AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Pickle Health Risks: ಉಪ್ಪಿನಕಾಯಿ ಹೆಚ್ಚು ತಿನ್ನಬಾರದು ಏಕೆ ಗೊತ್ತಾ? ಆರೋಗ್ಯ ತಜ್ಞರ ಸಲಹೆ ಇಲ್ಲಿದೆ

ಉಪ್ಪಿನಕಾಯಿಯಲ್ಲಿ ಸೋಡಿಯಂ, ಆಮ್ಲಗಳು ಮತ್ತು ಮಸಾಲಾ ಪದಾರ್ಥಗಳಿಂದ ಅನೇಕ ರಾಸಾಯನಿಕ ಬದಲಾವಣೆಗಳಾಗುತ್ತವೆ. ಅತಿಯಾದ ಸೇವನೆಯಿಂದ ರಕ್ತದೊತ್ತಡ, ಆಸಿಡ್ ಸಮಸ್ಯೆ, ಜಠರದ ಕೆರಳಿಕೆ, ಕೊಲೆಸ್ಟ್ರಾಲ್ ಮತ್ತು ಹೃದಯ ಕಾಯಿಲೆಗಳು ಹೆಚ್ಚಾಗಬಹುದು. ಹುದುಗುವಿಕೆ ಸರಿಯಾಗಿಲ್ಲದಿದ್ದರೆ ವಿಷಕಾರಿ ಸಂಯುಕ್ತಗಳ ಅಪಾಯವಿದೆ. ಕೃತಕ ಸಂರಕ್ಷಕಗಳು ಮತ್ತು ತಪ್ಪಾದ ಸಂಗ್ರಹಣೆಯೂ ಆರೋಗ್ಯಕ್ಕೆ ಹಾನಿಕರ. ಉಪ್ಪಿನಕಾಯಿ ಸೇವನೆಯಲ್ಲಿ ಮಿತಿ ಅತ್ಯಗತ್ಯ.

Pickle Health Risks: ಉಪ್ಪಿನಕಾಯಿ ಹೆಚ್ಚು ತಿನ್ನಬಾರದು ಏಕೆ ಗೊತ್ತಾ? ಆರೋಗ್ಯ ತಜ್ಞರ ಸಲಹೆ ಇಲ್ಲಿದೆ
ಡಾ ರವಿಕಿರಣ ಪಟವರ್ಧನ
ಅಕ್ಷತಾ ವರ್ಕಾಡಿ
|

Updated on: Dec 27, 2025 | 2:45 PM

Share

ಉಪ್ಪಿನಕಾಯಿ ಕೇವಲ ಉಪ್ಪು ಮತ್ತು ಮೆಣಸಿನಕಾಯಿ ಮಾತ್ರವಲ್ಲ. ಅದರ ತಯಾರಿಕೆ ಮತ್ತು ಸಂರಕ್ಷಣೆಯ ಪ್ರಕ್ರಿಯೆಯಲ್ಲಿ ಹಲವು ರಾಸಾಯನಿಕ ಬದಲಾವಣೆಗಳು ನಡೆಯುತ್ತವೆ. ಇವುಗಳಲ್ಲಿ ಕೆಲವು ಸಹಜ ಹಾಗೂ ಅಗತ್ಯವಾಗಿದ್ದರೆ, ಕೆಲವು ಅತಿಯಾದಾಗ ಆರೋಗ್ಯಕ್ಕೆ ಹಾನಿಕಾರಕವಾಗಬಹುದು. ಉಪ್ಪಿನಕಾಯಿಯ ಮುಖ್ಯ ಅಂಶವೇ ಸೋಡಿಯಂ ಕ್ಲೋರೈಡ್ (ಉಪ್ಪು). ಇದು ಸೂಕ್ಷ್ಮಾಣುಗಳ ಬೆಳವಣಿಗೆಯನ್ನು ತಡೆಯುವ ಮೂಲಕ ಆಹಾರವನ್ನು ಉಳಿಸಿಕೊಳ್ಳಲು ಸಹಾಯ ಮಾಡುತ್ತದೆ. ಆದರೆ ಉಪ್ಪಿನ ಅತಿಸೇವನೆಯಿಂದ ರಕ್ತದೊತ್ತಡ, ಹೃದಯ ಹಾಗೂ ಕಿಡ್ನಿ ಸಮಸ್ಯೆಗಳ ಅಪಾಯ ಹೆಚ್ಚಾಗುತ್ತದೆ. ಅದೇ ರೀತಿ ವಿನೆಗರ್ ಅಥವಾ ಹುಳಿ ದ್ರಾವಣದಲ್ಲಿರುವ ಎಸಿಟಿಕ್ ಆಮ್ಲ ಮತ್ತು ನಿಂಬೆಹಣ್ಣಿನ ಸಿಟ್ರಿಕ್ ಆಮ್ಲ ಸಂರಕ್ಷಣೆಗೆ ಸಹಾಯಕವಾದರೂ, ಹೆಚ್ಚು ಆಮ್ಲೀಯತೆ ಜಠರದ ಕೆರಳಿಕೆ ಮತ್ತು ಆಸಿಡ್ ಸಮಸ್ಯೆಗಳಿಗೆ ಕಾರಣವಾಗಬಹುದು.

