ಮೊಟ್ಟೆ ಮಕ್ಕಳಿಗೆ, ಪ್ರೋಟೀನ್, ಖನಿಜ ಮತ್ತು ಇತರ ಅಗತ್ಯ ಪೋಷಕಾಂಶಗಳನ್ನು ಒದಗಿಸುವಲ್ಲಿ ಸಹಾಯಕವಾಗಿದೆ. ಮೊಟ್ಟೆಯಲ್ಲಿರುವ ವಿಟಮಿನ್ ಎ, ಡಿ ಮತ್ತು ಇ ಮಕ್ಕಳ ಮೂಳೆ, ಸ್ನಾಯುಗಳನ್ನು ಬಲಪಡಿಸುತ್ತದೆ. ಇದಲ್ಲದೇ ಕಣ್ಣಿನ ಆರೋಗ್ಯಕ್ಕೆ ಸಂಬಂಧಪಟ್ಟಂತೆ ತುಂಬಾ ಒಳ್ಳೆಯದು. ಆದ್ದರಿಂದ ಮಕ್ಕಳಿಗೆ ಯಾವ ವಯಸ್ಸಿನಲ್ಲಿ ಮೊಟ್ಟೆ ತಿನಿಸಲು ಪ್ರಾರಂಭಿಸಬೇಕು? ಜೊತೆಗೆ ದಿನಕ್ಕೆ ಎಷ್ಟು ಮೊಟ್ಟೆಗಳನ್ನು ನೀಡಬೇಕು? ಎಂಬುದು ತಿಳಿದುಕೊಳ್ಳುವುದು ಅವಶ್ಯಕ.
ವಾಸ್ತವವಾಗಿ ಆರು ತಿಂಗಳ ನಂತರ ಮಗುವಿಗೆ ಮೊಟ್ಟೆ ನೀಡಲು ಪ್ರಾರಂಭಿಸಬಹುದು. ಈ ವಯಸ್ಸಿನಿಂದ ಅವರಿಗೆ ಹೆಚ್ಚಿನ ಪೋಷಣೆಯ ಅಗತ್ಯವಿರುತ್ತದೆ. ಮೊಟ್ಟೆ ಪ್ರೋಟೀನ್ ಮತ್ತು ಖನಿಜಗಳಲ್ಲಿ ಸಮೃದ್ಧವಾಗಿವೆ. ಇವು ಮಕ್ಕಳ ಆರೋಗ್ಯಕ್ಕೆ ಒಳ್ಳೆಯದು.
ಇದನ್ನೂ ಓದಿ: ಮಕ್ಕಳಲ್ಲಿ ಬೊಜ್ಜು ಹೆಚ್ಚಿಸುವ ಜಂಕ್ಫುಡ್ ಚಟ ಬಿಡಿಸುವುದು ಹೇಗೆ?
ಮಗು ಆರು ತಿಂಗಳ ವಯಸ್ಸಿನಿಂದ ಮೊಟ್ಟೆ ನೀಡಲು ಪ್ರಾರಂಭಿಸಬಹುದು. ಆದರೆ ಆರಂಭದಲ್ಲಿ ಅರ್ಧ ಮೊಟ್ಟೆಯನ್ನು ಮಾತ್ರ ನೀಡಿ. ನಿಧಾನವಾಗಿ ತಿನ್ನಲು ಹೇಳಿ ಅಥವಾ ತಿನ್ನಿಸಿ. ಕೆಲವೊಮ್ಮೆ ಅಲರ್ಜಿಯಾಗುವ ಸಾಧ್ಯತೆ ಇದೆ. ಕ್ರಮೇಣ ಮಗು ಬೆಳೆದಂತೆ ಅರ್ಧ ಮೊಟ್ಟೆಯ ಬದಲಿಗೆ ಸಂಪೂರ್ಣ ಮೊಟ್ಟೆಯನ್ನು ನೀಡಲು ಆರಂಭಿಸಬೇಕು. ಒಂದು ವರ್ಷದ ವಯಸ್ಸಿನಿಂದ ಇಡೀ ಮೊಟ್ಟೆಯನ್ನು ಪ್ರತಿದಿನ ತಿನ್ನಬಹುದು. ಇದು ಮಗುವಿನ ಬೆಳವಣಿಗೆಗೆ ಮಾತ್ರವಲ್ಲದೆ ಮಗುವಿನ ಮೂಳೆಗಳನ್ನು ಬಲಪಡಿಸುತ್ತದೆ.
ಕೆಲವು ಮಕ್ಕಳು ಮೊಟ್ಟೆ ಸೇವನೆಯಿಂದ ಅಲರ್ಜಿಯನ್ನು ಹೊಂದಿರಬಹುದು. ಆದ್ದರಿಂದ ಮೊದಲಿಗೆ ಸ್ವಲ್ಪ ಮೊಟ್ಟೆಯನ್ನು ಮಾತ್ರ ನೀಡಿ. ಅಲರ್ಜಿಯ ಲಕ್ಷಣಗಳು ಕಂಡುಬಂದರೆ, ತಕ್ಷಣ ವೈದ್ಯರನ್ನು ಸಂಪರ್ಕಿಸಿ. ಶಿಶುಗಳಿಗೆ ಯಾವಾಗಲೂ ತಾಜಾ ಮೊಟ್ಟೆಗಳನ್ನು ನೀಡಬೇಕು. ದೀರ್ಘಕಾಲ ಸಂಗ್ರಹಿಸಿದ ಮೊಟ್ಟೆಗಳನ್ನು ನೀಡಬಾರದು.
ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