AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Knee Pain Remedies: ಮೊಣಕಾಲು ನೋವಿನಿಂದ ಬಳಲುತ್ತಿದ್ದೀರಾ?; ಈ ಸರಳ ವ್ಯಾಯಾಮ, ಮನೆಮದ್ದು ಟ್ರೈ ಮಾಡಿ

Health Tips: ಮೊಣಕಾಲು ಸಾಮಾನ್ಯವಾಗಿ ಎಲ್ಲ ವಯೋಮಾನದವರಿಗೂ ಕಾಡುವ ಸಮಸ್ಯೆ. ಶೀತ ಹವಾಮಾನದಲ್ಲಿ ಮಂಡಿ ನೋವು ಉಲ್ಬಣಗೊಳ್ಳುತ್ತದೆ. ಈ ಚಳಿಯ ವಾತಾವರಣ ರಕ್ತ ಪರಿಚಲನೆಯನ್ನು ನಿಧಾನಗೊಳಿಸುತ್ತದೆ.

Knee Pain Remedies: ಮೊಣಕಾಲು ನೋವಿನಿಂದ ಬಳಲುತ್ತಿದ್ದೀರಾ?; ಈ ಸರಳ ವ್ಯಾಯಾಮ, ಮನೆಮದ್ದು ಟ್ರೈ ಮಾಡಿ
ಮಂಡಿ ನೋವು (ಸಾಂದರ್ಭಿಕ ಚಿತ್ರ)Image Credit source: iStock
ಸುಷ್ಮಾ ಚಕ್ರೆ
|

Updated on: Jan 23, 2023 | 1:11 PM

Share

ಹೇಳಿಕೇಳಿ ಇದು ಚಳಿಗಾಲ (Winter Season). ವಿಪರೀತ ಚಳಿಯಿಂದ ಬಹುತೇಕ ಜಿಲ್ಲೆಗಳ ಜನರು ಪರದಾಡುತ್ತಿದ್ದಾರೆ. ಈ ಚಳಿಗಾಲದಲ್ಲಿ ಮಂಡಿ ನೋವು (Knee Pain) ಹೆಚ್ಚಾಗುವುದು ಸಾಮಾನ್ಯ. ಈಗಂತೂ ವಯಸ್ಸಾದವರಿಗೆ ಮಾತ್ರ ಮೊಣಕಾಲು ನೋವು ಬರುತ್ತದೆ ಎನ್ನುವ ಹಾಗಿಲ್ಲ. ಎಳೆ ವಯಸ್ಸಿನವರಿಗೂ ಮಂಡಿ ನೋವು ಹೆಚ್ಚಾಗುತ್ತಿದೆ. ನಿಮಗೂ ಮೊಣಕಾಲು ನೋವು ಅಥವಾ ಕೀಲು ನೋವು ಇದ್ದರೆ ಅದರಿಂದ ಪಾರಾಗಲು ಯಾವ ರೀತಿಯ ಸರಳ ವ್ಯಾಯಾಮ ಮಾಡಬೇಕು, ಮನೆಮದ್ದುಗಳು ಯಾವುವು, ಯಾವ ರೀತಿ ಕಾಲಿಗೆ ಮಸಾಜ್ ಮಾಡಿಕೊಳ್ಳಬೇಕು ಎಂಬಿತ್ಯಾದಿ ಮಾಹಿತಿ ಇಲ್ಲಿದೆ.

ಮೊಣಕಾಲು ಸಾಮಾನ್ಯವಾಗಿ ಎಲ್ಲ ವಯೋಮಾನದವರಿಗೂ ಕಾಡುವ ಸಮಸ್ಯೆ. ಶೀತ ಹವಾಮಾನದಲ್ಲಿ ಮಂಡಿ ನೋವು ಉಲ್ಬಣಗೊಳ್ಳುತ್ತದೆ. ಈ ಚಳಿಯ ವಾತಾವರಣ ರಕ್ತ ಪರಿಚಲನೆಯನ್ನು ನಿಧಾನಗೊಳಿಸುತ್ತದೆ ಮತ್ತು ಸ್ನಾಯು ಸೆಳೆತವನ್ನು ಉಂಟುಮಾಡುತ್ತದೆ. ಈ ಹಿನ್ನೆಲೆಯಲ್ಲಿ ಯೋಗ ಶಿಕ್ಷಕಿ ಸ್ಮೃತಿ ಇನ್​ಸ್ಟಾಗ್ರಾಂನಲ್ಲಿ ಮಂಡಿ ನೋವಿಗೆ ನೀಡಬಹುದಾದ ಕೆಲವು ಮನೆಮದ್ದುಗಳನ್ನು ಹಂಚಿಕೊಂಡಿದ್ದಾರೆ.

ಮೊಣಕಾಲು ಮಸಾಜ್: ಎಳ್ಳೆಣ್ಣೆಯನ್ನು ಬಿಸಿ ಮಾಡಿ ಅದಕ್ಕೆ ಕರ್ಪೂರವನ್ನು ಹಾಕಿ. ಇದನ್ನು ದಿನಕ್ಕೆ 2 ಬಾರಿ ರಾತ್ರಿ ಮತ್ತು ಬೆಳಿಗ್ಗೆ ಕಾಲಿಗೆ ಹಚ್ಚಿಕೊಳ್ಳಬೇಕು. ಬೆಳಗ್ಗೆ ಎಣ್ಣೆ ಹಚ್ಚಿಕೊಂಡ ನಂತರ ಸೂರ್ಯನ ಬೆಳಕಿನಲ್ಲಿ ನಿಂತರೆ ಅದು ಹೆಚ್ಚು ಪರಿಣಾಮಕಾರಿಯಾಗಿರುತ್ತದೆ. ನಂತರ ಸರಿಯಾಗಿ ಕಾಲಿಗೆ ಮಸಾಜ್ ಮಾಡಿಕೊಳ್ಳಬೇಕು.