ಮೆಣಸಿನಕಾಯಿಯ ಖಾರಕ್ಕೆ ಕಾರಣವಾಗುವ ಕ್ಯಾಪ್ಸೈಸಿನ್ ಅಲ್ಪ ಪ್ರಮಾಣದಲ್ಲಿ ಉಪಯುಕ್ತವಾದರೂ, ಹೆಚ್ಚಾದರೆ ಗ್ಯಾಸ್ಟ್ರೈಟಿಸ್ ಹಾಗೂ ಹೊಟ್ಟೆಯ ಒಳಪದರಕ್ಕೆ ಹಾನಿ ಉಂಟುಮಾಡಬಹುದು. ಉಪ್ಪಿನಕಾಯಿಯಲ್ಲಿ ಬಳಸುವ ಎಣ್ಣೆಯಲ್ಲಿರುವ ಕೊಬ್ಬುಗಳು (ಟ್ರೈಗ್ಲಿಸರೈಡ್‌ಗಳು) ಅತಿಯಾದಾಗ ಕೊಲೆಸ್ಟ್ರಾಲ್ ಮತ್ತು ಹೃದಯ ಸಮಸ್ಯೆಗಳಿಗೆ ಕಾರಣವಾಗಬಹುದು.

ಹಲವು ಉಪ್ಪಿನಕಾಯಿಗಳು ಹುದುಗುವಿಕೆ (ಫರ್ಮೆಂಟೇಶನ್) ಪ್ರಕ್ರಿಯೆ ಮೂಲಕ ತಯಾರಾಗುತ್ತವೆ. ಈ ವೇಳೆ ಲ್ಯಾಕ್ಟಿಕ್ ಆಮ್ಲ ರೂಪುಗೊಳ್ಳುತ್ತದೆ, ಇದು ಸಂರಕ್ಷಣೆಗೆ ಸಹಕಾರಿ. ಆದರೆ ಸರಿಯಾದ ಸ್ವಚ್ಛತೆ ಮತ್ತು ಸಂಗ್ರಹಣೆ ಇಲ್ಲದಿದ್ದರೆ, ಅಪಾಯಕಾರಿ ವಿಷಕಾರಿ ಸಂಯುಕ್ತಗಳು ಕೂಡ ರೂಪುಗೊಳ್ಳುವ ಸಾಧ್ಯತೆ ಇದೆ.

