Alcohol: ಮದ್ಯ ಸೇವಿಸುವವರ ಕಣ್ಣು ಕೆಂಪಾಗುವುದು ಯಾಕೆ? ಇದರ ಹಿಂದಿನ ಕಾರಣ ಏನು? ಇಲ್ಲಿದೆ ಮಾಹಿತಿ
ಹೆಚ್ಚು ಮದ್ಯಪಾನ ಮಾಡುವವರ ಕಣ್ಣು ಕೆಂಪಗಾಗಿರುವುದನ್ನು ಗಮನಿಸಿರುತ್ತೀರಿ. ಹೀಗ್ಯಾಕೆ ಆಗುತ್ತದೆ? ಇದರ ಹಿಂದಿನ ಕಾರಣ ಏನು? ಇಲ್ಲಿದೆ ಮಾಹಿತಿ.
ಮದ್ಯ ಸೇವನೆ ಆರೋಗ್ಯಕ್ಕೆ ಹಾನಿಕಾರಕ ಎಂದು ಗೊತ್ತಿದ್ದರೂ ಕೆಲವರು ಚಟ ಬಿಡುವುದಿಲ್ಲ. ಅವರು ಕೆಲವು ಕಾರಣಗಳಿಗಾಗಿ ಮದ್ಯಪಾನ ಮಾಡುತ್ತಾರೆ. ಆದರೆ ಅದನ್ನು ಸೇವನೆ ಮಾಡಿದ ನಂತರ ದೇಹದಲ್ಲಿ ಹಲವು ರೀತಿಯ ಬದಲಾವಣೆಗಳು ಆಗುತ್ತವೆ. ಆಲ್ಕೋಹಾಲ್ (Alcohol) ಕುಡಿಯುವುದು ಅಮಲು ಎಂಬುದು ಎಷ್ಟು ನಿಜವೋ, ಅದು ದೇಹದ ಎಲ್ಲಾ ಭಾಗಗಳ ಮೇಲೆ ಸಮಾನವಾಗಿ ಪರಿಣಾಮ ಬೀರುತ್ತದೆ ಎಂಬುದು ಕೂಡ ಅಷ್ಟೇ ಸತ್ಯ. ಅದರಲ್ಲೂ ಆಲ್ಕೋಹಾಲ್ ಸೇವಿಸಿದವರನ್ನು ಅವರ ಕಣ್ಣುಗಳನ್ನು ನೋಡಿಯೇ ಗುರುತಿಸಬಹುದು.
ಮದ್ಯ ಸೇವನೆ ಮಾಡದ ವ್ಯಕ್ತಿಯ ಕಣ್ಣು ಕೆಂಪಗಾಗಿದ್ದರೆ ಅದಕ್ಕೆ ಧೂಳಿನ ಕಣಗಳು ಕಣ್ಣು ಸೇರುವುದು, ಗಾಳಿ ಇತ್ಯಾದಿ ಕಾರಣಗಳು ಇರಬಹುದು. ಆದರೆ ಒಬ್ಬ ವ್ಯಕ್ತಿ ಹೆಚ್ಚು ಮದ್ಯ ಸೇವಿಸುತ್ತಿದ್ದರೆ ಅಂತಹ ವ್ಯಕ್ತಿಯ ಕಣ್ಣುಗಳು ಕೆಂಪಾಗುತ್ತವೆ. ಇದನ್ನು ನೀವು ಗಮನಿಸಿರುತ್ತೀರಿ. ಹಾಗಾದರೆ ಆಲ್ಕೋಹಾಲ್ ಸೇವನೆಯಿಂದ ಕಣ್ಣುಗಳು ಕೆಂಪಾಗಲು ನಿಜವಾದ ಕಾರಣ ಏನು ಎಂದು ತಿಳಿಯೋಣ.
ಇದನ್ನೂ ಓದಿ: Non-alcoholic Fatty Liver Disease: ಸಾರಾಯಿ ಕುಡಿಯದಿದ್ದರೂ ಯಕೃತ್ತು ಕೆಡಬಹುದು..ಕಾರಣ ಇಲ್ಲಿದೆ ನೋಡಿ
ಸಾಮಾನ್ಯವಾಗಿ, ಆಲ್ಕೋಹಾಲ್ ಸೇವಿಸುವ ವ್ಯಕ್ತಿಯ ರಕ್ತನಾಳಗಳು ಹೆಚ್ಚು ಹಿಗ್ಗುತ್ತವೆ. ಇದರಿಂದಾಗಿ ದೇಹದಲ್ಲಿ ರಕ್ತ ಪೂರೈಕೆಯು ಹೆಚ್ಚಾಗುತ್ತದೆ. ಇದು ಕಣ್ಣಿನ ಮೇಲ್ಮೈಯಲ್ಲಿರುವ ಸಣ್ಣ ರಕ್ತನಾಳಗಳನ್ನು ಹಿಗ್ಗಿಸಲು ಕಾರಣವಾಗುತ್ತದೆ. ಈ ಕಾರಣದಿಂದಾಗಿ, ಕಣ್ಣಿನ ರಕ್ತನಾಳಗಳು ರಕ್ತ ಕೆಂಪಾಗುತ್ತವೆ. ಆದರೆ ಈ ವೈಶಿಷ್ಟ್ಯವು ಎಲ್ಲದರಲ್ಲೂ ಕಾಣಿಸಿಕೊಳ್ಳುತ್ತದೆಯೇ? ಎಂಬ ಪ್ರಶ್ನೆಗೆ ಉತ್ತರ ಖಂಡಿತ ಹೌದು ಎನ್ನಲು ಸಾಧ್ಯವಿಲ್ಲ. ಆಲ್ಕೋಹಾಲ್ ಸಂವೇದನಾಶೀಲತೆ ಹೊಂದಿರುವ ಜನರು ಅಥವಾ ಹೆಚ್ಚು ಆಲ್ಕೋಹಾಲ್ ಸೇವನೆ ಮಾಡುವವರು ಹೆಚ್ಚಾಗಿ ಕೆಂಪು ಕಣ್ಣುಗಳನ್ನು ಹೊಂದಿರುತ್ತಾರೆ.
ಆಲ್ಕೋಹಾಲ್ ದೇಹವನ್ನು ಪ್ರವೇಶಿಸಿದ ತಕ್ಷಣ ರಕ್ತನಾಳಗಳನ್ನು ಹಿಗ್ಗಿಸುತ್ತದೆ. ಆಲ್ಕೋಹಾಲ್ ದೇಹದ ಪ್ರತಿಯೊಂದು ಅಣುಗಳಿಗೆ ಹೋಗುತ್ತದೆ. ಆಲ್ಕೋಹಾಲ್ ಇತರ ಪದಾರ್ಥಗಳಿಗಿಂತ ಹೆಚ್ಚು ವೇಗವಾಗಿ ದೇಹಕ್ಕೆ ಹೋಗುತ್ತದೆ. ಆದರೆ ಯಕೃತ್ತು ಆಲ್ಕೋಹಾಲ್ ಕಣಗಳನ್ನು ಒಡೆಯಲು ಪ್ರಯತ್ನಿಸುತ್ತದೆ. ಯಕೃತ್ತು ಅದಕ್ಕಾಗಿ ಕಿಣ್ವಗಳನ್ನು ಉತ್ಪಾದಿಸುತ್ತದೆ. ಆಲ್ಕೋಹಾಲ್ ಕುಡಿಯುವ ಜನರು ಹೆಚ್ಚಿನ ಕ್ಯಾಲೊರಿಗಳನ್ನು ಪಡೆಯುತ್ತಾರೆ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