Former first lady Rosalynn Carter: ಅಮೆರಿಕದ ಮಾಜಿ ಅಧ್ಯಕ್ಷರ ಪತ್ನಿಗೆ ಮರೆವಿನ ಕಾಯಿಲೆ
ಅಮೆರಿಕದ ಮಾಜಿ ಅಧ್ಯಕ್ಷ ಜಿಮ್ಮಿ ಕಾರ್ಟರ್ ಅವರ ಪತ್ನಿ ಮಾಜಿ ಪ್ರಥಮ ಮಹಿಳೆ ರೊಸಾಲಿನ್ ಕಾರ್ಟರ್ ಮರೆವಿನ ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂದು ಕಾರ್ಟರ್ ಕುಟುಂಬವು ಮೇ 30 ಮಂಗಳವಾರ ಬಹಿರಂಗಪಡಿಸಿದೆ ಎಂದು ಎಎಫ್ಪಿ ವರದಿ ಮಾಡಿದೆ.
ಅಮೆರಿಕದ ಮಾಜಿ ಅಧ್ಯಕ್ಷ ಜಿಮ್ಮಿ ಕಾರ್ಟರ್(Jimmy Carter) ಅವರ ಪತ್ನಿ ಮಾಜಿ ಪ್ರಥಮ ಮಹಿಳೆ ರೊಸಾಲಿನ್ ಕಾರ್ಟರ್(Rosalynn Carter) ಮರೆವಿನ ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂದು ಕಾರ್ಟರ್ ಕುಟುಂಬವು ಮೇ 30 ಮಂಗಳವಾರ ಬಹಿರಂಗಪಡಿಸಿದೆ ಎಂದು ಎಎಫ್ಪಿ ವರದಿ ಮಾಡಿದೆ. ಮಾನಸಿಕ ಕಾಯಿಲೆಯ ಬಗ್ಗೆ ಜನರಿಗೆ ಅರಿವು ಮೂಡಿಸುವ ಸಾಕಷ್ಟು ಸಾಮಾಜಿಕ ಕಾರ್ಯಗಳಲ್ಲಿ ತನ್ನನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ರೊಸಾಲಿನ್ ಕಾರ್ಟರ್ ಇದೀಗಾ ತನ್ನ 95ನೇ ವಯಸ್ಸಿನಲ್ಲಿ ಮೆರೆವಿನ ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂದು ತಿಳಿದುಬಂದಿದೆ.
ಅಮೆರಿಕದ ಸಾರ್ವಜನಿಕ ಸೇವೆಯಲ್ಲಿ ರೊಸಾಲಿನ್ ಕಾರ್ಟರ್ ಅವರ ದೀರ್ಘಕಾಲದ ಸಮರ್ಪಣೆ ಇತಿಹಾಸದಲ್ಲಿ ಅಳಿಸಲಾಗದ ಗುರುತು ಬಿಟ್ಟಿದ್ದು, ಇದೀಗಾ ಅಲ್ಲಿನ ಸಾರ್ವಜನಿಕರಲ್ಲಿ ರೊಸಾಲಿನ್ ಅನಾರೋಗ್ಯ ನೋವನ್ನುಂಟು ಮಾಡಿದೆ. “ಅವರು ತಮ್ಮ ಪತಿಯೊಂದಿಗೆ ಮನೆಯಲ್ಲಿ ಸಂತೋಷದಿಂದ ಬದುಕುತ್ತಿದ್ದಾರೆ” ಎಂದು ಕುಟುಂಬವು ದಿ ಕಾರ್ಟರ್ ಸೆಂಟರ್ ಪೋಸ್ಟ್ ಮಾಡಿದ ಹೇಳಿಕೆಯಲ್ಲಿ ತಿಳಿಸಿದೆ.
The Carter family is sharing that former First Lady Rosalynn Carter has dementia. She continues to live happily at home with her husband, enjoying spring in Plains and visits with loved ones.
