Monsoon Ailments: ಮಳೆಯು ಚರ್ಮದ ಸೋಂಕುಗಳನ್ನು ಹೆಚ್ಚಿಸಬಹುದು; ತಜ್ಞರ ಸಲಹೆ ಇಲ್ಲಿದೆ

ಮಳೆಗಾಲವು ಶಾಖದಿಂದ ಪರಿಹಾರವನ್ನು ತರುವುದರ ಜೊತೆಗೆ, ಹಲವಾರು ಚರ್ಮದ ಕಾಯಿಲೆಗಳನ್ನು ತರುತ್ತದೆ. ಚರ್ಮರೋಗ ತಜ್ಞರಾದ ಡಾ ರಿಂಕಿ ಕಪೂರ್ ಮಳೆಗಾಲ ಚರ್ಮಕ್ಕೆ ಹಾನಿಕಾರಕ ಎಂದು ಎಚ್ಚರಿಸಿದ್ದಾರೆ.

Monsoon Ailments: ಮಳೆಯು ಚರ್ಮದ ಸೋಂಕುಗಳನ್ನು ಹೆಚ್ಚಿಸಬಹುದು; ತಜ್ಞರ ಸಲಹೆ ಇಲ್ಲಿದೆ
Skin allergiesImage Credit source: Getty Images
Follow us
ಅಕ್ಷತಾ ವರ್ಕಾಡಿ
|

Updated on: Jun 28, 2023 | 6:38 AM

ಮಳೆಗಾಲ ಪ್ರಾರಂಭವಾಯಿತೆಂದರೆ ಸಾಕು. ಇನ್ಮುಂದೆ ಸುಡು ಬಿಸಿಲು, ಬೆವರಿನಿಂದ ಮುಕ್ತಿ ಎಂದು ನೀವು ಭಾವಿಸಬಹುದು. ಆದರೆ ಮಳೆಗಾಲವು ಶಾಖದಿಂದ ಪರಿಹಾರವನ್ನು ತರುವುದರ ಜೊತೆಗೆ, ಹಲವಾರು ಚರ್ಮದ ಕಾಯಿಲೆಗಳನ್ನು ತರುತ್ತದೆ. ಶಿಲೀಂಧ್ರಗಳ ಚರ್ಮದ ಸೋಂಕುಗಳು ಮತ್ತು ಅಲರ್ಜಿಗಳು ಸಾಮಾನ್ಯವಾಗಿ ಕಂಡುಬರುತ್ತವೆ. ಕಳೆದ ಕೆಲವು ದಿನಗಳಿಂದ ದೇಶವು ಮುಂಗಾರು ಋತುವನ್ನು ಅನುಭವಿಸುತ್ತಿದೆ. ಮಳೆಯು ರಾಜ್ಯಗಳಲ್ಲಿ ಬಿಸಿಲಿನ ತಾಪದಿಂದ ಪರಿಹಾರವನ್ನು ತರುತ್ತಿದ್ದರೂ ಸಹ , ಇದು ಹಲವಾರು ಕಾಯಿಲೆಗಳನ್ನು ಕೂಡ ಜೊತೆಗೆ ತರುತ್ತಿದೆ. ಶೀತ, ಕೆಮ್ಮು ಮತ್ತು ಜ್ವರದಂತಹ ಸಾಮಾನ್ಯ ಕಾಯಿಲೆಗಳೊಂದಿಗೆ, ಈ ಋತುವಿನಲ್ಲಿ ಚರ್ಮ ರೋಗಗಳು ಸಹ ಉಲ್ಬಣಗೊಳ್ಳುತ್ತವೆ.

ಚರ್ಮರೋಗ ತಜ್ಞರಾದ ಡಾ ರಿಂಕಿ ಕಪೂರ್ ಮಳೆಗಾಲ ಚರ್ಮಕ್ಕೆ ಹಾನಿಕಾರಕ ಎಂದು ಎಚ್ಚರಿಸಿದ್ದಾರೆ. ಮಳೆಗಾಲದಲ್ಲಿ ಚರ್ಮದ ಅಲರ್ಜಿಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ ಎಂದು ತಜ್ಞರು ಹೇಳಿದ್ದಾರೆ.

