Fitness Tips: ವಯಸ್ಕರು ಫಿಟ್​ ಆಗಿರಲು ಈ ಕೆಲವು ಯೋಗ ಆಸನಗಳು ಸಹಾಯಕ

| Updated By: preethi shettigar

Updated on: Nov 19, 2021 | 10:01 AM

ಕಾಯಿಲೆಗಳಿಂದ ದೂರವಿರಲು ನೀವು ನಿಯಮಿತವಾದ ವ್ಯಾಯಾಮ ಅಭ್ಯಾಸವನ್ನು ರೂಢಿಯಲ್ಲಿಟ್ಟುಕೊಳ್ಳುವುದು ಉತ್ತಮ. ವ್ಯಾಯಾಮವು ಮನಸ್ಥಿತಿಯನ್ನು ಸುಧಾರಿಸಲು ಮತ್ತು ದೇಹವನ್ನು ಸದೃಢವಾಗಿರಲು ಸಹಾಯ ಮಾಡುತ್ತದೆ.

Fitness Tips: ವಯಸ್ಕರು ಫಿಟ್​ ಆಗಿರಲು ಈ ಕೆಲವು ಯೋಗ ಆಸನಗಳು ಸಹಾಯಕ
ಯೋಗಾಸನ
Follow us on

ವಯಸ್ಸಾಗಿದೆ ಎಂದರೆ ಫಿಟ್ನೆಸ್​ ವ್ಯಾಯಾಮಗಳನ್ನೆಲ್ಲಾ ದೂರವಿಡಬೇಕು ಅಂದೇನಲ್ಲ. ದುರ್ಬಲ ಸ್ನಾಯುಗಳು ಮತ್ತು ಮೂಳೆಗಳ ಕಾರಣದಿಂದ ವೃದ್ಧಾಪ್ಯವು ದೇಹದ ಚಲನೆಗಳನ್ನು ತಡೆಹಿಡಿಯುತ್ತವೆ. ಹೀಗಿರುವಾಗ ವಯಸ್ಸಾದರೂ ಚಟುವಟಿಕೆಯಿಂದ ಕೂಡಿರಲು ಜೊತೆಗೆ ಫಿಟ್ ಆಗಿರಲು, ನೀವು ಸ್ನಾಯು ಮತ್ತು ಮೂಳೆಗಳ ಆರೋಗ್ಯವನ್ನು ಸುಧಾರಿಸಿಕೊಳ್ಳುವುದರ ಜೊತೆಗೆ ಹೃದಯನಾಳಗಳಿಗೆ ಸಂಬಂಧಿಸಿದ ಕಾಯಿಲೆಗಳಿಂದ ದೂರವಿರಲು ನೀವು ನಿಯಮಿತವಾದ ವ್ಯಾಯಾಮ ಅಭ್ಯಾಸವನ್ನು ರೂಢಿಯಲ್ಲಿಟ್ಟುಕೊಳ್ಳುವುದು ಉತ್ತಮ. ವ್ಯಾಯಾಮವು ಮನಸ್ಥಿತಿಯನ್ನು ಸುಧಾರಿಸಲು ಮತ್ತು ದೇಹವನ್ನು ಸದೃಢವಾಗಿರಲು ಸಹಾಯ ಮಾಡುತ್ತದೆ. ಹಾಗಿರುವಾಗ ವಯಸ್ಕರು ರೂಢಿಯಲ್ಲಿಟ್ಟುಕೊಳ್ಳಬಹುದಾದ ಯೋಗ ಆಸನಗಳು ಯಾವುವು? ಎಂಬುದು ಈ ಕೆಳಗಿನಮತಿದೆ ತಿಳಿಯಿರಿ.

ವಯಸ್ಕರು ರೂಢಿಯಲ್ಲಿಟ್ಟುಕೊಳ್ಳಬಹುದಾದ ಯೋಗ ಭಂಗಿಗಳು
ವಯಸ್ಕರಲ್ಲಿ ಆರೋಗ್ಯ ಸುಧಾರಣೆಗೆ ಮತ್ತು ದೇಹದ ಸದೃಢತೆಗೆ ರೂಢಿಯಲ್ಲಿಟ್ಟುಕೊಳ್ಳಬಹುದಾದ ಯೋಗ ಭಂಗಿಗಳು ಈ ಕೆಳಗಿನಂತಿವೆ.

