Pregnancy tips: ಗರ್ಭಧಾರಣೆಯ ಮೊದಲ ತಿಂಗಳು ಈ ರೀತಿ ಅನುಭವ ಆಗಬಹುದು

| Updated By: ಅಕ್ಷಯ್​ ಪಲ್ಲಮಜಲು​​

Updated on: Aug 26, 2024 | 6:31 PM

ಗರ್ಭಧರಿಸಿದ ಒಂದರಿಂದ ಎರಡು ತಿಂಗಳ ನಂತರ, ನೀವು ಗರ್ಭಿಣಿಯಾಗಿದ್ದೀರಿ ಎಂದು ತಿಳಿದು ಬರುತ್ತದೆ. ಆದರೆ ಮೊದಲ ತ್ರೈಮಾಸಿಕದಲ್ಲಿ ದೇಹದಲ್ಲಿ ಅನೇಕ ರೀತಿಯ ಬದಲಾವಣೆಗಳು ಉಂಟಾಗುತ್ತದೆ. ಮುಟ್ಟಿನ ದಿನಗಳು ಕಳೆದು 5 ರಿಂದ 8 ದಿನಗಳಿಗೆ ಬಳಿಕ ಗರ್ಭಧರಿಸಬಹುದು. ಈ ಹಂತದಲ್ಲಿ ಹೆಣ್ಣಿಗೆ ತಾನು ಗರ್ಭಿಣಿ ಎಂದು ತಿಳಿದಿರುವುದಿಲ್ಲ. ಆದರೆ ಇದಾದ ಬಳಿಕ ಕಂಡು ಬರುವ ಲಕ್ಷಣಗಳ ಆಧಾರದ ಮೇಲೆ ನೀವು ಗರ್ಭ ಧರಿಸಿದ್ದಿರೋ ಇಲ್ಲವೋ ಎಂಬುದನ್ನು ಊಹಿಸಬಹುದು. ಹಾಗಾದರೆ ಈ ಸಮಯದಲ್ಲಿ ಕಂಡು ಬರುವ ಲಕ್ಷಣಗಳೇನು? ಇಲ್ಲಿದೆ ಸಂಪೂರ್ಣ ಮಾಹಿತಿ.

Pregnancy tips: ಗರ್ಭಧಾರಣೆಯ ಮೊದಲ ತಿಂಗಳು ಈ ರೀತಿ ಅನುಭವ ಆಗಬಹುದು
Follow us on

ಗರ್ಭಧರಿಸಿದ ಒಂದರಿಂದ ಎರಡು ತಿಂಗಳ ನಂತರ, ನೀವು ಗರ್ಭಿಣಿಯಾಗಿದ್ದೀರಿ ಎಂದು ತಿಳಿದು ಬರುತ್ತದೆ. ಆದರೆ ಮೊದಲ ತ್ರೈಮಾಸಿಕದಲ್ಲಿ ದೇಹದಲ್ಲಿ ಅನೇಕ ರೀತಿಯ ಬದಲಾವಣೆಗಳು ಉಂಟಾಗುತ್ತದೆ. ಈ ಲಕ್ಷಣಗಳು ಪ್ರತಿ ಮಹಿಳೆಯಲ್ಲೂ ಒಂದೇ ರೀತಿ ಇರುವುದಿಲ್ಲ ಒಬ್ಬರಿಂದ ಒಬ್ಬರಿಗೆ ಭಿನ್ನವಾಗಿರಬಹುದು. ಆದರೆ ಮೊದಲ ತಿಂಗಳಿನಲ್ಲಿ ಯಾವ ರೀತಿಯ ಅನುಭವ ಆಗಬಹುದು ಎಂಬುದರ ಬಗ್ಗೆ ನಿಮಗೆ ತಿಳಿದಿರಬೇಕಾಗುತ್ತದೆ.

