Powassan virus: ಟಿಕ್ ಹರಡುವ ಕಾಯಿಲೆಯ ಬಗ್ಗೆ ತಿಳಿದುಕೊಳ್ಳಬೇಕಾ? ಇಲ್ಲಿದೆ ಮಾಹಿತಿ

Tick-Borne Virus: ಯುಎಸ್, ಕೆನಡಾ ಮತ್ತು ರಷ್ಯಾದಲ್ಲಿ ಮಾನವರಲ್ಲಿ ಪೊವಾಸನ್ ವೈರಸ್ ವರದಿಯಾಗಿದ್ದು, ಯುಎಸ್ ನಲ್ಲಿ 1 ಸಾವು ದಾಖಲಾಗಿದೆ. ಹಾಗಾದರೆ ಪೊವಾಸನ್ ವೈರಸ್ ಎಂದರೇನು? ಟಿಕ್ ಹರಡುವ ಕಾಯಿಲೆಯ ಬಗ್ಗೆ ತಿಳಿದುಕೊಳ್ಳಬೇಕಾ? ಇಲ್ಲಿದೆ ಮಾಹಿತಿ.

Powassan virus: ಟಿಕ್ ಹರಡುವ ಕಾಯಿಲೆಯ ಬಗ್ಗೆ ತಿಳಿದುಕೊಳ್ಳಬೇಕಾ? ಇಲ್ಲಿದೆ ಮಾಹಿತಿ
ಸಾಂದರ್ಭಿಕ ಚಿತ್ರ
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on:May 26, 2023 | 5:46 PM

ಪೊವಾಸನ್ ವೈರಸ್ ಬಗ್ಗೆ ನೀವು ಕೇಳಿರಬಹುದು. ಇವು ಟಿಕ್(ಉಣ್ಣಿ)ಗಳಿಂದ ಹರಡುತ್ತವೆ. ಅಂದರೆ ಪೊವಾಸನ್ ಎಂಬುದು ಟಿಕ್ ಕಚ್ಚುವಿಕೆಯಿಂದ ಉಂಟಾಗುವ ಸಾಂಕ್ರಾಮಿಕ ಕಾಯಿಲೆಯಾಗಿದೆ. ಇದು ಅಪರೂಪದ ವೈರಸ್ ಆಗಿದ್ದು ಮೆದುಳಿನಲ್ಲಿ ಉರಿಯೂತವನ್ನು ಉಂಟುಮಾಡಬಹುದಾಗಿದೆ. ಇತ್ತೀಚಿನ ದಿನಗಳಲ್ಲಿ ಯುಎಸ್, ಕೆನಡಾ ಮತ್ತು ರಷ್ಯಾದ ಜನರಲ್ಲಿ ಈ ವೈರಸ್ ವರದಿಯಾಗಿದ್ದು, ಯುಎಸ್ ಸಗಡಾಹೋಕ್ ಕೌಂಟಿ ಎನ್ನುವ ನಿವಾಸಿಯೊಬ್ಬರು ಈ ಅಪರೂಪದ ವೈರಸ್ನಿಂದ ಸಾವನ್ನಪ್ಪಿದ್ದಾರೆ ಎಂದು ಮೈನೆ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ ಹೇಳಿದ್ದಾರೆ. ಹಾಗಾಗಿ ಉಣ್ಣಿಗಳಿಂದ ಹರಡುವ ಮಾರಣಾಂತಿಕ ಪೊವಾಸನ್ ವೈರಸ್ ಬಗ್ಗೆ ಆರೋಗ್ಯ ಅಧಿಕಾರಿಗಳು ಜನರನ್ನು ಎಚ್ಚರಿಸುತ್ತಿದ್ದಾರೆ. ಯುಎಸ್ನಲ್ಲಿ ಪ್ರತಿವರ್ಷ 25 ಜನರು ಸೋಂಕಿಗೆ ಒಳಗಾಗುತ್ತಾರೆ, ಈ ಸಾವು ಮೂರನೇ ಮಾರಣಾಂತಿಕ ಪ್ರಕರಣವನ್ನು ಸೂಚಿಸುತ್ತದೆ ಎಂದು ಫಾಕ್ಸ್ ನ್ಯೂಸ್ ವರದಿ ಮಾಡಿದೆ.

