Food for male fertility: ಪುರುಷರ ವೀರ್ಯದ ಗುಣಮಟ್ಟ ಹೆಚ್ಚಿಸುತ್ತೆ ಈ ಆಹಾರಗಳು

| Updated By: ಅಕ್ಷಯ್​ ಪಲ್ಲಮಜಲು​​

Updated on: Aug 19, 2024 | 11:56 AM

ವೀರ್ಯಾಣುಗಳ ಸಂಖ್ಯೆ ಮತ್ತು ವೀರ್ಯದ ಗುಣಮಟ್ಟ ಎರಡೂ ದುರ್ಬಲವಾಗಿದ್ದರೆ ಇದು ಪುರುಷ ಫಲವತ್ತತೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಅಂತಹವರು ಎಷ್ಟೇ ಪ್ರಯತ್ನಿಸಿದರೂ ತಂದೆಯಾಗಲು ವಿಫಲರಾಗುತ್ತಾರೆ. ಈ ವಿಷಯ ತುಂಬಾ ವೈಯಕ್ತಿಕವಾಗಿರುವುದರಿಂದ ಈ ವಿಷಯಗಳನ್ನು ಹಂಚಿಕೊಳ್ಳಲು ಇಷ್ಟ ಪಡುವುದಿಲ್ಲ. ಆದರೆ ಇದನ್ನು ಮುಚ್ಚಿಡುವುದರಲ್ಲಿ ಯಾವುದೇ ಪ್ರಯೋಜನವಿರುವುದಿಲ್ಲ. ಬದಲಾಗಿ ಅರ್ಹ ತಜ್ಞರನ್ನು ಸಂಪರ್ಕಿಸಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವುದು ಮುಖ್ಯವಾಗುತ್ತದೆ. ಇದರ ಜೊತೆಗೆ ಈ ರೀತಿ ಸಮಸ್ಯೆ ಇರುವವರು ತಮ್ಮ ಆಹಾರಕ್ರಮವನ್ನು ಬದಲಾಯಿಸುವ ಮೂಲಕ ಇದರಿಂದ ಪರಿಹಾರ ಕಂಡುಕೊಳ್ಳಬಹುದು. ಹಾಗಾದರೆ ನಿಮ್ಮ ಆಹಾರದಲ್ಲಿ ಯಾವ ಪದಾರ್ಥಗಳನ್ನು ಸೇರಿಸಬೇಕು? ಇಲ್ಲಿದೆ ಮಾಹಿತಿ.

Food for male fertility: ಪುರುಷರ ವೀರ್ಯದ ಗುಣಮಟ್ಟ ಹೆಚ್ಚಿಸುತ್ತೆ ಈ ಆಹಾರಗಳು
ಸಾಂದರ್ಭಿಕ ಚಿತ್ರ
Follow us on

