Nose Health: ಧೂಳು ಮತ್ತು ಅಲರ್ಜಿಯಿಂದ ನಿಮ್ಮ ಮೂಗನ್ನು ರಕ್ಷಿಸಲು 4 ಆಯುರ್ವೇದ ಸಲಹೆಗಳು ಇಲ್ಲಿವೆ

ನಿಮ್ಮ ಇಡೀ ದೇಹವು ಮೂಗಿನ ಸಮಸ್ಯೆಯಿಂದ ಹಲವಾರು ರೀತಿಯಲ್ಲಿ ಪರಿಣಾಮ ಅನುಭವಿಸಬಹುದು ಎಂದು ನಿಮಗೆ ತಿಳಿದಿದೆಯೇ? ಹಾಗಾದರೆ ಮೂಗಿನ ಸುರಕ್ಷತೆಗೆ ಏನು ಮಾಡಬಹುದು ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ.

Nose Health: ಧೂಳು ಮತ್ತು ಅಲರ್ಜಿಯಿಂದ ನಿಮ್ಮ ಮೂಗನ್ನು ರಕ್ಷಿಸಲು 4 ಆಯುರ್ವೇದ ಸಲಹೆಗಳು ಇಲ್ಲಿವೆ
ಸಾಂದರ್ಭಿಕ ಚಿತ್ರ
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on: Apr 24, 2023 | 12:14 PM

ಮೂಗಿನ ಆರೋಗ್ಯ ಬಹಳ ಮುಖ್ಯವಾದದ್ದು. ಏಕೆಂದರೆ ಮೂಗು (Nose) ತಲೆಯನ್ನು ತಲುಪುವ ದ್ವಾರದಂತಿದೆ. ಮೂಗಿನ ಯಾವುದೇ ಅಡಚಣೆ ನೀವು ಗ್ರಹಿಸುವುದಕ್ಕಿಂತ ವೇಗವಾಗಿ ತಲೆಯ ಮೇಲೆ ಪರಿಣಾಮ ಬೀರಬಹುದು. ಮೂಗು ಕೇವಲ ಇಂದ್ರಿಯ ಅಂಗವಲ್ಲ ನಮ್ಮ ಶ್ವಾಸಕೋಶವನ್ನು ಹಾನಿಕಾರಕ ಬ್ಯಾಕ್ಟೀರಿಯಾ ಮತ್ತು ಅಲರ್ಜಿಕಾರಕಗಳಿಂದ ರಕ್ಷಿಸುತ್ತದೆ. ಆಯುರ್ವೇದ ವೈದ್ಯ ಮತ್ತು ಸ್ವಾಸ್ಥ್ಯ ತರಬೇತುದಾರ ವರ ಯನಮೀಂದ್ರ ಅವರು ಆರೋಗ್ಯಕರ ಮೂಗಿಗೆ ಆಯುರ್ವೇದ ಸಲಹೆಗಳನ್ನು ಹಂಚಿಕೊಳ್ಳುತ್ತಾರೆ. ತಜ್ಞರ ಪ್ರಕಾರ, ಮೂಗು ಕೇವಲ ಇಂದ್ರಿಯ ಅಂಗವಲ್ಲ ಆದರೆ ಉಸಿರಾಟದ ಪ್ರಮುಖ ರಚನೆಯಾಗಿದೆ. ಮೂಗನ್ನು ಔಷಧ ನಿರ್ವಹಣೆಗೆ ವೇಗದ ಮಾರ್ಗಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ.

ನಿಮ್ಮ ಮೂಗನ್ನು ಆರೋಗ್ಯಕರವಾಗಿಡಲು 4 ಆಯುರ್ವೇದ ಮಾರ್ಗಗಳು ಇಲ್ಲಿವೆ:

ಸ್ವಚ್ಛಗೊಳಿಸಿಕೊಳ್ಳಿ: ಪ್ರತಿದಿನ ಆಗದಿದ್ದರೆ 2 ದಿನಕ್ಕೆ ಒಮ್ಮೆಯಾದರೂ ಮೂಗನ್ನು ಸ್ವಚ್ಛಗೊಳಿಸಿಕೊಳ್ಳಿ. ಧೂಳು ಅಥವಾ ಇನ್ನಿತರ ಸಂದರ್ಭಗಳಲ್ಲಿ ಹೆಚ್ಚಿನ ಮುನ್ನೆಚ್ಚರಿಕೆ ವಹಿಸಿ. ಹೆಚ್ಚುವರಿ ದ್ರವವನ್ನು ಹೊರಹಾಕಲು ನಿಮ್ಮ ಸೈನಸ್​​ಗಳನ್ನು ಶುದ್ಧೀಕರಿಸಲು ನೇತಿ ಅಥವಾ ಉಪ್ಪು ನೀರನ್ನು ಪ್ರಯತ್ನಿಸಬಹುದು.

