AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪುರುಷರು ರಾತ್ರಿ ಮಲಗುವ ಮುನ್ನ ಕಡ್ಡಾಯವಾಗಿ 2 ಹುರಿದ ಖರ್ಜೂರ ಸೇವನೆ ಮಾಡಬೇಕು ಯಾಕೆ ಗೊತ್ತಾ?

ಚಳಿಗಾಲದಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದು ಸುಲಭವಲ್ಲ. ಈ ಸಮಯದಲ್ಲಿ ದೇಹವನ್ನು ಒಳಗಿನಿಂದ ಬೆಚ್ಚಗಿರಿಸುವ ಆಹಾರಗಳ ಸೇವನೆ ಮಾಡಬೇಕಾಗುತ್ತದೆ. ಇಂತಹ ಆಹಾರಗಳಲ್ಲಿ ಖರ್ಜೂರವು ಒಂದು. ಅದರಲ್ಲಿಯೂ ಈ ಋತುವಿನಲ್ಲಿ ಇದರ ಸೇವನೆಯಿಂದ ಹಲವು ರೀತಿಯ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಅದರಲ್ಲಿಯೂ ರಾತ್ರಿ ಮಲಗುವ ಮುನ್ನ ಹುರಿದ ಖರ್ಜೂರ ಸೇವನೆ ಮಾಡುವುದರಿಂದ ನಾನಾ ರೀತಿಯ ಆರೋಗ್ಯಕರ ಲಾಭಗಳಿವೆ. ಹಾಗಾದರೆ ಇದು ಯಾರಿಗೆ ಒಳ್ಳೆಯದು? ಯಾರು ಸೇವನೆ ಮಾಡಬಾರದು ಎಂಬುದನ್ನು ತಿಳಿದುಕೊಳ್ಳಿ.

ಪುರುಷರು ರಾತ್ರಿ ಮಲಗುವ ಮುನ್ನ ಕಡ್ಡಾಯವಾಗಿ 2 ಹುರಿದ ಖರ್ಜೂರ ಸೇವನೆ ಮಾಡಬೇಕು ಯಾಕೆ ಗೊತ್ತಾ?
Health Benefits Of Dates
ಪ್ರೀತಿ ಭಟ್​, ಗುಣವಂತೆ
|

Updated on: Dec 26, 2025 | 6:33 PM

Share

ಚಳಿಗಾಲದಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಅದಕ್ಕಾಗಿಯೇ ಹೆಚ್ಚಿನ ಕಾಳಜಿ ವಹಿಸಬೇಕಾಗುತ್ತದೆ. ಅದಲ್ಲದೆ ಈ ಸಮಯದಲ್ಲಿ, ಆಹಾರ ಪದ್ಧತಿಯೂ ಬದಲಾಗುವುದರಿಂದ ಈ ಋತುವಿನಲ್ಲಿ ದೇಹದ ಆರೋಗ್ಯ ಕಾಪಾಡಿಕೊಳ್ಳಲು ಒಣ ಹಣ್ಣುಗಳ ಸೇವನೆ ಮಾಡುವುದು ಒಳ್ಳೆಯದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಅದರಲ್ಲಿಯೂ ದೇಹಕ್ಕೆ ಹಲವು ವಿಧಗಳಲ್ಲಿ ಪ್ರಯೋಜನಕಾರಿಯಾದದ್ದು ಖರ್ಜೂರ (Dates). ಇದನ್ನು ಹುರಿದು ಸೇವನೆ ಮಾಡುವುದರಿಂದ ಹಲವು ರೀತಿಯಲ್ಲಿ ಪ್ರಯೋಜನಕಾರಿಯಾಗಿದೆ. ಆಯುರ್ವೇದದಲ್ಲಿಯೂ ಇದನ್ನು ಹೆಚ್ಚು ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಹಾಗಾದರೆ ಹುರಿದ ಖರ್ಜೂರ ಸೇವನೆ ಮಾಡುವುದರಿಂದ ಯಾವ ರೀತಿಯ ಪ್ರಯೋಜನಗಳು ಸಿಗುತ್ತದೆ, ಇದನ್ನು ಯಾವ ಸಮಯದಲ್ಲಿ ಸೇವನೆ ಮಾಡಬೇಕು ಎಂಬುದನ್ನು ತಿಳಿದುಕೊಳ್ಳಿ.

