SARS-CoV-2: ಬೆಕ್ಕುಗಳು ಕೋವಿಡ್-19 ಸೋಂಕನ್ನು ಹರಡಬಹುದು! ಇಲ್ಲಿದೆ ಮಾಹಿತಿ
ಕೋವಿಡ್ -19ಗೆ ಕಾರಣವಾಗುವ ಸಾರ್ಸ್ ಕೋವ್ 2 (SARS-CoV-2) ವೈರಸ್ ಬೆಕ್ಕುಗಳಿಂದ ಹರಡಬಹುದು ಪರಿಸರವೂ ಕಲುಷಿತ ಗೊಳ್ಳಬಹುದು ಎಂದು ಹೊಸ ಅಧ್ಯಯನವೊಂದರಲ್ಲಿ ತಿಳಿಸಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.
ಕೋವಿಡ್-19ಗೆ ಕಾರಣವಾಗುವ ಸಾರ್ಸ್ ಕೋವ್ 2 (SARS-CoV-2) ವೈರಸ್ ಹರಡುವಲ್ಲಿ ಬೆಕ್ಕುಗಳು ಪ್ರಮುಖ ಪಾತ್ರ ವಹಿಸಬಹುದು ಜೊತೆಗೆ ಪರಿಸರವೂ ಕಲುಷಿತ ಗೊಳ್ಳಬಹುದು ಎಂದು ಹೊಸ ಅಧ್ಯಯನವೊಂದರಲ್ಲಿ ತಿಳಿಸಿದೆ. ವಾಗೆನಿಂಗನ್ ವಿಶ್ವವಿದ್ಯಾಲಯ ಮತ್ತು ನೆದರ್ಲ್ಯಾಂಡ್ಸ್ನ ಸಂಶೋಧಕರು ಸೋಂಕಿತ ವ್ಯಕ್ತಿಯೊಬ್ಬನಲ್ಲಿದ್ದ ಸಾರ್ಸ್ ಕೋವ್ ವೈರಸ್ ಸೋಂಕುಗಳು ಬೆಕ್ಕುಗಳಲ್ಲಿ ಪರೋಕ್ಷವಾಗಿ ಕಂಡು ಬಂದಿದ್ದು, 16 ಬೆಕ್ಕುಗಳೊಂದಿಗೆ ಈ ಅಧ್ಯಯನ ನಡೆಸಲಾಗಿದೆ ಎಂದು ತಿಳಿದು ಬಂದಿದೆ.
ವೈರಸ್ಗೆ ನೇರವಾಗಿ ಒಡ್ಡಿಕೊಂಡ ಬೆಕ್ಕುಗಳನ್ನು ಮೂರು ವಾರಗಳ ಕಾಲ ಪರೀಕ್ಷಿಸಲಾಗಿದ್ದು. ಮೂಗಿನ ದ್ರವ ಪರೀಕ್ಷೆ(ನಾಸಾಲ್ ಮಾದರಿ) ಮತ್ತು ಓರೊಫಾರ್ಂಜಿಯಲ್ ಮಾದರಿಗಳನ್ನು ಮೂರು ಬಾರಿ ತೆಗೆದುಕೊಳ್ಳಲಾಗಿದೆ. ಅಧ್ಯಯನದ ಸಮಯದಲ್ಲಿ ಬಾಯಿ ಮತ್ತು ಗುದನಾಳ ಮಾದರಿಗಳನ್ನು ದಿನಕ್ಕೆ 15 ಬಾರಿ ಪರೀಕ್ಷಿಸಲಾಗಿದೆ. ಬೆಕ್ಕುಗಳ ನಡುವೆ ನೇರ ಮತ್ತು ಪರೋಕ್ಷ ಸಂಪರ್ಕದ ಮೂಲಕ ಸಾರ್ಸ್-ಕೋವ್-2 ಪ್ರಸರಣವನ್ನು ಮೌಲ್ಯಮಾಪನ ಮಾಡಲಾಗಿದೆ. ಬೆಕ್ಕುಗಳು ಸಾರ್ಸ್ ಕೊವ್ 2 ಸೋಂಕಿಗೆ ಒಳಗಾಗುತ್ತವೆ. ಅವು ಇತರೆ ಬೆಕ್ಕುಗಳಿಗೆ ಸೋಂಕು ಹರಡುತ್ತವೆ. ಈ ಮೂಲಕ ಪರಿಸರಕ್ಕೂ ತಗುಲುತ್ತದೆ ಎಂದು ಜರ್ನಲ್ ಆಫ್ ಅಮೆರಿಕನ್ ಸೊಸೈಟಿ ಫಾರ್ ಮೈಕ್ರೊಬಯಾಲಾಜಿಯಲ್ಲಿ ಪ್ರಕಟಿಸಿದೆ. ಜೊತೆಗೆ ಬೆಕ್ಕುಗಳು ಸಾರ್ಸ್ ಕೋವ್ ಸೋಂಕು ಪ್ರಸರಣವನ್ನು ಸಮರ್ಥವಾಗಿ ಪ್ರಸರಣ ಮಾಡುತ್ತದೆ ಎಂದು ವಾನ್ ಡೆರ್ ಪೊಯೆಲ್ ತಿಳಿಸಿದ್ದಾರೆ.
