Erectile Dysfunction : ಪುರುಷರಲ್ಲಿ ಕಂಡುಬರುವ ಈ ಲೈಂಗಿಕ ಅಸಮರ್ಥತೆ ಹೃದಯಾಘಾತದ ಅಪಾಯವನ್ನು ಹೆಚ್ಚಿಸಬಹುದು
Erectile Dysfunction
Follow us on

ನಿಮಿರು ದೌರ್ಬಲ್ಯ ಎಂಬುದು ಸಾಮಾನ್ಯವಾಗಿ ಪುರುಷರಲ್ಲಿ ಕಂಡು ಬರುವ ಸಮಸ್ಯೆಯಾಗಿದೆ. ಇಂತಹ ಸಮಸ್ಯೆಯಿಂದ ಪುರುಷರು ಬಳಲುತ್ತಿದ್ದರೆ ಅವರು ತಮ್ಮ ಸಂಗಾತಿಗೆ ಲೈಂಗಿಕವಾಗಿ ತೃಪ್ತಿಯನ್ನು ನೀಡಲು ಅಸಮರ್ಥರಾಗಿರುತ್ತಾರೆ. ಜೊತೆಗೆ ಸಾಕಷ್ಟು ಖಿನ್ನತೆಗೆ ಒಳಗಾಗುತ್ತಾರೆ. ಆದರೆ ಇದು ಮಾರಣಾಂತಿಕ ಕಾಯಿಲೆಯಲ್ಲ. ಅನೇಕ ಪುರುಷರು ನಿಮಿರುವಿಕೆಯ ಅಪಸಾಮಾನ್ಯ ಕ್ರಿಯೆ ಅಥವಾ ನಿಮಿರು ದೌರ್ಬಲ್ಯವನ್ನು ಮಾನಸಿಕ ಸಮಸ್ಯೆ ಎಂದು ಭಾವಿಸುತ್ತಾರೆ. ಆದಾಗ್ಯೂ, ರಕ್ತನಾಳದ ಸಮಸ್ಯೆಗಳು ಇದರ ಸಾಮಾನ್ಯ ಕಾರಣವೆಂದು ಸಂಶೋಧನೆ ಸೂಚಿಸುತ್ತದೆ. ಈ ಸಮಸ್ಯೆಗಳು ಇತರ ಗಂಭೀರ  ಸಮಸ್ಯೆಗಳ ಅಪಾಯಕ್ಕೆ ತಳ್ಳಬಹುದು ಎಂದು ತಜ್ಞರು ಎಚ್ಚರಿಸುತ್ತಾರೆ.

ನಿಮಿರುವಿಕೆ ಮತ್ತು ಮಧುಮೇಹ:

ನಿಮಿರು ದೌರ್ಬಲ್ಯ ಟೈಪ್ 2 ಮಧುಮೇಹದೊಂದಿಗೆ ನಿಕಟ ಸಂಬಂಧ ಹೊಂದಿದೆ. ರಕ್ತದಲ್ಲಿನ ಅಧಿಕ ಸಕ್ಕರೆಯು ನಿಮಿರುವಿಕೆಯ ಕಾರ್ಯಕ್ಕೆ ಕಾರಣವಾದ ರಕ್ತನಾಳಗಳು ಮತ್ತು ನರಗಳನ್ನು ಹಾನಿಗೊಳಿಸುತ್ತದೆ. ಜಾನ್ಸ್ ಹಾಪ್ಕಿನ್ಸ್ ಬ್ಲೂಮ್‌ಬರ್ಗ್ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್‌ನ ಸಂಶೋಧಕರು ನಡೆಸಿದ ಅಧ್ಯಯನವು ಮಧುಮೇಹ ಹೊಂದಿರುವ ಅಧ್ಯಯನದಲ್ಲಿ ಸುಮಾರು ಅರ್ಧದಷ್ಟು ಪುರುಷರಲ್ಲಿ ನಿಮಿರು ದೌರ್ಬಲ್ಯವನ್ನು ಹೊಂದಿದ್ದಾರೆ ಎಂದು ತಿಳಿದುಕೊಂಡಿದ್ದಾರೆ.

ಇದನ್ನೂ ಓದಿ: ಕೃತಕ ಗರ್ಭಧಾರಣೆಯಿಂದ ಅವಳಿ ಮಕ್ಕಳ ಜನನ.. ಡಿಎನ್ಎ ಪರೀಕ್ಷೆ ನಡೆಸಿದಾಗ ಹೊರಬಿತ್ತು ಶಾಕಿಂಗ್ ನ್ಯೂಸ್!

ಜೀವನಶೈಲಿ ಆಯ್ಕೆಗಳು ಮುಖ್ಯ:

ಆರೋಗ್ಯಕರ ಜೀವನಶೈಲಿಯ ಆಯ್ಕೆಗಳು ಪರಿಣಾಮ ಬೀರಬಹುದು ಎಂಬುದು ಒಳ್ಳೆಯ ಸುದ್ದಿ. ಪೌಷ್ಟಿಕ ಆಹಾರವನ್ನು ಸೇವಿಸುವುದು, ನಿಯಮಿತವಾಗಿ ವ್ಯಾಯಾಮ ಮಾಡುವುದು, ಧೂಮಪಾನವನ್ನು ತಪ್ಪಿಸುವುದು ಮತ್ತು ಅಧಿಕ ರಕ್ತದೊತ್ತಡ, ಅಧಿಕ ಕೊಲೆಸ್ಟ್ರಾಲ್ ಮತ್ತು ಮಧುಮೇಹವನ್ನು ನಿಯಂತ್ರಿಸುವುದು ಹೃದಯಾಘಾತ ಮತ್ತು ಪಾರ್ಶ್ವವಾಯು ಅಪಾಯವನ್ನು ಕಡಿಮೆ ಮಾಡುತ್ತದೆ. ಇದು ನಿಮ್ಮ ಸಂಗಾತಿಯೊಂದಿಗಿನ ಲೈಂಗಿಕ ಕ್ರಿಯೆಯನ್ನು ಸುಧಾರಿಸಬಹುದು.

ನಿಮಿರು ದೌರ್ಬಲ್ಯ ಹೃದಯಾಘಾತದ ಅಪಾಯವನ್ನು ಹೇಗೆ ಹೆಚ್ಚಿಸುತ್ತದೆ?

ಡಾ. ವಿನೀತ್​​​ ಮಲ್ಹೋತ್ರಾ ಅವರ ಪ್ರಕಾರ ಈ ಎರಡು ಸಮಸ್ಯೆಗಳಿಗೆ ಕಾರಣವಾಗುವ ಅಂಶಗಳನ್ನು ಪಟ್ಟಿ ಮಾಡಿದ್ದಾರೆ:

  • ಒತ್ತಡದ ಹಾಗೂ ಜಡ ಜೀವನಶೈಲಿ
  • ಕಳಪೆ ಆಹಾರ ಪದ್ದತಿ
  • ಹೆಚ್ಚಿನ ಒತ್ತಡ ಹಾಗೂ ಅತಿಯಾದ ಯೋಚನೆ
  • ಅಧಿಕ ಧೂಮಪಾನ ಹಾಗೂ ಮದ್ಯಪಾನದ ಚಟ
  • ರಕ್ತದೊತ್ತಡ

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: