ಹೂಸು ಬಿಡುವಾಗ ಕೆಟ್ಟ ವಾಸನೆ ಯಾಕೆ ಬರುತ್ತೆ ಗೊತ್ತಾ? ಇದರ ಹಿಂದಿರುವ ವೈಜ್ಞಾನಿಕ ಕಾರಣಗಳು ಇಲ್ಲಿವೆ

ದೇಹದಲ್ಲಿನ ಅತ್ಯಂತ ನೈಸರ್ಗಿಕ ಮತ್ತು ಸಾಮಾನ್ಯ ದೈಹಿಕ ಕಾರ್ಯಗಳಲ್ಲಿ ಒಂದು ಅನಿಲ ಬಿಡುಗಡೆ (ವಾಯು ಅಥವಾ ಹೊಟ್ಟೆ ಉಬ್ಬರ). ಆರೋಗ್ಯವಂತ ವ್ಯಕ್ತಿಯು ದಿನಕ್ಕೆ ಸರಾಸರಿ 10 ರಿಂದ 20 ಬಾರಿ ಹೂಸು ಬಿಡುತ್ತಾರೆ ಎಂದು ವೈದ್ಯರು ತಜ್ಞರು ಹೇಳುತ್ತಾರೆ. ಹಾಗಿದ್ದರೂ, ಅನೇಕರು ಅದರ ಬಗ್ಗೆ ಬಹಿರಂಗವಾಗಿ ಮಾತನಾಡಲು ನಾಚಿಕೆಪಡುತ್ತಾರೆ ಮತ್ತು ಕೆಲವರು ಅದನ್ನು ಮುಜುಗರದ ಸಂಗತಿಯೆಂದು ಪರಿಗಣಿಸುತ್ತಾರೆ. ಅದರಲ್ಲಿಯೂ ಕೆಲವರಿಗೆ ಹೂಸು ಬಿಟ್ಟಾಗ ತೀವ್ರ ದುರ್ವಾಸನೆ ಬರುತ್ತದೆ. ಹಾಗಾದರೆ ಈ ರೀತಿ ವಾಸನೆ ಬರುವುದಕ್ಕೆ ಯಾವ ಆಹಾರ ಕಾರಣ ಮತ್ತು ಇದನ್ನು ತಡೆಗಟ್ಟುವುದು ಹೇಗೆ ತಿಳಿದುಕೊಳ್ಳಿ.

ಹೂಸು ಬಿಡುವಾಗ ಕೆಟ್ಟ ವಾಸನೆ ಯಾಕೆ ಬರುತ್ತೆ ಗೊತ್ತಾ? ಇದರ ಹಿಂದಿರುವ ವೈಜ್ಞಾನಿಕ ಕಾರಣಗಳು ಇಲ್ಲಿವೆ
Protect Your Kidneys Naturally
Image Credit source: Getty Images

Updated on: Jun 24, 2026 | 9:36 PM

ಮುಖ್ಯಾಂಶಗಳು

  • ಹೂಸು ಬಿಡುವಾಗ ಕೆಟ್ಟ ವಾಸನೆ ಬರುವುದೇಕೆ?
  • ಇದಕ್ಕೆ ಕಾರಣವಾಗುವ ಆಹಾರಗಳು ಇವುಗಳಂತೆ;
  • ಈ ರೀತಿ ಆಗುವುದನ್ನು ತಡೆಯಲು ಸಲಹೆಗಳು

ಹೂಸು (Farts) ಅಥವಾ ಗ್ಯಾಸ್ ಬಿಡುವುದು ದೇಹದ ಸಹಜ ಜೀರ್ಣಕ್ರಿಯೆಯ ಒಂದು ಭಾಗ. ಆದರೆ ಕೆಲವೊಮ್ಮೆ ಹೂಸು ಬಿಟ್ಟಾಗ ತೀವ್ರ ದುರ್ವಾಸನೆ ಬರುತ್ತದೆ. ಇದರಿಂದ ಮುಜುಗರ ಉಂಟಾಗಬಹುದು. ಹಾಗಾದರೆ ಈ ದುರ್ವಾಸನೆಗೆ ಕಾರಣವೇನು ಎಂದು ಎಂದಾದರೂ ಯೋಚಿಸಿದ್ದೀರಾ ಅಥವಾ ಈ ಅನಿಲವು ನಿಜವಾಗಿಯೂ ಹೊಟ್ಟೆಯಲ್ಲಿ ಹೇಗೆ ರೂಪುಗೊಳ್ಳುತ್ತದೆ ಎಂಬುದು ತಿಳಿದಿದೆಯೇ… ಇದರ ಹಿಂದಿನ ವೈಜ್ಞಾನಿಕ ಕಾರಣಗಳನ್ನು ಅರ್ಥಮಾಡಿಕೊಳ್ಳುವುದು ನಮ್ಮ ಜೀರ್ಣಕ್ರಿಯೆಯ ಆರೋಗ್ಯದ ಬಗ್ಗೆ ಹೆಚ್ಚು ಜಾಗೃತರಾಗಲು ಸಹಾಯ ಮಾಡುತ್ತದೆ. ಆ ಮೂಲಕ ಇಂತಹ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು. ಹಾಗಾದರೆ ಯಾವ ರೀತಿಯ ಆಹಾರಗಳು ಹೂಸಿನ ಸಮಸ್ಯೆಗೆ ಕಾರಣವಾಗುತ್ತದೆ ಮತ್ತು ದೇಹದಿಂದ ಹೊರಹೋದ ಗ್ಯಾಸ್ ಅಥವಾ ಹೂಸು ಕೆಟ್ಟ ವಾಸನೆ ಬರುವುದಕ್ಕೆ ನಿಜವಾದ ಕಾರಣವೇನು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ನಾವು ಆಹಾರ ಸೇವಿಸುವಾಗ, ನೀರು ಕುಡಿಯುವಾಗ ಅಥವಾ ಮಾತನಾಡುವಾಗ ಸ್ವಲ್ಪ ಪ್ರಮಾಣದ ಗಾಳಿ ಹೊಟ್ಟೆಯೊಳಗೆ ಸೇರುತ್ತದೆ. ಜೊತೆಗೆ, ನಾವು ತಿನ್ನುವ ಆಹಾರ ದೊಡ್ಡ ಕರುಳಿಗೆ ತಲುಪಿದಾಗ ಅಲ್ಲಿ ಇರುವ ಬ್ಯಾಕ್ಟೀರಿಯಾಗಳು ಅದನ್ನು ಒಡೆಯುವ ಪ್ರಕ್ರಿಯೆ ಆರಂಭಿಸುತ್ತವೆ. ಈ ಪ್ರಕ್ರಿಯೆಯಲ್ಲಿ ಗ್ಯಾಸ್ ಉತ್ಪತ್ತಿಯಾಗುತ್ತದೆ. ಸಾಮಾನ್ಯವಾಗಿ ಈ ಗ್ಯಾಸ್‌ನಲ್ಲಿ ನೈಟ್ರೋಜನ್, ಆಮ್ಲಜನಕ, ಹೈಡ್ರೋಜನ್, ಕಾರ್ಬನ್ ಡೈಆಕ್ಸೈಡ್ ಮತ್ತು ಮೀಥೇನ್ ಇರುತ್ತವೆ. ಇವುಗಳಿಗೆ ಹೆಚ್ಚಿನ ವಾಸನೆ ಇರುವುದಿಲ್ಲ. ಆದರೆ ಕೆಲವು ಆಹಾರಗಳು ಗ್ಯಾಸ್‌ಗೆ ದುರ್ವಾಸನೆ ಉಂಟುಮಾಡಬಹುದು.

ಇದನ್ನೂ ಓದಿ: ಆರೋಗ್ಯ ಕಾಪಾಡಿಕೊಳ್ಳಲು ಮಳೆಗಾಲದಲ್ಲಿ ಇಂತಹ ಆಹಾರಗಳಿಂದ ದೂರವಿರಿ

ಹೂಸು ಬಿಡುವಾಗ ಕೆಟ್ಟ ವಾಸನೆ ಬರುವುದಕ್ಕೆ ಕಾರಣವಾಗುವ ಆಹಾರ:

ವಿಶೇಷವಾಗಿ ಎಲೆಕೋಸು, ಕಾಲಿಫ್ಲವರ್, ಬ್ರೋಕೋಲಿ, ಈರುಳ್ಳಿ, ಬೆಳ್ಳುಳ್ಳಿ, ಮೊಟ್ಟೆ ಹಾಗೂ ಮಾಂಸಾಹಾರಗಳಲ್ಲಿ ಸಲ್ಫರ್ ಅಂಶ ಹೆಚ್ಚಿರುತ್ತದೆ. ಇವುಗಳನ್ನು ಜೀರ್ಣಿಸುವ ವೇಳೆ ಬ್ಯಾಕ್ಟೀರಿಯಾಗಳು ಹೈಡ್ರೋಜನ್ ಸಲ್ಫೈಡ್ ಎಂಬ ಅನಿಲವನ್ನು ಉತ್ಪಾದಿಸುತ್ತವೆ. ಈ ಅನಿಲಕ್ಕೆ ಕೊಳೆತ ಮೊಟ್ಟೆಯಂತಹ ತೀವ್ರ ದುರ್ವಾಸನೆ ಇರುತ್ತದೆ. ಆದ್ದರಿಂದ ಇಂತಹ ಆಹಾರಗಳ ನಂತರ ಹೂಸು ಹೆಚ್ಚು ವಾಸನೆ ಬರಬಹುದು. ಜೀರ್ಣಕ್ರಿಯೆ ನಿಧಾನವಾಗಿದ್ದರೆ ಅಥವಾ ಆಹಾರ ಕರುಳಿನಲ್ಲಿ ಹೆಚ್ಚು ಸಮಯ ಉಳಿದಿದ್ದರೂ ಹೂಸು ಹೊರ ಹೋಗುವಾಗ ದುರ್ವಾಸನೆ ಹೆಚ್ಚಾಗಬಹುದು. ಕೆಲವು ಮಂದಿಯಲ್ಲಿ ಹಾಲಿನ ಉತ್ಪನ್ನಗಳು ಸರಿಯಾಗಿ ಜೀರ್ಣವಾಗದಿರುವುದು ಅಥವಾ ಗ್ಲೂಟನ್ ಅಸಹಿಷ್ಣುತೆಯೂ ಕಾರಣವಾಗಬಹುದು.

ಹೂಸು ಬಿಟ್ಟಾಗ ಕೆಟ್ಟ ವಾಸನೆ ಬರುವುದನ್ನು ತಡೆಯಲು ಸಲಹೆಗಳು:

  • ಆಹಾರವನ್ನು ನಿಧಾನವಾಗಿ ಚೆನ್ನಾಗಿ ಜಗಿದು ತಿನ್ನಿ.
  • ಸಾಕಷ್ಟು ನೀರು ಕುಡಿಯಿರಿ.
  • ಕಾರ್ಬೊನೇಟೆಡ್ ಪಾನೀಯಗಳನ್ನು ಕಡಿಮೆ ಮಾಡಿ.
  • ಸಮತೋಲನದ ಫೈಬರ್ ಇರುವ ಆಹಾರ ಸೇವಿಸಿ.

ಹೂಸು ಬಿಡುವುದು ಸಾಮಾನ್ಯ. ಆದರೆ ತೀವ್ರ ಹೊಟ್ಟೆನೋವು, ವಾಂತಿ, ಅತಿಸಾರ, ತೂಕ ಇಳಿಕೆ ಅಥವಾ ನಿರಂತರ ಕೆಟ್ಟ ವಾಸನೆ ಹೂಸು ಹೊರಹೋದಾಗ ಕಂಡುಬಂದರೆ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us