Good Hydration: ದೇಹದ ನಿರ್ಜಲೀಕರಣದಿಂದ ದೂರವಿರಲು ಉತ್ತಮ ಜಲಸಂಚಯನ ಅಗತ್ಯ
ಇತ್ತೀಚಿನ ಅಧ್ಯಯನದ ಪ್ರಕಾರ, ಆರೋಗ್ಯಕರ ದೇಹದ ಕಾರ್ಯಚಟುವಟಿಕೆಯಲ್ಲಿ ಜಲಸಂಚಯನವು ಅಗತ್ಯ ಭಾಗವಾಗಿದೆ. ದ್ರವಾಂಶಗಳು ಮಾನವನ ದೇಹದ 1/3ರಷ್ಟನ್ನು ಹೊಂದಿರುತ್ತವೆ.
ಇತ್ತೀಚಿನ ಅಧ್ಯಯನದ ಪ್ರಕಾರ, ಆರೋಗ್ಯಕರ ದೇಹದ ಕಾರ್ಯಚಟುವಟಿಕೆಯಲ್ಲಿ ಜಲಸಂಚಯನವು ಅಗತ್ಯ ಭಾಗವಾಗಿದೆ. ದ್ರವಾಂಶಗಳು ಮಾನವನ ದೇಹದ 1/3ರಷ್ಟನ್ನು ಹೊಂದಿರುತ್ತವೆ. ಆದ್ದರಿಂದ ಉತ್ತಮವಾಗಿ ಕಾರ್ಯನಿರ್ವಹಿಸುವ ಮತ್ತು ಚುರುಕಾದ ದೇಹವನ್ನು ಉಳಿಸಿಕೊಳ್ಳಲು ದ್ರವಾಂಶ ಸೇವನೆ ಮಾಡುವುದು ಬಹಳ ಮುಖ್ಯವಾಗಿದೆ. ಚೆನ್ನಾಗಿ ಹೈಡ್ರೀಕರಿಸಿದ ದೇಹವು ಇತರರಿಗಿಂತ ಅರೋಗ್ಯವಾಗಿರುತ್ತದೆ ಎಂದು ಅಧ್ಯಯನಗಳು ಇತ್ತೀಚಿಗೆ ಬಹಿರಂಗಪಡಿಸಿವೆ. ‘ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ಹೆಲ್ತ್ ಜನರಲ್’ ನಡೆಸಿದ ಹಾಗೂ ‘ಇಬಿಯೋ ಮೆಡಿಸಿನ್’ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ ಹೆಚ್ಚು ಹೈಡ್ರೆಟ್ ಆಗಿರುವ ವಯಸ್ಕರರು ಹೃದಯ ಮತ್ತು ಶ್ವಾಸಕೋಶದ ಕಾಯಿಲೆಗಳಂತಹ ಕಡಿಮೆ ಕಾಯಿಲೆಗಳಿಂದ ದೂರವಿರುತ್ತಾರೆ ಮತ್ತು ಹೆಚ್ಚು ಕಾಲ ಬದುಕುವ ಮೂಲಕ ಫಿಟ್ ಆಗಿರುತ್ತಾರೆ ಎಂದು ಹೇಳುತ್ತದೆ.
30 ವರ್ಷಗಳ ಅವಧಿಯಲ್ಲಿ 11,255 ವಯಸ್ಕರರಿಂದ ಸಂಗ್ರಹಿಸಿದ ಆರೋಗ್ಯ ಡೆಟಾವನ್ನು ಬಳಸಿಕೊಂಡು ಸಂಶೋಧಕರು ಸೀರಮ್ ಸೋಡಿಯಂ ಮಟ್ಟಗಳ ನಡುವಿನ ಸಂಪರ್ಕಗಳನ್ನು ವಿಶ್ಲೇಷಿಸಿದ್ದಾರೆ. ದ್ರವ ಸೇವನೆಯು ಕಡಿಮೆಯಾದಾಗ ಅದು ಹೆಚಾಗುತ್ತದೆ . ಸಾಮಾನ್ಯ ಶ್ರೇಣಿಯ ಉನ್ನತ ಮಟ್ಟದ ಸೀರಮ್ ಸೋಡಿಯಂ ಮಟ್ಟ ಹೊಂದಿರುವ ವಯಸ್ಕರರು ಧೀರ್ಘಕಾಲದ ಪರಿಸ್ಥಿತಿಯನ್ನು ಅಭಿವೃದ್ಧಿ ಪಡಿಸುವ ಸಾಧ್ಯತೆಯಿದೆ ಮತ್ತು ಮಧ್ಯಮ ಶ್ರೇಣಿಯಲ್ಲಿ ಸೀರಮ್ ಸೋಡಿಯಂ ಮಟ್ಟವನ್ನು ಹೊಂದಿರುವವರಿಗಿಂತ ಹೆಚ್ಚಿನ ಜೈವಿಕ ವಯಸ್ಸಾದ ಚಿಹ್ನೆಗಳು ಕಾಣಿಸುತ್ತವೆ ಮತ್ತು ಹೆಚ್ಚಿನ ಮಟ್ಟವನ್ನು ಹೊಂದಿರುವ ವಯಸ್ಕರರು ಚಿಕ್ಕ ವಯಸ್ಸಿನಲ್ಲಿ ಸಾಯುವ ಸಾಧ್ಯತೆ ಹೆಚ್ಚು.ಎಂದು ಅವರು ಕಂಡುಕೊಂಡರು.