ಪೊವಾಸನ್ ವೈರಸ್ ಸಾಮಾನ್ಯವಾಗಿ ಸೋಂಕಿತ ಜಿಂಕೆ ಉಣ್ಣೆಗಳು, ಗ್ರೌಂಡ್ಹಾಗ್ ಉಣ್ಣೆಗಳು ಅಥವಾ ಅಳಿಲು ಉಣ್ಣೆಗಳಿಂದ ಕಚ್ಚುವ ಮೂಲಕ ಮಾನವರಿಗೆ ಹರಡುತ್ತದೆ, ಸಾಮಾನ್ಯವಾಗಿ ಉತ್ತರ ಅಮೆರಿಕದ ಗ್ರೇಟ್ ಲೇಕ್ಸ್ ಪ್ರದೇಶದಲ್ಲಿ ವಸಂತ ಕಾಲದ ಕೊನೆಯಲ್ಲಿ ಮತ್ತು ಶರತ್ಕಾಲದ ಮಧ್ಯದ ನಡುವೆ ಕಂಡುಬರುತ್ತದೆ. ಈ ಪ್ರಕರಣಗಳು ವಿರಳವಾಗಿದ್ದರೂ, ಇತ್ತೀಚಿನ ವರ್ಷಗಳಲ್ಲಿ ಹೆಚ್ಚಿನ ಪ್ರಕರಣ ದಾಖಲಾಗುತ್ತಿದೆ. ಅದಕ್ಕೂ ಹೆಚ್ಚಾಗಿ ಯುಎಸ್, ಕೆನಡಾ ಮತ್ತು ರಷ್ಯಾದಲ್ಲಿ ಪೊವಾಸನ್ ವೈರಸ್ ಸೋಂಕುಗಳು ವರದಿಯಾಗಿವೆ.

ಪೊವಾಸನ್ ವೈರಸ್ನ ರೋಗಲಕ್ಷಣಗಳಿಗೆ ಸಂಬಂಧಿಸಿದ ವಿವರಗಳು ಮತ್ತು ನಿಮ್ಮನ್ನು ನೀವು ಹೇಗೆ ರಕ್ಷಿಸಿಕೊಳ್ಳಬಹುದು ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ.

ಇದನ್ನೂ ಓದಿ;H3N2 Virus: ಇದರಿಂದ ಉಂಟಾಗುವ ದೀರ್ಘಕಾಲದ ಪರಿಣಾಮಗಳು ಯಾವುವು? ಇಲ್ಲಿವೆ ಸಲಹೆಗಳು

ಲಕ್ಷಣಗಳು

-ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ ಪ್ರಕಾರ, ಪೊವಾಸನ್ ವೈರಸ್ ಸೋಂಕಿತ ಜನರಲ್ಲಿ ಹೆಚ್ಚಿನವರು ಯಾವುದೇ ರೋಗಲಕ್ಷಣಗಳನ್ನು ಹೊಂದಿರುವುದಿಲ್ಲ. ರೋಗಲಕ್ಷಣಗಳನ್ನು ಹೊಂದಿರುವ ಜನರಿಗೆ, ಟಿಕ್ ಕಡಿತದಿಂದ ಅನಾರೋಗ್ಯ ಅನುಭವಿಸುವ ಸಮಯ 1 ವಾರದಿಂದ 1 ತಿಂಗಳಾಗಿರುತ್ತವೆ.

-ಆರಂಭಿಕ ರೋಗಲಕ್ಷಣಗಳಲ್ಲಿ ಜ್ವರ, ತಲೆನೋವು, ವಾಂತಿ ಮತ್ತು ಸುಸ್ತು ಸೇರಿವೆ.

-ಪೊವಾಸನ್ ವೈರಸ್ ಮೆದುಳಿನ ಸೋಂಕು (ಎನ್ಸೆಫಾಲಿಟಿಸ್) ಅಥವಾ ಮೆದುಳು ಮತ್ತು ಬೆನ್ನುಹುರಿಯ ಸುತ್ತಲಿನ ಪೊರೆಗಳು (ಮೆನಿಂಜೈಟಿಸ್) ಸೇರಿದಂತೆ ತೀವ್ರ ಕಾಯಿಲೆಗೆ ಕಾರಣವಾಗಬಹುದು.