ಇದನ್ನೂ ಓದಿ: ನೀವು ಗರ್ಭಿಣಿಯಾಗಿದ್ದು ವಾಯುಮಾಲಿನ್ಯದಿಂದಾಗುವ ಸಮಸ್ಯೆಗಳಿಂದ ಮಗುವನ್ನು ಕಾಪಾಡಲು ಈ ಸಲಹೆಗಳನ್ನು ಪಾಲಿಸಿ

ಇತ್ತೀಚಿನ ವಾಣಿಜ್ಯ ಉಪ್ಪಿನಕಾಯಿಗಳಲ್ಲಿ ಸೋಡಿಯಂ ಬೆಂಜೋಯೇಟ್, ಪೊಟ್ಯಾಸಿಯಂ ಸೋರ್ಬೇಟ್ ಮುಂತಾದ ಕೃತಕ ಸಂರಕ್ಷಕಗಳು, ಬಣ್ಣಗಳು ಹಾಗೂ ರುಚಿವರ್ಧಕಗಳು ಸೇರಿರುವುದು ಸಾಮಾನ್ಯ. ಇವುಗಳ ದೀರ್ಘಕಾಲೀನ ಸೇವನೆ ಮಕ್ಕಳಲ್ಲಿ ಅಲರ್ಜಿ, ಅತಿಚಟುವಟಿಕೆ ಮತ್ತು ಇತರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.

ಅತಿದೊಡ್ಡ ಅಪಾಯವು ತಪ್ಪಾದ ಸಂಗ್ರಹಣೆಯಿಂದ ಉಂಟಾಗುವ ಅಫ್ಲಾಟಾಕ್ಸಿನ್, ಬೊಟುಲಿನಮ್ ಟಾಕ್ಸಿನ್ ಮುಂತಾದ ವಿಷಗಳಿಂದ. ಇವು ಯಕೃತ್ತಿಗೆ ಹಾನಿ ಉಂಟುಮಾಡುವ ಹಾಗೂ ಜೀವಾಪಾಯಕ್ಕೆ ಕಾರಣವಾಗುವಷ್ಟು ಗಂಭೀರವಾಗಿವೆ. ಹೀಗಾಗಿ, ಉಪ್ಪಿನಕಾಯಿಯನ್ನು ಸಂಪೂರ್ಣವಾಗಿ ತ್ಯಜಿಸಬೇಕೆಂದಲ್ಲಮಿತಿ ಅತ್ಯಂತ ಮುಖ್ಯ.