ಸರಿಯಾದ ಜಲಸಂಚಯನವು ವಯಸ್ಸಾಗುವಿಕೆಯನ್ನು ನಿಧಾನಗೊಳಿಸುತ್ತದೆ. ಮತ್ತು ರೋಗ ಮುಕ್ತ ಜೀವನವನ್ನು ಹೆಚ್ಚಿಸುತ್ತದೆ ಎಂದು ಕಾರ್ಡಿಯೋವ್ಯಾಸ್ಕಿಲರ್ರೀಜನರೇಟಿವ್ ಮೆಡಿಸಿನ್ ಅಟ್ ದಿ ನ್ಯಾಷನಲ್ ಹಾರ್ಟ್, ಲಂಗ್ ಆಂಡ್ ಬ್ಲಡ್ ಇನ್‍ಸ್ಟಿಟ್ಯೂಟ್‍ನ ಪಿ.ಎಚ್.ಡಿ ಸ್ಟಡಿ ಆಥರ್ ಮತ್ತು ಸಂಶೋಧಕರಾದ ನಟಾಲಿಯಾ ಡಿಮಿಟ್ರಿವಾ ಹೇಳಿದ್ದಾರೆ.
ಇದನ್ನು ಓದಿ:Kidney Health: ಕಿಡ್ನಿ ಸಮಸ್ಯೆ ಇರುವವರು ತಿನ್ನುವ ಆಹಾರದಲ್ಲಿ ಏನೇನಿರಬೇಕು, ಇಲ್ಲಿದೆ ಮಾಹಿತಿ
ಮಾರ್ಚ್ 2022ರಲ್ಲಿ ವಿಜ್ಞಾನಿಗಳು ಪ್ರಕಟಿಸಿದ ಸಂಶೋಧನೆಯ ಅಧ್ಯಯನವು ಹೇಳುತ್ತದೆ , ಇದು ಸಾಮಾನ್ಯ ಸೀರಮ್ ಸೋಡಿಯಂ ಮಟ್ಟಗಳ ಹೆಚ್ಚಿನ ಶ್ರೇಣಿಗಳು ಮತ್ತು ಹೃದಯ ವೈಫಲ್ಯಕ್ಕೆ ಹೆಚ್ಚಿನ ಅಪಾಯಗಳ ನಡುವಿನ ಸಂಪರ್ಕವನ್ನು ಕಂಡು ಹಿಡಿದಿದೆ. ಎರಡೂ ಸಂಶೋಧನೆಗಳು ಅಥೆರೋಸ್ಕ್ಲೆರೋಸಿಸ್ ರಿಸ್ಕ್ ಇನ್ ಕಮ್ಯುನಿಟೀಸ್ (ARIC) ಅಧ್ಯಯನದಿಂದ ಬಂದವು. ಇದು ಅಮೇರಿಕಾದ ಸಾವಿರಾರು ಕಪ್ಪು ಬಿಳಿ ವಯಸ್ಕರರನ್ನು ಒಳಗೊಂಡ ಉಪ ಅಧ್ಯಯನಗಳನ್ನು ಒಳಗೊಂಡಿದೆ. ಮೊದಲ ARIC ಉಪ ಅಧ್ಯಯನವು 1987ರಲ್ಲಿ ಪ್ರಾರಂಭವಾಯಿತು ಮತ್ತು ಅದರ ಚಿಕಿತ್ಸೆ ಮತ್ತು ತಡೆಗಟ್ಟುವಿಕೆಗಾಗಿ ಕ್ಲಿನಿಕಲ್ ಮಾರ್ಗಸೂಚಿಗಳನ್ನು ರೂಪಿಸುವಾಗ, ಹೃದ್ರೋಗದ ಅಪಾಯದ ಅಂಶಗಳನ್ನು ಉತ್ತಮವಾಗಿ ಅರ್ಥ ಮಾಡಿಕೊಳ್ಳಲು ಸಂಶೋಧಕರಿಗೆ ಸಹಾಯ ಮಾಡಿದೆ.
