AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Eye Health: ದೃಷ್ಟಿ ಸುಧಾರಿಸಿಕೊಳ್ಳಲು ಈ ಕೆಲವು ಆರೋಗ್ಯಕರ ಆಹಾರ ಪದಾರ್ಥಗಳನ್ನು ಸೇವಿಸಿ

ಕಣ್ಣಿನ ಆರೈಕೆಗಾಗಿ ಉತ್ತಮ ಆಹಾರವನ್ನು ಸೇವಿಸುವುದು ಬಹಳ ಮುಖ್ಯ. ಈ ಕೆಲವು ಆಹಾರ ಪದಾರ್ಥಗಳು ನಿಮ್ಮ ಕಣ್ಣುಗಳ ಆರೋಗ್ಯವನ್ನು ಸುಧಾರಿಸಲು ಸಹಾಯಕವಾಗಿದೆ.

Eye Health:  ದೃಷ್ಟಿ ಸುಧಾರಿಸಿಕೊಳ್ಳಲು ಈ ಕೆಲವು ಆರೋಗ್ಯಕರ ಆಹಾರ ಪದಾರ್ಥಗಳನ್ನು ಸೇವಿಸಿ
ಪ್ರಾತಿನಿಧಿಕ ಚಿತ್ರ
TV9 Web
| Edited By: |

Updated on: Nov 12, 2021 | 8:05 AM

Share

ದಿನವಿಡೀ ಕಂಪ್ಯೂಟರ್ ಮುಂದೆ ಕುಳಿತು ಕೆಲಸ ಮಾಡುವುದರಿಂದ ಕಣ್ಣುಗಳಿಗೆ ಒತ್ತಡ ಉಂಟಾಗಿರಬಹುದು. ಅನೇಕರಿಗೆ ದೃಷ್ಟಿ ಸಮಸ್ಯೆಗಳು ಈಗಾಗಲೇ ಕಾಡುತ್ತಿರಬಹುದು. ನಿಮ್ಮ ಜೀವನ ಶೈಲಿಯಲ್ಲಿನ ಕೆಲವು ಬದಲಾವಣೆಗಳು ಮತ್ತು ಆಹಾರ ಪದ್ಧತಿಯಲ್ಲಿನ ಕೆಲವು ಬದಲಾವಣೆಗಳಿಂದ ನಿಮ್ಮ ಆರೋಗ್ಯವನ್ನು ಸುಧಾರಿಸಿಕೊಳ್ಳಿ. ಹಾಗಿರುವಾಗ ಕಣ್ಣಿನ ಆರೈಕೆಗಾಗಿ ಉತ್ತಮ ಆಹಾರವನ್ನು ಸೇವಿಸುವುದು ಬಹಳ ಮುಖ್ಯ. ಈ ಕೆಲವು ಆಹಾರ ಪದಾರ್ಥಗಳು ನಿಮ್ಮ ಕಣ್ಣುಗಳ ಆರೋಗ್ಯವನ್ನು ಸುಧಾರಿಸಲು ಸಹಾಯಕವಾಗಿದೆ. ಹಾಗಿರುವಾಗ ಯಾವ ಯಾವ ಆಹಾರ ಪದಾರ್ಥಗಳನ್ನು ಸೇವಿಸಬೇಕು ಎಂಬುದು ಈ ಕೆಳಗಿನಂತಿದೆ ತಿಳಿದುಕೊಳ್ಳಿ.

ಈ ಕೆಲವು ಆಹಾರ ಪದಾರ್ಥಗಳು ಕಣ್ಣುಗಳಿಗೆ ತುಂಬಾ ಪ್ರಯೋಜನಕಾರಿ ಸೊಪ್ಪು ಹಸಿರು ಸೊಪ್ಪು ನಿಮ್ಮ ದೃಷ್ಟಿ ಸುಧಾರಣೆಗೆ ಸಹಾಯಕ. ಪಾಲಾಕ್ ಸೊಪ್ಪು, ವಿಟಮಿನ್ ಮತ್ತು ಮಿನರಲ್​ಗಳಿಂದ ಸಮೃದ್ಧವಾಗಿರುವ ಸೊಪ್ಪು ನಿಮ್ಮ ಕಣ್ಣುಗಳ ಆರೋಗ್ಯವನ್ನು ಸುಧಾರಿಸುತ್ತದೆ. ಇದು ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿರುತ್ತದೆ. ಇದು ಮ್ಯಾಕ್ಯುಲರ್ ರಿಜೆನರೇಶನ್ ಮತ್ತು ಕಣ್ಣಿನ ಪೊರೆಗಳಿಂದ ನಿಮ್ಮನ್ನು ರಕ್ಷಿಸುತ್ತದೆ.