ಮದುವೆಯ ನಂತರದಲ್ಲಿ ದಂಪತಿ ಮಕ್ಕಳಿಗಾಗಿ ಹಂಬಲಿಸುವುದು ಸಹಜ. ಮಹಿಳೆಯರಂತೆ ಪುರುಷರು ಕೂಡ ಸಂತೋಷದ ಜೀವನ ನಡೆಸುವುದರ ಜೊತೆಗೆ ಮಕ್ಕಳನ್ನು ಪಡೆಯಲು ಸಾಕಷ್ಟು ಕನಸು ಕಾಣುತ್ತಾರೆ. ಆದರೆ ಕೆಲವರಿಗೆ ಇದು ಸಾಧ್ಯವಾಗುವುದಿಲ್ಲ. ಏಕೆಂದರೆ ವೀರ್ಯಾಣುಗಳ ಸಂಖ್ಯೆ ಮತ್ತು ವೀರ್ಯದ ಗುಣಮಟ್ಟ ಎರಡೂ ದುರ್ಬಲವಾಗಿದ್ದರೆ ಇದು ಪುರುಷ ಫಲವತ್ತತೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಅಂತಹವರು ಎಷ್ಟೇ ಪ್ರಯತ್ನಿಸಿದರೂ ತಂದೆಯಾಗಲು ವಿಫಲರಾಗುತ್ತಾರೆ. ಈ ವಿಷಯ ತುಂಬಾ ವೈಯಕ್ತಿಕವಾಗಿರುವುದರಿಂದ ಈ ವಿಷಯಗಳನ್ನು ಹಂಚಿಕೊಳ್ಳಲು ಇಷ್ಟ ಪಡುವುದಿಲ್ಲ. ಆದರೆ ಇದನ್ನು ಮುಚ್ಚಿಡುವುದರಲ್ಲಿ ಯಾವುದೇ ಪ್ರಯೋಜನವಿರುವುದಿಲ್ಲ. ಬದಲಾಗಿ ಅರ್ಹ ತಜ್ಞರನ್ನು ಸಂಪರ್ಕಿಸಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವುದು ಮುಖ್ಯವಾಗುತ್ತದೆ. ಇದರ ಜೊತೆಗೆ ಈ ರೀತಿ ಸಮಸ್ಯೆ ಇರುವವರು ತಮ್ಮ ಆಹಾರಕ್ರಮವನ್ನು ಬದಲಾಯಿಸುವ ಮೂಲಕ ಇದರಿಂದ ಪರಿಹಾರ ಕಂಡುಕೊಳ್ಳಬಹುದು. ಹಾಗಾದರೆ ನಿಮ್ಮ ಆಹಾರದಲ್ಲಿ ಯಾವ ಪದಾರ್ಥಗಳನ್ನು ಸೇರಿಸಬೇಕು? ಇಲ್ಲಿದೆ ಮಾಹಿತಿ.

ಅನಾರೋಗ್ಯಕರ ಜೀವನಶೈಲಿ ಪುರುಷರಲ್ಲಿ ಈ ಆಂತರಿಕ ಸಮಸ್ಯೆಗಳನ್ನು ಉಂಟುಮಾಡುತ್ತಿದೆ, ಈ ತಪ್ಪುಗಳನ್ನು ಸಮಯಕ್ಕೆ ಸರಿಯಾಗಿ ಸರಿಪಡಿಸಿದರೆ, ಕಡಿಮೆ ವೀರ್ಯಾಣುಗಳ ಸಂಖ್ಯೆ, ಪುರುಷ ಬಂಜೆತನದಂತಹ ಸಮಸ್ಯೆಗಳನ್ನು ಕೆಲವೇ ವಾರಗಳಲ್ಲಿ ಗುಣಪಡಿಸಬಹುದು. ವಿವಾಹಿತ ಪುರುಷರು ತಮ್ಮ ದೈನಂದಿನ ಆಹಾರದಲ್ಲಿ, 3 ರೀತಿಯ ಒಣ ಹಣ್ಣುಗಳನ್ನು ಸೇರಿಸಿದರೆ, ಅವರ ಫಲವತ್ತತೆ ಸುಧಾರಿಸುವುದಲ್ಲದೆ, ತ್ರಾಣವೂ ಹೆಚ್ಚಾಗುತ್ತದೆ.

ದ್ರಾಕ್ಷಿ: ಇದು ಸಂಪೂರ್ಣ ಪೋಷಣೆಗೆ ಬಹಳ ಉಪಯುಕ್ತವಾಗಿದೆ. ದ್ರಾಕ್ಷಿಯನ್ನು ಬಿಸಿಲಿನಲ್ಲಿ ಒಣಗಿಸುವುದರಿಂದ ಒಣ ಹಣ್ಣಿನಲ್ಲಿ ಎಲೆಕ್ಟ್ರೋಲೈಟ್ ಗಳು, ಉತ್ಕರ್ಷಣ ನಿರೋಧಕಗಳು, ಖನಿಜಗಳು, ಶಕ್ತಿಯ ಜೀವಸತ್ವಗಳು ಹೆಚ್ಚಾಗುತ್ತವೆ. ಒಣದ್ರಾಕ್ಷಿಯಲ್ಲಿ ವಿಟಮಿನ್ ಎ ಸಮೃದ್ಧವಾಗಿದೆ. ಇದು ವೀರ್ಯಾಣುಗಳ ಸಂಖ್ಯೆ, ವೀರ್ಯಾಣುಗಳ ಗುಣಮಟ್ಟವನ್ನು ಸುಧಾರಿಸುತ್ತದೆ. ಆದರೆ ಮಧುಮೇಹ ರೋಗಿಗಳು ಇದನ್ನು ಸೀಮಿತ ಪ್ರಮಾಣದಲ್ಲಿ ಸೇವನೆ ಮಾಡಬೇಕು.