ಗರ್ಭಿಣಿ ಆಗಿದ್ದಾರೋ ಇಲ್ಲವೋ ಎಂಬುದು ಮಹಿಳೆಯ ಋತುಚಕ್ರದ ಅವಧಿಯ ಮೇಲೆ ಕಂಡು ಹಿಡಿಯಬಹುದು. ಮುಟ್ಟಿನ ದಿನಗಳು ಕಳೆದು 5 ರಿಂದ 8 ದಿನಗಳಿಗೆ ಬಳಿಕ ಗರ್ಭಧರಿಸಬಹುದು. ಈ ಹಂತದಲ್ಲಿ ಹೆಣ್ಣಿಗೆ ತಾನು ಗರ್ಭಿಣಿ ಎಂದು ತಿಳಿದಿರುವುದಿಲ್ಲ. ಆದರೆ ಇದಾದ ಬಳಿಕ ಕಂಡು ಬರುವ ಲಕ್ಷಣಗಳ ಆಧಾರದ ಮೇಲೆ ನೀವು ಗರ್ಭ ಧರಿಸಿದ್ದಿರೋ ಇಲ್ಲವೋ ಎಂಬುದನ್ನು ಊಹಿಸಬಹುದು. ಹಾಗಾದರೆ ಈ ಸಮಯದಲ್ಲಿ ಕಂಡು ಬರುವ ಲಕ್ಷಣಗಳೇನು? ಇಲ್ಲಿದೆ ಸಂಪೂರ್ಣ ಮಾಹಿತಿ.

ಗರ್ಭಧಾರಣೆಯ ಮೊದಲ ತಿಂಗಳಿನಲ್ಲಿ ಕಂಡು ಬರುವ ಲಕ್ಷಣಗಳೇನು?

ಕಿಬ್ಬೊಟ್ಟೆಯ ನೋವು

ಎದೆ ಭಾರ ಅಥವಾ ಚುಚ್ಚಿದ ಅನುಭವ

ಅತಿಯಾದ ಸುಸ್ತು

ಪದೇ ಪದೇ ನಿದ್ದೆ ಬರುವುದು

ವಾಕರಿಕೆ

ದಿನದಲ್ಲಿ ಅನೇಕ ಬಾರಿ ಯೂರಿನ್ ಗೆ ಹೋಗುವುದು

ಮಲಬದ್ಧತೆ

ತಲೆ ಜಡವಾಗುವುದು

ಹೊಟ್ಟೆ ಉಬ್ಬರ

​ಸ್ತನ ನೋವು

ಸ್ತನಗಳ ಗಾತ್ರದಲ್ಲೂ ಬದಲಾವಣೆ

ಸ್ತನಗಳ ಚರ್ಮದ ಮೇಲೆ ಹೆಚ್ಚಿನ ರಕ್ತನಾಳಗಳು ಕಂಡು ಬರುತ್ತವೆ.

ಮನಸ್ಥಿತಿ ಮತ್ತು ನಡವಳಿಕೆಯಲ್ಲಿ ಬದಲಾವಣೆ

ಕೆಲವರಿಗೆ ಗರ್ಭಧಾರಣೆಯ ಮೊದಲ ತಿಂಗಳಲ್ಲಿ ಸೌಮ್ಯ ರಕ್ತಸ್ರಾವ ಇರುತ್ತದೆ. ಹೆಚ್ಚು ರಕ್ತಸ್ರಾವವಾಗುತ್ತಿದ್ದರೆ, ತಕ್ಷಣ ವೈದ್ಯರನ್ನು ಸಂಪರ್ಕಿಸಿ.

ಇದರಲ್ಲಿ ಎರಡರಿಂದ ಮೂರು ಲಕ್ಷಣ ಕಂಡು ಬಂದರೆ ಅದು ಗರ್ಭಧಾರಣೆಯ ಲಕ್ಷಣ ಆಗಿರಬಹುದು.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Published On - 6:01 pm, Tue, 20 August 24