ಇದನ್ನೂ ಓದಿ: ಹುಣಸೆ ಬೀಜ: ನೀವು ಮೊಣಕಾಲು ನೋವು ಮತ್ತು ಕೀಲು ನೋವಿನಿಂದ ಬಳಲುತ್ತಿದ್ದೀರಾ?

ವಿಟಮಿನ್ ಡಿ: ನಮ್ಮ ದೇಹಕ್ಕೆ ವಿಟಮಿನ್ ಡಿ ಬಹಳ ಅಗತ್ಯ. ಸೂರ್ಯನ ಶಾಖದಲ್ಲಿ ಈ ವಿಟಮಿನ್ ಡಿ ಅಂಶ ಹೆಚ್ಚಾಗಿರುತ್ತದೆ. ಹೀಗಾಗಿ, ಚಳಿಗಾಲದಲ್ಲಿ ಹೆಚ್ಚೆಚ್ಚು ಬಿಸಿಲಿಗೆ ಮೈ ಒಡ್ಡುವುದರಿಂದ ನಮ್ಮ ದೇಹದಲ್ಲಿ ವಿಟಮಿನ್ ಡಿ ಉತ್ಪತ್ತಿಯಾಗುತ್ತದೆ. ಇದರಿಂದ ಮೂಳೆಗಳು ಕೂಡ ಸ್ಟ್ರಾಂಗ್ ಆಗುತ್ತದೆ. ನಿಮ್ಮ ವೈದ್ಯರನ್ನು ಸಂಪರ್ಕಿಸಿ ವಿಟಮಿನ್ ಡಿ ಮಾತ್ರೆ, ಜೆಲ್ಲಿ ಮುಂತಾದ ಮೆಡಿಸಿನ್​ಗಳನ್ನು ಕೂಡ ತೆಗೆದುಕೊಳ್ಳಬಹುದು. ಇದರಿಂದ ಮೂಳೆಗಳು ಗಟ್ಟಿಯಾಗುತ್ತದೆ.

ಗಡಿಬಿಡಿಯಿಂದ ನೀರು ಕುಡಿಯಬೇಡಿ: ಕೆಲವರಿಗೆ ಗಟಗಟನೆ ನೀರು ಕುಡಿಯುವ ಅಭ್ಯಾಸ ಇರುತ್ತದೆ. ಆದರೆ, ನಿಧಾನವಾಗಿ ನೀರನ್ನು ಕುಡಿಯುವುದರಿಂದ ಮೊಣಕಾಲು ನೋವನ್ನು ತಪ್ಪಿಸಬಹುದು. ಬೇಗ ಬೇಗನೆ ನೀರು ಕುಡಿದರೆ ಹೊಟ್ಟೆಯಲ್ಲಿ ಗ್ಯಾಸ್ ಉಂಟಾಗಿ ಅದು ಮೂಳೆಗಳಿಗೂ ವ್ಯಾಪಿಸುತ್ತದೆ. ಇದರಿಂದ ಮೊಣಕಾಲು ನೋವು ಅಥವಾ ಕೀಲು ನೋವು ಉಂಟಾಗುತ್ತದೆ.

ಇದನ್ನೂ ಓದಿ: ಮೊಣಕಾಲು ನೋವು ಕಡಿಮೆಯಾಗಲು ಈ ಯೋಗಾಸನಗಳನ್ನು ಮಾಡಿ

ಯೋಗ ಮಾಡಿ: ಸುಲಭವಾದ ಯೋಗಾಭ್ಯಾಸಗಳನ್ನು ಮಾಡಿ ನೋಡಿ. ಆರಾಮಾಗಿ ಕುಳಿತು 30-40 ಬಾರಿ ಉಸಿರನ್ನು ಎಳೆದುಕೊಳ್ಳಿ, ನಂತರ ಹಾಗೇ ಉಸಿರನ್ನು ಬಿಡಿ. ನೀವು ಮೇಲಕ್ಕೆ ಹತ್ತಿ, ಇಳಿಯುವಾಗ ನಿಧಾನವಾಗಿ ಉಸಿರನ್ನು ಎಳೆದುಕೊಳ್ಳಿ. ನಿಮ್ಮ ಮೊಣಕಾಲಿನ ಮೇಲೆ ಭಾರವನ್ನು ಹೊರಲು ಸಾಧ್ಯವಾಗದಿದ್ದರೆ ಅಥವಾ ನಿಮ್ಮ ಮೊಣಕಾಲು ಅದುರ್ಬಲವಾಗಿ ಎಂದು ಅನಿಸಿದರೆ ನಿಮ್ಮ ಮೊಣಕಾಲುಗಳನ್ನು ಆಗಾಗ ಸ್ಟ್ರೆಚ್ ಮಾಡುತ್ತಿರಿ. ಕಾಲನ್ನು ಒಂದೇ ರೀತಿಯಲ್ಲಿ ಇಟ್ಟುಕೊಳ್ಳಬೇಡಿ. ಆಗಾಗ ವಾಕ್ ಮಾಡುತ್ತಿರಿ.

ಇನ್ನಷ್ಟು ಆರೋಗ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