-ಗೊಂದಲ, ಅರ್ಥಮಾಡಿಕೊಳ್ಳಲು ಸಮಯ ತೆಗೆದುಕೊಳ್ಳುವುದು, ಮಾತನಾಡಲು ತೊಂದರೆ ಮತ್ತು ಸೆಳೆತಗಳು, ತೀವ್ರ ಕಾಯಿಲೆಯ ರೋಗಲಕ್ಷಣಗಳಲ್ಲಿ ಒಂದಾಗಿದೆ.

-ತೀವ್ರ ಕಾಯಿಲೆಗಳಿಂದ ಬಳಲುತ್ತಿರುವ 10 ರಲ್ಲಿ ಒಬ್ಬರು ಸಾಯುತ್ತಾರೆ ಎನ್ನುತ್ತದೆ ಸಂಶೋಧನೆ.

-ಈ ಕಾಯಿಲೆಯಿಂದ ಬದುಕುಳಿಯುವ ಸುಮಾರು ಅರ್ಧದಷ್ಟು ಜನರು ಪುನರಾವರ್ತಿತ ತಲೆನೋವು, ಶಕ್ತಿಯ ನಷ್ಟ, ಜ್ಞಾಪಕ ಶಕ್ತಿಯ ಸಮಸ್ಯೆಗಳಂತಹ ದೀರ್ಘಕಾಲೀನ ಆರೋಗ್ಯ ಸಮಸ್ಯೆಗಳನ್ನು ಬಳಲುತ್ತಾರೆ.

ಚಿಕಿತ್ಸೆ

-ಪೊವಾಸನ್ ಸೋಂಕನ್ನು ತಡೆಗಟ್ಟಲು ಅಥವಾ ಚಿಕಿತ್ಸೆ ನೀಡಲು ಯಾವುದೇ ಔಷಧಿಗಳಿಲ್ಲ.

-ವಿಶ್ರಾಂತಿ, ದ್ರವ ರೂಪದ ಆಹಾರ ಸೇವನೆ, ನೋವು ನಿವಾರಕ ಔಷಧಿಗಳನ್ನು ತೆಗೆದುಕೊಳ್ಳುವುದರಿಂದ ಕೆಲವು ರೋಗಲಕ್ಷಣಗಳನ್ನು ನಿವಾರಿಸಬಹುದು.

-ತೀವ್ರ ಕಾಯಿಲೆಯಿಂದ ಬಳಲುತ್ತಿರುವ ಜನರು ಉಸಿರಾಟ, ಹೈಡ್ರೇಟ್ ಆಗಿ ಉಳಿಯಲು ಅಥವಾ ಮೆದುಳಿನಲ್ಲಿ ಊತವನ್ನು ಕಡಿಮೆ ಮಾಡಲು ಆಸ್ಪತ್ರೆಗೆ ದಾಖಲಾಗಬೇಕಾಗುತ್ತದೆ.