ಇದನ್ನೂ ಓದಿ:ಕೋವಿಡ್-19 ಇನ್ನು ಮುಂದೆ ಜಾಗತಿಕ ಆರೋಗ್ಯ ತುರ್ತುಸ್ಥಿತಿ ಅಲ್ಲ; ವಿಶ್ವ ಆರೋಗ್ಯ ಸಂಸ್ಥೆ
ಬೆಕ್ಕಿನ ಸೋಂಕುಗಳು ಸಾರ್ಸ್ ಕೋವ್ ಮೂಲಕ ಕಲುಷಿತ ವಾತಾವರಣಕ್ಕೆ ಹರಡುತ್ತದೆ. ಇದರ ಪ್ರಯೋಗಾಲಯಕ್ಕೆ ಮನೆಯಲ್ಲಿನ ಬೆಕ್ಕುಗಳನ್ನು ಸಾರ್ಸ್ ಕೋವ್ ಸೋಂಕಿಗೆ ಒಳಪಡಿಸಿ, ಅದು ಕುಟುಂಬದಲ್ಲಿ ಹೇಗೆ ಪ್ರಸರ ಮಾಡುತ್ತದೆ ಎಂಬುದನ್ನು ನೋಡಲಾಗಿದೆ. ಇದಕ್ಕೆ ಸಾಕ್ಷಿಯಾಗಿ 2022ರ ಜೂನ್ನಲ್ಲಿ ಥಾಯ್ಲೆಂಡ್‌ನ ಪ್ರಿನ್ಸ್ ಆಫ್ ಸೊನಗ್ಕಲ ವಿಶ್ವವಿದ್ಯಾಲಯ ಸಂಶೋಧಕರು, ಮೊದಲ ಬಾರಿಗೆ ಬೆಕ್ಕುಗಳಿಂದ ಮಾನವರಿಗೆ ವೈರಸ್ ಪ್ರಸರಣ ಬಗ್ಗೆ ತಿಳಿಸಿದರು. ಕೋವಿಡ್ ಸೋಂಕಿತ ಬೆಕ್ಕು ಸೀನಿದ್ದರಿಂದ 32 ವರ್ಷದ ಆರೋಗ್ಯಯುತ ಮಹಿಳೆ ಆಗಸ್ಟ್ 2021ರಲ್ಲಿ ಸೋಂಕಿಗೆ ತುತ್ತಾಗಿದ್ದರು ಜೊತೆಗೆ ಅದನ್ನು ಪರೀಕ್ಷಿಸಿದ್ದ ಪಶು ವೈದ್ಯರಿಗೂ ಈ ಸೋಂಕು ಹರಡಿತ್ತು ಎನ್ನಲಾಗಿದೆ. ಜೊತೆಗೆ ವಂಶವಾಹಿ ಅಧ್ಯಯನ ಕೂಡ ಸಾರ್ಸ್ ಕೋವ್ ವೈರಸ್ ಅನ್ನು ಬೆಕ್ಕು ತನ್ನ ಮಾಲಕರಿಗೆ ಪ್ರಸರಣ ಮಾಡುತ್ತದೆ ಎಂಬ ಹೇಳಿಕೆಯನ್ನು ಬೆಂಬಲಿಸುತ್ತದೆ. ಈ ಸಂಬಂಧ ಎಮರ್ಜಿಂಗ್ ಇನ್ಫೆಕ್ಷನ್ ಡಿಸೀಸ್ ಜರ್ನಲ್ನಲ್ಲಿ ಎಂಬ ಪತ್ರಿಕೆಯಲ್ಲಿ ಪ್ರಕಟವಾಗಿದೆ.
2021ರಲ್ಲಿ ಮೊದಲ ಬಾರಿಗೆ ಬ್ರಿಟನ್ ವಿಜ್ಞಾನಿಗಳು ಮನೆಯಲ್ಲಿ ಸಾಕಿದ ಬೆಕ್ಕಿಗಳು ಕೋವಿಡ್ ಸೋಂಕಿಗೆ ಒಳಗಾಗಿರುವುದನ್ನು ವರದಿ ಮಾಡಿವೆ. ನಾಯಿ ಮತ್ತು ಬೆಕ್ಕುಗಳಲ್ಲಿ ಸಾರ್ಸ್ ಕೋವ್ ಅಲ್ಫಾ ವೆರಿಯಂಟ್ ಪತ್ತೆಯಾಗಿದೆ. ಎರಡು ಬೆಕ್ಕುಗಳು ಮತ್ತು ಒಂದು ನಾಯಿಗಳನ್ನು ಪಿಸಿಆರ್ ಪರೀಕ್ಷೆಗೆ ಒಳಪಡಿಸಿದಾಗ ಸೋಂಕು ದೃಢಪಟ್ಟಿದೆ ಎಂದು ವೆಟರ್ನರಿ ರೆಕಾರ್ಡ್ ಜರ್ನಲ್ನಲ್ಲಿ ತಿಳಿಸಲಾಗಿದೆ. ಆದರೆ ಎರಡು ಬೆಕ್ಕುಗಳು ಮತ್ತು ಒಂದು ನಾಯಿ ಹೃದಯ ಕಾಯಿಲೆಯ ಚಿಹ್ನೆಗಳನ್ನು ಅಭಿವೃದ್ಧಿಪಡಿಸಿದ ಬಳಿಕ ಎರಡರಿಂದ ಆರು ವಾರಗಳ ನಂತರ ಈ ಪ್ರತಿಕಾಯ ಪತ್ತೆಯಾಗಿದೆ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:09 pm, Mon, 5 June 23