Folic Acid: ಫೋಲಿಕ್ ಆ್ಯಸಿಡ್ ಬಗ್ಗೆ ನಿಮಗೆಷ್ಟು ಗೊತ್ತು?; ಇದರ ಮಹತ್ವ, ಅಡ್ಡ ಪರಿಣಾಮಗಳೇನು?

Health Tips: ಕೆಲವು ಆಹಾರಗಳು ನೈಸರ್ಗಿಕವಾಗಿ ಫೋಲೇಟ್ ಅನ್ನು ಹೊಂದಿರುತ್ತವೆ. ಮುಖ್ಯವಾಗಿ ಗರ್ಭಿಣಿಯರಿಗೆ ಈ ಫೋಲಿಕ್ ಆ್ಯಸಿಡ್ ಬಹಳ ಅಗತ್ಯವಾದುದು. ಫೋಲಿಕ್ ಆ್ಯಸಿಡ್ ಗರ್ಭದೊಳಗಿನ ಮಗುವಿನ ಬೆಳವಣಿಗೆಗೆ ಬಹಳ ಅತ್ಯಗತ್ಯವಾದುದು.

Folic Acid: ಫೋಲಿಕ್ ಆ್ಯಸಿಡ್ ಬಗ್ಗೆ ನಿಮಗೆಷ್ಟು ಗೊತ್ತು?; ಇದರ ಮಹತ್ವ, ಅಡ್ಡ ಪರಿಣಾಮಗಳೇನು?
ಸಾಂದರ್ಭಿಕ ಚಿತ್ರImage Credit source: Times of India
Follow us
ಸುಷ್ಮಾ ಚಕ್ರೆ
|

Updated on: Jan 23, 2023 | 4:59 PM

ಫೋಲಿಕ್ ಆ್ಯಸಿಡ್ ನೀರಿನಲ್ಲಿ ಕರಗುವ ವಿಟಮಿನ್ ಆಗಿದೆ. ಇದು B ಜೀವಸತ್ವಗಳಲ್ಲಿ ಒಂದಾಗಿದೆ. ನಿಮ್ಮ ದೇಹವು ಫೋಲಿಕ್ ಆ್ಯಸಿಡ್ (Folic Acid) ಅಥವಾ ಫೋಲೇಟ್ ಅನ್ನು ಉತ್ಪತ್ತಿ ಮಾಡಲು ಸಾಧ್ಯವಿಲ್ಲದ ಕಾರಣ ನಿಮ್ಮ ಆಹಾರದಿಂದಲೇ ನೀವು ಅದನ್ನು ಪಡೆಯಬೇಕು. ಕೆಲವು ಆಹಾರಗಳು ನೈಸರ್ಗಿಕವಾಗಿ ಫೋಲೇಟ್ ಅನ್ನು ಹೊಂದಿರುತ್ತವೆ. ಅಂತಹ ಆಹಾರವನ್ನು ಹೆಚ್ಚು ಸೇವಿಸಿದರೆ ದೇಹಕ್ಕೆ ಫೋಲಿಕ್ ಆ್ಯಸಿಡ್ ಸಿಗುತ್ತದೆ. ಮುಖ್ಯವಾಗಿ ಗರ್ಭಿಣಿಯರಿಗೆ ಈ ಫೋಲಿಕ್ ಆ್ಯಸಿಡ್ ಬಹಳ ಅಗತ್ಯವಾದುದು. ಫೋಲಿಕ್ ಆ್ಯಸಿಡ್ ಗರ್ಭದೊಳಗಿನ ಮಗುವಿನ ಬೆಳವಣಿಗೆಗೆ ಬಹಳ ಅತ್ಯಗತ್ಯವಾದುದು.

ಫೋಲಿಕ್ ಆ್ಯಸಿಡ್ ಹೆಚ್ಚಾಗಿರುವ ಆಹಾರ ಪದಾರ್ಥಗಳಿವು:

– ಸೊಪ್ಪು

– ಎಲೆಕೋಸು

– ಬಟಾಣಿ

– ಬ್ರೊಕೋಲಿ

– ಬಾಳೆಹಣ್ಣು

– ಕೋಸುಗಡ್ಡೆ

– ಬೆಣ್ಣೆಹಣ್ಣು

– ಸಿಟ್ರಸ್ ಹಣ್ಣುಗಳು

– ಮೊಟ್ಟೆಗಳು

ಇದು ಮಲ್ಟಿವಿಟಮಿನ್‌ಗಳಂತಹ ಆಹಾರದ ಸಪ್ಲಿಮೆಂಟ್​​ಗಳಲ್ಲೂ ಇರುತ್ತದೆ. ಫೋಲಿಕ್ ಆ್ಯಸಿಡ್ ಜೀವಕೋಶಗಳು ಬೆಳೆಯಲು, ವಿಭಜಿಸಲು ಮತ್ತು ಸರಿಯಾಗಿ ಕೆಲಸ ಮಾಡಲು ಸಹಾಯ ಮಾಡುತ್ತದೆ. ಇದು ಕೆಲವು ಪ್ರೋಟೀನ್​ಗಳನ್ನು ಉತ್ಪಾದಿಸುತ್ತದೆ. ಕೆಂಪು ರಕ್ತ ಕಣಗಳು ಹೆಚ್ಚಾಗಲು ಸಹಾಯ ಮಾಡುತ್ತದೆ. ರಕ್ತಹೀನತೆಯನ್ನು ತಡೆಗಟ್ಟುತ್ತದೆ. ಗರ್ಭಿಣಿಯರು ಸಾಕಷ್ಟು ಫೋಲೇಟ್ ಅನ್ನು ಪಡೆಯದಿದ್ದರೆ ಶಿಶುಗಳಲ್ಲಿ ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತದೆ.

ಇದನ್ನೂ ಓದಿ: Brain Health: ಮೆದುಳಿನ ಆರೋಗ್ಯ ಸುಧಾರಣೆಗೆ ಈ ಕೆಲವು ಅಂಶಗಳನ್ನು ಪ್ರತಿನಿತ್ಯ ರೂಢಿಸಿಕೊಳ್ಳಿ

ವಯಸ್ಕರಿಗೆ ಪ್ರತಿದಿನ ಸುಮಾರು 400 ಎಂಸಿಜಿ ಡಿಎಫ್‌ಇ ಫೋಲಿಕ್ ಆ್ಯಸಿಡ್​/ ಫೋಲೇಟ್​ನ ಅಗತ್ಯವಿದೆ. ಗರ್ಭಾವಸ್ಥೆಯಲ್ಲಿ ಮತ್ತು ಹಾಲುಣಿಸುವ ಸಮಯದಲ್ಲಿ ಫೋಲೇಟ್ ಅಗತ್ಯವು ಹೆಚ್ಚಾಗುತ್ತದೆ. ನಿಮ್ಮ ದೇಹವು 15-30 ಮಿಗ್ರಾಂ ಫೋಲೇಟ್ ಅನ್ನು ಸಂಗ್ರಹಿಸುತ್ತದೆ. ಹೆಚ್ಚಿನ ಫೋಲೇಟ್ ನಿಮ್ಮ ಯಕೃತ್ತಿನಲ್ಲಿರುತ್ತದೆ. ಉಳಿದವು ನಿಮ್ಮ ರಕ್ತ ಮತ್ತು ಅಂಗಾಂಶಗಳಲ್ಲಿರುತ್ತದೆ.

ತುಂಬಾ ಕಡಿಮೆ ಫೋಲೇಟ್ ಅನ್ನು ಸೇವಿಸುವುದರಿಂದ ರಕ್ತಹೀನತೆ, ಭ್ರೂಣದ ಬೆಳವಣಿಗೆಯ ಸಮಸ್ಯೆಗಳು, ಮಾನಸಿಕ ದುರ್ಬಲತೆ, ದುರ್ಬಲಗೊಂಡ ಪ್ರತಿರಕ್ಷಣಾ ಕಾರ್ಯ ಮತ್ತು ಖಿನ್ನತೆಯಂತಹ ಸಮಸ್ಯೆಗಳು ಉಂಟಾಗುತ್ತದೆ. ಮಧುಮೇಹವನ್ನು ನಿಯಂತ್ರಣಕ್ಕೆ ತರಲು ಫೋಲೇಟ್ ಸಹಾಯ ಮಾಡುತ್ತದೆ. ಫೋಲೇಟ್ ಸೇವಿಸುವುದರಿಂದ ಗರ್ಭಿಣಿಯಾಗುವ ಮತ್ತು ಮಗುವನ್ನು ಹೆರುವ ಅವಕಾಶ ಹೆಚ್ಚಾಗಬಹುದು. ಉರಿಯೂತದ ಸಮಸ್ಯೆಗೂ ಫೋಲಿಕ್ ಆ್ಯಸಿಡ್ ಪರಿಣಾಮಕಾರಿ. ಫೋಲಿಕ್ ಆಸಿಡ್ ಮೂತ್ರಪಿಂಡದ ಕಾಯಿಲೆ ಇರುವವರಲ್ಲಿ ಹೋಮೋಸಿಸ್ಟೈನ್ ಮಟ್ಟವನ್ನು ಮತ್ತು ಹೃದ್ರೋಗದ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಇನ್ನಷ್ಟು ಆರೋಗ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