AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Baby Foods: ಮಗುವಿಗೆ ಒಂದು ವರ್ಷವಾಗುವ ತನಕ ಈ ಆಹಾರಗಳನ್ನು ನೀಡಬೇಡಿ

ಶಿಶುಗಳು 6 ತಿಂಗಳ ವರೆಗೆ ತಾಯಿಯ ಎದೆಹಾಲನ್ನು ಮಾತ್ರ ಕುಡಿಯುತ್ತವೆ. ಏಕಂದರೆ ಮಗುವಿನ ದೇಹಕ್ಕೆ ಬೇಕಾದ ಪೋಷಕಾಂಶಗಳು ತಾಯಿಯ ಹಾಲಿನಿಂದ ಸಿಗುತ್ತವೆ. ಅದರ ನಂತರದ 6 ತಿಂಗಳಲ್ಲಿ ಲಘು ಆಹಾರವನ್ನು ಪ್ರಾರಂಭಿಸಲಾಗುತ್ತದೆ. ಸಾಮಾನ್ಯವಾಗಿ ಈ ಹಂತದ ಆರಂಭದಲ್ಲಿ ಅರೆ- ದ್ರವ ರೂಪದ ಆಹಾರವನ್ನು ನೀಡಲಾಗುತ್ತದೆ. ಆದರೂ ಮಕ್ಕಳು ವಿಭಿನ್ನ ರೀತಿಯ ಆಹಾರವನ್ನು ಸೇವನೆ ಮಾಡಲು ಬಯಸುತ್ತಾರೆ. ಆದರೆ ತಾಯಂದಿರು ಈ ಸಮಯದಲ್ಲಿ, ಅಂದರೆ ಕನಿಷ್ಠ 1 ರಿಂದ ಒಂದೂವರೆ ವರ್ಷದ ಮಕ್ಕಳಿಗೆ ನೀಡುವ ಆಹಾರದ ಬಗ್ಗೆ ಬಹಳ ಜಾಗರೂಕರಾಗಿರಬೇಕು. ಇಲ್ಲದಿದ್ದರೆ ಮಕ್ಕಳಲ್ಲಿ ಹೊಟ್ಟೆ ನೋವು ಮತ್ತು ಜೀರ್ಣಕಾರಿ ಸಮಸ್ಯೆಗಳು ಉಂಟಾಗುತ್ತವೆ.

Baby Foods: ಮಗುವಿಗೆ ಒಂದು ವರ್ಷವಾಗುವ ತನಕ ಈ ಆಹಾರಗಳನ್ನು ನೀಡಬೇಡಿ
ಸಾಂದರ್ಭಿಕ ಚಿತ್ರ
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​|

Updated on: Aug 20, 2024 | 2:09 PM

Share

ನವಜಾತ ಶಿಶುಗಳು 6 ತಿಂಗಳ ವರೆಗೆ ತಾಯಿಯ ಎದೆಹಾಲನ್ನು ಮಾತ್ರ ಕುಡಿಯುತ್ತವೆ. ಏಕಂದರೆ ಮಗುವಿನ ದೇಹಕ್ಕೆ ಬೇಕಾದ ಪೋಷಕಾಂಶಗಳು ತಾಯಿಯ ಹಾಲಿನಿಂದ ಸಿಗುತ್ತವೆ. ಅದರ ನಂತರದ 6 ತಿಂಗಳಲ್ಲಿ ಲಘು ಆಹಾರವನ್ನು ಪ್ರಾರಂಭಿಸಲಾಗುತ್ತದೆ. ಸಾಮಾನ್ಯವಾಗಿ ಈ ಹಂತದ ಆರಂಭದಲ್ಲಿ ಅರೆ- ದ್ರವ ರೂಪದ ಆಹಾರವನ್ನು ನೀಡಲಾಗುತ್ತದೆ. ಆದರೂ ಮಕ್ಕಳು ವಿಭಿನ್ನ ರೀತಿಯ ಆಹಾರವನ್ನು ಸೇವನೆ ಮಾಡಲು ಬಯಸುತ್ತಾರೆ. ಆದರೆ ತಾಯಂದಿರು ಈ ಸಮಯದಲ್ಲಿ, ಅಂದರೆ ಕನಿಷ್ಠ 1 ರಿಂದ ಒಂದೂವರೆ ವರ್ಷದ ಮಕ್ಕಳಿಗೆ ನೀಡುವ ಆಹಾರದ ಬಗ್ಗೆ ಬಹಳ ಜಾಗರೂಕರಾಗಿರಬೇಕು. ಇಲ್ಲದಿದ್ದರೆ ಮಕ್ಕಳಲ್ಲಿ ಹೊಟ್ಟೆ ನೋವು ಮತ್ತು ಜೀರ್ಣಕಾರಿ ಸಮಸ್ಯೆಗಳು ಉಂಟಾಗುತ್ತವೆ.

