World Liver Day 2024: ಯಕೃತ್ತಿನ ಆರೋಗ್ಯದ ಗುಟ್ಟು ನಿಮ್ಮ ಆಹಾರದಲ್ಲಿದೆ!
ದೇಹದಲ್ಲಿ ಪ್ರತಿಯೊಂದು ಅಂಗವು ಸರಿಯಾಗಿ ಅಂಗವು ಕಾರ್ಯನಿರ್ವಹಿಸಿದರೆ ನಿಮ್ಮ ಆರೋಗ್ಯವು ಚೆನ್ನಾಗಿದೆ ಎಂದು ಹೇಳಲು ಸಾಧ್ಯ.ನಮ್ಮ ದೇಹದಲ್ಲಿ ಈ ಮೆದುಳಿನ ಬಳಿಕ ದೇಹದಲ್ಲಿ ಎರಡನೇ ಅಂಗ ಎಂದು ಕರೆಸಿಕೊಂಡಿರುವ ಲಿವರ್ ಸರಿಯಾಗಿ ಕೆಲಸ ನಿರ್ವಹಿಸದೇ ಹೋದರೆ ಆರೋಗ್ಯವು ಕೆಟ್ಟಂತೆಯೇ ಸರಿ. ಹೀಗಾಗಿ ಈ ಯಕೃತ್ತಿನ ಆರೋಗ್ಯವನ್ನು ಕಾಪಾಡಿಕೊಳ್ಳುವ ಬಗ್ಗೆ ಜನರಿಗೆ ಅರಿವು ಮೂಡಿಸುವ ಉದ್ದೇಶದಿಂದ ಪ್ರತಿ ವರ್ಷ ಏಪ್ರಿಲ್ 19ರಂದು ವಿಶ್ವ ಯಕೃತ್ತಿನ ದಿನವನ್ನು ಆಚರಿಸಲಾಗುತ್ತದೆ. ಹಾಗಾದ್ರೆ ಲಿವರ್ ಆರೋಗ್ಯವನ್ನು ಕಾಪಾಡಿಕೊಳ್ಳಲು ಏನು ಮಾಡಬೇಕು ಎನ್ನುವುದರ ಸಂಪೂರ್ಣ ಮಾಹಿತಿ ಇಲ್ಲಿದೆ.
ಇಂದಿನ ಒತ್ತಡ ಭರಿತ ಜೀವನಶೈಲಿ ಹಾಗೂ ಆಹಾರಕ್ರಮದಲ್ಲಾಗುವ ಬದಲಾವಣೆಯಿಂದಾಗಿ ಮನುಷ್ಯನ ದೇಹದಲ್ಲಿನ ಒಂದೊಂದೇ ಅಂಗಗಳ ಕಾರ್ಯ ಕ್ಷಮತೆಯೂ ಕಡಿಮೆಯಾಗುತ್ತಿದೆ. ದೇಹವನ್ನು ವಿಷಯುಕ್ತ ಪದಾರ್ಥಗಳನ್ನು ದೇಹದಿಂದ ಹೊರ ಹಾಕುವ ಕೆಲಸವನ್ನು ಮಾಡುತ್ತದೆ. ಅದಲ್ಲದೇ, ದೇಹದಲ್ಲಿರುವ ಚಯಾಪಚ ಕ್ರಿಯೆಯನ್ನು ಸುಧಾರಿಸುತ್ತದೆ. ಆಹಾರವು ಪಚನವಾಗಲು ಬೇಕಾಗುವ ಈ ಪಿತ್ತರಸವನ್ನು ಉತ್ಪಾದಿಸುವ ಈ ಯಕೃತ್ತು ದೇಹದ ಪ್ರಮುಖವಾದ ಅಂಗವೆನಿಸಿಕೊಂಡಿದೆ. ಈ ಯಕೃತ್ತಿನ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಪ್ರತಿ ವರ್ಷ ಏಪ್ರಿಲ್ 19 ರಂದು ವಿಶ್ವ ಯಕೃತ್ತು ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ.
ವಿಶ್ವ ಯಕೃತ್ತ್ ದಿನದ ಇತಿಹಾಸ ಹಾಗೂ ಮಹತ್ವ:
ವಿಶ್ವ ಯಕೃತ್ತ್ ದಿನವನ್ನು 2009ರಿಂದ ಆಚರಿಸಿಕೊಂಡು ಬರಲಾಗುತ್ತಿದೆ. ಪ್ರತಿ ವರ್ಷ ಏಪ್ರಿಲ್ 19 ರಂದು ವಿಶ್ವ ಲಿವರ್ ದಿನದಂದು ಯಕೃತ್ತಿನ ಕ್ಯಾನ್ಸರ್, ಕೊಬ್ಬು ತುಂಬಿದ ಲಿವರ್ (ಪ್ಯಾಟಿ ಲಿವರ್) ಮತ್ತು ಲಿವರ್ ಸಲ್ಲೋಸಿಸ್ ರೋಗಗಳ ಬಗ್ಗೆ ಜನರಿಗೆ ಅರಿವು ಮೂಡಿಸಿ, ಈ ರೋಗಗಳನ್ನು ತಡೆಗಟ್ಟುವುದು ಹಾಗೂ ಲಿವರ್ ನ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಹೇಗೆ ಎಂಬುದರ ಬಗ್ಗೆ ವಿಶೇಷ ಜಾಗೃತಿ ಮೂಡಿಸಲಾಗುತ್ತಿದೆ. ಅದಲ್ಲದೇ ಆರೋಗ್ಯ ಇಲಾಖೆಗಳು ಸೇರಿದಂತೆ ಹಲವಾರು ಸಂಸ್ಥೆಗಳು ಈ ದಿನದಂದು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ.
ಇದನ್ನೂ ಓದಿ: Cucumber Juice: ಪ್ರತಿದಿನ ಸೌತೆಕಾಯಿ ಜ್ಯೂಸ್ ಕುಡಿಯುವುದರಿಂದ ಆಗುವ ಪ್ರಯೋಜನಗಳೇನು?
ಯಕೃತ್ತಿನ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ?
- ಆಲ್ಕೋಹಾಲ್, ಬೀದಿ ಬದಿಯಲ್ಲಿ ಸಿಗುವ ಜಂಕ್ ಫುಡ್ಗಳ ಸೇವನೆಯಿಂದ ದೂರವಿರುವುದು ಒಳ್ಳೆಯದು.
- ತಾಜಾಭರಿತ ಸೊಪ್ಪು ತರಕಾರಿಗಳು, ಬೆಳ್ಳುಳ್ಳಿ, ಸೇಬು ಹಣ್ಣು, ದ್ರಾಕ್ಷಿಹಣ್ಣು, ಬ್ಲೂಬೆರ್ರಿ, ಸ್ಟ್ರಾಬೆರ್ರಿ ಹಾಗೂ ಕ್ಯಾರೆಟ್ ಗಳ ಸೇವನೆಯಿಂದ ಯಕೃತ್ತಿನ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.
- ಪಿತ್ತಜನಕಾಂಗವು ಉತ್ತಮವಾಗಿ ಕಾರ್ಯನಿರ್ವಹಿಸಲು ನಿಂಬೆ ರಸ, ಗ್ರೀನ್ ಟೀ, ಆಹಾರದಲ್ಲಿ ಅರಿಶಿಣ ಬಳಕೆ ಹೆಚ್ಚಿಸುವುದು ಒಳ್ಳೆಯದು.
ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