ದೆಹಲಿಯ ಆಯುರ್ವೇದ ತಜ್ಞ ಡಾ. ಚಂಚಲ್ ಶರ್ಮಾ ಅವರು ಹೇಳುವ ಪ್ರಕಾರ, ಸಾಮಾನ್ಯವಾಗಿ ಹುರಿದ ಖರ್ಜೂರವು ದೇಹವನ್ನು ಬೆಚ್ಚಗಿಡಲು ಸಹಾಯ ಮಾಡುತ್ತದೆ. ಅದರಲ್ಲಿಯೂ ಈ ರೀತಿಯ ಪೌಷ್ಟಿಕಾಂಶಯುಕ್ತ ಆಹಾರವನ್ನು ಸೇವಿಸಿದಾಗ, ನಿಮ್ಮ ಫಲವತ್ತತೆ ಸುಧಾರಿಸುತ್ತದೆ ಮತ್ತು ಹಾರ್ಮೋನುಗಳು ಸಮತೋಲನದಲ್ಲಿರುತ್ತವೆ. ಖರ್ಜೂರವು ಕಬ್ಬಿಣ ಮತ್ತು ಖನಿಜಗಳಂತಹ ವಿವಿಧ ಪೋಷಕಾಂಶಗಳನ್ನು ಹೊಂದಿರುವುದರಿಂದ ದೇಹದಲ್ಲಿ ಹಾರ್ಮೋನ್ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಅಷ್ಟೇ ಅಲ್ಲ, ಇವುಗಳ ಸೇವನೆ ಮಹಿಳೆಯರಿಗೂ ಪ್ರಯೋಜನಕಾರಿಯಾಗಿದೆ, ಏಕೆಂದರೆ ಇದರ ಸೇವನೆ ಅಂಡೋತ್ಪತ್ತಿಗೆ ಸಹಾಯ ಮಾಡುವ ಮೂಲಕ ಗರ್ಭಧಾರಣೆಯನ್ನು ಸುಲಭಗೊಳಿಸುತ್ತದೆ.

ಇದನ್ನೂ ಓದಿ: ಚಳಿಗಾಲದಲ್ಲೇಕೆ ಖರ್ಜೂರವನ್ನು ಹೆಚ್ಚೆಚ್ಚು ಸೇವನೆ ಮಾಡಬೇಕು? ಇದರ ಹಿಂದಿದೆ ಮಹತ್ವದ ಕಾರಣ

ಪುರುಷರ ಫಲವತ್ತತೆಯನ್ನು ಸುಧಾರಿಸುತ್ತದೆ

ಡಾ. ಚಂಚಲ್ ಅವರು ಹೇಳುವ ಪ್ರಕಾರ ಹುರಿದ ಖರ್ಜೂರವನ್ನು ತಿನ್ನುವುದರಿಂದ ಪುರುಷರ ಫಲವತ್ತತೆ ಸುಧಾರಿಸುತ್ತದೆ. ಇದು ವೀರ್ಯದ ಗುಣಮಟ್ಟವನ್ನು ಹೆಚ್ಚಿಸುತ್ತದೆ ಮತ್ತು ಬಂಜೆತನದ ಅಪಾಯವನ್ನು ಕಡಿಮೆ ಮಾಡುತ್ತದೆ. ದೇಹವು ರಾತ್ರಿಯಲ್ಲಿ ತನ್ನನ್ನು ತಾನೇ ಸರಿಪಡಿಸಿಕೊಳ್ಳುವುದರಿಂದ ರಾತ್ರಿ ಮಲಗುವ ಮೊದಲು ಹುರಿದ ಖರ್ಜೂರವನ್ನು ತಿನ್ನಬೇಕು. ಮಲಗುವ ಮೊದಲು ನೀವು ಇವುಗಳನ್ನು ಸ್ವಲ್ಪ ಬೆಚ್ಚಗಿನ ಹಾಲಿನೊಂದಿಗೆ ಅಥವಾ ಹುರಿದು ಆ ಬಳಿಕ ಸೇವನೆ ಮಾಡಬಹುದು.

ಯಾರಿಗೆ ಒಳ್ಳೆಯದಲ್ಲ?

ಹೊಟ್ಟೆ ನೋವು, ಪಿತ್ತಜನಕಾಂಗದ ಕಾಯಿಲೆ ಅಥವಾ ಅನಿಯಂತ್ರಿತ ಮಧುಮೇಹ ಇರುವವರು ಹುರಿದ ಖರ್ಜೂರವನ್ನು ತಿನ್ನಬಾರದು ಎಂದು ಡಾ. ಚಂಚಲ್ ಹೇಳುತ್ತಾರೆ. ಏಕೆಂದರೆ ಅದು ಅವರ ಸ್ಥಿತಿಯನ್ನು ಇನ್ನಷ್ಟು ಹದಗೆಡಿಸಬಹುದು. ಈ ಯಾವುದೇ ಸಮಸ್ಯೆಗಳು ಇಲ್ಲದಿದ್ದರೆ ಮಾತ್ರ ನೀವು ಹುರಿದ ಖರ್ಜೂರವನ್ನು ತಿನ್ನಬಹುದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