ಇದನ್ನೂ ಓದಿ: ನಿಮ್ಮ ದೇಹದಲ್ಲಿ ವಿಟಮಿನ್ ಬಿ 12 ಹೆಚ್ಚಾದರೆ ಈ ಅಪಾಯಕಾರಿ ಲಕ್ಷಣಗಳು ಕಂಡುಬರಬಹುದು

ಮಳೆಗಾಲದಲ್ಲಿ ಚರ್ಮದ ಅಲರ್ಜಿಗೆ ಕಾರಣಗಳು:

  • ಮಳೆಯ ನೀರು ಸುರಿಯುವಾಗ ಗಾಳಿಯಲ್ಲಿನ ಮಾಲಿನ್ಯಕಾರಕಗಳಾದ ಧೂಳಿನ ಹುಳಗಳು ಮತ್ತು ರಾಸಾಯನಿಕ ಹೊಗೆಯೊಂದಿಗೆ ಬೆರೆತು ಚರ್ಮದ ಸಮಸ್ಯೆಗಳು ಮತ್ತು ತುರಿಕೆಗೆ ಕಾರಣವಾಗುತ್ತದೆ ಎಂದು ಡಾ ಕಪೂರ್ ಹೇಳುತ್ತಾರೆ. ಇದರ ಜೊತೆಯಲ್ಲಿ, ಮಳೆಗಾಲದಲ್ಲಿ ಕೀಟಗಳ ಸಂತಾನೋತ್ಪತ್ತಿ ಹೆಚ್ಚಾಗಿ ಇರುವುರಿಂದ ಹೆಚ್ಚು ಚರ್ಮದ ಸಮಸ್ಯೆಗಳಿಗೆ ಕಾರಣವಾಗುತ್ತದೆ.
  • ಮಳೆಗಾಲವು ಚರ್ಮವನ್ನು ಜಿಗುಟಾದ ಮತ್ತು ಹೆಚ್ಚು ಎಣ್ಣೆ ಸ್ರವಿಸುವಿಕೆಯನ್ನು ಉಂಟುಮಾಡುತ್ತದೆ. ಇದು ಚರ್ಮದ ತುರಿಕೆಗೆ ಕಾರಣವಾಗುತ್ತದೆ. ಮತ್ತೊಂದು ತೊಂದರೆಯೆಂದರೆ, ನೀವು ಚರ್ಮದ ಅಲರ್ಜಿಗಳಿಗೆ ಚಿಕಿತ್ಸೆ ನೀಡದಿದ್ದರೆ, ಅವು ಹೆಚ್ಚು ತುರಿಕೆಗೆ ಕಾರಣವಾಗಬಹುದು ಮತ್ತು ಚರ್ಮದ ಮೇಲ್ಮೈ ಹಾನಿಗೊಳಗಾಗುತ್ತದೆ, ಇದರಿಂದಾಗಿ ಬಿರುಕುಗಳು ಕಾಣಿಸಿಕೊಳ್ಳುತ್ತವೆ, ಇದರಿಂದಾಗಿ ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳು ಚರ್ಮದ ಅಡಿಯಲ್ಲಿ ಉಳಿದುಕೊಂಡು ಅಲರ್ಜಿಗಳಿಗೆ ಕಾರಣವಾಗುತ್ತವೆ ಎಂದು ಡಾ ಕಪೂರ್ ಎಚ್ಚರಿಸುತ್ತಾರೆ.
  • ಒದ್ದೆಯಾದ ಬಟ್ಟೆ, ಬೂಟುಗಳು ಮತ್ತು ಸಾಕ್ಸ್‌ಗಳು ದೇಹದ ಮೇಲೆ ಉಜ್ಜುತ್ತವೆ ಮತ್ತು ವಿಶೇಷವಾಗಿ ಚರ್ಮದ ಮಡಿಕೆಗಳಲ್ಲಿ ಮತ್ತು ತೊಡೆಸಂದು ಪ್ರದೇಶಗಳಲ್ಲಿ ತುರಿಕೆಗೆ ಕಾರಣವಾಗುತ್ತದೆ. ಇದು ಒಂದು ರೀತಿಯ ನೋವಿನ ಮತ್ತು ಅಹಿತಕರ ಅಲರ್ಜಿಯಾಗಿದೆ.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್