ಪದೇ ಪದೇ ತಲೆಸುತ್ತು ಬರುತ್ತಿದೆಯೇ? ಇದು ವಿಟಮಿನ್ ಕೊರತೆಯ ಲಕ್ಷಣವಾಗಿರಬಹುದು!

ಅನೇಕರಿಗೆ ಪದೇ ಪದೇ ತಲೆತಿರುಗುವಿಕೆಯ ಅನುಭವವಾಗುತ್ತಿರುತ್ತದೆ. ಆದರೆ ಕೆಲವರು ಇದನ್ನು ಕೇವಲ ಆಯಾಸ ಅಥವಾ ಸಾಮಾನ್ಯ ದೌರ್ಬಲ್ಯ ಎಂದು ಭಾವಿಸಿ ನಿರ್ಲಕ್ಷಿಸುತ್ತಾರೆ, ಆದರೆ ಕೆಲವು ಸಂದರ್ಭಗಳಲ್ಲಿ, ದೇಹದಲ್ಲಿ ವಿಟಮಿನ್ ಕೊರತೆಯೂ ಸಹ ಒಂದು ಕಾರಣವಾಗಬಹುದು. ಹಾಗಾದರೆ ಯಾವ ವಿಟಮಿನ್ ಕೊರತೆಯಾದಾಗ ತಲೆತಿರುಗುವಿಕೆ ಉಂಟಾಗಬಹುದು ಮತ್ತು ಯಾವ ರೀತಿ ಲಕ್ಷಣಗಳನ್ನು ನಿರ್ಲಕ್ಷ್ಯ ಮಾಡಬಾರದು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಪದೇ ಪದೇ ತಲೆಸುತ್ತು ಬರುತ್ತಿದೆಯೇ? ಇದು ವಿಟಮಿನ್ ಕೊರತೆಯ ಲಕ್ಷಣವಾಗಿರಬಹುದು!
Frequent Dizziness
Image Credit source: Getty Images

Updated on: Jun 25, 2026 | 6:37 PM

ಮುಖ್ಯಾಂಶಗಳು

  • ತಲೆಸುತ್ತು ವಿಟಮಿನ್ ಕೊರತೆಯ ಸಂಕೇತವಾಗಿರಬಹುದು
  • ವಿಟಮಿನ್ ಬಿ12, ಡಿ ಮತ್ತು ಫೋಲೇಟ್ ಕೊರತೆ ಪ್ರಮುಖ ಕಾರಣಗಳು
  • ನಿರಂತರ ತಲೆಸುತ್ತು ಕಂಡುಬಂದಾಗ ಅನುಸರಿಸಬೇಕಾದ ಸಲಹೆಗಳು

ಅನೇಕರು ತಲೆಸುತ್ತು (Frequent Dizziness) ಬರುವುದನ್ನು ಸಾಮಾನ್ಯ ದಣಿವು, ಹವಾಮಾನ ಬದಲಾವಣೆ ಅಥವಾ ಒತ್ತಡದ ಪರಿಣಾಮ ಎಂದು ನಿರ್ಲಕ್ಷಿಸುತ್ತಾರೆ. ಆದರೆ ಕೆಲವೊಮ್ಮೆ ಇದು ದೇಹದಲ್ಲಿ ಅಗತ್ಯ ವಿಟಮಿನ್‌ಗಳ ಕೊರತೆಯ ಸೂಚನೆಯಾಗಿರಬಹುದು. ಆದರೆ ತಲೆಸುತ್ತು ಬರುವುದಕ್ಕೆ ವಿಟಮಿನ್ ಕೊರತೆ ಮಾತ್ರ ಏಕೈಕ ಕಾರಣವಲ್ಲ. ಕಡಿಮೆ ರಕ್ತದೊತ್ತಡ, ರಕ್ತಹೀನತೆ, ದೇಹದಲ್ಲಿ ನೀರಿನ ಕೊರತೆ ಹಾಗೂ ಇತರೆ ಆರೋಗ್ಯ ಸಮಸ್ಯೆಗಳೂ ಕಾರಣವಾಗಬಹುದು. ಹಾಗಾದರೆ ಯಾವ ವಿಟಮಿನ್ ಕೊರತೆಯಾದಾಗ ತಲೆತಿರುಗುವಿಕೆ ಉಂಟಾಗಬಹುದು ಮತ್ತು ಯಾವ ರೀತಿ ಲಕ್ಷಣಗಳನ್ನು ನಿರ್ಲಕ್ಷ್ಯ ಮಾಡಬಾರದು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಯಾವ ವಿಟಮಿನ್ ಕೊರತೆಯಿಂದ ತಲೆಸುತ್ತು ಬರಬಹುದು?