ಹಸುವಿನ ಹಾಲು: ಚಿಕ್ಕ ಮಕ್ಕಳಿಗೆ ಯಾವ ರೀತಿಯ ಆಹಾರಗಳನ್ನು ನೀಡಬೇಕು ಮತ್ತು ನೀಡಬಾರದು ಎಂಬುದರ ಬಗ್ಗೆ ಹೆಚ್ಚಿನ ಜ್ಞಾನ ಇರಬೇಕಾದದ್ದು ಬಹಳ ಮುಖ್ಯ. ಕೆಲವು ಆಹಾರಗಳು ದೇಹಕ್ಕೆ ಒಳ್ಳೆಯದು. ಆದರೆ ಅವು 1 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಒಳ್ಳೆಯದಲ್ಲ. ವಿಶೇಷವಾಗಿ ಹಸುವಿನ ಹಾಲು ತುಂಬಾ ಆರೋಗ್ಯಕರ. ಆದರೆ 1 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಹಸುವಿನ ಹಾಲನ್ನು ನೀಡುವುದು ಒಳ್ಳೆಯದಲ್ಲ. ಏಕೆಂದರೆ ಇದರಲ್ಲಿ ದೇಹದ ಪೋಷಣೆಗೆ ಅಗತ್ಯವಾದ ಪ್ರೋಟೀನ್ ಸಮೃದ್ಧವಾಗಿದ್ದು, ಇದನ್ನು ಶಿಶುಗಳು ಜೀರ್ಣಿಸಿಕೊಳ್ಳಲು ಸಾಧ್ಯವಿಲ್ಲ. ಪರಿಣಾಮವಾಗಿ, ಮಕ್ಕಳಲ್ಲಿ ಹೊಟ್ಟೆ ಉಬ್ಬರ ಮತ್ತು ಹೊಟ್ಟೆ ನೋವಿನಂತಹ ಸಮಸ್ಯೆ ಕಂಡು ಬರುತ್ತದೆ.

ಜೇನುತುಪ್ಪ: ಒಂದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಜೇನುತುಪ್ಪವನ್ನು ನೀಡಬಾರದು. ಶಿಶುಗಳ ಕರುಳು ತುಂಬಾ ದುರ್ಬಲವಾಗಿರುತ್ತವೆ. ಆದ್ದರಿಂದ ಜೇನುತುಪ್ಪ ಜೀರ್ಣವಾಗುವುದಿಲ್ಲ. ಅಲ್ಲದೆ ಚಿಕ್ಕ ಮಕ್ಕಳಿಗೆ ಜೇನುತುಪ್ಪವನ್ನು ನೀಡಿದರೆ ಕ್ಲೋಸ್ಟ್ರಿಡಿಯಂ ಬೊಟುಲಿನಮ್ ಬ್ಯಾಕ್ಟೀರಿಯಾ ಬೆಳೆಯಬಹುದು. ಇದರ ಪರಿಣಾಮವಾಗಿ ಸ್ನಾಯುಗಳು ದುರ್ಬಲವಾಗುತ್ತವೆ. ಮಲಬದ್ಧತೆ ಸಮಸ್ಯೆಗಳೂ ಉಂಟಾಗುತ್ತವೆ.

ಹುಳಿ ಹಣ್ಣುಗಳು: ಇವುಗಳಲ್ಲಿ ವಿಟಮಿನ್ ಸಿ ಸಮೃದ್ಧವಾಗಿದ್ದು ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಆದರೆ ಚಿಕ್ಕ ಮಕ್ಕಳಿಗೆ, ಹುಳಿ ಹಣ್ಣಿನಲ್ಲಿರುವ ಸಿಟ್ರಿಕ್ ಆಮ್ಲ ಮತ್ತು ವಿಟಮಿನ್ ಸಿ ಅಂಶವು ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಉಂಟು ಮಾಡಬಹುದು. ಇದರ ಪರಿಣಾಮವಾಗಿ, ಮಕ್ಕಳು ಹೊಟ್ಟೆ ನೋವು ಮತ್ತು ಅತಿಸಾರದಿಂದ ಬಳಲುವ ಸಾಧ್ಯತೆಯಿದೆ.

ಇದನ್ನೂ ಓದಿ:  ಹಾವು ಕಚ್ಚುವುದರಿಂದ ಹಿಡಿದು, ಜ್ವರ ನಿವಾರಣೆ ಮಾಡುವವರೆಗೆ ಎಲ್ಲಾ ರೋಗಕ್ಕೂ ಈ ಸೊಪ್ಪು ರಾಮಬಾಣ!

ಚಾಕೊಲೇಟ್: ಚಿಕ್ಕ ಮಕ್ಕಳಿಗೆ ಚಾಕೊಲೇಟ್ ನೀಡಬಾರದು. ಇದು ಹೊಟ್ಟೆ ನೋವಿಗೆ ಕಾರಣವಾಗುತ್ತದೆ. ಇದರಲ್ಲಿರುವ ಕೆಫೀನ್ ಮತ್ತು ಸಕ್ಕರೆ ಕೂಡ ಮಕ್ಕಳಿಗೆ ಹಾನಿಕಾರಕ. ಅಲ್ಲದೆ ಗೋಧಿಯಲ್ಲಿ ಗ್ಲುಟೆನ್ ಎಂಬ ಅಲರ್ಜಿಕಾರಕವಿದೆ. ಒಂದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಇದನ್ನು ಜೀರ್ಣಿಸಿಕೊಳ್ಳಲು ಕಷ್ಟವಾಗುತ್ತದೆ. ಇದರ ಬದಲಾಗಿ, ಈ ಸಮಯದಲ್ಲಿ ಅವರಿಗೆ ಅಕ್ಕಿಯಿಂದ ಮಾಡಿದ ಆಹಾರಗಳನ್ನು ಮೆತ್ತಗೆ ಮಾಡಿ ನೀಡಬಹುದು.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