ಡ್ರೈ ಫ್ರೂಟ್ಸ್​ಗಳು ಡ್ರೈ ಫ್ರೂಟ್ಸ್​ಗಳು ರುಚಿಗೆ ಮಾತ್ರವಲ್ಲ ಬದಲಿಗೆ ನಿಮ್ಮ ಆರೋಗ್ಯಕ್ಕೂ ಉತ್ತಮ. ಇದರಲ್ಲಿರುವ ವಿಟಮಿನ್ ಇ ಮತ್ತು ಆರೋಗ್ಯಕರ ಕೊಬ್ಬುಗಳು ನಿಮ್ಮ ಕಣ್ಣಿನ ಆರೈಕೆ ಮಾಡುತ್ತವೆ. ದೃಷ್ಟಿ ಸುಧಾರಣೆಗೆ ಸಹಾಯಕವಾಗಿದೆ.

ಕಿತ್ತಳೆ ಹಣ್ಣು ಕಿತ್ತಳೆ ಹಣ್ಣು ಬೀಟಾ-ಕ್ರಿಪ್ಟೋಕ್ಸಾಂಥಿನ್ ಎಂಬ ಕ್ಯಾರೊಟಿನಾಯ್ಡ್​ನ ಉತ್ತಮ ಮೂಲವಾಗಿದೆ. ಇದು ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತದೆ. ದೃಷ್ಟಿ ಸುಧಾರಣೆಗೆ ಸಹಾಯ ಮಾಡುತ್ತದೆ. ವಿಟಮಿನ್ ಎ ಅಂಶದ ಉತ್ತಮ ಮೂಲವಾಗಿದ್ದು ನಿಮ್ಮ ಕಣ್ಣುಗಳಿಗೆ ಒಳ್ಳೆಯದು.

ಸಿಹಿ ಆಲೂಗಡ್ಡೆ ಸಿಹಿ ಆಲೂಗಡ್ಡೆ ದೃಷ್ಟಿ ಸುಧಾರಣೆಗೆ ಸಹಾಯಕವಾಗಿದೆ. ಇದು ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತದೆ. ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಕ್ಯಾರೆಟ್ ರಸ ಕ್ಯಾರೆಟ್ ರಸವು ಕಣ್ಣುಗಳಿಗೆ ತುಂಬಾ ಪ್ರಯೋಜನಕಾರಿ. ಇದು ಬೀಟಾ ಕ್ಯಾರೋಟಿನ್ಅನ್ನು ಹೊಂದಿರುತ್ತದೆ. ಇದು ಕಣ್ಣುಗಳನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ. ನೀವು ಬೆಳಿಗ್ಗೆ ಎದ್ದು ಖಾಲಿ ಹೊಟ್ಟೆಯಲ್ಲಿ ಕ್ಯಾರೆಟ್ ರಸವನ್ನು ಸೇವಿಸಬಹುದು. ಇದು ಕಣ್ಣುಗಳ ಆರೋಗ್ಯವನ್ನು ಸುಧಾರಿಸುವುದರ ಜೊತೆಗೆ ದೃಷ್ಟಿ ಸುಧಾರಣೆಗೆ ಸಹಾಯಕವಾಗಿದೆ.

ಇದನ್ನೂ ಓದಿ:

Health Tips: ಈ ಕೆಲವು ಪೌಷ್ಟಿಕಾಂಶಯುಕ್ತ ಪಾನೀಯಗಳು ನಿಮ್ಮ ಆರೋಗ್ಯಕ್ಕೆ ಉತ್ತಮ

Health Tips: ದಾಲ್ಚಿನ್ನಿ ನೀರು ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಿಸಲು ಸಹಾಯಕ