ರಕ್ಷಿಸಿಕೊಳ್ಳಿ: ನೀವು ಅಲರ್ಜಿಯೊಂದಿಗೆ ಹೋರಾಡುತ್ತಿದ್ದರೆ, ನಿಮ್ಮ ಮೂಗಿನ ಒಳಗೆ ಒಂದು ಹನಿ ತುಪ್ಪ ಹಾಕಿ ಅದನ್ನು ಮೂಗಿನ ಒಳಗೆ ಸವರಿಕೊಳ್ಳಿ ಇದರಿಂದ ಏನು ತೊಂದರೆ ಇರುವುದಿಲ್ಲ ಆದರೆ ನೀವು ಶುದ್ಧ ತುಪ್ಪ ಬಳಸಬೇಕಾಗುತ್ತದೆ. ಇದು ಮೂಗಿನಲ್ಲಿರುವ ಅಲರ್ಜಿಕಾರಕಗಳ ಸಂಪರ್ಕವನ್ನು ತಪ್ಪಿಸಿ. ನಿಮಗೆ ತುರಿಕೆ ಅಥವಾ ಇನ್ನಿತರ ಅಲರ್ಜಿಯಿಂದ ಮುಕ್ತಿಗೊಳಿಸುತ್ತದೆ.

ಬಲವರ್ಧನೆ: ಉಸಿರಾಟಕ್ಕೆ ಕಷ್ಟವಾಗುತ್ತಿದ್ದಲ್ಲಿ ಸ್ವಲ್ಪ ಒಣ ಪುಡಿಯನ್ನು ಸೇರಿಸಿ ಇನ್ಹೇಲ್ ಮಾಡಿ.(ವೈದ್ಯರ ಸಲಹೆ ಅಗತ್ಯ) ಇದು ಯಾವುದೇ ಉರಿಯೂತವನ್ನು ಕೂಡ ಗುಣಪಡಿಸಲು ಸಹಾಯ ಮಾಡುತ್ತದೆ ಮತ್ತು ಮೂಗಿನ ಲೋಳೆಯಿಂದ ಅಲರ್ಜಿಕಾರಕಗಳನ್ನು ತೆಗೆದುಹಾಕುವಲ್ಲಿ ಸಹಾಯ ಮಾಡುತ್ತದೆ.

ಇದನ್ನೂ ಓದಿ:Nasal Vaccine Price: ಮೂಗಿನ ಮೂಲಕ ಹಾಕುವ ಕೋವಿಡ್ ಲಸಿಕೆಗೆ ಬೆಲೆ ನಿಗದಿ: ಸರ್ಕಾರಿ, ಖಾಸಗಿ ಆಸ್ಪತ್ರೆ ದರ ವಿವರ

ಮುನ್ನೆಚ್ಚರಿಕೆ ಇರಲಿ: ನಿಯಮಿತವಾಗಿ ಮೂಗಿನ ಒಳಸೇರಿಸುವ ಧೂಳು ಮಾಲಿನ್ಯಕಾರಕಗಳ ಬಗ್ಗೆ ಗಮನ ನೀಡಿ. ಏಕೆಂದರೆ ಇವು ಕೇವಲ ನಿಮ್ಮ ಮೂಗು ಮಾತ್ರವಲ್ಲ ತಲೆವರೆಗೂ ಪ್ರಭಾವ ಬೀರಬಲ್ಲದು. ನೀವು ಮುನ್ನೆಚ್ಚರಿಕೆ ವಹಿಸಿದಲ್ಲಿ ನಿಮ್ಮ ತಲೆಯ ಒಟ್ಟಾರೆ ಆರೋಗ್ಯಕ್ಕೆ ಸಹಾಯ ಮಾಡುತ್ತದೆ. ಇದು ತಲೆನೋವನ್ನು ನಿವಾರಿಸುತ್ತದೆ, ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ ಮತ್ತು ಮಾನಸಿಕ ಕಾರ್ಯವನ್ನು ಹೆಚ್ಚಿಸುತ್ತದೆ.

ನಿಮ್ಮ ಇಡೀ ದೇಹವು ಮೂಗಿನ ಸಮಸ್ಯೆ ಇಂದಾಗಿ ಹಲವಾರು ರೀತಿಯಲ್ಲಿ ಪರಿಣಾಮಗಳನ್ನು ಅನುಭವಿಸಬಹುದು ಎಂದು ನಿಮಗೆ ತಿಳಿದಿದೆಯೇ? ಶೀತದಿಂದ ಕಿಕ್ಕಿರಿದ ಮೂಗು ನಿಮಗೆ ಉಸಿರಾಡಲು, ಮಲಗಲು ಅಥವಾ ವಿಶ್ರಾಂತಿ ಪಡೆಯಲು ಕಷ್ಟವಾಗಬಹುದು.

ಕೆಲವರು ಮೂಗಿನ ಬಗೆಗೆ ಹೆಚ್ಚಿನ ಕಾಳಜಿ ವಹಿಸುತ್ತಾರೆ. ಇನ್ನು ಕೆಲವರು ನಿರ್ಲಕ್ಷಿಸುತ್ತಾರೆ. ಹಾಗಾಗಿ ನಿಮ್ಮ ಉತ್ತಮ ಆರೋಗ್ಯಕ್ಕೆ ಮೂಗು ಕೂಡ ಪ್ರಮುಖ ಪಾತ್ರ ವಹಿಸುತ್ತದೆ. ಸರಿಯಾದ ರೀತಿಯಲ್ಲಿ ಆಯುರ್ವೇದದಿಂದ ಪ್ರಮಾಣೀಕೃತವಾದ ಸಲಹೆಗಳನ್ನು ಮಾತ್ರ ಪ್ರಯತ್ನಿಸಿ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