Full statement: https://t.co/FrpcYhPwn4 pic.twitter.com/Ng4mnAZiPS
— The Carter Center (@CarterCenter) May 30, 2023
ಕಾರ್ಟರ್ ದಂಪತಿಗಳು 1977 ರಿಂದ 1981 ರವರೆಗೆ ಶ್ವೇತಭವನ (White House)ದಲ್ಲಿ ಸೇವೆ ಸಲ್ಲಿಸಿದರು. ಅವರು ಒಟ್ಟಾಗಿ 1982 ರಲ್ಲಿ ಅಟ್ಲಾಂಟಾದಲ್ಲಿ ಕಾರ್ಟರ್ ಸೆಂಟರ್ ಅನ್ನು ಪ್ರಾರಂಭಿಸಿದರು, ಪ್ರಪಂಚದಾದ್ಯಂತದ ಸಂಘರ್ಷಗಳನ್ನು ಪರಿಹರಿಸುವ, ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವವನ್ನು ಉತ್ತೇಜಿಸುವ ಮತ್ತು ಆರೋಗ್ಯವನ್ನು ಸುಧಾರಿಸುವ ಗುರಿಯನ್ನು ಹೊಂದಿದ್ದರು. 1994 ರಲ್ಲಿ ಪ್ರಕಟವಾದ ಪುಸ್ತಕ “ಹೆಲ್ಪಿಂಗ್ ಯುವರ್‌ಸೆಲ್ಫ್ ಹೆಲ್ಪ್ ಅದರ್ಸ್: ಎ ಬುಕ್ ಫಾರ್ ಕೇರ್‌ಗಿವರ್ಸ್” ನಲ್ಲಿ, ರೊಸಾಲಿನ್ ಕಾರ್ಟರ್ ಆರೈಕೆದಾರರು ಎದುರಿಸುತ್ತಿರುವ ಹೋರಾಟಗಳ ಬಗ್ಗೆ ಜನರಿಗೆ ಅರಿವು ನೀಡಿದ್ದರು. ಮಾನಸಿಕ ಆರೋಗ್ಯ ಸಮಸ್ಯೆಗಳಾದ ಒಂಟಿತನ, ಆಘಾತ ಮತ್ತು ಸಂಕಟಗಳ ಬಗ್ಗೆ ಜನರಿಗೆ ಶಿಕ್ಷಣ ನೀಡುವ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಅವರ ಸ್ವಂತ ಅನುಭವಗಳ ಮೂಲಕ, ಆರೈಕೆ ಮಾಡುವವರಿಗೆ ಬೆಂಬಲ ಮತ್ತು ಪರಿಹಾರವನ್ನು ಒದಗಿಸಲು ಅವರು ಪ್ರಾಯೋಗಿಕ ಸಲಹೆಗಳನ್ನು ಮತ್ತು ಅವರು ಇತರರಿಗೆ ಕಾಳಜಿ ವಹಿಸುವಾಗ ಅವರ ಜೀವನವನ್ನು ಸುಧಾರಿಸುವ ಗುರಿಯನ್ನು ಹೊಂದಿದ್ದರು.
ಇದನ್ನೂ ಓದಿ: ವಿಶ್ವ ತಂಬಾಕು ರಹಿತ ದಿನ 2023; ಧೂಮಪಾನವನ್ನು ತ್ಯಜಿಸಿ, ನಿಮ್ಮೊಂದಿಗೆ ನಿಮ್ಮ ಕುಟುಂಬವನ್ನು ಕಾಪಾಡಿ
ರೊಸಾಲಿನ್ ಮತ್ತು ಜಿಮ್ಮಿ ಕಾರ್ಟರ್ ದಂಪತಿಗಳ ನಡುವಿನ ನಿರಂತರ ಬಾಂಧವ್ಯವು ಅಮೇರಿಕದ ಪ್ರಜೆಗಳಿಗೆ ಅವರ ಬದ್ಧತೆಗೆ ಸಾಕ್ಷಿಯಾಗಿದೆ. ಅಧ್ಯಕ್ಷೀಯ ಇತಿಹಾಸದಲ್ಲಿ ಸುದೀರ್ಘವಾದ ಜೀವನವನ್ನು ನಡೆಸಿದ ಈ ದಂಪತಿಗಳು ಕಳೆದ ವರ್ಷ 76 ನೇ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿತು. ಈ ದಂಪತಿಗಳಿಗೆ ಅವರು ನಾಲ್ಕು ಮಕ್ಕಳು, ಹನ್ನೆರಡು ಮೊಮ್ಮಕ್ಕಳು ಮತ್ತು ಹದಿನಾಲ್ಕು ಮರಿ ಮೊಮ್ಮಕ್ಕಳನ್ನು ಹೊಂದಿದ್ದಾರೆ.
ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 7:10 pm, Wed, 31 May 23