ಲೇಖನ: ಡಾ ರವಿಕಿರಣ ಪಟವರ್ಧನ, ಆಯುರ್ವೇದ ವೈದ್ಯರು,ಶಿರಸಿ

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

2026 ಕುಂಭ ರಾಶಿಗೆ ಸಾಡೇಸಾತಿಯ ಅಂತಿಮ ಘಟ್ಟ; ಆರೋಗ್ಯದ ನಿರ್ಲಕ್ಷ್ಯಬೇಡ
2026 ಕುಂಭ ರಾಶಿಗೆ ಸಾಡೇಸಾತಿಯ ಅಂತಿಮ ಘಟ್ಟ; ಆರೋಗ್ಯದ ನಿರ್ಲಕ್ಷ್ಯಬೇಡ
ಭರ್ಜರಿ ಗಳಿಕೆ ಮಧ್ಯೆ ‘ಮಾರ್ಕ್’ ಸುದ್ದಿಗೋಷ್ಠಿ: ಇಲ್ಲಿದೆ ಲೈವ್
ಭರ್ಜರಿ ಗಳಿಕೆ ಮಧ್ಯೆ ‘ಮಾರ್ಕ್’ ಸುದ್ದಿಗೋಷ್ಠಿ: ಇಲ್ಲಿದೆ ಲೈವ್
‘ಗಂಡನ ಪಕ್ಕ ಮಲಗೋದು ಬಿಡಿ, ಹತ್ರ ಕುಳಿತುಕೊಳ್ಳಲೂ ಬಿಡ್ತಿರ್ಲಿಲ್ಲ ಅತ್ತೆ!’
‘ಗಂಡನ ಪಕ್ಕ ಮಲಗೋದು ಬಿಡಿ, ಹತ್ರ ಕುಳಿತುಕೊಳ್ಳಲೂ ಬಿಡ್ತಿರ್ಲಿಲ್ಲ ಅತ್ತೆ!’
14 ವರ್ಷಗಳ ಬಳಿಕ ಟೆಸ್ಟ್ ಪಂದ್ಯ ಗೆದ್ದ ಇಂಗ್ಲೆಂಡ್..!
14 ವರ್ಷಗಳ ಬಳಿಕ ಟೆಸ್ಟ್ ಪಂದ್ಯ ಗೆದ್ದ ಇಂಗ್ಲೆಂಡ್..!
ತಡರಾತ್ರಿ ಯುವತಿಯನ್ನು ಹಿಂಬಾಲಿಸಿಕೊಂಡು ಬಂದು ಪುಂಡರು
ತಡರಾತ್ರಿ ಯುವತಿಯನ್ನು ಹಿಂಬಾಲಿಸಿಕೊಂಡು ಬಂದು ಪುಂಡರು
ಮಕ್ಕಳ‌ ಕಳ್ಳಿಯರು ಎಂದು 7 ಮಹಿಳೆಯರಿಗೆ ಹಿಗ್ಗಾಮುಗ್ಗಾ ಥಳಿಸಿದ ಸಾರ್ವಜನಿಕರು
ಮಕ್ಕಳ‌ ಕಳ್ಳಿಯರು ಎಂದು 7 ಮಹಿಳೆಯರಿಗೆ ಹಿಗ್ಗಾಮುಗ್ಗಾ ಥಳಿಸಿದ ಸಾರ್ವಜನಿಕರು
ಅರಮನೆ ಬಳಿ ಭಾರಿ ಭದ್ರತಾ ಲೋಪ? ಸಿಸಿಟಿವಿ ಕ್ಯಾಮರಾದಲ್ಲಿಲ್ಲ ಸ್ಫೋಟದ ದೃಶ್ಯ!
ಅರಮನೆ ಬಳಿ ಭಾರಿ ಭದ್ರತಾ ಲೋಪ? ಸಿಸಿಟಿವಿ ಕ್ಯಾಮರಾದಲ್ಲಿಲ್ಲ ಸ್ಫೋಟದ ದೃಶ್ಯ!
60 ದಿನಗಳ ಬಳಿಕ ಬ್ಯಾಟ್ ಬೀಸಿದ ಶ್ರೇಯಸ್ ಅಯ್ಯರ್
60 ದಿನಗಳ ಬಳಿಕ ಬ್ಯಾಟ್ ಬೀಸಿದ ಶ್ರೇಯಸ್ ಅಯ್ಯರ್
ಟಾಸ್ಕ್ ಆಡಿಯೇ ಕ್ಯಾಪ್ಟನ್ ಆದ ಗಿಲ್ಲಿ; ನಿಯಮ ಮುರಿದಿದ್ದಕ್ಕೆ ಎಚ್ಚರಿಕೆ
ಟಾಸ್ಕ್ ಆಡಿಯೇ ಕ್ಯಾಪ್ಟನ್ ಆದ ಗಿಲ್ಲಿ; ನಿಯಮ ಮುರಿದಿದ್ದಕ್ಕೆ ಎಚ್ಚರಿಕೆ
ಸರಣಿ ಮನೆಕಳ್ಳತನ, ಪೊಲೀಸರು ಸ್ಪಂದಿಸದೇ ಇದ್ದಾಗ ಜನ ಮಾಡಿದ್ದೇನು ನೋಡಿ!
ಸರಣಿ ಮನೆಕಳ್ಳತನ, ಪೊಲೀಸರು ಸ್ಪಂದಿಸದೇ ಇದ್ದಾಗ ಜನ ಮಾಡಿದ್ದೇನು ನೋಡಿ!