ಬದ್ಧಕೋನಾಸನ
ಈ ಯೋಗ ಆಸನವನ್ನು ಚಿಟ್ಟೆ ಭಂಗಿ ಎಂದೂ ಕರೆಯುತ್ತಾರೆ
ನಿಮ್ಮ ಕಾಲುಗಳನ್ನು ಮಡಚಿ ಆರಾಮವಾಗಿ ಕುಳಿತುಕೊಳ್ಳಿ
ನಿಮ್ಮ ಕಾಲಿನ ಪಾದಗಳನ್ನು ಒಟ್ಟಿಗೆ ಸೇರಿಸಿ
ನಿಮ್ಮ ಕೈಗಳಿಂದ ಕಾಲುಗಳ ಪಾದವನ್ನು ಹಿಡಿದುಕೊಳ್ಳಿ ಮತ್ತು ನಿಮ್ಮ ಬೆನ್ನು ನೇರವಾಗಿರಲಿ
ನೀವು ವಿಶ್ರಾಂತಿ ಪಡೆಯಿರಿ ಮತ್ತು ಆ ಆಸನದಲ್ಲಿಯೇ ಆದಷ್ಟು ಹೊತ್ತು ಕುಳಿತುಕೊಳ್ಳಿ

ಕಟಿಚಕ್ರಾಸನ
ಈ ರೋಗವನ್ನು ಬೆನ್ನುಮೂಳೆಯ ಟ್ವಿಸ್ಟ್​ ಭಂಗಿ ಎಂದೂ ಕರೆಯುತ್ತಾರೆ
ನೀವು ನೇರವಾಗಿ ನಿಂತುಕೊಳ್ಳಿ
ನಿಮ್ಮ ಕೈಗಳನ್ನು ಮುಂದಕ್ಕೆ ಚಾಚಿ
ನಿಮ್ಮ ಬೆನ್ನುಹುರಿ ನೇರವಾಗಿರಲಿ, ನಿಮ್ಮ ಸೊಂಟದಿಂದ ಮೇಲಿನ ಭಾಗವನ್ನು ಬಲಭಾಗಕ್ಕೆ ತಿರುಗಿಸಿ ಹಿಂದಕ್ಕೆ ನೋಡಿ
ಇದನ್ನು ಮಾಡುವಾಗ ಒಂದು ಕೈಯನ್ನು ನಿಮ್ಮ ಭುಜದ ಮೇಲೆ ಹಾಗೂ ಮತ್ತೊಂದು ಕೈ ನಿಮ್ಮ ಬೆನ್ನಿನ ಹಿಂದೆ ಇರಿಸಿ

ಭುಜಂಗಾಸನ
ನಿಮ್ಮ ಹೊಟ್ಟೆಯ ಮೇಲೆ ನೇರವಾಗಿ ಮಲಗಿಕೊಳ್ಳಿ
ನಿಮ್ಮ ಅಂಗೈಗಳನ್ನು ನಿಮ್ಮ ಭುಜದ ಪಕ್ಕದಲ್ಲಿ ಊರಿ ಮೇಲೆದ್ದುಕೊಳ್ಳಿ
ಮೇಲಕ್ಕೆ ನೋಡುತ್ತಿರಿ ಮತ್ತು ಉಸಿರಾಟವನ್ನು ನಿಯಂತ್ರಿಸಿ
ಬಳಿಕ ನಿಮ್ಮ ದೇಹವನ್ನು ಆರಂಭಿಕ ಸ್ಥಾನಕ್ಕೆ ಹಿಂತಿರುಗಿಸಿ
ಈ ಹಂತವನ್ನು ಕನಿಷ್ಠ 5 ಬಾರಿಯಾದರೂ ಪುನರಾವರ್ತಿಸಿ

ಶವಾಸನ
ನೇರವಾಗಿ ಮಲಗಿಕೊಳ್ಳಿ
ನಿಮ್ಮ ದೇಹಕ್ಕೆ ವಿಶ್ರಾಂತಿ ಕೊಡಿ
ಉಸಿರಾಟ ಕ್ರಿಯೆಯನ್ನು ಗಮನಿಸಿ
ತಲೆಯಿಂದ ಕಾಲ್ಬೆರಳುಗಳವರೆಗೆ ನಿಮ್ಮ ದೇಹದ ಪ್ರತಿಯೊಂದು ಭಾಗದ ಮೇಲೆ ಕೇಂದ್ರೀಕರಿಸಿ
ಕನಿಷ್ಠ 5 ನಿಮಿಷಗಳ ಕಾಲ ಶಾಂತವಾಗಿ ಮಲಗಿಕೊಳ್ಳಿ

ಇದನ್ನೂ ಓದಿ:

Yogasana Benefits: ಮೂಳೆಗಳ ಬಲಕ್ಕೆ ಪ್ರತಿದಿನ ಈ ಯೋಗಾಸನಗಳನ್ನು ಮಾಡಿ

Health Benefits: ಕಟಿ ಚಕ್ರಾಸನ ಮಾಡುವುದು ಹೇಗೆ? ಹೊಟ್ಟೆಯಲ್ಲಿನ ಕೊಬ್ಬು ಕರಗಿಸಲು 15 ನಿಮಿಷಗಳ ಕಾಲ ಈ ಯೋಗಾಸನ ಮಾಡಿ