Published On - 5:45 pm, Fri, 26 May 23

ತಾಜಾ ಸುದ್ದಿ
‘ಪ್ರಕೃತಿ ವಿಕೋಪದಲ್ಲಿ ನೂರಾರು ಜನ ಸಾಯ್ತಾರೆ, ಯಾರಿಗೆ ಶಿಕ್ಷೆ ಸಿಗುತ್ತೆ?’
‘ಪ್ರಕೃತಿ ವಿಕೋಪದಲ್ಲಿ ನೂರಾರು ಜನ ಸಾಯ್ತಾರೆ, ಯಾರಿಗೆ ಶಿಕ್ಷೆ ಸಿಗುತ್ತೆ?’
ಡ್ರೋನ್​ ಕಣ್ಣಲ್ಲಿ ವಿಶ್ವದ ಅತಿ ದೊಡ್ಡ ಪುರಿ ಜಗನ್ನಾಥ ರಥಯಾತ್ರೆ: ವಿಡಿಯೋ
ಡ್ರೋನ್​ ಕಣ್ಣಲ್ಲಿ ವಿಶ್ವದ ಅತಿ ದೊಡ್ಡ ಪುರಿ ಜಗನ್ನಾಥ ರಥಯಾತ್ರೆ: ವಿಡಿಯೋ
ಮುಂಗಾರು ಮಳೆಗೆ ಚಾರ್ಮಾಡಿ ಘಾಟ್​ನಲ್ಲಿ ಜಲವೈಭವ; ನೂರಾರು ಜಲಪಾತಗಳ ಸೃಷ್ಟಿ
ಮುಂಗಾರು ಮಳೆಗೆ ಚಾರ್ಮಾಡಿ ಘಾಟ್​ನಲ್ಲಿ ಜಲವೈಭವ; ನೂರಾರು ಜಲಪಾತಗಳ ಸೃಷ್ಟಿ
ಸತತ ಮಳೆ; ಜಿಗಣೆ ಕಾಟಕ್ಕೆ ಹೈರಾಣಾದ ಪ್ರವಾಹ ತಂಡದ ಅಧಿಕಾರಿಗಳು
ಸತತ ಮಳೆ; ಜಿಗಣೆ ಕಾಟಕ್ಕೆ ಹೈರಾಣಾದ ಪ್ರವಾಹ ತಂಡದ ಅಧಿಕಾರಿಗಳು
ಸುಧಾಕರ್ ಅಭಿನಂದನಾ ಕಾರ್ಯಕ್ರಮದಲ್ಲಿ ಬಾಡೂಟ: ಡ್ರಿಂಕ್ಸ್​​ಗೆ ಮುಗಿಬಿದ್ದ ಜನ
ಸುಧಾಕರ್ ಅಭಿನಂದನಾ ಕಾರ್ಯಕ್ರಮದಲ್ಲಿ ಬಾಡೂಟ: ಡ್ರಿಂಕ್ಸ್​​ಗೆ ಮುಗಿಬಿದ್ದ ಜನ
ಜಲಾವೃತವಾದ ಸೇತುವೆ ಮೇಲೆ ಸಂಚಾರ;ನೀರು ರಭಸವಾಗಿ ಹರಿಯುತ್ತಿದ್ದರೂ ಡೋಂಟ್​ಕೇರ
ಜಲಾವೃತವಾದ ಸೇತುವೆ ಮೇಲೆ ಸಂಚಾರ;ನೀರು ರಭಸವಾಗಿ ಹರಿಯುತ್ತಿದ್ದರೂ ಡೋಂಟ್​ಕೇರ
ಗೋಕಾಕ್ ಜಲಪಾತದಲ್ಲಿ ಪ್ರವಾಸಿಗರ ಹುಚ್ಚಾಟ; ಸ್ವಲ್ಪ ಯಾಮಾರಿದ್ರು ಅಪಾಯ ಖಚಿತ
ಗೋಕಾಕ್ ಜಲಪಾತದಲ್ಲಿ ಪ್ರವಾಸಿಗರ ಹುಚ್ಚಾಟ; ಸ್ವಲ್ಪ ಯಾಮಾರಿದ್ರು ಅಪಾಯ ಖಚಿತ
ಸಂಸದ ಡಾ.ಕೆ ಸುಧಾಕರ್​ ಕಾರ್ಯಕ್ರಮದಲ್ಲಿ ಭರ್ಜರಿ ಬಾಡೂಟ ಜೊತೆ ಮದ್ಯ ಆಯೋಜನೆ
ಸಂಸದ ಡಾ.ಕೆ ಸುಧಾಕರ್​ ಕಾರ್ಯಕ್ರಮದಲ್ಲಿ ಭರ್ಜರಿ ಬಾಡೂಟ ಜೊತೆ ಮದ್ಯ ಆಯೋಜನೆ
‘ಯಜಮಾನ’ ತಂದುಕೊಟ್ಟ ಭರ್ಜರಿ ಲಾಭದ ಬಗ್ಗೆ ನಿರ್ಮಾಪಕರ ಮಾತು
‘ಯಜಮಾನ’ ತಂದುಕೊಟ್ಟ ಭರ್ಜರಿ ಲಾಭದ ಬಗ್ಗೆ ನಿರ್ಮಾಪಕರ ಮಾತು
ಕಿರಿದಾದ ಸೇತುವೆ ಮೇಲೆ ಹೆಣ ಹೊತ್ತು ಸಾಗಿದ ಗ್ರಾಮಸ್ಥರು, ವಿಡಿಯೋ ವೈರಲ್
ಕಿರಿದಾದ ಸೇತುವೆ ಮೇಲೆ ಹೆಣ ಹೊತ್ತು ಸಾಗಿದ ಗ್ರಾಮಸ್ಥರು, ವಿಡಿಯೋ ವೈರಲ್