ಇತ್ತೀಚಿನ ವೀಶ್ಲೇಷಣೆಗಾಗಿ ಸಂಶೋಧಕರು 50ರ ಹರೆಯದವರು ಮತ್ತು 70-90 ರ ನಡುವಿನವರ ಆರೋಗ್ಯ ಫಲಿತಾಂಶಗಳೊಂದಿಗೆ ಜಲಸಂಚಯನವು ಹೇಗೆ ಪರಸ್ಪರ ಸಂಬಂಧ ಹೊಂದಿದೆ ಎಂಬುವುದರ ನಡುವೆ ನ್ಯಾಯೋಚಿತ ಹೋಲಿಕೆಯನ್ನು ಅನುಮತಿಸಲು ಸಂಶೋಧಕರು ಬೇಸ್‍ಲೈನ್ ಚೆಕ್-ಇನ್‍ಗಳಲ್ಲಿಹೆಚ್ಚಿನ ಮಟ್ಟದ ಸೀರಮ್ ಸೋಡಿಯಂ ಹೊಂದಿರುವ ವಯಸ್ಕರರನ್ನು ಹೊರಗಿಟ್ಟರು.
ನಂತರ ಅವರು ಸೀರಮ್ ಸೋಡಿಯಂ ಮಟ್ಟಗಳು ಜೈವಿಕ ವಯಸ್ಸಾಗುವಿಕೆಯೊಂದಿಗೆ ಹೇಗೆ ಪರಸ್ಪರ ಸಂಬಂಧ ಹೊಂದಿದೆ ಎಂಬುದನ್ನು ಮೌಲ್ಯ ಮಾಪನ ಮಾಡಿದರು. ಇದನ್ನು 15 ಆರೋಗ್ಯ ಗುರುತುಗಳ ಮೂಲಕ ಮೌಲ್ಯ ಮಾಪನ ಮಾಡಲಾಯಿತು. ಇದು ಸಂಕೋಚನದ ರಕ್ತದೊತ್ತಡ, ಕೊಲೆಸ್ಟ್ರಾಲ್ ಮತ್ತು ರಕ್ತದಲ್ಲಿನ ಸಕ್ಕರೆಯಂತಹ ಅಂಶಗಳನ್ನು ಒಳಗೊಂಡಿದೆ. ಇದು ಪ್ರತಿಯೊಬ್ಬ ವ್ಯಕ್ತಿಯ ಹೃದಯನಾಳದ, ಉಸಿರಾಟ, ಚಯಾಪಚಯ, ಮೂತ್ರಪಿಂಡ ಮತ್ತು ಪ್ರತಿರಕ್ಷನಾ ವ್ಯವಸ್ಥೆಯು ಎಷ್ಟು ಚೆನ್ನಾಗಿ ಕಾರ್ಯನಿರ್ವಹಿಸುತ್ತಿದೆ ಎಂಬುವುದರ ಕುರಿತು ಒಳ ನೋಟವನ್ನು ಒದಗಿಸಿತು.
ಹೆಚ್ಚಿನ ಜನರು ಶಿಫಾರಸ್ಸು ಮಾಡಲಾದ ಮಟ್ಟವನ್ನು ಪೂರೈಸಲು ತಮ್ಮ ದ್ರವ ಸೇವನೆಯನ್ನು ಸುರಕ್ಷಿತವಾಗಿ ಹೆಚ್ಚಿಸಬಹುದು ಎಂದು ನಟಾಲಿಯಾ ಡಿಮಿಟ್ರಿವಾ ಹೇಳಿದರು. ಇದನ್ನು ನೀರು ಮತ್ತು ಇತರ ದ್ರವ ರೂಪಗಳಾದ ಜ್ಯೂಸ್, ತರಕಾರಿ ಹಾಗೂ ನೀರಿನ ಅಂಶವಿರುವ ಹಣ್ಣುಗಳನ್ನು ಸೇವಿಸಬಹುದು. ಹೆಚ್ಚಿನ ಮಹಿಳೆಯರು ಪ್ರತಿದಿನ ಸುಮಾರು 6-9 ಕಪ್ ದ್ರವವನ್ನು ಸೇವಿಸುತ್ತಾರೆ ಮತ್ತು ಪುರುಷರು 8-12 ಕಪ್ ದ್ರವವನ್ನು ಸೇವಿಸುತ್ತಾರೆ ಎಂದು ನ್ಯಾಷನಲ್ ಅಕಾಡೆಮಿ ಆಫ್ ಮೆಡಿಸಿನ್ ಹೇಳಿದೆ.
ದೇಹದಲ್ಲಿ ನೀರಿನ ಅಂಶ ಕಡಿಮೆಯಾಗುವುದು ಸೀರಮ್ ಸೋಡಿಯಂನ್ನು ಹೆಚ್ಚಿಸುವ ಸಾಮಾನ್ಯ ಅಂಶವಾಗಿದೆ. ಅದಕ್ಕಾಗಿಯೇ ಫಲಿತಾಂಶಗಳು ಹೈಡ್ರೇಷನ್ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತದೆ ಮತ್ತು ಧೀರ್ಘಕಾಲದ ರೋಗಗಳನ್ನು ತಡೆಯುತ್ತದೆ ಎಂದು ಅಧ್ಯಯನಗಳು ಹೇಳಿವೆ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:46 am, Wed, 4 January 23