ಅಂಜೂರ: ಈ ಒಣ ಹಣ್ಣುಗಳನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ಪುರುಷ ಫಲವತ್ತತೆ ಸುಧಾರಿಸುತ್ತದೆ. ಅಲ್ಲದೆ ಅವರ ವೀರ್ಯಾಣುಗಳ ಸಂಖ್ಯೆ ಹೆಚ್ಚುತ್ತದೆ. ಏಕಂದರೆ ಇದು ಜೀವಸತ್ವಗಳು ಮತ್ತು ಖನಿಜಗಳಿಂದ ಸಮೃದ್ಧವಾಗಿದೆ. ಜೊತೆಗೆ ಪ್ಯಾಂಟೊಥೆನಿಕ್ ಆಮ್ಲ, ತಾಮ್ರ, ಫೈಬರ್ ಮತ್ತು ವಿಟಮಿನ್ ಬಿ 6 ಅನ್ನು ಸಹ ಒಳಗೊಂಡಿದೆ.

ಖರ್ಜೂರ: ಪುರುಷ ಫಲವತ್ತತೆಯನ್ನು ಸುಧಾರಿಸಲು ಖರ್ಜೂರವನ್ನು ಶತಮಾನಗಳಿಂದ ಬಳಸಲಾಗುತ್ತಿದೆ. ಇದರ ನಿಯಮಿತ ಸೇವನೆಯು ವೀರ್ಯಾಣುಗಳ ಸಂಖ್ಯೆ ಮತ್ತು ಗುಣಮಟ್ಟವನ್ನು ಹೆಚ್ಚಿಸುತ್ತದೆ ಎಂದು ಹಲವಾರು ಅಧ್ಯಯನಗಳಿಂದಲೂ ಬಹಿರಂಗಗೊಂಡಿದೆ. ವಾಸ್ತವವಾಗಿ, ಖರ್ಜೂರದಲ್ಲಿ ಕಂಡು ಬರುವ ಮೂರು ಪ್ರಮುಖ ಸಂಯುಕ್ತಗಳೆಂದರೆ ಎಸ್ಟ್ರಾಡಿಯೋಲ್ ಮತ್ತು ಫ್ಲೇವನಾಯ್ಡ್ಗಳು, ಇದು ಪುರುಷರ ಆರೋಗ್ಯದ ಜೊತೆಗೆ ಲೈಂಗಿಕ ಬಯಕೆಯನ್ನು ಹೆಚ್ಚಿಸುತ್ತದೆ.

ಇದನ್ನೂ ಓದಿ: ಸೇಬು ಹಣ್ಣನ್ನು ಸಿಪ್ಪೆ ಸುಲಿದು ತಿನ್ನುತ್ತೀರಾ? ಇದರಿಂದ ದೇಹಕ್ಕೆ ಇಷ್ಟೆಲ್ಲಾ ನಷ್ಟವಾಗುತ್ತೆ ನೋಡಿ

ಫಲವತ್ತತೆ ಸಮಸ್ಯೆ ಪುರುಷರಲ್ಲಿ ಮಾತ್ರ ಕಂಡುಬರುವುದಿಲ್ಲ ಕೆಲವೊಮ್ಮೆ ಮಹಿಳೆಯರಲ್ಲಿಯೂ ಕಂಡುಬರುತ್ತದೆ. ಆದ್ದರಿಂದ ನಿಮಗೆ ಈ ಸಮಸ್ಯೆ ಕಂಡುಬಂದಲ್ಲಿ ವೈದ್ಯಕೀಯ ತಜ್ಞರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯುವುದು ತುಂಬಾ ಉತ್ತಮ.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