ವಿಟಮಿನ್ ಬಿ12, ಫೋಲೇಟ್ (ವಿಟಮಿನ್ B9) ಮತ್ತು ವಿಟಮಿನ್ ಡಿ ಕೊರತೆಗೂ ತಲೆಸುತ್ತಿಗು ಸಂಬಂಧ ಹೊಂದಿರಬಹುದು. ವಿಟಮಿನ್ ಬಿ12 ಮತ್ತು ಫೋಲೇಟ್ ಕೆಂಪು ರಕ್ತಕಣಗಳ ಉತ್ಪಾದನೆಗೆ ಅಗತ್ಯ. ಇವುಗಳ ಕೊರತೆಯಿಂದ ರಕ್ತಹೀನತೆ ಉಂಟಾಗಿ, ಮೆದುಳು ಮತ್ತು ದೇಹಕ್ಕೆ ಸಾಕಷ್ಟು ಆಮ್ಲಜನಕ ಸಿಗದೆ ತಲೆಸುತ್ತು, ದೌರ್ಬಲ್ಯ ಮತ್ತು ಆಯಾಸವಾಗಬಹುದು. ಜೊತೆಗೆ ವಿಟಮಿನ್ ಡಿ ಕೊರತೆಯಿಂದ ಸ್ನಾಯುಗಳ ಬಲ ಕುಂದಿ, ದೇಹದ ಸಮತೋಲನ ತಪ್ಪುವ ಸಾಧ್ಯತೆ ಇದೆ. ಇದರಿಂದ ಕೆಲವರಿಗೆ ತಲೆಸುತ್ತು ಅಥವಾ ಅಸ್ಥಿರತೆ ಅನುಭವವಾಗಬಹುದು.

ಈ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ

ತಲೆಸುತ್ತಿನ ಜೊತೆಗೆ ಈ ಕೆಳಗಿನ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು:

  • ನಿರಂತರ ದೌರ್ಬಲ್ಯ ಮತ್ತು ಆಯಾಸ
  • ಉಸಿರಾಟದ ತೊಂದರೆ
  • ದೃಷ್ಟಿ ಮಸುಕಾಗುವುದು
  • ಕೈ-ಕಾಲುಗಳಲ್ಲಿ ಜುಮ್ಮೆನಿಸುವಿಕೆ
  • ನಡೆಯಲು ತೊಂದರೆ
  • ಮೂರ್ಛೆ ಹೋಗುವುದು
  • ತೀವ್ರ ತಲೆನೋವು ಅಥವಾ ಎದೆನೋವು

ಏನು ಮಾಡಬೇಕು?

ಪದೇ ಪದೇ ತಲೆಸುತ್ತು ಕಾಣಿಸಿಕೊಂಡರೆ ಸ್ವಯಂ ಔಷಧಿ ಅಥವಾ ವಿಟಮಿನ್ ಪೂರಕಗಳನ್ನು ಸೇವಿಸಬೇಡಿ. ವೈದ್ಯರ ಸಲಹೆಯೊಂದಿಗೆ ಅಗತ್ಯ ರಕ್ತ ಪರೀಕ್ಷೆಗಳನ್ನು ಮಾಡಿಸಿಕೊಳ್ಳಿ. ಸಮತೋಲಿತ ಆಹಾರ, ಸಾಕಷ್ಟು ನೀರು ಮತ್ತು ಉತ್ತಮ ನಿದ್ರೆ ಆರೋಗ್ಯ ಕಾಪಾಡಲು ಸಹಕಾರಿ. ತಲೆಸುತ್ತಿನ ಜೊತೆಗೆ ಎದೆನೋವು, ಉಸಿರಾಟದ ತೊಂದರೆ, ಮಾತಾಡಲು ಕಷ್ಟ ಅಥವಾ ಮೂರ್ಛೆ ಕಾಣಿಸಿಕೊಂಡರೆ ತಕ್ಷಣ ವೈದ್ಯಕೀಯ ನೆರವು ಪಡೆಯುವುದು ಅತ್ಯಗತ್ಯ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:35 pm, Thu, 25 June 26

Follow Us