ಹಾವು ಕಚ್ಚುವುದರಿಂದ ಹಿಡಿದು, ಜ್ವರ ನಿವಾರಣೆ ಮಾಡುವವರೆಗೆ ಎಲ್ಲಾ ರೋಗಕ್ಕೂ ಈ ಸೊಪ್ಪು ರಾಮಬಾಣ!
ತುಂಬೆ ಗಿಡ ದಾರಿ ಬದಿಗಳಲ್ಲಿ ಇದ್ದರೂ ಕೂಡ ಇದರ ಔಷಧೀಯ ಗುಣಗಳ ಬಗ್ಗೆ ತಿಳಿದರೆ ಆಚ್ಚರಿಯಾಗುವುದರಲ್ಲಿ ಸಂಶಯವಿಲ್ಲ. ಈ ಗಿಡದಲ್ಲಿ ಹಲವು ವಿಧಗಳಿದ್ದು ಇದರಲ್ಲಿ ಬಿಳಿ ತುಂಬೆ ಹೂವುಗಳನ್ನು ಬಿಡುವ ಗಿಡ ಹೆಚ್ಚು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಆಯುರ್ವೇದದಲ್ಲಿಯೂ ತುಂಬೆ ಗಿಡದ ಔಷಧೀಯ ಗುಣಗಳ ಬಗ್ಗೆ ಹೇಳಲಾಗಿದ್ದು, ಸಂಸ್ಕೃತದಲ್ಲಿ ಇದನ್ನು ಚಿತ್ರಕ್ಷುಪ ಅಥವಾ ದ್ರೋಣ ಪುಷ್ಟ ಎಂದು ಕರೆಯುತ್ತಾರೆ. ಹಾಗಾದರೆ ಇದರಿಂದ ಸಿಗುವ ಆರೋಗ್ಯ ಪ್ರಯೋಜನಗಳೇನು? ಇಲ್ಲಿದೆ ಸಂಪೂರ್ಣ ಮಾಹಿತಿ.
ನಮ್ಮ ಸುತ್ತಮುತ್ತ ಇರುವ ಅನೇಕ ಗಿಡಗಳು ಸಾವಿರಾರು ರೀತಿಯ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಇವುಗಳ ಬಗ್ಗೆ ನಾವು ಸರಿಯಾಗಿ ತಿಳಿದುಕೊಂಡು ಅದನ್ನು ಉತ್ತಮ ರೀತಿಯಲ್ಲಿ ಉಪಯೋಗಿಸಬೇಕಾಗುತ್ತದೆ. ಇಂತಹ ಗಿಡಗಳಲ್ಲಿ ತುಂಬೆ ಗಿಡವೂ ಒಂದು. ಇದು ದಾರಿ ಬದಿಗಳಲ್ಲಿ ಇದ್ದರೂ ಕೂಡ ಇದರ ಔಷಧೀಯ ಗುಣಗಳ ಬಗ್ಗೆ ತಿಳಿದರೆ ಆಚ್ಚರಿಯಾಗುವುದರಲ್ಲಿ ಸಂಶಯವಿಲ್ಲ. ತುಂಬೆ ಗಿಡದಲ್ಲಿ ಹಲವು ವಿಧಗಳಿದ್ದು ಇದರಲ್ಲಿ ಬಿಳಿ ತುಂಬೆ ಹೂವುಗಳನ್ನು ಬಿಡುವ ಗಿಡ ಹೆಚ್ಚು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಆಯುರ್ವೇದದಲ್ಲಿಯೂ ತುಂಬೆ ಗಿಡದ ಔಷಧೀಯ ಗುಣಗಳ ಬಗ್ಗೆ ಹೇಳಲಾಗಿದ್ದು, ಸಂಸ್ಕೃತದಲ್ಲಿ ಇದನ್ನು ಚಿತ್ರಕ್ಷುಪ ಅಥವಾ ದ್ರೋಣ ಪುಷ್ಟ ಎಂದು ಕರೆಯುತ್ತಾರೆ. ಹಾಗಾದರೆ ಇದರಿಂದ ಸಿಗುವ ಆರೋಗ್ಯ ಪ್ರಯೋಜನಗಳೇನು? ಇಲ್ಲಿದೆ ಸಂಪೂರ್ಣ ಮಾಹಿತಿ.
- ಹೊಟ್ಟೆಯಲ್ಲಿ ಹುಳ ಆಗಿದ್ದರೆ ಇದರ ಎಲೆಯನ್ನು ಚೆನ್ನಾಗಿ ಜಜ್ಜಿ ಅದರಿಂದ ರಸವನ್ನು ತೆಗೆದು ಇದನ್ನು ಜೇನುತುಪ್ಪದೊಂದಿಗೆ ಸೇರಿಸಿ ಸೇವನೆ ಮಾಡಬೇಕು.
- ಪದೇ ಪದೇ ಜ್ವರ ಬರುತ್ತಿದ್ದರೆ ಇದರ ಎಲೆಯನ್ನು ಚೆನ್ನಾಗಿ ತೊಳೆದು ಅದರಿಂದ ರಸ ತೆಗೆದು ಕಾಳು ಮೆಣಸನ್ನು ಕುಟ್ಟಿ ಪುಡಿ ಮಾಡಿ ಅದರ ಜೊತೆಯಲ್ಲಿ ಸೇವನೆ ಮಾಡಿ.
- ಮನೆಯ ಸುತ್ತ ಮುತ್ತ ಸೊಳ್ಳೆ ಮತ್ತು ಬೇಡದ ಕೀಟಗಳು ಜಾಸ್ತಿಯಾಗಿದ್ದರೆ ಇದರ ಎಲೆಗಳನ್ನು ಒಣಗಿಸಿ ಬಳಿಕ ಆ ಎಲೆಗಳಿಂದ ಬೆಂಕಿ ಹಾಕಿ. ಇದರಿಂದ ನಿಮ್ಮ ಮನೆಯ ಪರಿಸರ ಚೆನ್ನಾಗಿರುತ್ತದೆ.
- ಚರ್ಮದ ಮೇಲೆ ತುರಿಕೆ ಅಥವಾ ಅಲರ್ಜಿ ಸಮಸ್ಯೆಗಳಿದ್ದರೆ ಇದರ ಎಲೆಗಳನ್ನು ಜಜ್ಜಿ ಆ ಪೇಸ್ಟ್ ಅನ್ನು ಚರ್ಮದ ಮೇಲೆ ಲೇಪಿಸಿ. ಈ ರೀತಿ ಮಾಡುವುದರಿಂದ ಯಾವುದೇ ರೀತಿಯ ಚರ್ಮಕ್ಕೆ ಸಂಬಂಧ ಪಟ್ಟ ಸಮಸ್ಯೆಗಳಿದ್ದರೂ ಅದು ಗುಣವಾಗುತ್ತದೆ.
- ಒತ್ತಡದ ಜೀವನಶೈಲಿಯಿಂದ ಉಂಟಾದ ಡಾರ್ಕ್‌ಸರ್ಕಲ್ಸ್ ಗಳನ್ನು ಕಡಿಮೆ ಮಾಡಲು ತುಂಬೆ ಗಿಡದ ರಸಕ್ಕೆ ಸ್ವಲ್ಪ ನೀರು ಅಥವಾ ಹಾಲನ್ನು ಹಾಕಿ ಅದನ್ನು ಮುಖಕ್ಕೆ ಹಚ್ಚಿಕೊಂಡು ಒಣಗಿದ ನಂತರ ತೊಳೆಯಿರಿ. ಅಲ್ಲದೆ ಇದನ್ನು ಫೇಸ್‌ಪ್ಯಾಕ್ ರೀತಿಯಲ್ಲಿಯೂ ಬಳಸಿಕೊಳ್ಳಬಹುದು.
- ಅಜೀರ್ಣತೆಯ ಸಮಸ್ಯೆ ಇರುವವರು ತುಂಬೆ ಗಿಡದ ಎಲೆಗಳನ್ನು ಚೆನ್ನಾಗಿ ತೊಳೆದು ಬಳಿಕ ಅದನ್ನು ಬಿಸಿ ನೀರಿನಲ್ಲಿ ಹಾಕಿ ಕುದಿಸಿ ನಂತರ ಚಿಟಿಕೆ ಉಪ್ಪು ಸೇರಿಸಿ ಕುಡಿದರೆ ಜೀರ್ಣಶಕ್ತಿ ಉತ್ತಮವಾಗುತ್ತದೆ. ಪಚನಕ್ರಿಯೆಯನ್ನು ಸುಧಾರಿಸಲು ಇದು ಸುಲಭದ ಮಾರ್ಗವಾಗಿದೆ.
- ತುಂಬೆ ಗಿಡದ ಬೇರು, ಕಾಂಡ ಮತ್ತು ಎಲೆಯನ್ನು ಚೆನ್ನಾಗಿ ತೊಳೆದು ಅದನ್ನು ನೀರಿನಲ್ಲಿ ಚೆನ್ನಾಗಿ ಕುದಿಸಿ. ಬಳಿಕ ಅದರ ಹಬೆಯನ್ನು ತೆಗೆದುಕೊಳ್ಳಿ. ಇದರಿಂದ ತಲೆನೋವು ಬೇಗ ವಾಸಿಯಾಗುತ್ತದೆ. ಜೊತೆಗೆ ಇದರಲ್ಲಿ ಯಾವುದೇ ರೀತಿಯ ಅಡ್ಡ ಪರಿಣಾಮಗಳು ಇರುವುದಿಲ್ಲ.
- ಹಿಂದಿನಿಂದಲೂ ಹಾವು ಕಚ್ಚಿದಾಗ ತುಂಬೆ ಗಿಡದ ಎಲೆಯ ರಸವನ್ನು ಆ ಜಾಗಕ್ಕೆ ಹಚ್ಚುವ ಪದ್ದತಿ ಇದೆ. ಹೀಗೆ ಮಾಡುವುದರಿಂದ ಹಾವಿನ ವಿಷ ರಕ್ತದಲ್ಲಿ ಸೇರಿಕೊಳ್ಳದೆ ಸಾವು ಸಂಭವಿಸುವ ಸಾಧ್ಯತೆ ಕಡಿಮೆಯಾಗುತ್ತೆ ಎಂದು ಹೇಳಲಾಗುತ್ತದೆ.
ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